Deepavali 2021: ದೀಪಾವಳಿಗೆ ಲಕ್ಷ್ಮಿ-ಗಣೇಶನ ವಿಗ್ರಹವನ್ನು ಖರೀದಿಸುವಾಗ ಈ ಅಂಶಗಳನ್ನು ಮರೆಯಬೇಡಿ
ಲಕ್ಷ್ಮಿ ದೇವಿ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕೆಂದರೆ ಲಕ್ಷ್ಮಿ ದೇವಿಯ ಜೊತೆಗೆ ಗಣಪತಿಯನ್ನು ಪೂಜಿಸಬೇಕು. ಏಕೆಂದರೆ ಗಣಪತಿಯನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಐಶ್ವರ್ಯ ಇದ್ದಾಗ ಮಾತ್ರ ತಾಯಿ ಲಕ್ಷ್ಮಿ ನೆಲೆಸುತ್ತಾಳೆ.
ಇಂದಿನಿಂದ ದೀಪಾವಳಿ ಹಬ್ಬ ಆರಂಭವಾಗಿದೆ. ಈ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತೆ. ನವೆಂಬರ್ 4 ಗುರುವಾರದಂದು ಮನೆಯಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ದೇವಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿ ನೆಲೆಸುವ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಆದ್ರೆ ಲಕ್ಷ್ಮಿ ದೇವಿ ಚಂಚಲ ಸ್ವಭಾವದವಳು, ಆದ್ದರಿಂದ ಅವಳು ಎಂದಿಗೂ ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ನೆಲೆಸುವುದಿಲ್ಲ.
ಲಕ್ಷ್ಮಿ ದೇವಿ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕೆಂದರೆ ಲಕ್ಷ್ಮಿ ದೇವಿಯ ಜೊತೆಗೆ ಗಣಪತಿಯನ್ನು ಪೂಜಿಸಬೇಕು. ಏಕೆಂದರೆ ಗಣಪತಿಯನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಐಶ್ವರ್ಯ ಇದ್ದಾಗ ಮಾತ್ರ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಅದಕ್ಕಾಗಿಯೇ ದೀಪಾವಳಿಯ ದಿನ ಲಕ್ಷ್ಮಿ ದೇವಿಯನ್ನು ಗಣೇಶನ ಜೊತೆಗೆ ತರಲಾಗುತ್ತದೆ. ಈ ವಿಗ್ರಹಗಳು ನಮ್ಮ ಜೀವನದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಆದ್ದರಿಂದ ಈ ವಿಗ್ರಹಗಳನ್ನು ಬಹಳ ಎಚ್ಚರಿಕೆಯಿಂದ ಖರೀದಿಸಬೇಕು. ವಿಗ್ರಹವನ್ನು ಖರೀದಿಸುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.
ಗಣಪತಿಯ ವಿಗ್ರಹ ಹೇಗಿರಬೇಕು? 1. ಗಣೇಶನ ಮೂರ್ತಿಯನ್ನು ಖರೀದಿಸುವಾಗ, ವಿಗ್ರಹದಲ್ಲಿ ಗಣೇಶನ ವಾಹನ ಇಲಿಯ ಉಪಸ್ಥಿತಿ ಅತಿ ಮುಖ್ಯ. ಹಾಗೆಯೇ ಗಣೇಶನ ಕೈಯಲ್ಲಿ ಲಡ್ಡೂಗಳು ಅಥವಾ ಮೋದಕಗಳನ್ನು ಹೊಂದಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಅಂತಹ ವಿಗ್ರಹವನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಂತಹ ಪರಿಪೂರ್ಣ ಹೊಂದಿರುವ ಮೂರ್ತಿ ಖರೀದಿಸಿ.
2. ಮಾರುಕಟ್ಟೆಯಲ್ಲಿ ಹಲವು ರೀತಿಯ ಲಕ್ಷ್ಮಿ-ಗಣೇಶ ವಿಗ್ರಹಗಳು ಸಿಗುತ್ತವೆ. ಈ ಪೈಕಿ ಗಣಪತಿ ಮತ್ತು ಲಕ್ಷ್ಮಿ ಮಾತೆಯ ವಿಗ್ರಹಗಳು ಒಟ್ಟಾಗಿರುವ ಅಥವಾ ಅಂಟಿಕೊಂಡಿರುವ ವಿಗ್ರಹಗಳಿಗಿಂತ ಬೇರೆ ಬೇರೆ ಇರುವ ವಿಗ್ರಹಗಳನ್ನು ಒಟ್ಟಾಗಿ ಇಟ್ಟು ಪೂಜಿಸಬೇಕು.
3. ಗಣೇಶನ ವಿಗ್ರಹವನ್ನು ಖರೀದಿಸುವಾಗ, ಗಣೇಶನ ಸೊಂಡಿಲು ಎಡಕ್ಕೆ ತಿರುಗಿರಬೇಕು ಎಂಬುದನ್ನು ಗಮನಿಸಿ.
ಲಕ್ಷ್ಮಿಯ ವಿಗ್ರಹ ಹೇಗಿರಬೇಕು? 1. ಮನೆಯಲ್ಲಿ ಸದಾ ಕುಳಿತುಕೊಳ್ಳುವಂತಹ ಮಾತಾ ಲಕ್ಷ್ಮಿಯನ್ನು ತರಬೇಕು. ನಿಂತಿರುವ ಲಕ್ಷ್ಮಿಯ ವಿಗ್ರಹವು ಚಲಿಸುತ್ತಿರುವಂತೆ ಪರಿಗಣಿಸಲಾಗುತ್ತದೆ. ಸ್ಥಿರ ಲಕ್ಷ್ಮಿಗಾಗಿ ಕುಳಿತಿರುವ ಲಕ್ಷ್ಮಿಯನ್ನು ಮಾತ್ರ ಮನೆಗೆ ತನ್ನಿ ಇದರಿಂದ ಅವಳು ಯಾವಾಗಲೂ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.
2. ಲಕ್ಷ್ಮಿ ಗೂಬೆಯ ಮೇಲೆ ಕುಳಿತಿರುವುದು ಅಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಕಮಲ ಅಥವಾ ಆನೆಯ ಮೇಲೆ ಕುಳಿತಿರುವ ಲಕ್ಷ್ಮಿ ಮಾತೆಯ ಚಿತ್ರವನ್ನು ತನ್ನಿ.
3. ಮಾತಾ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗಿರುವುದರಿಂದ, ಆಕೆಯ ಚಿತ್ರದಲ್ಲಿ ಸಂಪತ್ತಿನ ಮಳೆಯಾಗುವುದು ಅವಶ್ಯಕ. ಇಂತಹ ಮೂರ್ತಿಯನ್ನು ತರುವುದರಿಂದ ಕುಟುಂಬದಲ್ಲಿನ ಹಣದ ಕೊರತೆಯೂ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನು ಸಹ ನೆನಪಿನಲ್ಲಿಡಿ ನೀವು ಮಣ್ಣಿನ ಮೂರ್ತಿಯನ್ನು ತರುತ್ತಿದ್ದರೆ, ಹೊಸ ಮೂರ್ತಿಯನ್ನು ಮನೆಗೆ ತಂದ ನಂತರ, ಹಳೆಯ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಬೇಕು ಅಥವಾ ಮಣ್ಣಿನಲ್ಲಿ ಬೆರೆಯುವಂತೆ ಮಾಡಬೇಕು. ಅಥವಾ ನೀವು ಹಿತ್ತಾಳೆ, ಚಿನ್ನ, ಬೆಳ್ಳಿ ಮುಂತಾದ ಯಾವುದೇ ಲೋಹದ ವಿಗ್ರಹಗಳನ್ನು ತರುತ್ತಿದ್ದರೆ, ಅವುಗಳನ್ನು ತೆಗೆದುಹಾಕುವ ಅಗತ್ಯವಿಲ್ಲ. ಅವುಗಳನ್ನು ಯಾವಾಗಲೂ ಪೂಜಿಸಬಹುದು.
ಇದನ್ನೂ ಓದಿ: Diwali 2021: ನಿಮ್ಮ ದೀಪಾವಳಿ ಸಂತಸವನ್ನು ಮತ್ತಷ್ಟು ಹೆಚ್ಚಿಸಬೇಕೇ? ಈ ಸಲಹೆಗಳನ್ನು ಅನುಸರಿಸಿ