Naga Panchami 2023: ನಾಗರ ಪಂಚಮಿಯಂದು ಈ ಕೆಲಸ ಮಾಡಬೇಡಿ; ಈ ಹಬ್ಬವನ್ನು ಸರಿಯಾಗಿ ಆಚರಿಸುವುದು ಹೇಗೆ ಎಂದು ತಿಳಿಯಿರಿ

| Updated By: Digi Tech Desk

Updated on: Aug 18, 2023 | 12:04 PM

ಈ ನಾಗರ ಪಂಚಮಿಯಂದು, ನಾಗದೇವತೆಗಳನ್ನು ಪೂಜಿಸುವ ಮತ್ತು ಹಾವಿನ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ನಾಗದೇವತೆಗಳನ್ನು ಗೌರವಿಸಿ. ಹಾವುಗಳಿಗೆ ಹಾನಿ ಮಾಡುವುದನ್ನು ಅಥವಾ ಸೆರೆಹಿಡಿಯುವುದನ್ನು ತಪ್ಪಿಸಿ, ಹಾಲನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿ ವ್ಯರ್ಥ ಮಾಡಬೇಡಿ ಮತ್ತು ಹಾವುಗಳ ಸುರಕ್ಷತೆಗೆ ಆದ್ಯತೆ ನೀಡಿ.

Naga Panchami 2023: ನಾಗರ ಪಂಚಮಿಯಂದು ಈ ಕೆಲಸ ಮಾಡಬೇಡಿ; ಈ ಹಬ್ಬವನ್ನು ಸರಿಯಾಗಿ ಆಚರಿಸುವುದು ಹೇಗೆ ಎಂದು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ನಾಗರ ಪಂಚಮಿ (Nag Panchami 2023) ನಾಗ ದೇವತೆಗಳನ್ನು ಪೂಜಿಸಲು ಮೀಸಲಾಗಿರುವ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿದೆ. ಇದು ಶ್ರಾವಣ ಮಾಸದ ಮೊದಲಾರ್ಧದ ಐದನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಇದನ್ನು ಆಗಸ್ಟ್ 21, ಸೋಮವಾರದಂದು ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಪೂಜೆ ಮುಹೂರ್ತವು ಬೆಳಗ್ಗೆ 5:53 ರಿಂದ 8:30 ರವರೆಗೆ ಇರುತ್ತದೆ. ಸನಾತನ ಧರ್ಮದ ಅನುಯಾಯಿಗಳು ಮುಂಜಾನೆಯ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸೂಕ್ತ ವಿಧಿವಿಧಾನಗಳೊಂದಿಗೆ ನಾಗದೇವರ ಪೂಜೆಯಲ್ಲಿ ತೊಡಗುತ್ತಾರೆ. ಶಿವ ಮತ್ತು ನಾಗ ದೇವತೆಗಳ ಪೂಜೆ ಮಾಡಿ ತಮ್ಮ ಕುಟುಂಬಗಳಿಗೆ ಸರ್ಪ ದೇವರ ರಕ್ಷಣೆಯನ್ನು ಕೋರುತ್ತಾರೆ.

ಈ ಹಬ್ಬದ ಸಮಯದಲ್ಲಿ, ಜನರು ಕೆಲವು ಪದ್ಧತಿಗಳು ಮತ್ತು ಆಚರಣೆಗಳನ್ನು ಅನುಸರಿಸುತ್ತಾರೆ. ಹಿಂದೂ ಸಂಪ್ರದಾಯಗಳ ಪ್ರಕಾರ, ಹಾವುಗಳನ್ನು ಕೊಲ್ಲಬಾರದು ಮತ್ತು ಮನೆಗೆ ನಾಗರ ಹಾವು ಪ್ರವೇಶಿಸಿದರೆ ಅಥವಾ ದಾರಿಯಲ್ಲಿ ಬಂದರೆ ಅದನ್ನು ಗೌರವಿಸಬೇಕು ಮತ್ತು ನಮ್ರತೆಯಿಂದ ಹೋಗುವಂತೆ ಕೇಳಬೇಕು.

ಹಿಂದೂಗಳು ಈ ದಿನದಂದು ಉಪವಾಸ ಮಾಡುತ್ತಾರೆ ಮತ್ತು ನಾಗರ ಪಂಚಮಿಯಂದು ದೇವಸ್ಥಾನಗಳಲ್ಲಿ ಹೂವು, ಹಾಲು ಮತ್ತು ಹಾಲಿನೊಂದಿಗೆ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ ಮತ್ತು ಭಕ್ತರಿಗೆ ಪ್ರಸಾದವನ್ನು ವಿತರಿಸುತ್ತಾರೆ. ನಾಗರ ಪಂಚಮಿಯಂದು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯಲು ಈ ಲೇಖನವನ್ನು ಓದಿ.

ನಾಗರ ಪಂಚಮಿ 2023: ಮಾಡಬೇಕಾದ ಕೆಲಸಗಳು

  • ನಾಗದೇವತೆಗಳ ಪೂಜೆ: ಸಾಮಾನ್ಯವಾಗಿ ಹಾವಿನ ಪ್ರತಿಮೆಗಳು ಅಥವಾ ಚಿತ್ರಗಳಂತೆ ತೋರಿಸಲಾಗುವ ಹಾವಿನ ನಾಗದೇವತೆಗಳಿಗೆ ಪೂಜೆ ಮಾಡಿ ನಿಮ್ಮ ಕೋರಿಕೆಗಳನ್ನು ಬೇಡಿಕೊಳ್ಳಿ.
  • ನಾಗ ದೇವಾಲಯಗಳಿಗೆ ಭೇಟಿ ನೀಡಿ: ಭಾರತದ ಅನೇಕ ದೇವಾಲಯಗಳು ನಾಗದೇವತೆಗಳನ್ನು ಗೌರವಿಸುತ್ತವೆ. ಜನರು ಅಲ್ಲಿಗೆ ಹೋಗಿ ಹಾಲು, ಹೂವು ಮತ್ತು ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ನೀಡುತ್ತಾರೆ.
  • ಉಪವಾಸ: ಕೆಲವು ಜನರು ಧಾರ್ಮಿಕ ಕ್ರಿಯೆಯಾಗಿ ನಾಗರ ಪಂಚಮಿಯಂದು ಉಪವಾಸ ಮಾಡುತ್ತಾರೆ ಅಥವಾ ತರಕಾರಿಗಳನ್ನು ಮಾತ್ರ ತಿನ್ನುತ್ತಾರೆ.
  • ಹಾಲು ನೀಡು: ಹಾವಿನ ಪ್ರತಿಮೆಗಳ ಮೇಲೆ ಹಾಲ ಎರೆಯಿರಿ ಈ ಮೂಲಕ ನಾಗ ದೇವತೆಗಳಿಗೆ ಗೌರವ ತೋರಿಸಿ.
  • ಜಾಗೃತಿ ಮೂಡಿಸಿ: ನಾಗರ ಪಂಚಮಿಯ ಪ್ರಾಮುಖ್ಯತೆ ಮತ್ತು ಹಾವುಗಳನ್ನು ರಕ್ಷಿಸುವುದು ಏಕೆ ಮುಖ್ಯ ಎಂದು ಇತರರಿಗೆ ತಿಳಿಸಿ.

ನಾಗರ ಪಂಚಮಿ 2023: ಏನು ಮಾಡಬಾರದು

  • ಹಾವುಗಳನ್ನು ನೋಯಿಸದಿರಿ: ನಾಗರ ಪಂಚಮಿಯಂದು ಹಾವುಗಳನ್ನು ನೋಯಿಸಬೇಡಿ ಅಥವಾ ಕೊಲ್ಲಬೇಡಿ.
  • ಕಾಡಿನಿಂದ ಹಾವುಗಳನ್ನು ತರಬೇಡಿ: ಹಬ್ಬ ಹರಿದಿನಗಳಲ್ಲಿ ತೋರಿಕೆಗಾಗಿ ಕಾಡು ಹಾವುಗಳನ್ನು ಹಿಡಿಯಬೇಡಿ. ಇದರಿಂದ ಪರಿಸರ ಮತ್ತು ಹಾವಿನ ಸಂಕುಲಕ್ಕೆ ಹಾನಿಯಾಗಬಹುದು.
  • ಅಪಾಯಕಾರಿ ಹಾವುಗಳ ಬಳಕೆ: ವಿಷಪೂರಿತ ಹಾವುಗಳನ್ನು ಪ್ರದರ್ಶನಗಳು ಅಥವಾ ವಿನೋದಕ್ಕಾಗಿ ಬಳಸುವುದನ್ನು ಬೆಂಬಲಿಸಬೇಡಿ ಅಥವಾ ಭಾಗವಹಿಸಬೇಡಿ. ಇದು ಸರಿಯಲ್ಲ.
  • ಹಾಲು ಹಾಳು ಮಾಡಬೇಡಿ: ಹಾಲು ಕೊಡುವುದು ಒಳ್ಳೆಯದೇ ಆದರೆ ದುಂದು ವೆಚ್ಚ ಮಾಡಬೇಡಿ. ಆಚರಣೆಗೆ ಸಮಂಜಸವಾದ ಮೊತ್ತವನ್ನು ಬಳಸಿ.
  • ಅಸುರಕ್ಷಿತವಾಗಿರುವುದು: ಹಾವು ಕಂಡರೆ ಹುಚ್ಚೆದ್ದು ಕುಣಿಯಬೇಡಿ. ಅಗತ್ಯವಿದ್ದರೆ ಅದನ್ನು ನಿರ್ವಹಿಸಲು ತಜ್ಞರನ್ನು ಕರೆಯಿರಿ.

ಇದನ್ನೂ ಓದಿ: ಈ ವರ್ಷದ ನಾಗರ ಪಂಚಮಿ ಯಾವ ರಾಶಿಯವರಿಗೆ ಅದೃಷ್ಟ ತರಲಿದೆ ಎಂದು ತಿಳಿಯಿರಿ

ಈ ನಾಗರ ಪಂಚಮಿಯಂದು, ನಾಗದೇವತೆಗಳನ್ನು ಪೂಜಿಸುವ ಮತ್ತು ಹಾವಿನ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ನಾಗದೇವತೆಗಳನ್ನು ಗೌರವಿಸಿ. ಹಾವುಗಳಿಗೆ ಹಾನಿ ಮಾಡುವುದನ್ನು ಅಥವಾ ಸೆರೆಹಿಡಿಯುವುದನ್ನು ತಪ್ಪಿಸಿ, ಹಾಲನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿ ವ್ಯರ್ಥ ಮಾಡಬೇಡಿ ಮತ್ತು ಹಾವುಗಳ ಸುರಕ್ಷತೆಗೆ ಆದ್ಯತೆ ನೀಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Fri, 18 August 23