Maxi the Police Dog: ಪ್ರತಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತೆ ಈ ಶ್ವಾನ; ‘ಮ್ಯಾಕ್ಸಿ’ಯ ಶಿವ ಭಕ್ತಿಗೆ ನೆಟ್ಟಿಗರು ಫಿದಾ

ಶ್ರಾವಣ ಮಾಸದಲ್ಲಿ ಉಪವಾಸವನ್ನು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ನೀವು ಎಂದಾದರೂ ಶ್ವಾನ ಉಪವಾಸ ಮಾಡುವುದನ್ನು ನೋಡಿದ್ದೀರಾ? ಮಧ್ಯಪ್ರದೇಶದ ಉಜ್ಜಯಿನಿಯ 'ಮ್ಯಾಕ್ಸಿ' ಎಂಬ ಹೆಣ್ಣು ಶ್ವಾನ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಮ್ಯಾಕ್ಸಿ ಪ್ರತಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತಿದ್ದು, ಮ್ಯಾಕ್ಸಿ ಶಿವನ ಭಕ್ತೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Maxi the Police Dog: ಪ್ರತಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತೆ ಈ ಶ್ವಾನ; ಮ್ಯಾಕ್ಸಿಯ ಶಿವ ಭಕ್ತಿಗೆ ನೆಟ್ಟಿಗರು ಫಿದಾ
ಉಜ್ಜಯಿನಿಯ 'ಮ್ಯಾಕ್ಸಿ'

Updated on: Aug 07, 2025 | 10:43 AM

ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮತ್ತು ಉಪವಾಸವನ್ನು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ನೀವು ಎಂದಾದರೂ ಯಾವುದೇ ಪ್ರಾಣಿ ಉಪವಾಸವನ್ನು ನೋಡಿದ್ದೀರಾ? ಮಧ್ಯಪ್ರದೇಶದ ಉಜ್ಜಯಿನಿಯಮ್ಯಾಕ್ಸಿಎಂಬ ಹೆಣ್ಣು ಶ್ವಾನ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಕಾರಣವೆಂದರೆ ಶ್ವಾನ ಪ್ರತಿ ಸೋಮವಾರ ಉಪವಾಸ ಮಾಡುತ್ತದೆಯಂತೆ. ಇದು ಸಾಮಾನ್ಯ ಶ್ವಾನವಲ್ಲ, ಬದಲಾಗಿ ಉಜ್ಜಯಿನಿ ನಾನಾಖೇಡಾ ಪೊಲೀಸ್ ಠಾಣೆಯಲ್ಲಿ ನೇಮಿಸಲಾಗಿರುವ ಪೊಲೀಸ್ಶ್ವಾನ.

ಮ್ಯಾಕ್ಸಿ ಉಜ್ಜಯಿನಿ ಪೊಲೀಸ್ ಇಲಾಖೆಯ ವಿಶೇಷ ಸ್ನಿಫರ್ ನಾಯಿಯಾಗಿದ್ದು, ಅನೇಕ ದೊಡ್ಡ ಪ್ರಕರಣಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡಿದೆ. ಆದರೆ ಈ ಬಾರಿಈ ಶ್ವಾನ ತನ್ನ ಧಾರ್ಮಿಕ ನಂಬಿಕೆಯಿಂದಾಗಿ ಸುದ್ದಿಯಲ್ಲಿದೆ. ಇದರ ನಿರ್ವಾಹಕರ ಪ್ರಕಾರ, ಪ್ರತಿ ವರ್ಷ ಶ್ರಾವಣ ಬಂದ ತಕ್ಷಣ, ಮ್ಯಾಕ್ಸಿ ತನ್ನ ಆಹಾರ ಮತ್ತು ಪಾನೀಯ ಸೇವನೆಯನ್ನು ಕಡಿಮೆ ಮಾಡುತ್ತೆ ಮತ್ತು ಶಿವ ದೇವಾಲಯದ ಹೊರಗೆ ಸದ್ದಿಲ್ಲದೆ ಕುಳಿತಿರುತ್ತದೆ.

ಪ್ರತಿ ಶ್ರಾವಣ ಸೋಮವಾರ ಉಪವಾಸ ಮಾಡುವ ಮ್ಯಾಕ್ಸಿ:

ಪ್ರತಿ ಶ್ರಾವಣ ಸೋಮವಾರ, ಮ್ಯಾಕ್ಸಿ ಆಹಾರ ಸೇವಿಸುವುದಿಲ್ಲ. ಪೊಲೀಸ್ ಇಲಾಖೆಯ ರಿಸರ್ವ್ ಇನ್ಸ್‌ಪೆಕ್ಟರ್ ರಂಜಿತ್ ಸಿಂಗ್ ಹೇಳುವಂತೆ, ಇತರ ದಿನಗಳಲ್ಲಿ ಮ್ಯಾಕ್ಸಿ ಸಾಮಾನ್ಯವಾಗಿ ಆಹಾರವನ್ನು ತಿನ್ನುತ್ತದ, ಆದರೆ ಸೋಮವಾರ ಬಂದ ತಕ್ಷಣ, ಆಹಾರವನ್ನು ಬಿಟ್ಟು ಹಾಲು ಅಥವಾ ನೀರನ್ನು ಮಾತ್ರ ಸೇವಿಸುತ್ತದೆ ಮತ್ತು ತನ್ನ ದಿನವನ್ನು ಸದ್ದಿಲ್ಲದೆ ಕಳೆಯುತ್ತದೆ. ಇದಲ್ಲದೇ ಈ ಮಾಸದಲ್ಲಿ ಹಸಿರು ತರಕಾರಿಗಳನ್ನು ತಿನ್ನಲು ಪ್ರಾರಂಭಿಸುತ್ತದೆ ಮತ್ತು ಮಾಂಸಾಹಾರದಿಂದ ಸಂಪೂರ್ಣವಾಗಿ ದೂರ ಸರಿಯುತ್ತದೆ. ಈ ಅಭ್ಯಾಸವು ಕಳೆದ 2 ವರ್ಷಗಳಿಂದ ಮುಂದುವರೆದಿದೆ.

ಇದನ್ನೂ ಓದಿ: ದೇವರಿಗೆ ಆರತಿ ಮಾಡುವಾಗ ಕಣ್ಣು ಮುಚ್ಚಬಾರದು ಎಂದು ಹೇಳುವುದೇಕೆ? ಕಾರಣ ಇಲ್ಲಿದೆ

ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​:

ಮ್ಯಾಕ್ಸಿಯಭಕ್ತಿಯನ್ನು ನೋಡಿ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಅವನನ್ನುಶಿವನ ನಿಜವಾದ ಭಕ್ತೆಎಂದು ಕರೆಯುತ್ತಿದ್ದಾರೆ, ಆದರೆ ಕೆಲವರುನಾಯಿಗೆ ಮನುಷ್ಯರಿಗಿಂತ ಹೆಚ್ಚಿನ ನಂಬಿಕೆ ಇದೆ ಎಂದು ಹೇಳಿದ್ದಾರೆ. ಉಜ್ಜಯಿನಿಯ ಕೆಲವು ಸ್ಥಳೀಯ ಮಾಧ್ಯಮಗಳಲ್ಲಿ ಇದರ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:42 am, Thu, 7 August 25