Mahashivratri 2024: ಮಹಾಶಿವರಾತ್ರಿಯ ದಿನ ಉಪವಾಸ ಮಾಡುವವರು ಈ ನಿಯಮಗಳನ್ನು ಮರೆಯಬೇಡಿ

ಮಹಾ ಶಿವರಾತ್ರಿಯ ಸಂದರ್ಭದಲ್ಲಿ, ಅನೇಕ ಭಕ್ತರು ಹಣ್ಣು ಮತ್ತು ಅದರ ರಸವನ್ನು ಮಾತ್ರ ಆಹಾರದಲ್ಲಿ ಸೇವನೆ ಮಾಡುವ ಮೂಲಕ ಇಡೀ ದಿನ ಉಪವಾಸವನ್ನು ಆಚರಿಸುತ್ತಾರೆ. ಇನ್ನು ಕೆಲವರು ಸಂಜೆ ಒಂದು ಬಾರಿ ಊಟ ಮಾಡುತ್ತಾರೆ. ಮತ್ತಿಷ್ಟು ಜನ ಮಹಾ ಶಿವರಾತ್ರಿಯ ಮರುದಿನ, ಪ್ರಸಾದವನ್ನು ಅರ್ಪಿಸಿ ಆ ಬಳಿಕವೇ ಕುಟುಂಬ ಸದಸ್ಯರೆಲ್ಲಾ ಸೇರಿ ಆಹಾರವನ್ನು ಸೇವನೆ ಮಾಡುತ್ತಾರೆ. ಹಾಗಾದರೆ ಈ ದಿನ ಮಾಡುವ ಉಪವಾಸ ಹೇಗಿರಬೇಕು? ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Mahashivratri 2024: ಮಹಾಶಿವರಾತ್ರಿಯ ದಿನ ಉಪವಾಸ ಮಾಡುವವರು ಈ ನಿಯಮಗಳನ್ನು ಮರೆಯಬೇಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 08, 2024 | 12:01 PM

ಮಹಾಶಿವರಾತ್ರಿಯ (Mahashivratri 2024) ಸಂದರ್ಭದಲ್ಲಿ ಹೆಚ್ಚಿನ ಜನರು ಉಪವಾಸವನ್ನು ಆಚರಿಸುತ್ತಾರೆ. ಆದರೆ ಸಮಯ ಕಳೆದಂತೆ ಉಪವಾಸದ ಕ್ರಮ, ವಿಧಾನಗಳು ಬದಲಾಗಿದೆ. ಧಾರ್ಮಿಕ ಗ್ರಂಥಗಳಲ್ಲಿ ಪೂಜಾ ಪ್ರಕ್ರಿಯೆಯನ್ನು ವಿವರಿಸಲಾಗಿದ್ದು ಆ ರೀತಿಯಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಆಚರಣೆ ಮಾಡಿದಲ್ಲಿ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಮಹಾ ಶಿವರಾತ್ರಿಯಂದು ಭಕ್ತರು ಬೆಳಿಗ್ಗೆ ಶಿವ ದೇವಾಲಯಗಳಿಗೆ ಹೋಗುತ್ತಾರೆ. ಹೆಚ್ಚಿನ ಜನರು ಮಧ್ಯಾಹ್ನದ ಮೊದಲು ಶಿವಲಿಂಗ ಪೂಜೆಯನ್ನು ಪೂರ್ಣಗೊಳಿಸುತ್ತಾರೆ, ಏಕೆಂದರೆ ಸಂಜೆಯ ಸಮಯದಲ್ಲಿ ಹೆಚ್ಚಿನ ಶಿವ ದೇವಾಲಯಗಳು ದರ್ಶನಕ್ಕಾಗಿ ಮಾತ್ರ ತೆರೆದಿರುತ್ತವೆ. ಪೂಜೆ ಇತ್ಯಾದಿ ಚಟುವಟಿಕೆಗಳು ನಡೆಯುವುದಿಲ್ಲ. ಹಾಗಾಗಿ ಬೆಳಿಗ್ಗೆ, ಭಕ್ತರು ಶಿವಲಿಂಗಕ್ಕೆ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡಬಹುದು. ಮನೆಯಲ್ಲಿ ಶಿವಲಿಂಗ ಇಲ್ಲದವರು ದೇವಸ್ಥಾನಗಳಿಗೆ ಹೋಗಿ ಅಭಿಷೇಕ ಮಾಡಿಸಬಹುದು. ಶಿವನಿಗೆ ಪ್ರೀಯವಾದ ಬಿಲ್ವ ಪತ್ರೆ, ಹಣ್ಣು ಸೇರಿದಂತೆ ವಿವಿಧ ವಸ್ತುಗಳನ್ನು ಅರ್ಪಿಸಬಹುದು.

ಮಹಾ ಶಿವರಾತ್ರಿಯ ಸಂದರ್ಭದಲ್ಲಿ, ಅನೇಕ ಭಕ್ತರು ಹಣ್ಣು ಮತ್ತು ಅದರ ರಸವನ್ನು ಮಾತ್ರ ಆಹಾರದಲ್ಲಿ ಸೇವನೆ ಮಾಡುವ ಮೂಲಕ ಇಡೀ ದಿನ ಉಪವಾಸವನ್ನು ಆಚರಿಸುತ್ತಾರೆ. ಇನ್ನು ಕೆಲವರು ಸಂಜೆ ಒಂದು ಬಾರಿ ಊಟ ಮಾಡುತ್ತಾರೆ. ಮತ್ತಿಷ್ಟು ಜನ ಮಹಾ ಶಿವರಾತ್ರಿಯ ಮರುದಿನ, ಪ್ರಸಾದವನ್ನು ಅರ್ಪಿಸಿ ಆ ಬಳಿಕವೇ ಕುಟುಂಬ ಸದಸ್ಯರೆಲ್ಲಾ ಸೇರಿ ಆಹಾರವನ್ನು ಸೇವನೆ ಮಾಡುತ್ತಾರೆ. ಹಾಗಾದರೆ ಈ ದಿನ ಮಾಡುವ ಉಪವಾಸ ಹೇಗಿರಬೇಕು? ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: ಅಜ್ಞಾನ ಕಳೆದು ಸುಜ್ಞಾನ ಬೆಳಗಿಸು ಶಿವನೇ.. ರಾಜ್ಯದಲ್ಲಿ ಸಂಭ್ರಮ ಸಡಗರದ ಶಿವರಾತ್ರಿ ಆಚರಣೆ

ಧರ್ಮಗ್ರಂಥಗಳಲ್ಲಿ ಸೂಚಿಸಿದ ನಿಯಮಗಳೇನು? ಪೂಜಾ ವಿಧಾನ ಹೇಗಿರಬೇಕು?

  1. ಶಿವರಾತ್ರಿಯ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು. ಈ ದಿನ ಸ್ನಾನ ಮಾಡುವ ನೀರಿನಲ್ಲಿ ಕಪ್ಪು ಎಳ್ಳಿನ ಬೀಜಗಳನ್ನು ಹಾಕಿ ಸ್ನಾನ ಮಾಡಬೇಕು. ಶಿವರಾತ್ರಿಯ ದಿನ ಮಾಡಿದ ಸ್ನಾನ ದೇಹ ಮಾತ್ರವಲ್ಲದೆ ಆತ್ಮವೂ ಶುದ್ಧವಾಗುತ್ತದೆ ಎಂದು ನಂಬಲಾಗಿದೆ. ಸಾಧ್ಯವಾದರೆ, ಈ ದಿನ ಗಂಗಾ ಸ್ನಾನ ಮಾಡಿ.
  2. ಸ್ನಾನ ಇತ್ಯಾದಿಗಳ ನಂತರ, ಭಕ್ತರು ಒಂದು ದಿನದ ಉಪವಾಸವನ್ನು ಆಚರಿಸಲು ಮತ್ತು ಮರುದಿನ ಅದನ್ನು ಪೂರ್ಣಗೊಳಿಸಲು ಪ್ರತಿಜ್ಞೆ ಮಾಡಬೇಕು. ನಿರ್ಣಯ ತೆಗೆದುಕೊಂಡ ಬಳಿಕ ಯಾವುದೇ ಅಡೆತಡೆಯಿಲ್ಲದೆ ಉಪವಾಸವನ್ನು ಪೂರ್ಣಗೊಳಿಸಲು ಶಿವನ ಆಶೀರ್ವಾದವನ್ನು ಬೇಡಬೇಕು.
  3. ಉಪವಾಸ ಮಾಡುವಾಗ ಭಕ್ತರು ಎಲ್ಲಾ ರೀತಿಯ ಆಹಾರದಿಂದ ದೂರವಿರಬೇಕು. ಕೆಲವರು ನೀರನ್ನು ಸಹ ಕುಡಿಯುವುದಿಲ್ಲ, ಆದರೆ ಶಾಸ್ತ್ರದಲ್ಲಿ ನೀವು ಹಣ್ಣು ಮತ್ತು ಹಾಲನ್ನು ಸೇವಿಸಲು ಶಿಫಾರಸು ಮಾಡಲಾಗಿದೆ, ಅದರ ನಂತರ ರಾತ್ರಿಯವರೆಗೆ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಬೇಕು. ಮಾಂಸ ಆಹಾರ ಅಥವಾ ಹೊರಗಡೆ ಆಹಾರವನ್ನು ಕಟ್ಟುನಿಟ್ಟಾಗಿ ತ್ಯಜಿಸಬೇಕು.
  4. ಭಕ್ತರು ಸಂಜೆ ಪೂಜೆಯನ್ನೂ ಮಾಡಬೇಕು ಮತ್ತು ದೇವಾಲಯಕ್ಕೆ ಹೋಗುವ ಮೊದಲು ಮತ್ತೆ ಸ್ನಾನ ಮಾಡಬೇಕು. ಯಾರಾದರೂ ದೇವಾಲಯಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಪೂಜೆ ಇತ್ಯಾದಿಗಳನ್ನು ಮನೆಯಲ್ಲಿಯೇ ಮಾಡಬಹುದು. ಕೆಲವರು ಮಣ್ಣಿನ ಶಿವಲಿಂಗವನ್ನು ನಿರ್ಮಾಣ ಮಾಡಿ ಅದಕ್ಕೆ ಪೂಜೆ ಮಾಡುತ್ತಾರೆ.
  5. ಶಿವರಾತ್ರಿ ಪೂಜೆಯನ್ನು ರಾತ್ರಿಯಲ್ಲಿ ಸಮಯದಲ್ಲಿ ನಾಲ್ಕು ಬಾರಿ ಮಾಡಬಹುದು. ಇಡೀ ರಾತ್ರಿಯ ಅವಧಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಳ್ಳುವ ಮೂಲಕ ಪೂಜೆ ಮಾಡಬಹುದು.
  6. ಪೂಜಾ ವಿಧಾನದ ಪ್ರಕಾರ, ಶಿವಲಿಂಗವನ್ನು ವಿವಿಧ ವಸ್ತುಗಳಿಂದ ಅಭಿಷೇಕ ಮಾಡಬೇಕು. ಹಾಲು, ಶ್ರೀಗಂಧದ ನೀರು, ಮೊಸರು, ಜೇನುತುಪ್ಪ, ತುಪ್ಪ, ಸಕ್ಕರೆ ಮತ್ತು ನೀರನ್ನು ಹೆಚ್ಚಾಗಿ ಅಭಿಷೇಕಕ್ಕೆ ಬಳಸಲಾಗುತ್ತದೆ. ಇದೆಲ್ಲಾ ವಸ್ತುಗಳನ್ನು ಬಳಸುವ ಮೊದಲು ನೀರಿನ ಅಭಿಷೇಕ ಮಾಡಿಕೊಳ್ಳಬೇಕು. ಬಳಿಕ ಪಂಚಾಮೃತ ಅಭಿಷೇಕ ಮಾಡಬಹುದು.
  7. ಅಭಿಷೇಕ ಮಾಡಿದ ಬಳಿಕ ಶಿವಲಿಂಗವನ್ನು ಬಿಲ್ವಪತ್ರೆಯ ಹಾರದಿಂದ ಅಲಂಕರಿಸಲಾಗುತ್ತದೆ. ಬಿಲ್ವಪತ್ರೆಯು ಶಿವನಿಗೆ ತಂಪನ್ನು ನೀಡುತ್ತದೆ ಎಂದು ನಂಬಲಾಗಿದೆ.
  8. ಆ ಬಳಿಕ ಶಿವಲಿಂಗದ ಮೇಲೆ ಚಂದನ ಅಥವಾ ಕುಂಕುಮವನ್ನು ಹಚ್ಚಲಾಗುತ್ತದೆ ಮತ್ತು ಧೂಪ -ದೀಪವನ್ನು ಬೆಳಗಿಸಿ, ಭಸ್ಮ ಎಂದು ಕರೆಯಲ್ಪಡುವ ವಿಭೂತಿಯನ್ನು ಶಿವನಿಗೆ ಹಚ್ಚಲಾಗುತ್ತದೆ.
  9. ಭಕ್ತರು ಮರುದಿನ ಸ್ನಾನ ಮಾಡಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಬೇಕು. ಈ ರೀತಿಯಲ್ಲಿ ವ್ರತವನ್ನು ಆಚರಿಸುವುದರಿಂದ ಶಿವನ ಪೂರ್ಣ ಅನುಗ್ರಹವಾಗುತ್ತದೆ. ಇಷ್ಟಾರ್ಥ ಸಿದ್ಧಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:55 am, Fri, 8 March 24

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ