Narak Chaturdashi 2021: ನರಕ ಚತುರ್ದಶಿಯ ದಿನ ಲಕ್ಷ್ಮಿಯನ್ನು ಸ್ವಾಗತಿಸಲು ಮನೆಯಲ್ಲಿ ಈ ಮೂರು ಕೆಲಸ ಮಾಡಿ

| Updated By: ಸಾಧು ಶ್ರೀನಾಥ್​

Updated on: Nov 03, 2021 | 7:38 AM

ಮನೆಯಲ್ಲಿನ ಎಲ್ಲ ಸದಸ್ಯರೂ ತಲೆಗೆ ಹರಳೆಣ್ಣೆ ಹಚ್ಚಿಕೊಳ್ಳುವುದರ ಜೊತೆಗೆ ದೇಹದ ಮೇಲೆಯೂ ಎಣ್ಣೆ ಸವರಿಕೊಂಡು, ಶುಚಿಗೊಳಿಸಿಕೊಳ್ಳಬೇಕು. ಅಭ್ಯಂಜನ ಸ್ನಾನ ಮಾಡಬೇಕು. ನರಕ ಚತುರ್ದಶಿಯ ದಿನ ಹೀಗೆ ಎಣ್ಣೆ ಸ್ನಾನ ಮಾಡುವುದರಿಂದ ನಿಮ್ಮ ಸೌಂದರ್ಯ ವೃದ್ಧಿಸಿ, ಸೌಭಾಗ್ಯ ನೆಲೆಸುತ್ತದೆ ಎಂಬ ಮಾತಿದೆ.

Narak Chaturdashi 2021: ನರಕ ಚತುರ್ದಶಿಯ ದಿನ ಲಕ್ಷ್ಮಿಯನ್ನು ಸ್ವಾಗತಿಸಲು ಮನೆಯಲ್ಲಿ ಈ ಮೂರು ಕೆಲಸ ಮಾಡಿ
ನರಕ ಚತುರ್ದಶಿಯ ದಿನ ಲಕ್ಷ್ಮಿಯನ್ನು ಸ್ವಾಗತಿಸುವ ಮೊದಲು ಮನೆಯಲ್ಲಿ ಈ 3 ಕೆಲಸ ಮಾಡಿ
Follow us on

ನರಕ ಚತುರ್ದಶಿಯ ದಿನ ಈ ಮೂರು ಕೆಲಸ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಏಕೆಂದರೆ ಇದರಿಂದ ಲಕ್ಷ್ಮಿ ದೇವಿ ಸುಪ್ರಸನ್ನಳಾಗಿ, ನಿಮ್ಮ ಮನೆಯನ್ನು ಪ್ರವೇಶಿಸುತ್ತಾಳೆ. ನರಕ ಚತುರ್ದಶಿ 2021 ಈ ಬಾರಿ ಇಂದು ನವೆಂಬರ್ 3 ಬುಧವಾರದ ದಿನ ಬಂದಿದೆ. ಕಾರ್ತಿಕ ಮಾಸ ಎಂಬುದು ಅತ್ಯಂತ ಮಹತ್ವದ ತಿಂಗಳು. ಪೂಜೆ ಪುನಸ್ಕಾರಗಳಿಗೆ ಈ ತಿಂಗಳಲ್ಲಿ ಜಾಸ್ತಿಯಾಗಿರುತ್ತದೆ. ಹಾಗಾಗಿ ತಿಂಗಳ ಪೂರ್ತಿ ದಾನ ಧರ್ಮ ಮಾಡಿ. ಹಿಂದೂ ಪಂಚಾಂಗದಲ್ಲಿ 8ನೆಯ ತಿಂಗಳು ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಭಗವಾನ್ ತನ್ನ ನಾಲ್ಕು ತಿಂಗಳ ನಿದ್ರಾವಸ್ಥೆಯನ್ನು ಪೂರೈಸಿ, ಭೂಮಂಡಲದಲ್ಲಿ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದೆ. ಜೊತೆಗೆ ಲಕ್ಷ್ಮಿ ದೇವಿ ಸಹ ಶ್ರೀಮನ್ನಾರಾಯಣನ ಜೊತೆ ಭೂಲೋಕ ಸಂಚಾರವಾಸಿಗಳಾಗುತ್ತಾರೆ. ಹಾಗಾಗಿ ಈ ತಿಂಗಳಲ್ಲಿ ಧಾರ್ಮಿಕವಾಗಿ ನಡೆದು ಕೊಳ್ಳಬೇಕಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಉತ್ತಮ ನಡತೆ ತೋರಬೇಕು.

ಶಾಸ್ತ್ರಗಳ ಪ್ರಕಾರ ಅಲಕ್ಷ್ಮಿ ದೇವಿ ಬಡವರ ಮನೆಗಳಲ್ಲಿ ತಂಗಿರುತ್ತಾಳೆ. ಕ್ಲೇಷ, ಗಲೀಜು ಮತ್ತು ಹೊಲಸು ಇರುವ ಕಡೆ ಅಲಕ್ಷ್ಮಿ ದೇವಿ ವಾಸಿಸುತ್ತಾಳೆ ಎಂಬ ನಂಬಿಕೆಯಿದೆ. ಈ ದೇವಿಯನ್ನು ದೌರ್ಭಾಗ್ಯದ ದೇವಿ ಎಂದೂ ಕರೆಯುತ್ತಾರೆ. ಎಲ್ಲಿ ದೌರ್ಭಾಗ್ಯದ ದೇವಿ ಅಲಕ್ಷ್ಮಿ ನೆಲೆಸಿರುತ್ತಾಲೋ ಅಲ್ಲಿಗೆ ಲಕ್ಷ್ಮಿ ದೇವಿ ಅಪ್ಪಿತಪ್ಪಿಯೂ ಬರುವುದಿಲ್ಲ. ಲಕ್ಷ್ಮಿ ದೇವಿಯನ್ನು ಸ್ವಾಗತಿಸಬೇಕು ಎಂದರೆ ಅಲಕ್ಷ್ಮಿ ದೇವಿಗೆ ಮನೆಯಿಂದ ವಿದಾಯ ಹೇಳಲೇಬೇಕು. ಹಾಗಾಗಿ ನರಕ ಚತುರ್ದಶಿಯ ದಿನ ಮನೆಯನ್ನು ಸ್ವಚ್ಛಗೊಳಿಸಿ, ಅಲಕ್ಷ್ಮಿ ದೇವಿಯನ್ನು ಮನೆಯಿಂದ ನಿರ್ಗಮಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ 3 ಮುಖ್ಯ ಕೆಲಸಗಳನ್ನು ಮಾಡಬೇಕು. ಅವು ಏನು ಎಂಬುದು ಇಲ್ಲಿದೆ ತಿಳಿಯಿರಿ.

1. ಮನೆಯಲ್ಲಿರುವ ಕಸವನ್ನು ಹೊರಹಾಕಬೇಕು:

ನರಕ ಚತುರ್ದಶಿಯ ದಿನ ಲಕ್ಷ್ಮಿಯನ್ನು ಸ್ವಾಗತಿಸಲು ಮನೆಯಲ್ಲಿ ಕಸ ಇದ್ದರೆ ಅದನ್ನು ಹೊರಹಾಕಬೇಕು. ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಮನೆಯಲ್ಲಿ ಪ್ರತಿಯೊಂದು ಮೂಲೆಯನ್ನೂ ಸ್ವಚ್ಛಗೊಳಿಸಿ. ಮನೆಯಲ್ಲಿ ಜೇಡರ ಬಲೆಯಿದ್ದರೆ ಅದನ್ನು ತೆಗೆದು, ಆ ಜಾಗವನ್ನು ಸ್ವಚ್ಛವಾಗಿಡಿ. ಖಾಲಿ ಡಬ್ಬಗಳು, ರದ್ದಿ ಪೇಪರ್, ಮುರಿದು ಬಿದ್ದಿರುವ ಗಾಜು, ಮುರಿದಿರುವ ಲೋಹದ ವಸ್ತು, ತೂತು ಬದ್ದಿರುವ ಪಾತ್ರೆಗಳು ಮುಂತಾದ ಸಾಮಾನುಗಳನ್ನು ಗುಡ್ಡೆ ಮಾಡಿ ಮನೆಯಿಂದ ಹೊರಗೆ ಹಾಕಿ. ಮುರಿದಿರುವ ಫರ್ನೀಚರ್​​ಗಳು ಇದ್ದರೆ ಅವುಗಳನ್ನು ಹೊರ ಹಾಕಿ. ಲಕ್ಷ್ಮಿ ದೇವಿಯ ಸ್ವಾಗತಕ್ಕಾಗಿ ಮನೆಯನ್ನು ಇಂತಹ ಉತ್ಸಾಹದಾಯಕ ವಾತಾವರಣದಿಂದ ಸಜ್ಜುಗೊಳಿಸಬೇಕು.

2. ದೇಹದ ಮೇಲೆ ಎಣ್ಣೆಹಚ್ಚಿಕೊಂಡು, ಶುಚಿಗೊಳಿಸಿಕೊಳ್ಳಬೇಕು:

ಮನೆಯಲ್ಲಿನ ಎಲ್ಲ ಸದಸ್ಯರೂ ತಲೆಗೆ ಹರಳೆಣ್ಣೆ ಹಚ್ಚಿಕೊಳ್ಳುವುದರ ಜೊತೆಗೆ ದೇಹದ ಮೇಲೆಯೂ ಎಣ್ಣೆ ಸವರಿಕೊಂಡು, ಶುಚಿಗೊಳಿಸಿಕೊಳ್ಳಬೇಕು. ಅಭ್ಯಂಜನ ಸ್ನಾನ ಮಾಡಬೇಕು. ನರಕ ಚತುರ್ದಶಿಯ ದಿನ ಹೀಗೆ ಎಣ್ಣೆ ಸ್ನಾನ ಮಾಡುವುದರಿಂದ ನಿಮ್ಮ ಸೌಂದರ್ಯ ವೃದ್ಧಿಸಿ, ಸೌಭಾಗ್ಯ ನೆಲೆಸುತ್ತದೆ ಎಂಬ ಮಾತಿದೆ.

3. ಯಮ ದೀಪ ಹಚ್ಚಬೇಕು:

ನರಕ ಚತುರ್ದಶಿಯಂದು ಸಾಯಂಕಾಲ ಮನೆಯ ಮುಂದೆ ಮಣ್ಣಿನಿಂದ ಮಾಡಿದ ದೀಪ ಹಚ್ಚಬೇಕು. ಇದನ್ನು ಯಮ ದೀಪ ಎಂದು ಕರೆಯುತ್ತಾರೆ. ಏಕೆಂದರೆ ಇದನ್ನು ಯಮನಿಗೆ ಸಮರ್ಪಿಸಲಾಗುತ್ತದೆ. ಯಮ ದೀಪ ಹಚ್ಚುವುದರಿಂದ ಅಕಾಲ ಮೃತ್ಯು ಮತ್ತು ನರಕದ ಯಾತನಾಮಯ ದುರ್ಗತಿಯಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ಯಮ ದೀಪವನ್ನು ಮನೆಯ ಮುಖ್ಯ ದ್ವಾರದಲ್ಲಿ ತಗ್ಗು ಪ್ರದೇಶದಲ್ಲಿ ಇಡಬೇಕು. ದೀಪ ಉರಿಯುವವರೆಗೂ ಅದರ ಮೇಲೆ ನಿಗಾ ಇಟ್ಟಿರಬೇಕು. ದೀಪವೆಲ್ಲಾ ಉರಿದ ಮೇಲೆ ಮನೆಯಲ್ಲಿ ಎಲ್ಲಾದರೂ ಒಂದು ಕಡೆ ಸೂಕ್ತ ಸ್ಥಳದಲ್ಲಿ ತಂದು ಇಡಬೇಕು.

(must do these three upay on narak chaturdashi 2021 astro tips for money and good luck)