Shravan
ಶ್ರಾವಣ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಮಾಸವಾಗಿದೆ. ದ್ವಾದಶ ಮಾಸಗಳಲ್ಲಿ ಐದನೇ ಮಾಸವಾಗಿರುವ ಶ್ರಾವಣ “ಪಂಚಮಂ ಕಾರ್ಯಸಿದ್ಧಿ” ಎಂದೂ ಕರೆಯಲ್ಪಡುತ್ತದೆ. ಈ ತಿಂಗಳು ಶಿವನ ಆರಾಧನೆಗೆ ಅತ್ಯಂತ ಪವಿತ್ರವಾದ ಸಮಯವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸವು ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬರುತ್ತದೆ. ಈ ಮಾಸ ಜಪ, ತಪ, ಧ್ಯಾನ ಮತ್ತು ದಾನಕ್ಕೆ ಅತ್ಯಂತ ಅನುಕೂಲಕರವಾದ ಸಮಯ. “ಶ್ರಾವಣ” ಎಂಬ ಪದವು “ಕೇಳುವುದು” ಎಂಬ ಅರ್ಥವನ್ನು ಹೊಂದಿದ್ದು, ಈ ಮಾಸದಲ್ಲಿ ಜ್ಞಾನವನ್ನು ಕೇಳುವುದು ಮತ್ತು ಸ್ವೀಕರಿಸುವುದು ಮಾಸ ಎಂದೂ ಕೂಡ ಪರಿಗಣಿಸಲಾಗಿದೆ.
Daily Devotional: ಶ್ರಾವಣ ಮಾಸದಲ್ಲಿ ಹಸಿರು ಧರಿಸುವುದು ಏಕೆ ಶುಭ ಎಂದು ಪರಿಗಣಿಸಲಾಗಿದೆ?
ಶ್ರಾವಣ ಮಾಸದ ಅಂತ್ಯದಲ್ಲಿ ಹಸಿರು ಬಣ್ಣದ ಉಡುಗೆ-ತೊಡುಗೆಯ ಮಹತ್ವವನ್ನು ಡಾ. ಬಸವರಾಜ ಗುರೂಜಿಯವರು ವಿವರಿಸಿದ್ದಾರೆ. ಹಸಿರು ಬಣ್ಣ ಬುಧ ಗ್ರಹದ ಪ್ರತೀಕ ಮತ್ತು ವೆಂಕಟೇಶ್ವರ ಸ್ವಾಮಿಗೆ ಪ್ರಿಯವಾದದ್ದು. ಹಸಿರು ಬಳೆ, ಬಟ್ಟೆ ಧರಿಸುವುದು, ಹಸಿರು ವಸ್ತುಗಳನ್ನು ಉಪಯೋಗಿಸುವುದು ಮತ್ತು ಹಸಿರು ಗಿಡಗಳನ್ನು ನೆಡುವುದು ಶುಭವೆಂದು ಪರಿಗಣಿಸಲಾಗಿದೆ.
- Akshatha Vorkady
- Updated on: Aug 21, 2025
- 8:12 am
Daily Devotional: ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಬಾಗಿನ ಕೊಡುವುದರ ಉದ್ದೇಶವೇನು?
ಡಾ. ಬಸವರಾಜ್ ಗುರೂಜಿ ಅವರು ವರಮಹಾಲಕ್ಷ್ಮೀ ಹಬ್ಬದ ಪೂಜಾ ವಿಧಾನ ಮತ್ತು ಶುಭ ಸಮಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಗಿಣದಲ್ಲಿ 16 ವಿಧದ ಸುಮಂಗಲಿ ಪ್ರತೀಕಗಳನ್ನು ಇಡುವುದು ಮತ್ತು ಸಿಂಹ, ವೃಶ್ಚಿಕ, ಕುಂಭ ಲಗ್ನಗಳಲ್ಲಿ ಪೂಜೆ ಮಾಡುವುದು ಶುಭ ಎಂದು ತಿಳಿಸಿದ್ದಾರೆ. ಅಷ್ಟಮಹಾಲಕ್ಷ್ಮಿಯರ ಪೂಜೆಯ ಮಹತ್ವವನ್ನು ಸಹ ಅವರು ವಿವರಿಸಿದ್ದಾರೆ. ದಾನ ಮಾಡುವುದು ಮತ್ತು ಅರಿಶಿನ, ಕುಂಕುಮ, ಕದಳಿಫಲಗಳನ್ನು ಐದು ಜನಕ್ಕೆ ಹಂಚುವುದು ಶುಭಕರ ಎಂದು ಹೇಳಲಾಗಿದೆ.
- Akshatha Vorkady
- Updated on: Aug 8, 2025
- 8:53 am
Maxi the Police Dog: ಪ್ರತಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತೆ ಈ ಶ್ವಾನ; ‘ಮ್ಯಾಕ್ಸಿ’ಯ ಶಿವ ಭಕ್ತಿಗೆ ನೆಟ್ಟಿಗರು ಫಿದಾ
ಶ್ರಾವಣ ಮಾಸದಲ್ಲಿ ಉಪವಾಸವನ್ನು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ನೀವು ಎಂದಾದರೂ ಶ್ವಾನ ಉಪವಾಸ ಮಾಡುವುದನ್ನು ನೋಡಿದ್ದೀರಾ? ಮಧ್ಯಪ್ರದೇಶದ ಉಜ್ಜಯಿನಿಯ 'ಮ್ಯಾಕ್ಸಿ' ಎಂಬ ಹೆಣ್ಣು ಶ್ವಾನ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಮ್ಯಾಕ್ಸಿ ಪ್ರತಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತಿದ್ದು, ಮ್ಯಾಕ್ಸಿ ಶಿವನ ಭಕ್ತೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
- Akshatha Vorkady
- Updated on: Aug 7, 2025
- 10:43 am
Varamahalakshmi Festival 2025: ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಗಳನ್ನೇ ಕೊಡುವುದೇಕೆ
ಶ್ರಾವಣ ಮಾಸದಲ್ಲಿ ಆಚರಿಸುವಂತಹ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬವೂ ಒಂದು. ಈ ಹಬ್ಬವನ್ನು ಮುತ್ತೈದೆಯರು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಮನೆಗಳಲ್ಲಿ ಲಕ್ಷ್ಮಿಯನ್ನು ಅಲಂಕರಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಜೊತೆಗೆ ಕೈಗಳಿಗೆ ಹಸಿರು ಗಾಜಿನ ಬಳೆಯನ್ನು ತೊಟ್ಟು ಸಂಭ್ರಮಿಸುತ್ತಾರೆ ಹಾಗೂ ಪ್ರತಿಯೊಬ್ಬರೂ ಬಾಗಿನ ಕೊಡುವಾಗ ಹಸಿರು ಬಳೆಯನ್ನು ಕೊಡುತ್ತಾರೆ. ಹೀಗೆ ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಯನ್ನೇ ಕೊಡುವುದೇಕೆ ಗೊತ್ತಾ? ಇದರ ಹಿಂದಿನ ಕಾರಣವನ್ನು ತಿಳಿಯಿರಿ.
- Malashree anchan
- Updated on: Aug 6, 2025
- 5:56 pm
ವರಮಹಾಲಕ್ಷ್ಮಿ ಹಬ್ಬ: ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಬೆಲೆ ಗಗನಕ್ಕೆ, ಬೆಚ್ಚಿಬಿದ್ದ ಗ್ರಾಹಕ
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಹಣ್ಣು, ತರಕಾರಿ ಮತ್ತು ಹೂವುಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಬೇಡಿಕೆಯಿಂದಾಗಿ ಪೂರೈಕೆ ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಗ್ರಾಹಕರು ಬೆಲೆ ಏರಿಕೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಬಟಾಣಿ, ಹುರುಳಿಕಾಯಿ, ಆಪಲ್, ದಾಳಿಂಬೆ ಮುಂತಾದ ವಸ್ತುಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಹೂವುಗಳ ಬೆಲೆಯೂ ಅಧಿಕವಾಗಿದೆ.
- Vivek Biradar
- Updated on: Aug 6, 2025
- 4:03 pm
Mangala Gauri Vrat: ಮಂಗಳ ಗೌರಿ ವ್ರತದ ಸಮಯದಲ್ಲಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು?
ಶ್ರಾವಣ ಮಾಸದ ಪ್ರತಿ ಮಂಗಳವಾರ ಆಚರಿಸುವ ಮಂಗಳ ಗೌರಿ ವ್ರತದ ನಿಯಮಗಳು ಮತ್ತು ಆಹಾರದ ಬಗ್ಗೆ ಇಲ್ಲಿ ವಿವರಿಸಲಾಗಿದೆ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಈ ವ್ರತವನ್ನು ಆಚರಿಸುತ್ತಾರೆ. ಹಣ್ಣುಗಳು, ಹಣ್ಣಿನ ರಸ, ಹಾಲು, ಮೊಸರು, ಚಪಾತಿ, ಪೂರಿ ಮುಂತಾದ ಆಹಾರಗಳನ್ನು ಸೇವಿಸಬಹುದು. ಉಪ್ಪು, ತಾಮಸಿಕ ಆಹಾರಗಳು ಮತ್ತು ಈರುಳ್ಳಿ-ಬೆಳ್ಳುಳ್ಳಿ ಇರುವ ಆಹಾರಗಳನ್ನು ಸೇವಿಸಬಾರದು. ಶುದ್ಧ ಮನಸ್ಸು ಮತ್ತು ದೇಹದೊಂದಿಗೆ ವ್ರತವನ್ನು ಆಚರಿಸುವುದು ಮುಖ್ಯ.
- Akshatha Vorkady
- Updated on: Aug 6, 2025
- 11:35 am
Shravan Purnima 2025: ಶ್ರಾವಣ ಹುಣ್ಣಿಮೆ ಯಾವಾಗ? ಶುಭ ಸಮಯ, ಪೂಜಾ ವಿಧಿ ವಿಧಾನವನ್ನು ತಿಳಿಯಿರಿ
ಶ್ರಾವಣ ಪೂರ್ಣಿಮೆ, ನೂಲು ಹುಣ್ಣಿಮೆ ಎಂದೂ ಕರೆಯಲ್ಪಡುವ ಈ ಪವಿತ್ರ ದಿನದಂದು ರಕ್ಷಾಬಂಧನ ಹಬ್ಬವನ್ನೂ ಆಚರಿಸಲಾಗುತ್ತದೆ. ಬ್ರಾಹ್ಮಣರು ಈ ದಿನ ಜನಿವಾರವನ್ನು ಬದಲಾಯಿಸುತ್ತಾರೆ. ಇದಲ್ಲದೇ ಈ ದಿನ ಉಪವಾಸ, ದಾನ ಮತ್ತು ಸ್ನಾನ ಇತ್ಯಾದಿ ಆಚರಣೆಗಳು ನಡೆಯುತ್ತವೆ. ವಿಷ್ಣು ಮತ್ತು ಶಿವನ ಪೂಜೆಯ ಜೊತೆಗೆ, ಗಾಯತ್ರಿ ಜಯಂತಿಯನ್ನೂ ಆಚರಿಸಲಾಗುತ್ತದೆ. ಚಂದ್ರೋದಯದ ನಂತರ ಉಪವಾಸ ಮುರಿಯಲಾಗುತ್ತದೆ.
- Akshatha Vorkady
- Updated on: Aug 6, 2025
- 10:35 am
Mangala Gauri Vrata: ಶ್ರಾವಣ ಮಾಸದಲ್ಲಿ ಆಚರಿಸುವ ಮಂಗಳ ಗೌರಿ ವ್ರತದ ವಿಶೇಷತೆಗಳೇನು?
ಮಂಗಳ ಗೌರಿ ವ್ರತವು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಪ್ರಮುಖ ಹಿಂದೂ ವ್ರತ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಪತಿಯ ಆರೋಗ್ಯ, ಕುಟುಂಬದ ಒಳಿತು ಮತ್ತು ಶೀಘ್ರ ವಿವಾಹಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ. ಐದು ವರ್ಷಗಳ ಕಾಲ ಈ ವ್ರತವನ್ನು ಆಚರಿಸುವುದು ವಾಡಿಕೆ ಎಂದು ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
- Akshatha Vorkady
- Updated on: Aug 2, 2025
- 8:57 am
Shravana Maasa: ಶಿವಲಿಂಗಕ್ಕೆ ನೀರನ್ನು ಅರ್ಪಿಸುವ ಈ 3 ರಹಸ್ಯ ನಿಯಮಗಳು ನಿಮಗೆ ತಿಳಿದಿದೆಯೇ?
ಶ್ರಾವಣ ಮಾಸದಲ್ಲಿ ಶಿವನ ಪೂಜೆಯು ಅಪಾರ ಪುಣ್ಯವನ್ನು ನೀಡುತ್ತದೆ. ಶಿವಲಿಂಗಕ್ಕೆ ನೀರು ಅರ್ಪಿಸುವಾಗ ಕೆಲವು ರಹಸ್ಯ ನಿಯಮಗಳನ್ನು ಪಾಲಿಸುವುದು ಮುಖ್ಯ. ಶಿವಲಿಂಗದ ಹಿಂಭಾಗಕ್ಕೆ ನೀರು ಸುರಿಯಬಾರದು, ಸೋಮವಾರ ಬ್ರಹ್ಮ ಮುಹೂರ್ತದಲ್ಲಿ ಅಭಿಷೇಕ ಮಾಡುವುದು ಶ್ರೇಷ್ಠ ಮತ್ತು ನಿಮ್ಮ ಆಸೆಗಳನ್ನು ರಹಸ್ಯವಾಗಿ ಶಿವನಿಗೆ ಅರ್ಪಿಸುವುದು ಫಲಪ್ರದ. ಈ ನಿಯಮಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ.
- Akshatha Vorkady
- Updated on: Aug 1, 2025
- 11:03 am
Nag Panchami 2025: ನಾಗನಿಗೆ ಹಿಂಗಾರ ಏಕೆ ಪ್ರಿಯ; ಈ ಬಗ್ಗೆ ಕಶೆಕೋಡಿ ಸೂರ್ಯನಾರಾಯಣ ಭಟ್ ಏನು ಹೇಳಿದ್ದಾರೆ ನೋಡಿ
ನಾಗಾರಾಧನೆಗೆ ಅದರದ್ದೇ ಆದ ಮಹತ್ವವಿದೆ, ಅದರಲ್ಲೂ ತುಳುನಾಡಿನಲ್ಲಿ ನಾಗಾರಾಧನೆಗೆ ಬಹಳ ವಿಶೇಷವಾದ ಸ್ಥಾನವಿದೆ. ಜೊತೆಗೆ ನಾಗಾರಾಧನೆಯಾಗಿರಲಿ, ದೈವಾರಾಧಾನೆ ಆಗಿರಲಿ ಪ್ರತಿಯೊಂದು ಪೂಜೆ ಪುನಸ್ಕಾರಗಳಿಗೂ ಹಿಂಗಾರದ ಹೂವನ್ನೇ ಪ್ರಧಾನವಾಗಿ ಬಳಸಲಾಗುತ್ತದೆ. ಅದಲ್ಲೂ ನಾಗನಿಗೆ ಈ ಹೂವು ಬಲು ಪ್ರಿಯ ಎನ್ನುವ ಮಾತೊಂದಿದೆ. ಅಷ್ಟಕ್ಕೂ ನಾಗಾರಾಧನೆಯಲ್ಲಿ ಹಿಂಗಾರದ ಹೂವನ್ನೇ ಏಕೆ ಹೆಚ್ಚಾಗಿ ಬಳಸಲಾಗುತ್ತದೆ ಎಂಬ ವಿಚಾರವನ್ನು ಕಶೆಕೋಡಿ ಸೂರ್ಯನಾರಾಯಣ ಭಟ್ ಟಿವಿ9 ನೊಂದಿಗೆ ಹಂಚಿಕೊಂಡಿದ್ದಾರೆ.
- Malashree anchan
- Updated on: Jul 29, 2025
- 11:06 am