Deepawali Gifts: ದೀಪಾವಳಿಯ ಶುಭ ಸಂದರ್ಭದಲ್ಲಿ ಇವುಗಳನ್ನು ಕಾಣಿಕೆಯಾಗಿ ಕೊಡಬಾರದು, ಅವು ಯಾವುವು?
ಖರ್ಚೀಫ್ಗಳನ್ನು ಕಾಣಿಕೆಯಾಗಿ ಯಾರಿಗೇ ಆಗಲಿ ನೀಡಬಾರದು. ಈ ಖರ್ಚೀಫ್ ಅಂದರೆ ಕರವಸ್ತ್ರ ಎಂಬುದು ದುಃಖದ ಧ್ಯೋತಕ. ಮುಖ್ಯವಾಗಿ, ಕಣ್ಣೀರು ಒರೆಸಿಕೊಳ್ಳುವುದಕ್ಕೆ ಇದನ್ನು ಬಳಸುವುದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಹಾಗಾಗಿ ಈ ಕಾಣಿಕೆ ನೀಡಿದಾಗ ನಕಾರಾತ್ಮಕತೆ ಬಿತ್ತಿದಂತೆ ಆಗುತ್ತದೆ. ಹಾಗಾಗಿ ಕರವಸ್ತ್ರವನ್ನು ಕಾಣಿಕೆಯಾಗಿ ನೀಡಬಾರದು.
ಕಾರ್ತಿಕ ಮಾಸ ಎಂಬುದು ಅತ್ಯಂತ ಮಹತ್ವದ ತಿಂಗಳು. ಪೂಜೆ ಪುನಸ್ಕಾರಗಳಿಗೆ ಈ ತಿಂಗಳಲ್ಲಿ ಜಾಸ್ತಿಯಾಗಿರುತ್ತದೆ. ಹಾಗಾಗಿ ತಿಂಗಳ ಪೂರ್ತಿ ದಾನ ಧರ್ಮ ಮಾಡಿ. ಹಿಂದೂ ಪಂಚಾಂಗದಲ್ಲಿ 8ನೆಯ ತಿಂಗಳು ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಭಗವಾನ್ ತನ್ನ ನಾಲ್ಕು ತಿಂಗಳ ನಿದ್ರಾವಸ್ಥೆಯನ್ನು ಪೂರೈಸಿ, ಭೂಮಂಡಲದಲ್ಲಿ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದೆ. ಜೊತೆಗೆ ಲಕ್ಷ್ಮಿ ದೇವಿ ಸಹ ಶ್ರೀಮನ್ನಾರಾಯಣನ ಜೊತೆ ಭೂಲೋಕ ಸಂಚಾರವಾಸಿಗಳಾಗುತ್ತಾರೆ. ಹಾಗಾಗಿ ಈ ತಿಂಗಳಲ್ಲಿ ಧಾರ್ಮಿಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಉತ್ತಮ ನಡತೆ ತೋರಬೇಕು.
ಚಿನ್ನದ ಲೇಪನದಂತೆ ಬೆಳಕಿನಿಂದ ಕಂಗೊಳಿಸುವ ದೀಪಾವಳಿ ನಿಜಕ್ಕೂ ಸಂಭ್ರಮದ ಹಬ್ಬ. ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಇವುಗಳನ್ನು ಕಾಣಿಕೆಯಾಗಿ ಕೊಡಬಾರದು. ಅಪ್ಪಿತಪ್ಪಿ ಕೊಟ್ಟರೆ ಅದರಿಂದ ನಿಮಗೆ ನಷ್ಟ ಕಟ್ಟಿಟ್ಟಬುತ್ತಿ. ದೀಪಾವಳಿಯ ಸಂದರ್ಭದಲ್ಲಿ ಸ್ವೀಟ್ಸ್ ಜೊತೆಗೆ ಕಾಣಿಕೆಗಳನ್ನು ನೀಡುವ ಪದ್ಧತಿಯಿದೆ. ದೀಪಾವಳಿ ಅಂದರೆ ಕೆಲವರಿಗೆ ವಿಶೇಷವಾಗಿ, ವ್ಯಕ್ತಿಗತವಾಗಿ ಕಂಡುಬರುತ್ತದೆ. ಏನಾದರು ವಿಶೇಷವಾಗಿ ಗಿಫ್ಟ್ ನೀಡಬೇಕು ಎಂದು ಕೆಲವರಿಗೆ ಮನಸ್ಸು ತುಡಿಯುತ್ತಿರುತ್ತದೆ. ಆದರೆ ಅತ್ಯುತ್ಸಾಹದಲ್ಲಿ ಕೆಲವರು ತಾವು ಕೊಡಬಾರದಂತಹ ವಸ್ತುಗಳನ್ನು ಕಾಣಿಕೆಯಾಗಿ ಕೊಟ್ಟುಬಿಡುತ್ತಾರೆ. ಇದು ಅಸಮಂಜಸವಾಗುತ್ತದೆ. ಇದು ಅಪಚಾರವಾಗುತ್ತದೆ. ಅದು ಒಳ್ಳೆಯ ಮನಸ್ಸಿನಿಂದಲೇ ಕೊಟ್ಟಿದ್ದರೂ ಒಳ್ಳೆಯದಾಗುವುದಿಲ್ಲ ಎನ್ನುತ್ತದೆ ಫೆಂಗ್ ಶೂಯಿ ಪದ್ಧತಿ. ವಾಸ್ತು ಮತ್ತು ಜ್ಯೋತಿಷ್ಯಕ್ಕೆ ಅನುಗುಣವಾಗಿ ಕಾಣೀಕೆ ಕೊಡಬೇಕಾಗುತ್ತದೆ.
ದೇವರ ಫೋಟೋ ಮತ್ತು ಪ್ರತಿಮೆಗಳ ಕಾಣಿಕೆ ಕೊಡಬಾರದು: ಸಾಮಾನ್ಯವಾಗಿ ಬಹಳಷ್ಟು ಮಂದಿ ದೀಪಾವಳಿಯ ಸಂದರ್ಭದಲ್ಲಿ ಗಣೇಶ ಅಥವಾ ಲಕ್ಷ್ಮಿದೇವಿಯ ಫೋಟೋ, ವಿಗ್ರಹವನ್ನು ಕಾಣಿಕೆಯಾಗಿ ಕೊಡುತ್ತಾರೆ. ದೇವರ ವಿಗ್ರಹಗಳನ್ನು ಯಾವಾಗಂದ್ರೆ ಆವಾಗ, ಅಪ್ಪಿತಪ್ಪಿಯೂ ಕಾಣಿಕೆಯಾಗಿ ನೀಡಬಾರದು. ನಿಮ್ಮ ಭಾಗ್ಯ ವಿಧಾತ ದೇವರನ್ನುಬೇರೆಯವರಿಗೆ ನೀವೇ ಕೈಯಾರೆ ಕೊಟ್ಟುಬಿಟ್ಟಂಗೆ ಆಗುತ್ತದೆ.
ನಿಮ್ಮ ವೃತ್ತಿಗೆ ಸಂಬಂಧಿಸಿದ ಕಾಣಿಕೆಗಳು: ನಿಮ್ಮ ವೃತ್ತಿಗೆ ಸಂಬಂಧಿಸಿದಂತೆಯೂ ಕೆಲವು ಕಾಣಿಕೆಗಳನ್ನು ನೀಡಬಾರದು. ನೀವು ಯಾವ ಯಂತ್ರ, ಎಲೆಕ್ಟ್ರಾನಿಕ್ ಗ್ಯಾಜೆಟ್ನಲ್ಲಿ ದಿನವೂ ಕೆಲಸ ಮಾಡುತ್ತೀರೋ ಅದನ್ನೇ ಕಾಣಿಕೆಯಾಗಿ ಕೊಟ್ಟುಬಿಡಬಾರದು. ಇದರಿಂದ ನಿಮಗೆ ಹಾನಿಯುಂಟಾಗುತ್ತದೆ.
ಗಡಿಯಾರ, ಗಡಿಯಾರ ಸಂಬಂಧೀ ವಸ್ತುಗಳನ್ನು ಕೊಡಬಾರದು: ಅನೇಕರು ದೀಪಾವಳಿಯ ಸಂದರ್ಭದಲ್ಲಿ ಮಾಮೂಲಿ ಗಡಿಯಾರ ಅಥವಾ ಗಡಿಯಾರಕ್ಕೆ ಸಂಬಂಧಿಸಿದಂತಹ ವಸ್ತು, ನೀರಿನ ಝರಿ ಷೋ ಪೀಸ್ ವಸ್ತುಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. ಇವುಗಳನ್ನು ಮನೆಯಲ್ಲಿ ಅಲಂಕಾರಕ್ಕೆ ಇಡುವಾಗ ಅದಕ್ಕೆ ದಿಕ್ಕು ದೆಸೆ ಅಂತಾ ಇರುತ್ತದೆ. ಅಂದರೆ ವಾಸ್ತು ಪ್ರಕಾರ ಇದನ್ನುಮನೆಯಲ್ಲಿಡಬೇಕಾಗುತ್ತದೆ. ಒಂದು ವೇಳೆ ನೀವು ಇಂತಹ ವಸ್ತುಗಳನ್ನು ಕಾಣಿಕೆಯಾಗಿ ಕೊಟ್ಟರೆ ಅವರಿಗೆ ಅದರ ಬಗ್ಗೆ ಅರಿವು ಇಲ್ಲದಿದ್ದರೆ ನೀವು ಕೊಟ್ಟಿರುವ ಕಾಣಿಕೆಗೆ ಅಪಚಾರವಾಗುತ್ತದೆ. ಇದು ಶುಭದಾಯಕವಲ್ಲ.
ರುಮಾಲು ಅಥವಾ ಕರವಸ್ತ್ರ: ಖರ್ಚೀಫ್ಗಳನ್ನು ಕಾಣಿಕೆಯಾಗಿ ಯಾರಿಗೇ ಆಗಲಿ ನೀಡಬಾರದು. ಈ ಖರ್ಚೀಫ್ ಅಂದರೆ ಕರವಸ್ತ್ರ ಎಂಬುದು ದುಃಖದ ಧ್ಯೋತಕ. ಮುಖ್ಯವಾಗಿ, ಕಣ್ಣೀರು ಒರೆಸಿಕೊಳ್ಳುವುದಕ್ಕೆ ಇದನ್ನು ಬಳಸುವುದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಹಾಗಾಗಿ ಈ ಕಾಣಿಕೆ ನೀಡಿದಾಗ ನಕಾರಾತ್ಮಕತೆ ಬಿತ್ತಿದಂತೆ ಆಗುತ್ತದೆ. ಹಾಗಾಗಿ ಕರವಸ್ತ್ರವನ್ನು ಕಾಣಿಕೆಯಾಗಿ ನೀಡಬಾರದು.
ದೀಪಾವಳಿಯ ಸಂದರ್ಭದಲ್ಲಿ ಚೂಪಾದ ವಸ್ತುಗಳನ್ನು ನೀಡಬಾರದು. ತಲವಾರು, ಚಾಕು, ಚಿಕ್ಕ ಚಾಕು, ಕತ್ತರಿಯನ್ನು ಕಾಣಿಕೆಯಾಗಿ ನೀಡಬಾರದು.
(according to vastu dont gift these things on Deepawali occasion)