Maha Shivratri: ಶಿವರಾತ್ರಿಯಂದು ಜಾಗರಣೆ ಮಾಡುವುದೇಕೆ? ಅದರ ಮಹತ್ವವೇನು?
ಗ್ರಂಥಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಶಿವನ ನಾಮಸ್ಮರಣೆಗಿದೆ , ಶಿವನ ಆರಾಧನೆಗಿದೆ ಸಕಲ ದೋಶಗಳನ್ನ ನಿವಾರಿಸುವಂತಹ ಶಕ್ತಿ. ಇಂದು ಉಪವಾಸ ಮಾಡಿ ರಾತ್ರಿಪೂರ್ತಿ ಜಾಗರಣೆ ಮಾಡಲಾಗುತ್ತೆ .ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಶಿವರಾತ್ರಿ ಜಾಗರಣೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಇಂದು ದೇಶಾದ್ಯಂತ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಬರುವ ಮಹಾಶಿವರಾತ್ರಿ ಪರಮೇಶ್ವರನ ಆರಾಧನೆಗೆ ಅತ್ಯಂತ ವಿಶೇಷ ದಿನ. ಶಾಸ್ತ್ರಗಳ ಪ್ರಕಾರ ದೇವರ ದೇವ ಮಹಾದೇವನ ಒಲುಮೆಗೆ ಪಾತ್ರರಾಗಲು ಇರುವಂತಹ ಒಂದು ಸರಳ ವಿಧಾನವೇನೂ ಅಂದ್ರೆ ಅದುವೇ ಶುದ್ಧ ಭಕ್ತಿಯಿಂದ ಶಿವನನ್ನ ಧ್ಯಾನಿಸುವುದು, ಪೂಜಿಸುವುದು, ಭಜಿಸುವುದು.
ಇನ್ನು ಮಹಾಶಿವರಾತ್ರಿಯ ದಿನ ಶಿವನ ಭಕ್ತರು ಉಪವಾಸ ಕೈಗೊಳ್ಳುವ ಮೂಲಕ, ಧ್ಯಾನ, ಜಾಗರಣೆಗಳನ್ನು ಮಾಡುವ ಮೂಲಕ ಶಿವನನ್ನು ಆರಾಧಿಸುತ್ತಾರೆ. ಈ ದಿನ ಶಿವನ ದೇಗುಲದಲ್ಲಿ ಭಕ್ತರು ರಾತ್ರಿಯಿಡೀ ಜಾಗರಣೆ ಕೈಗೊಂಡು ಈಶ್ವರನನ್ನು ಆರಾಧಿಸುತ್ತಾರೆ. ಪುರುಷ ಹಾಗೂ ಸ್ತ್ರೀ ಶಕ್ತಿಗಳನ್ನು ಪ್ರತಿನಿಧಿಸುವ ಶಿವ ಹಾಗೂ ಶಕ್ತಿಯು ಒಟ್ಟಾಗಿ ಸೇರಿದ ರಾತ್ರಿಯನ್ನು ಗೌರವಿಸುವುದು ಮಹಾ ಶಿವರಾತ್ರಿಯನ್ನು ಆರಾಧಿಸಲು ಇನ್ನೊಂದು ಕಾರಣ. ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಶಿವರಾತ್ರಿ ಜಾಗರಣೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ