AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ 5 ರಾಶಿಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಮುಳುಗಿರುತ್ತಾರೆ; ನೀವೂ ಇದೇ ಸಾಲಿಗೆ ಸೇರುತ್ತೀರಾ?

ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಹೋದವರು ಇಲ್ಲವೇನಾದರೂ ನಂಬುವವರಿಗೆ ಕೊರತೆ ಇಲ್ಲ. ಆ ನಂಬಿಕೆಯ ಆಧಾರದಲ್ಲೇ ನೋಡುವುದಾದರೆ ಈ 5 ರಾಶಿಗಳ ಜನರು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಅಂಟಿಕೊಂಡಿರುತ್ತಾರಂತೆ.

ಈ 5 ರಾಶಿಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಮುಳುಗಿರುತ್ತಾರೆ; ನೀವೂ ಇದೇ ಸಾಲಿಗೆ ಸೇರುತ್ತೀರಾ?
ರಾಶಿ ಚಕ್ರ
Follow us
TV9 Web
| Updated By: Skanda

Updated on: Aug 12, 2021 | 6:42 AM

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಬದುಕಿನ ಅವಿಭಾಜ್ಯ ಅಂಗವೆಂಬಂತೆ ಆಗಿಬಿಟ್ಟಿವೆ. ಬೆಳಗ್ಗೆ ಕಣ್ಣುಬಿಟ್ಟ ಕ್ಷಣದಿಂದ ರಾತ್ರಿ ಕಣ್ಮುಚ್ಚುವ ತನಕವೂ ನಡುವೆ ಎಚ್ಚರವಾದರೆ ನಿದ್ದೆಗಣ್ಣಿನಲ್ಲೂ ಸಾಮಾಜಿಕ ಜಾಲತಾಣಗಳತ್ತ (Social Media) ದೃಷ್ಟಿ ಹಾಯಿಸುವ ಮಟ್ಟಿಗೆ ಬದುಕಿನಲ್ಲಿ ಅವು ಬೆಸೆದುಹೋಗಿವೆ. ನಮಗೆ ಇಷ್ಟವಾದವರು ಯಾರಾದರೂ ಫೋಟೋ, ಪೋಸ್ಟ್ ಹಾಕಿದರಂತೂ ಅದನ್ನು ಹತ್ತಾರು ಸಲ ನೋಡಿ, ಅದಕ್ಕೆ ಬರುವ ಕಮೆಂಟುಗಳನ್ನೆಲ್ಲಾ ಓದಿ, ಎಷ್ಟು ಲೈಕ್​ ಬಂದಿದೆ ಎಂದು ಗಮನಿಸುವಷ್ಟರಲ್ಲಿ ಇಡೀ ದಿನವೇ ಕಳೆದುಹೋಗುತ್ತದೆ. ಹೀಗಾಗಿ ಕಾಲಹರಣ ಮಾಡುವುದಕ್ಕೆ ಈ ಯುಗದಲ್ಲಿ ಅವುಗಳಿಗಿಂತ ಉತ್ತಮ ವೇದಿಕೆ ಮತ್ತೊಂದು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು.

ಹಾಗಂತ ಇದನ್ನು ಎಲ್ಲರಿಗೂ ಅನ್ವಯಿಸಿ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಸಮಯ ವ್ಯಯಿಸುತ್ತಾರೆ ಎಂದೆನ್ನಲಾಗದು. ಏಕೆಂದರೆ ಎಷ್ಟೋ ಜನರು ಇದನ್ನೇ ತಮ್ಮ ಬರಹಗಳಿಗೆ, ಅಭಿಪ್ರಾಯ ಹಂಚಿಕೊಳ್ಳುವುದಕ್ಕೆ ಮುಖ್ಯ ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಹೀಗಾಗಿ ಇದು ಒಳ್ಳೆಯದು, ಕೆಟ್ಟದ್ದು ಎರಡರ ಸಮ್ಮಿಶ್ರಣ ಎಂದರೆ ಅತಿಶಯೋಕ್ತಿ ಅಲ್ಲ. ಎದುರಿದ್ದವರಿಗೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವುದಕ್ಕಿಂತ ಫೋನಿನಲ್ಲಿ ಸಂವಹನ ನಡೆಸುವುದಕ್ಕೇ ಇಷ್ಟಪಡುವವರು ಹೆಚ್ಚಾಗಿರುವ ಈ ಕಾಲದಲ್ಲಿ ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ ಎನ್ನಬಹುದಷ್ಟೇ.

ಆದರೂ ಹೀಗೆ ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಳ್ಳುವುದಕ್ಕೂ ರಾಶಿ ಭವಿಷ್ಯಕ್ಕೂ ಸಂಬಂಧವಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಹೋದವರು ಇಲ್ಲವೇನಾದರೂ ನಂಬುವವರಿಗೆ ಕೊರತೆ ಇಲ್ಲ. ಆ ನಂಬಿಕೆಯ ಆಧಾರದಲ್ಲೇ ನೋಡುವುದಾದರೆ ಈ 5 ರಾಶಿಗಳ ಜನರು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಅಂಟಿಕೊಂಡಿರುತ್ತಾರಂತೆ.

ಮಿಥುನ: ಮಿಥುನ ರಾಶಿಯವರು ನಿಜ ಜೀವನದಲ್ಲಿ ಸಾಮಾಜಿಕವಾಗಿ ಎಲ್ಲರೊಡನೆ ಬೆರೆಯುವ ಸ್ವಭಾವ ಹೊಂದಿದವರು. ಅವರು ಸಾಮಾಜಿಕ ಜಾಲತಾಣಗಳ ವ್ಯಸನಿಗಳೂ ಆಗಿದ್ದು, ಬೆಳಗ್ಗೆ ಎದ್ದ ತಕ್ಷಣ ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸುತ್ತಾರಂತೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಸದಾ ಹಂಚಿಕೊಳ್ಳಲು ಆಸಕ್ತಿ ತೋರುವ ಅವರು ತಮಗೆ ಇಷ್ಟವಾದ ವಿಷಯಗಳ ಬಗ್ಗೆ ಅನಿಸಿಕೆ ಹಂಚಿಕೊಳ್ಳುತ್ತಿರುತ್ತಾರಂತೆ.

ವೃಶ್ಚಿಕ: ವೃಶ್ಚಿಕ ರಾಶಿಯವರು ಸಾಮಾಜಿಕ ಜಾಲತಾಣಗಳ ವಿಷಯದಲ್ಲಿ ಕೊಂಚ ವಿಚಿತ್ರ ಸ್ವಭಾವ ಹೊಂದಿರುತ್ತಾರೆ. ಬೇರೊಬ್ಬರ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಇಷ್ಟಪಡುವ ಅವರು, ತಮ್ಮ ಜೀವನದ ಸಂಗತಿಗಳನ್ನು ಮಾತ್ರ ಗುಟ್ಟಾಗಿ ಇಡುತ್ತಾರೆ. ಹೀಗಾಗಿ ಅವರು ವಿಚಾರಗಳನ್ನು ಹಂಚಿಕೊಳ್ಳುವುದಕ್ಕಿಂತ ಗಮನಿಸುವುದರಲ್ಲೇ ತಲ್ಲೀನರಾಗಿರುತ್ತಾರೆ.

ಸಿಂಹ: ಸಿಂಹ ರಾಶಿಯ ಪುರುಷರು ಸಾಮಾಜಿಕ ಜಾಲತಾಣಗಳ ಪ್ರಿಯರಾಗಿರುತ್ತಾರೆ. ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಹೆಚ್ಚು ಖುಷಿಪಡುವ ಅವರು, ತಮ್ಮ ವಿಶೇಷ ಅನುಭವ, ಕ್ಷಣ, ಶಾಪಿಂಗ್, ಸುತ್ತಾಟ ಹೀಗೆ ಎಲ್ಲಾ ಮಾಂತ್ರಿಕ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ.

ತುಲಾ: ತುಲಾ ರಾಶಿಯವರು ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಸದಾ ಏನಾದರೂ ಹಂಚಿಕೊಳ್ಳುತ್ತಾ ಸಕ್ರಿಯರಾಗಿರುತ್ತಾರೆ. ತಮ್ಮ ಹಿಂದಿನ ಜೀವನದ ಮೇಲೆಯೇ ಕಣ್ಣಿಡುವ ಅವರು ತನ್ನ ಪ್ರಸ್ತುತ ಜೀವನವು ಹಿಂದಿನ ದಿನಗಳಿಗಿಂತ ಹೇಗೆ ಉತ್ತಮವಾಗಿದೆ ಎಂದು ಹೋಲಿಸಿಕೊಳ್ಳುತ್ತಾರೆ.

ಧನು: ಧನು ರಾಶಿಯವರು ಸಾಮಾನ್ಯವಾಗಿ ಸಾಮಾಜಿಕ ಬದುಕನ್ನು ಇಷ್ಟಪಡುತ್ತಾರೆ. ತಮ್ಮ ಜೀವನದ ಅಪರೂಪದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಅದನ್ನೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದೇ ಅವರಿಗೆ ಸಂತಸದ ಸಂಗತಿಯಾಗಿರುತ್ತದೆ. ಹೀಗಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ಇದನ್ನೂ ಓದಿ: ಈ ನಾಲ್ಕು ರಾಶಿಯ ಹುಡುಗರಿಗೆ ಬಹಳ ಬೇಗ ಹುಡುಗಿಯರು ಮನಸೋಲುತ್ತಾರೆ 

ಇತರರ ವಿಚಾರಕ್ಕೆ ತಲೆ ಕೆಡಿಸಿಕೊಳ್ಳದ- ಜವಾಬ್ದಾರಿ ಮೈ ಮೇಲೆ ಎಳೆದುಕೊಳ್ಳದ 5 ರಾಶಿಯವರಿವರು

(People of these 5 zodiac signs are addicted to social media check about yours)

ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ