Naga Panchami 2021: ಶ್ರಾವಣ ಮಾಸದ ಮದರಂಗಿ ಹಬ್ಬ ನಾಗರ ಪಂಚಮಿ- ಏನಿದರ ವಿಶೇಷ, ಆಚರಣೆ, ಭಕ್ತಿ-ಭಾವ ಹೇಗೆ?

| Updated By: Digi Tech Desk

Updated on: Aug 12, 2021 | 8:57 AM

Shravana masa 2021: ಭಾರತೀಯರಿಗೆ ಶ್ರಾವಣ ಮಾಸ ಬಹಳ ಮುಖ್ಯವಾದ ಮಾಸವಾಗಿದ್ದು, ಹಲವಾರು ಹಬ್ಬಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ. ಈಗಾಗಲೇ ಭೀಮನ ಅಮಾವಾಸ್ಯೆ ಅಥವಾ ಕೊಡೆ ಅಮವಾಸ್ಯೆ ಹಬ್ಬವನ್ನು ಭಾನುವಾರದಂದು (ಆಗಸ್ಟ್ 8) ಆಚರಿಸಲಾಗಿದೆ. ಇದಾದ ಮೇಲೆ ಮಂಗಳವಾರ (10 ಆಗಸ್ಟ್) ಮಂಗಳ ಗೌರಿ ವ್ರತಾಚರಣೆ ಇರಲಿದೆ. ಶ್ರಾವಣ ಮಾಸದ ಮೊದಲ ಮಂಗಳವಾರದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದಾದ ಮೇಲೆ ಬರುವುದೇ ನಾಗರ ಪಂಚಮಿ ಶುಕ್ರವಾರ ಆಗಸ್ಟ್ 13ರಂದು.

Naga Panchami 2021: ಶ್ರಾವಣ ಮಾಸದ ಮದರಂಗಿ ಹಬ್ಬ ನಾಗರ ಪಂಚಮಿ- ಏನಿದರ ವಿಶೇಷ, ಆಚರಣೆ, ಭಕ್ತಿ-ಭಾವ ಹೇಗೆ?
Nag Panchami 2021: ಶ್ರಾವಣ ಮಾಸದ ಅಚ್ಚುಮೆಚ್ಚಿನ ಹಬ್ಬ ನಾಗರ ಪಂಚಮಿ- ಏನಿದರ ವಿಶೇಷ, ಆಚರಣೆ, ಭಾವ-ಭಕ್ತಿ ಹೇಗೆ?
Follow us on

ಭಾರತೀಯರಿಗೆ ಶ್ರಾವಣ ಮಾಸ ಬಹಳ ಮುಖ್ಯವಾದ ಮಾಸವಾಗಿದ್ದು, ಹಲವಾರು ಹಬ್ಬಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ. ಈಗಾಗಲೇ ಭೀಮನ ಅಮಾವಾಸ್ಯೆ ಅಥವಾ ಕೊಡೆ ಅಮವಾಸ್ಯೆ ಹಬ್ಬವನ್ನು ಭಾನುವಾರದಂದು (ಆಗಸ್ಟ್ 8) ಆಚರಿಸಲಾಗಿದೆ. ಇದಾದ ಮೇಲೆ ಮಂಗಳವಾರ (10 ಆಗಸ್ಟ್) ಮಂಗಳ ಗೌರಿ ವ್ರತಾಚರಣೆ. ಶ್ರಾವಣ ಮಾಸದ ಮೊದಲ ಮಂಗಳವಾರದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದಾದ ಮೇಲೆ ಬರುವುದೇ ನಾಗರ ಪಂಚಮಿ ಶುಕ್ರವಾರ ಆಗಸ್ಟ್ 13ರಂದು. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುವ ಈ ಹಬ್ಬದಂದು ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಹುತ್ತಗಳಿಗೆ, ದೇವಸ್ಥಾನಕ್ಕೆ ಭೇಟಿ ನೀಡಿ, ನಮಿಸಿ ಹಾಲೆರೆದು, ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಶ್ರಾವಣ ಮಾಸವು ಭಾರತೀಯರಿಗೆ ಅತ್ಯಂತ ಪ್ರಮುಖವಾದ ಮಾಸ (Shravan Month Festival 2021). ಶುಭ ಕಾರ್ಯಗಳಿಗೆ ಪ್ರಶಸ್ತವಾದ, ಹಬ್ಬ ಹರಿದಿನಗಳು ಹೆಚ್ಚಿರುವ ಈ ಮಾಸವನ್ನು ಬಹಳ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಈ ಬಾರಿಯ ಶ್ರಾವಣ ಮಾಸದಲ್ಲಿ ಒಂದು ಹಬ್ಬ ಮೊನ್ನೆ ಭಾನುವಾರ ಮುಗಿದಿದ್ದು, ಇಂದು ಮಂಗಳ ಗೌರಿ ವ್ರತಾಚರಣೆ ನಡೆದಿದೆ. ಮುಂದಿನದು ಶುಕ್ರವಾರ ನಡೆಯುವ ನಾಗರ ಪಂಚಮಿ ಹಬ್ಬ. ಅದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ಜಾತಕದಲ್ಲಿ ನಾಗ ದೋಷ ಕಂಡುಬಂದಿದ್ದರೆ ನಾಗ ಮಂಚಮಿಯ ದಿನ ಈ ಸರಳೋಪಾಯವನ್ನು ಹಬ್ಬದ ರೂಪದಲ್ಲಿ ಆಚರಿಸಿ. ಜಾತಕದಲ್ಲಿ ನಾಗ ದೋಷ ಇದ್ದರೆ ಅದು ಅಶುಭ ಸೂಚಕ ಎಂದು ನಂಬಲಾಗಿದೆ. ನಾಗ ದೋಷ ಇರುವ ವ್ಯಕ್ತಿಯು ಜೀವನದಲ್ಲಿ ಅನೇಕಸಂಕಷ್ಟಗಳಿಗೆ ಗುರಿಯಾಗಿರುತ್ತಾರೆ. ಅವರ ಜೀವನೋಪಾಯ ಕಾಯಕದಲ್ಲಿ ಕಷ್ಟಗಳ ಸರಮಾಲೆ ಎದುರಾಗಿರುತ್ತದೆ. ಹೀಗಾಗಿ ಅವರು ಕಷ್ಟಪಟ್ಟು ದುಡಿಯುವುದಕ್ಕೆ ತಕ್ಕ ಪ್ರತಿಫಲ ದೊರೆತಿರುವುದಿಲ್ಲ.

ಯಾವಾಗ ರಾಹು ಮತ್ತು ಕೇತು ಮಧ್ಯೆ ಎಲ್ಲ ಗ್ರಹಗಳು ಬಂದರೆ ಕಾಳ ಸರ್ಪದೋಷ ಕಾಣಿಸುತ್ತದೆ. ಪೂರ್ವ ಜನ್ಮದ ಪಾಪ ಶೇಷವಾಗಿ ಯಾವುದಾದರೂ ಅಪರಾಧ ಮಾಡಿದ್ದರೆ, ಶಾಪಕ್ಕೆ ತುತ್ತಾಗಿದ್ದರೆ ಈಗಿನ ಜನ್ಮದಲ್ಲಿ ಸರ್ಪದೋಷ ಉಂಟಾಗುತ್ತದೆ. ಹೀಗೆ ನಿಮಗೆ ತಿಳಿದೋ, ತಿಳಿಯದೆಯೋ ಈ ಜನ್ಮದಲ್ಲಿ ನಿಮ್ಮ ಕುಂಡಲಿಯಲ್ಲಿ ನಾಗದೋಷ ಕಾಣಿಸಿಕೊಡಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಶ್ರಾವಣ ಮಾಸದ ನಾಗ ಪಂಚಮಿ ದಿನ ಅತ್ಯಂತ ಶುಭಪ್ರದವಾಗಿರುತ್ತದೆ. ಸನಾತನ ಧರ್ಮದಲ್ಲಿ ನಾಗ ಪಂಚಮಿಯ ದಿನ ಸರ್ಪಗಳಿಗೆ ಪೂಜೆ ನೆರವೇರಿಸುವುದು ಅತ್ಯಂತ ಸಂಜಸವಾದೀತು. ಈ ಬಾರಿ ಇದೇ ಆಗಸ್ಟ್​ 13 ರಂದು ಶುಕ್ರವಾರ ನಾಗರ ಪಂಚಮಿ ದಿನ ಬಂದಿದೆ.

ಈ ಸಂದರ್ಭದಲ್ಲಿ ನಾಗ ದೋಷ ನಿವಾರಣೆಗಾಗಿ ಜ್ಯೋತಿಷಿಗಳು, ಜ್ಞಾನಿಗಳು ಹೇಳುವಂತೆ ನಾಗರ ಪಂಚಮಿ ಹಬ್ಬವನ್ನು ಹೀಗೆ ಆಚರಣೆ ಮಾಡಬೇಕಾಗುತ್ತದೆ.

1. ನಾಗರ ಪಂಚಮಿಯ ದಿನ ಪೂಜೆ ಮಾಡಲು ಯಾವುದಾದರೂ ಒಂದು ನಾಗರ ಪ್ರತಿಮೆಯನ್ನು (ಹೆಣ್ಣು ನಾಗರ ಮತ್ತು ಗಂಡು ನಾಗರ ಜೋಡಿ) ಖರೀದಿಸಿ, ಅಥವಾ ನೀವೇ ಮಾಡಿಟ್ಟುಕೊಳ್ಳಿ. ಅದಕ್ಕೆ ಪೂಜೆ ಸಲ್ಲಿಸಿದ ಬಳಿಕ, ಅದನ್ನು ಎಲ್ಲಾದರೂ ನಿರ್ಜನ ಪ್ರದೇಶದಲ್ಲಿ (ಕಾಡು ಮೇಡಿನಲ್ಲಿ) ಬಿಟ್ಟು ಬನ್ನಿ. ಅದರರ್ಥ ನಾಗ ದೋಷದಿಂದ ನೀವು ಬಂಧಮುಕ್ತರಾದಿರಿ ಎಂದಾಗುತ್ತದೆ.

2. ನಾಗರ ಪಂಚಮಿಯ ದಿನ ಎಲ್ಲಾದರೂ ಭಕ್ತಾದಿಗಳು ಸೇರುವ ಸಾರ್ವಜನಿಕ ಜಾಗಕ್ಕೆ ನೀವೂ ತೆರಳಿ ಅಲ್ಲಿ ಸಾಮೂಹಿಕ ಪೂಜೆಯಲ್ಲಿ ತೊಡಗಿಸಿಕೊಳ್ಳಿ. ಆ ವೇಳೆ, ಪೂಜೆಯ ಬಳಿಕ ಶ್ರದ್ಧಾ ಭಕ್ತಿಯಿಂದ, ಶಕ್ತ್ಯಾನುಸಾರ ದಕ್ಷಿಣೆ/ ಕಾಣಿಕೆ ಸಲ್ಲಿಸಿ. ನಿಮ್ಮ ತಪ್ಪಿಗೆ ಕ್ಷಮಾದಾನ ಯಾಚಿಸಿ. ಅದೇ ವೇಳೆ, ರಾಹು-ಕೇತುವಿನ ಜಪ ಮಾಡಿ. ಈ ದಿನದಂದು ನಾಗರ ಹಾವಿನ ರೂಪದಲ್ಲಿರುವ, ಬೆಳ್ಳಿ ಚಿಕ್ಕ ಮೂರ್ತಿಯನ್ನು ಬೆರಳಿಗೆ ಹಾಕಿಕೊಳ್ಳಿ. ಇದು ನಾಗ ದೋಷ ನಿವಾರಣೆಗೆ ದಾರಿಯಾದೀತು.

3. ನಾಗರ ಪಂಚಮಿ ದಿನ ಕಾಳ ಸರ್ಪದೋಷ ಶಾಂತಿ ಪೂಜೆ ಮಾಡಿಸಿ. ಅದಾದ ಬಳಿಕ ಚಂದನ ಲೇಪಿತ ಹಿಟ್ಟಿನಿಂದ ಮಾಡಿಕೊಂಡಿರುವ ಸರ್ಪ ಜೋಡಿಯನ್ನು ಹರಿಯುವ ನೀರಿನಲ್ಲಿ ಬಿಟ್ಟುಬಿಡಿ. ಇದರಿಂದಲೂ ಸರ್ಪ ದೋಷ ಕೊಚ್ಚಿಹೋಗುತ್ತದೆ.

4. ಯಾವುದಾದರೂ ಶಿವ ಲಿಂಗ ತೆಗೆದುಕೊಂಡು ಅಂದರೆ ಅದರ ಮೇಲೆ ಪಂಚ ಲೋಹದ ನಾಗ ವಿಗ್ರಹ ಅಥವಾ ನಾಗ ಪ್ರತಿಮೆ ಇರುವಂತಹುದನ್ನು ತೆಗೆದುಕೊಳ್ಳಿ. ಅದರ ಮೇಲೆ ನೀರು ಅಥವಾ ಪಂಚಾಮೃತದಿಂದ ಅಭಿಷೇಕ ಮಾಡಿ. ಆ ವೇಳೆ ನಾಗ ದೇವತೆಗೆ ಪ್ರಾರ್ಥನೆ ಮಾಡಿಕೊಳ್ಳುತ್ತಾ, ನಮಸ್ಕರಿಸಿ. ಇದರಿಂದಲೂ ಸರ್ಪ ದೋಷ ದೂರವಾಗುಗುತ್ತದೆ.

5. ಯಾರಿಗಾದರೂ ಸರ್ಪ ದೋಷವಿದ್ದಲ್ಲಿ ನಾಗ ಪಂಚಮಿಯ ದಿನ ನವಿಲು ಗರಿಯನ್ನುತಂದಿಟ್ಟುಕೊಳ್ಳಿ. ಪ್ರತಿ ದಿನವೂ ಶ್ರೀಹರಿ ಉಪಾಸನೆ ಮಾಡಿ. ಶ್ರೀಹರಿಯ ಆರಾಧನೆಯಿಂದಲೂ ಸರ್ಪ ದೋಷ ನಿವಾರಣೆಯಾಗುತ್ತದೆ.

6. ನಾಗ ಪಂಚಮಿಯ ದಿನ ಪೂಜೆ ಬಳಿಕ ಮನೆಯಲ್ಲಿ ಅಥವಾ ದೇವಸ್ಥಾನಕ್ಕೆ ತೆರಳಿ ಅಲ್ಲಿ ನಾಗ ಗಾಯತ್ರಿ ಮಂತ್ರ ಜಪಿಸಿ:

ಓಂ ನಾಗ ಕುಲಾಯ ವಿದ್ಮಹೆ ವಿಷದಂತಾಯ ಧೀಮಹಿ ತತ್ರೋ ಸರ್ಪಃಪ್ರಚೋದಯಾತ್​

ಈ ನಾಗ ಗಾಯತ್ರಿ ಮಂತ್ರವನ್ನು ಕನಿಷ್ಠ 108 ಬಾರಿ ಶ್ರದ್ಧಾ ಭಕ್ತಿಯಿಂದ ಜಪಿಸಿ. ಬಳಿಕ, ನಿಮ್ಮ ತಪ್ಪಿನ ಬಗ್ಗೆ ಕ್ಷಮೆಯಾಚಿಸಿ.

ಹೀಗೆ ಮೇಲಿನ ವಿಧಿ ವಿಧಾನಗಳಿಂದ ನೀವು ಸರ್ಪಪೂಜೆ ಮಾಡಿದರೆ ಸರ್ಪ ದೋಷ ನಿವಾರಣೆಯಾಗುತ್ತದೆ ಅಥವಾ ಕಡಿಮೆಯಾದರೂ ಆಗುತ್ತದೆ.

Mangala Gowri Vratha 2021: ಶ್ರಾವಣ ಮಾಸದ ಮಂಗಳ ಗೌರಿ ವ್ರತದಿಂದ ನಿಮ್ಮ ಬಾಳು ಹಸನಾಗುತ್ತೆ

(nag panchami 2021 nag panchami significance Kaala Sarpa dosha )

Published On - 7:10 am, Wed, 11 August 21