
ಮಹಾಕುಂಭದ ಮೊದಲ ಅಮೃತ ಸ್ನಾನವನ್ನು ಜನವರಿ 14 ರಂದು ಅಂದರೆ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನಡೆಯಿತು. ಇದರ ನಂತರ, ಎರಡನೇ ಸ್ನಾನ ಜ. 29 ರ ಮೌನಿ ಅಮವಾಸ್ಯೆಯಂದು ನೆರವೇರಿತು. ಧಾರ್ಮಿಕ ನಂಬಿಕೆಯ ಪ್ರಕಾರ, ಮಹಾಕುಂಭದಲ್ಲಿ ಸ್ನಾನ ಮಾಡುವುದರಿಂದ ವ್ಯಕ್ತಿಯು ಜೀವನದ ಎಲ್ಲಾ ದುಃಖಗಳು ಮತ್ತು ಪಾಪಗಳಿಂದ ಮುಕ್ತನಾಗುತ್ತಾನೆ ಎಂಬ ನಂಬಿಕೆಯಿದೆ. ಇನ್ನುಅಮೃತ ಸ್ನಾನ ಯಾವಾಗ ಎಂಬ ಪ್ರಶ್ನೆ ನಿಮ್ಮಲಿರಬಹುದು,ಅದಕ್ಕೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.
ವಸಂತ ಪಂಚಮಿಯ ಶುಭ ಸಂದರ್ಭದಲ್ಲಿ, ಮೂರನೇ ಅಮೃತ ಸ್ನಾನ ಅಂದರೆ ಭಾನುವಾರ, ಫೆಬ್ರವರಿ 3 ರಂದು ನಡೆಯಲಿದೆ. ಈ ದಿನ ಸ್ನಾನಕ್ಕೆ ಬ್ರಹ್ಮ ಮುಹೂರ್ತ 5.23 ರಿಂದ 6.16 ರವರೆಗೆ ಇರುತ್ತದೆ. ಈ ಸಮಯದಲ್ಲಿ, ಪವಿತ್ರ ಸಂಗಮದಲ್ಲಿ ಸ್ನಾನ ಮಾಡುವುದು ಶುಭ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ.
ಮಹಾಕುಂಭದಲ್ಲಿ ನಾಲ್ಕನೇ ಮಹಾಸ್ನಾನವನ್ನು ಮಾಘ ಪೂರ್ಣಿಮೆಯ ದಿನದಂದು ಅಂದರೆ ಬುಧವಾರ, ಫೆಬ್ರವರಿ 12 ರಂದು ಮಾಡಲಾಗುತ್ತದೆ. ಈ ದಿನ ಬೆಳಿಗ್ಗೆ 5.19 ರಿಂದ 6.10 ರವರೆಗೆ ಬ್ರಹ್ಮ ಮುಹೂರ್ತ ಇರುತ್ತದೆ.
ಮಹಾಶಿವರಾತ್ರಿ ಅಂದರೆ ಫೆಬ್ರವರಿ 26 ರಂದು ಮಹಾಕುಂಭದ ಕೊನೆಯ ಮಹಾಸ್ನಾನವಾಗಿದೆ. ಈ ದಿನ ಬೆಳಿಗ್ಗೆ 5.09 ರಿಂದ 5.59 ರವರೆಗೆ ಬ್ರಹ್ಮ ಮುಹೂರ್ತ ಇರುತ್ತದೆ. ಈ ಸಮಯದಲ್ಲಿ ಭಕ್ತರು ಮಹಾಕುಂಭದಲ್ಲಿ ಮಹಾಸ್ನಾನವನ್ನು ಮಾಡಬಹುದು.
ಇದನ್ನೂ ಓದಿ: ವಸಂತ ಪಂಚಮಿ ಈ 5 ರಾಶಿಯವರಿಗೆ ಅದೃಷ್ಟ ತರಲಿದೆ
ಮಹಾಕುಂಭದಲ್ಲಿ ರಾಜ ಸ್ನಾನದ ಕೆಲವು ವಿಶೇಷ ನಿಯಮಗಳನ್ನು ಅನುಸರಿಸಲಾಗುತ್ತದೆ. ನಾಗಾ ಸಾಧುಗಳು ಮಹಾಕುಂಭದಲ್ಲಿ ಮೊದಲು ಸ್ನಾನ ಮಾಡುತ್ತಾರೆ. ನಾಗಾ ಸಾಧುಗಳು ಸ್ನಾನಕ್ಕೆ ಆದ್ಯತೆ ನೀಡುವುದು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಸ್ನಾನ ಮಾಡುವಾಗ ಸೋಪು ಅಥವಾ ಶಾಂಪೂ ಬಳಸಬೇಡಿ. ಏಕೆಂದರೆ ಇದು ಪವಿತ್ರ ನೀರನ್ನು ಕಲುಷಿತಗೊಳಿಸುತ್ತದೆ ಎಂದು ಪರಿಗಣಿಸಲಾಗಿದೆ.
ಸನಾತನ ಧರ್ಮದಲ್ಲಿ, ಮಹಾಕುಂಭದ ಸಮಯದಲ್ಲಿ ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮಹಾಕುಂಭದಲ್ಲಿ ಸ್ನಾನ ಮಾಡುವುದು ವ್ಯಕ್ತಿಯ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಎಲ್ಲಾ ಪಾಪಗಳನ್ನು ತೊಡೆದುಹಾಕುತ್ತದೆ ಮತ್ತು ಮೋಕ್ಷವನ್ನು ಪಡೆಯುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Thu, 30 January 25