
ಅನೇಕ ಜನರು ಮನೆಗೆ ಸಮೃದ್ಧಿ ಬರಲಿ ಎಂದು ಮನಿ ಪ್ಲಾಂಟ್ (Money Plant) ಬೆಳೆಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ಲಾಭದ ಬದಲು ಭಾರಿ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಮನಿ ಪ್ಲಾಂಟ್ ಇಡುವಾಗ ನಾವು ಮಾಡುವ ಸಾಮಾನ್ಯ ತಪ್ಪುಗಳು ಮತ್ತು ಅವುಗಳ ಪರಿಣಾಮಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಈಶಾನ್ಯ (North-East) ಮೂಲೆಯಲ್ಲಿ ಮನಿ ಪ್ಲಾಂಟ್ ಅನ್ನು ಎಂದಿಗೂ ಇಡಬಾರದು. ಈ ದಿಕ್ಕಿನಲ್ಲಿ ಗಿಡವನ್ನು ಇಟ್ಟರೆ ಸಾಲದ ಹೊರೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಮನೆಯ ಆದಾಯದ ಬಹುಭಾಗವು ಅನಗತ್ಯ ವೈದ್ಯಕೀಯ ವೆಚ್ಚಗಳು ಮತ್ತು ಅನಾರೋಗ್ಯದ ಕಾರಣಕ್ಕೆ ಖರ್ಚಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಆರ್ಥಿಕ ಸ್ಥಿರತೆಗಾಗಿ ಈ ದಿಕ್ಕನ್ನು ತಪ್ಪಿಸುವುದು ಉತ್ತಮ.
ಮನೆ ಅಲಂಕಾರಕ್ಕಾಗಿ ಇಂದು ಅನೇಕರು ಸ್ನಾನಗೃಹದ (Bathroom) ಒಳಗೆ ಅಥವಾ ಹತ್ತಿರ ಮನಿ ಪ್ಲಾಂಟ್ ಇಡುತ್ತಾರೆ. ಆದರೆ ಇದು ವಾಸ್ತು ಪ್ರಕಾರ ದೋಷಪೂರಿತವಾಗಿದೆ. ಮನಿ ಪ್ಲಾಂಟ್ ಐಶ್ವರ್ಯ ಕಾರಕನಾದ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ, ಆದರೆ ಸ್ನಾನಗೃಹವು ರಾಹುವಿನ ಸ್ಥಾನವೆಂದು ಪರಿಗಣಿಸಲಾಗಿದೆ. ಇವೆರಡರ ಸಂಯೋಗದಿಂದ ಆದಾಯದ ಮೂಲಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗಬಹುದು.
ಮಲಗುವ ಕೋಣೆಯಲ್ಲಿ ಮನಿ ಪ್ಲಾಂಟ್ ಇಡುವುದಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ನೀವು ಮಲಗುವ ದಿಕ್ಕಿನಲ್ಲಿ ಅಥವಾ ಬೆಡ್‌ನ ಹೆಡ್‌ಬೋರ್ಡ್ ಬಳಿ ಈ ಗಿಡವನ್ನು ಇಡಬೇಡಿ. ಹೀಗೆ ಮಾಡುವುದರಿಂದ ದಂಪತಿಗಳ ನಡುವೆ ಅನಗತ್ಯ ಜಗಳ ಮತ್ತು ಮನಸ್ತಾಪಗಳು ಉಂಟಾಗಬಹುದು. ಅಷ್ಟೇ ಅಲ್ಲದೆ, ಇದು ಮಾನಸಿಕ ಒತ್ತಡ ಮತ್ತು ಉದ್ವೇಗವನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಮನಿ ಪ್ಲಾಂಟ್ ಎಲ್ಲಿಟ್ಟರೂ ಬೆಳೆಯುತ್ತದೆ ಎಂಬುದು ನಿಜ, ಆದರೆ ಅದು ಸಕಾರಾತ್ಮಕ ಫಲ ನೀಡಬೇಕಾದರೆ ಬೆಳಕು ಮುಖ್ಯ. ಕತ್ತಲೆಯಾದ ಅಥವಾ ಮಂದ ಬೆಳಕಿರುವ ಸ್ಥಳದಲ್ಲಿ ಮನಿ ಪ್ಲಾಂಟ್ ಇಟ್ಟರೆ ಅದು ಆರ್ಥಿಕ ಸಂಕಷ್ಟಗಳನ್ನು ಆಕರ್ಷಿಸುತ್ತದೆ. ಗಿಡವು ಸರಿಯಾಗಿ ಬೆಳೆಯದೆ ಬಾಡಿ ಹೋದರೆ, ಅದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಮನಿ ಪ್ಲಾಂಟ್‌ನ ಬಳ್ಳಿಗಳು ಯಾವಾಗಲೂ ಮೇಲ್ಮುಖವಾಗಿ ಬೆಳೆಯಬೇಕು. ಒಂದು ವೇಳೆ ಬಳ್ಳಿಗಳು ಕೆಳಕ್ಕೆ ನೇತಾಡಿ ನೆಲವನ್ನು ಮುಟ್ಟುತ್ತಿದ್ದರೆ, ಅದನ್ನು ತಕ್ಷಣವೇ ಸರಿಪಡಿಸಿ. ಬಳ್ಳಿಗಳು ನೆಲ ಮುಟ್ಟುವುದು ಲಕ್ಷ್ಮಿ ದೇವಿಗೆ ಮಾಡುವ ಅವಮಾನ ಎಂದು ನಂಬಲಾಗಿದೆ. ಇದು ಮನೆಯಲ್ಲಿ ವಾಸ್ತು ದೋಷ ಉಂಟುಮಾಡಿ, ಬರಬೇಕಾದ ಐಶ್ವರ್ಯ ಮತ್ತು ಸಮೃದ್ಧಿಯನ್ನು ತಡೆಯುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ