Deepawali Shopping: ದೀಪಾವಳಿಗೆ ನಿಮ್ಮ ರಾಶಿಗೆ ಅನುಸಾರ ಈ ವಸ್ತುಗಳ ಖರೀದಿಸಿ, ಸೌಭಾಗ್ಯ ಹೊಂದಿರಿ! ನಿಮ್ಮ ರಾಶಿ ಯಾವುದು?
ಧನು ರಾಶಿಯವರು ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಜಮೀನು, ಸೈಟು ಖರೀದಿ ಮಾಡಬಹುದು. ಬೆಲೆಬಾಳುವ ಲೋಹದ ವಸ್ತು, ವಜ್ರ ಮತ್ತು ಮಣಿಗಳನ್ನು ಖರೀದಿಸಬಹುದು. ಇದು ನಿಮಗೆ ತುಂಬಾ ಶುಭ ತಂದುಕೊಡಲಿದೆ.
ದೀಪಾವಳಿಯ ಶುಭ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಏನಾದರೂ ಖರೀದಿ ಮಾಡುವುದು ಶುಭದ ಸೂಚಕ ಅಷ್ಟೇ ಅಲ್ಲ, ಮುಂದೆ ಅದು ಸಮೃದ್ಧಿಗೆ ನಾಂದಿ ಹಾಡುತ್ತದೆ. ಮನೆಯಲ್ಲಿ ಪರಿವಾರದವರಿಗಾಗಲಿ ಅಥವಾ ವೈಯಕ್ತಿಕವಾಗಲಿ ಖರೀದಿ ಮಾಡುವುದು ಒಳ್ಳೆಯದು. ಆದರೆ ಹಾಗೆ ಖರೀದಿ ಮಾಡುವ ಮೊದಲು ನಿಮ್ಮ ನಿಮ್ಮ ರಾಶಿಗೆ ಅನುಗುಣವಾಗಿ ಖರೀದಿ ಮಾಡಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಈ ಲೇಖನದಲ್ಲಿ ಯಾವ ರಾಶಿಯವರು ಏನನ್ನು ಖರೀದಿಸಿದರೆ ಉತ್ತಮ ಎಂಬುದನ್ನು ತಿಳಿಸಲಾಗಿದೆ. ಜೊತೆಗೆ ಏನನ್ನು ಖರೀದಿಸಬಾರದು ಎಂಬುದನ್ನೂ ಇಲ್ಲಿ ತಿಳಿಯಹೇಳಲಾಗಿದೆ. ಲಕ್ಷ್ಮೀ ಪೂಜೆಯ ಜೊತೆ ಜೊತೆಗೆ ಹೀಗೆ ವಸ್ತುಗಳನ್ನು ಖರೀದಿಸಿ ತರಬೇಕು. ಜನರು ಈ ದೀಪಾವಳಿಯ ಸಂದರ್ಭದಲ್ಲಿ ಬೆಳ್ಳಿ, ಬಂಗಾರ, ಮತ್ತಿತರ ಶುಭ ವಸ್ತುಗಳನ್ನು (Deepawali Shopping) ಖರೀದಿಸುತ್ತಾರೆ.
ಮೇಷ ರಾಶಿ: ಮೇಷ ರಾಶಿಯವರು ದೀಪಾವಳಯ ಸಂದರ್ಭದಲ್ಲಿ ಚಿನ್ನದ ನಾಣ್ಯ, ಬೆಳ್ಳಿ ಪಾತ್ರೆ, ವಜ್ರದ ಆಭೂಷಣ ಖರೀದಿಸಬಹುದು. ಇದು ಮೇಷ ರಾಶಿಯವರಿಗೆ ಮುಂದೆ ಲಾಭದಾಯಕವಾಗುತ್ತದೆ. ಆದರೆ ಲೋಹ, ಚರ್ಮ ಅಥವಾ ರಾಸಾಯನಿಕ ವಸ್ತುಗಳನ್ನು ಖರೀದಿಸಬೇಡಿ.
ವೃಷಭ ರಾಶಿ: ವೃಷಭ ರಾಶಿಯವರು ಚಿನ್ನ, ಬೆಳ್ಳಿ, ವಜ್ರ ಮತ್ತು ಪಾತ್ರೆ ಖರೀದಿಸಬಹುದು. ಇದರಿಂದ ಶುಭವಾಗಲಿದೆ. ಕೇಸರಿ ಮತ್ತು ಚಂದನವನ್ನೂ ಖರೀದಿಸಬಹುದು. ಆದರೆ ತೈಲ, ಚರ್ಮ, ಮರದ ವಸ್ತುಗಳು ಅಥವಾ ವಾಹನಗಳನ್ನು ಖರೀದಿಸಬಾರದು.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ದೀಪಾವಳಿಯು ಶುಭದಾಯಕ. ಚಿನ್ನ, ಬೆಳ್ಳಿ, ನೀಲಮಣಿ ಮತ್ತು ವಿಶೇಷ ರೂಪದ ಸಂಪತ್ತುಗಳಾದ ಜಮೀನು, ಸೈಟು, ಮನೆ ಖರೀದಿ ಮಾಡಬಹುದು. ಫರ್ನೀಚರ್ ಖರೀದಿ ಮಾಡುವುದೂ ಒಳ್ಳೆಯದು.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ತಮಗಷ್ಟೇ ಖರೀದಿ ಮಾಡುವುದಕ್ಕಿಂತ ಕುಟುಂಬಸ್ಥರಿಗೂ ಖರೀದಿ ಮಾಡುವುದು ಒಳ್ಳೇಯದು. ಆಮೇಲೆ ಮನೆಯವರ ಹೆಸರಿನಲ್ಲಿ ಏನು ಬೇಕಾದರೂ ಖರೀದಿ ಮಾಡುಬಹುದು. ಮಕ್ಕಳಿಗೆ ಕಾಣಿಕೆ ನೀಡಬೇಕು ಎಂತಾದರೆ ಮಕ್ಕಳಿಗೆ ಇಷ್ಟವಾಗುವಂತಹುದ್ದು ಏನು ಬೇಕಾದರೂ ಖರೀದಿಸಬಹುದು. ಆದರೆ ಚಿನ್ನ ಮತ್ತು ಷೇರುಗಳನ್ನು ಖರೀದಿಸಬೇಡಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ವಾಹನ ಖರೀದಿ, ಎಲೆಕ್ಟ್ರಾನಿಕ್ ಗ್ಯಾಜೆಟ್ಸ್, ಮರದ ಪಾತ್ರೆ, ಮನೆ, ಫ್ಲ್ಯಾಟ್, ಚಿನ್ನ, ಬೆಳ್ಳಿ, ತಾಮ್ರದ ವಸ್ತುಗಳನ್ನು ಖರೀದಿಸಿದರೆ ಶುಭದಾಯಕವಾಗಲಿದೆ. ಆದರೆ ಲೋಹದ ವಸ್ತು ಅಥವಾ ಸಿಮೆಂಟ್ ವಸ್ತುಗಳನ್ನು ಖರೀದಿಸಬೇಡಿ.
ಕನ್ಯಾ ರಾಶಿ: ಕನ್ಯಾ ರಾಶಿಯವರು ಜಮೀನು, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡಬಹುದು. ಆದರೆ ಚಿನ್ನ, ಬೆಳ್ಳಿ, ವಜ್ರ ಖರೀದಿಸಬಾರದು. ಇನ್ನು ಹೊಸ ಬಟ್ಟೆ ಖರೀದಿಸಿದಾಗ ಬಿಳಿ ಬಟ್ಟೆ ಖರೀದಿ ಮಾಡಬೇಡಿ.
ತುಲಾ ರಾಶಿ: ತುಲಾ ರಾಶಿಯವರು ಚಿನ್ನ ಮತ್ತು ವಜ್ರವನ್ನು ಖರೀದಿ ಮಾಡಬಹುದಾದರೂ ಸ್ವಲ್ಪ ಸಮು ಮುಂದೂಡುವುದು ಒಳ್ಳೆಯದು. ನಿಧಾನವಾಗಿ ಈ ವಸ್ತುಗಳನ್ನು ಖರೀದಿ ಮಾಡಿ. ಇದನ್ನು ಹೊರತುಪಡಿಸಿ ನಿಮಗೆ ಏನಾದರ6ಊ ಖರೀದಿ ಮಾಡಲೇಬೇಕು ಎಂತಾದರೆ ನಿಮ್ಮ ಪರಿವಾರದವರಿಗೆ ಮತ್ತು ಮಕ್ಕಳಿಗೆ ಏನನ್ನಾದರೂ ಖರೀದಿಸಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಚಿನ್ನ, ಬೆಳ್ಳಿ, ಬಟ್ಟೆ, ಮಣ್ಣಿನ ಪಾತ್ರೆಗಳನ್ನು ಖರೀದಿಸಬಹುದು. ಲೋಹದಿಂದ ಮಾಡಿರುವ ವಸ್ತುಗಳನ್ನೂ ಖರೀದಿಸಬಹುದು. ಆದರೆ ದುಬಾರಿಯಾದ ಬ್ರ್ಯಾಂಡೆಡ್ ವಸ್ತುಗಳ ಖರೀದಿ ಅಥವಾ ಷೇರುಗಳಲ್ಲಿ ಹಣ ಹೂಡುವುದನ್ನು ಮಾಡಬೇಡಿ.
ಧನು ರಾಶಿ: ಧನು ರಾಶಿಯವರು ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಜಮೀನು, ಸೈಟು ಖರೀದಿ ಮಾಡಬಹುದು. ಬೆಲೆಬಾಳುವ ಲೋಹದ ವಸ್ತು, ವಜ್ರ ಮತ್ತು ಮಣಿಗಳನ್ನು ಖರೀದಿಸಬಹುದು. ಇದು ನಿಮಗೆ ತುಂಬಾ ಶುಭ ತಂದುಕೊಡಲಿದೆ.
(Deepawali 2021 shopping according to the zodiac on Deepawali)