Mahashivratri 2024: ಶಿವನನ್ನು ಸುಲಭವಾಗಿ ಮೆಚ್ಚಿಸಲು ಈ ನೈವೇದ್ಯಗಳನ್ನು ಅರ್ಪಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 08, 2024 | 12:19 PM

ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯನ್ನು ಈ ವರ್ಷ ಮಾ. 8 ರಂದು ಆಚರಣೆ ಮಾಡಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ದಿನ ಅತ್ಯಂತ ಶುಭವಾಗಿದ್ದು, ಶಿವನು ಪಾರ್ವತಿ ದೇವಿಯನ್ನು ಮದುವೆಯಾದ ಹಾಗಾಗಿ ಮಹಾಶಿವರಾತ್ರಿ ಭಕ್ತರಿಗೆ ಬಹಳ ಪವಿತ್ರ ದಿನವಾಗಿದೆ. ಇನ್ನು ಕೆಲವು ನಂಬಿಕೆಗಳ ಪ್ರಕಾರ ಸಮುದ್ರದ ಮಂಥನದ ಸಮಯದಲ್ಲಿ ಶಿವನು ವಿಷವನ್ನು ಕುಡಿದು ಜಗತ್ತನ್ನು ಕತ್ತಲೆಯಿಂದ ರಕ್ಷಿಸಿದ್ದು ಈ ದಿನ ಎಂದು ನಂಬಲಾಗಿದೆ.

Mahashivratri 2024: ಶಿವನನ್ನು ಸುಲಭವಾಗಿ ಮೆಚ್ಚಿಸಲು ಈ ನೈವೇದ್ಯಗಳನ್ನು ಅರ್ಪಿಸಿ
Follow us on

ಮಹಾಶಿವರಾತ್ರಿ ಹಿಂದೂಗಳ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ, ಇದನ್ನು ದೇಶಾದ್ಯಂತ ಬಹಳ ವೈಭವ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಒಂದು ವರ್ಷದಲ್ಲಿ ಒಟ್ಟು 12 ಮಾಸ ಶಿವರಾತ್ರಿಗಳು ಬರುತ್ತವೆ, ಇದರಲ್ಲಿ ಮಹಾಶಿವರಾತ್ರಿಯೂ ಒಂದು ಆದರೆ ಈ ಶಿವರಾತ್ರಿ ಎಲ್ಲದಕ್ಕಿಂತ ಮುಖ್ಯವಾಗಿದ್ದು, ಹಾಗಾಗಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನವನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯನ್ನು ಈ ವರ್ಷ ಮಾ. 8 ರಂದು ಆಚರಣೆ ಮಾಡಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ದಿನ ಅತ್ಯಂತ ಶುಭವಾಗಿದ್ದು, ಶಿವನು ಪಾರ್ವತಿ ದೇವಿಯನ್ನು ಮದುವೆಯಾದ ಹಾಗಾಗಿ ಮಹಾಶಿವರಾತ್ರಿ ಭಕ್ತರಿಗೆ ಬಹಳ ಪವಿತ್ರ ದಿನವಾಗಿದೆ. ಇನ್ನು ಕೆಲವು ನಂಬಿಕೆಗಳ ಪ್ರಕಾರ ಸಮುದ್ರದ ಮಂಥನದ ಸಮಯದಲ್ಲಿ ಶಿವನು ವಿಷವನ್ನು ಕುಡಿದು ಜಗತ್ತನ್ನು ಕತ್ತಲೆಯಿಂದ ರಕ್ಷಿಸಿದ್ದು ಈ ದಿನ ಎಂದು ನಂಬಲಾಗಿದೆ.

ಇದೆಲ್ಲದರ ಜೊತೆಗೆ ಈ ದಿನದಂದು ನೀವು ಶಿವನನ್ನು ಹೇಗೆ ಮೆಚ್ಚಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಶಿವ, ತನ್ನ ಭಕ್ತರಿಗೆ ಬೇಗ ಒಲಿಯುತ್ತಾನೆ ಎಂಬುದು ಸತ್ಯವಾಗಿದ್ದರೂ ಕೂಡ ಅವನಿಗೆ ಪ್ರೀಯವಾದದ್ದನ್ನು ಮಾಡಿ ಮೆಚ್ಚಿಸಬೇಕಾಗುತ್ತದೆ. ಆದ್ದರಿಂದ ಭಗವಂತನಿಗೆ ನೈವೇದ್ಯ ಅಥವಾ ಪ್ರಸಾದವನ್ನು ಅರ್ಪಿಸಲು ಕೆಲವು ಸುಲಭ ಮಾರ್ಗ ಇಲ್ಲಿದೆ. ಹಾಗಾದರೆ ಶಂಕರನ ಆಶೀರ್ವಾದ ಪಡೆಯಲು ಯಾವ ಭಕ್ಷ್ಯಗಳು ಅಥವಾ ಸಿಹಿ ತಿಂಡಿಗಳನ್ನು ಅರ್ಪಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಮಹಾಶಿವರಾತ್ರಿಯ ದಿನ ಉಪವಾಸ ಮಾಡುವವರು ಈ ನಿಯಮಗಳನ್ನು ಮರೆಯಬೇಡಿ

  • ಎಲ್ಲಾ ರೀತಿಯ ಪಾಯಸಗಳು ಕೂಡ ಶಿವನಿಗೆ ಪ್ರಿಯವಾಗಿದೆ ಆದ್ದರಿಂದ ಭಕ್ತರು ಇದನ್ನು ನೈವೇದ್ಯ ಅಥವಾ ಪ್ರಸಾದವಾಗಿ ದೇವರಿಗೆ ಅರ್ಪಿಸಬಹುದು.
  • ಶಿವನ ಪೂಜೆಗೆ ಕೆಲವು ವಿಶೇಷವಾದ ಧಾನ್ಯಗಳನ್ನು ಅರ್ಪಿಸಬೇಕು. ಪುರಾತನ ಕಾಲದಲ್ಲಿ ಋಷಿಮುನಿಗಳು ಸಹ ಶಿವನಿಗೆ ಇಷ್ಟವಾಗುವ ಧಾನ್ಯಗಳ ನೈವೇದ್ಯವನ್ನು ಮಾಡುತ್ತಿದ್ದರು. ಧಾನ್ಯಗಳು ಸಾಮಾನ್ಯವಾಗಿ ದೈವ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ವೇದ ಮತ್ತು ಪುರಾಣ ಕಥೆಗಳಲ್ಲಿ ವಿವರಿಸಲಾಗಿದೆ. ಹಾಗಾಗಿ ಶಿವನ ಆಶೀರ್ವಾದ ಪಡೆಯಲು ರಾಗಿ, ಅಕ್ಕಿ, ಗೋಧಿ, ಎಳ್ಳಿನ ಬೀಜಗಳು, ಹೆಸರು ಕಾಳು ಇತ್ಯಾದಿ ಧಾನ್ಯಗಳನ್ನು ಅರ್ಪಿಸಲಾಗುತ್ತದೆ.
  • ಪಂಜೀರಿ ಗೋಧಿ ಹಿಟ್ಟನ್ನು ಹುರಿದು ಮಾಡುವ ಒಂದು ರೀತಿಯ ಪಂಚಕಜ್ಜಾಯ. ಇದು ಶಿವನಿಗೆ ಅತ್ಯಂತ ಪ್ರೀಯ ಎನ್ನಲಾಗುತ್ತದೆ.
  • ವಿವಿಧ ರೀತಿಯ ಬರ್ಫಿಗಳನ್ನು ಮನೆಯಲ್ಲಿಯೇ ತಯಾರಿಸಬಹುದು ಇದು ಶಿವ ಮತ್ತು ಪಾರ್ವತಿಗೆ ಇಷ್ಟ ಎನ್ನಲಾಗುತ್ತದೆ.
  • ಇನ್ನು ಪಂಚಾಮೃತವು ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಸೇರಿಸಿ, ದೇವರಿಗೆ ಅರ್ಪಿಸಿ ಬಳಿಕ ಕುಟುಂಬ ಸದಸ್ಯರಿಗೆ ವಿತರಿಸಬೇಕು.
  • ರವೆಯ ಹಲ್ವಾ, ಕಡಲೆ ಹಿಟ್ಟಿನ ಹಲ್ವಾ ಮತ್ತು ಗೋಧಿ ಹಿಟ್ಟಿನ ಹಲ್ವಾವನ್ನು ಸಹ ಭಗವಂತನಿಗೆ ಅರ್ಪಿಸಬಹುದು.
  • ಕೇಸರಿ ಎಳೆಗಳನ್ನು ಶಿವನು ತುಂಬಾ ಇಷ್ಟಪಡುತ್ತಾನೆ ಎನ್ನಲಾಗುತ್ತದೆ ಹಾಗಾಗಿ ಯಾವುದೇ ರೀತಿಯ ನೈವೇದ್ಯ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಕೇಸರಿ ಎಳೆಗಳನ್ನು ಶಿವನ ತಲೆಯ ಮೇಲೆ ಅಥವಾ ಶಿವಲಿಂಗದ ಮೇಲೆ ಅರ್ಪಿಸಬಹುದು. ಇದರಿಂದ ಭಕ್ತನು ಜೀವನದಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳುತ್ತಾನೆ ಎಂಬ ನಂಬಿಕೆ ಇದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

 

 

Published On - 10:37 am, Fri, 8 March 24