AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nagara Panchami: ನಾಗರ ಪಂಚಮಿಯ ಆರಾಧನೆ ಹೇಗಿರಬೇಕು? ಯಾವ ಹೂವು, ಭಕ್ಷ್ಯ ಹಾಗೂ ಮಂತ್ರದಿಂದ ನಾಗ ದೇವರ ಸಂಪ್ರೀತಿ?

ಎಲ್ಲರಿಗೂ ನಮಸ್ಕಾರ, ಈ ದಿನದ ಲೇಖನದಲ್ಲಿ ‘ನಾಗರ ಪಂಚಮಿ’ಯ ವಿಶೇಷವನ್ನು ತಿಳಿಸುತ್ತಿದ್ದೇನೆ. ಮೊದಲಿಗೆ ಪಂಚಮಿ ತಿಥಿಯೇ ವಿಶೇಷ ಏಕೆ ಎಂಬುದನ್ನು ತಿಳಿಸಿಕೊಡುತ್ತೇನೆ. ಆ ನಂತರ ನಾಗರ ಪಂಚಮಿಯ ವಿಶೇಷವನ್ನು ತಿಳಿಸಿಕೊಡುತ್ತೇನೆ.

Nagara Panchami: ನಾಗರ ಪಂಚಮಿಯ ಆರಾಧನೆ ಹೇಗಿರಬೇಕು? ಯಾವ ಹೂವು, ಭಕ್ಷ್ಯ ಹಾಗೂ ಮಂತ್ರದಿಂದ ನಾಗ ದೇವರ ಸಂಪ್ರೀತಿ?
ಪ್ರಕಾಶ್ ಅಮ್ಮಣ್ಣಾಯ ಮತ್ತು ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Digi Tech Desk

Updated on:Aug 17, 2023 | 5:46 PM

ಈ ವರ್ಷ ನಾಗರ ಪಂಚಮಿ ಆಗಸ್ಟ್ 21ನೇ ತಾರೀಕಿನ ಸೋಮವಾರ ಬಂದಿದೆ. ನಿಮಗೆ ಗೊತ್ತಿರಲಿ, ಪ್ರತಿ ಮಾಸದಲ್ಲಿ ಎರಡು ಬಾರಿ ಪಂಚಮಿ ತಿಥಿ ಬರುತ್ತದೆ. ಒಮ್ಮೆ ಶುಕ್ಲ ಪಕ್ಷದ ಪಂಚಮಿ, ಮತ್ತೊಮ್ಮೆ ಕೃಷ್ಣ ಪಕ್ಷದ ಪಂಚಮಿ. ಈ ಕೃಷ್ಣ ಪಕ್ಷದ ಪಂಚಮಿ ಇದೆಯೆಲ್ಲಾ ಆ ನಂತರ ಚಂದ್ರನು ಕ್ಷೀಣವಾಗುತ್ತಾ ಹೋಗುತ್ತಾನೆ. ಶುಕ್ಲ ಪಕ್ಷದಲ್ಲಿ ವೃದ್ಧಿ ಆಗುತ್ತಾ ಹೋಗುತ್ತಾನೆ. ‘ ಚಂದ್ರ ಮಾಮನಸೋ ಜಾತಶ್ಚಕ್ಷೋ ಸೂರ್ಯೋ ಆಜಾಯತ’ ಎಂದಿದೆ ವೇದ ಸೂಕ್ತಗಳು. ಮನೋ ಕಾರಕ ಚಂದ್ರನ ಆಧಾರದಲ್ಲಿ ಬುದ್ಧಿಶಕ್ತಿ ಇರುವ ಮನುಜನ ಧೀ ಶಕ್ತಿಯು ವೃದ್ಧಿ- ಕ್ಷಯಗಳನ್ನು ಉಂಟು ಮಾಡುತ್ತದೆ. ಅಮಾವಾಸ್ಯೆಯಿಂದ ಶುದ್ಧ ಪಂಚಮಿಯ ತನಕ ಚಂದ್ರನು ಪೂರ್ಣ ಕ್ಷೀಣನಾಗಿ, ಆ ನಂತರ ವೃದ್ಧಿಯತ್ತ, ಹುಣ್ಣಿಮೆಯಿಂದ ಬಹುಳ ಠಾಪಂಚಮಿಯ ತನಕ ಸಾಗುವ ಈ ಸಮಯವು ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳುವ ಸಮಯವಾಗಿದೆ. ಅಂದರೆ ಆಯಾಯ ಜಾತಕದ ಪ್ರಕಾರ, ಆಯಾಯ ವ್ಯಕ್ತಿಯಲ್ಲಿ ಇರುವ ಮನೋಭಾವನೆಗಳು ತೀವ್ರತೆ (extreme)ಗೆ ಹೋಗುವ ಕಾಲ. ಇಂತಹ ಸಂದರ್ಭಗಳ ನಿಯಂತ್ರಕ್ಕಾಗಿ ವ್ರತಗಳ ಮೂಲಕ ಮನೋ ನಿಯಂತ್ರಣದ ವ್ಯವಸ್ಥೆಗೆ ಪರಿಹಾರ ಕಂಡು ಹಿಡಿದರು.

ಬನ್ನಿ, ಈಗ ಪಂಚಮಿಯ ಮಹತ್ವ ನೋಡೋಣ. ಪ್ರತಿ ತಿಥಿಗೂ ಮಾಸ, ವರ್ಷ ಆಧಾರಿತ ದೇವತಾ ಶಕ್ತಿಗಳ ಚಿಂತನೆ ಮಾಡಿದರು ನಮ್ಮ ಪ್ರಾಚೀನ ಋಷಿ- ಮುನಿಗಳು. ಇದರಲ್ಲಿ ಪಂಚಮಿಯ ಅಭಿಮಾನಿ ದೇವರು ನಾಗ. ಅವನು ಮೋಹ ನಿಯಂತ್ರಕನೂ ಹೌದು, ಮೋಹ ಸೃಷ್ಟಿಕರ್ತನೂ ಹೌದು. ನಾಗದೇವರು ಮಹಾ ಚೈತನ್ಯದ (ವಿಷ್ಣು) ಸಂಕರ್ಷಣಾ ಶಕ್ತಿ. ಅಂದ ಹಾಗೆ ಸಂಕರ್ಷಣಾ ಶಕ್ತಿ ಎಂದರೆ fast responding power. ಈ ನಾಗದೇವರ ಅಭಿಮಾನಿ ದೇವರು ಸುಬ್ರಹ್ಮಣ್ಯ. ಇವನನ್ನು ದೇವ ಸೇನಾನಿ ಎಂದರು. ದೇವ ಎಂದರೆ ದೇವತೆಗಳು, ಬೆಳಕು, ಜ್ಞಾನ ಎಂದರ್ಥ.

ಇಂತಹ ಪಂಚಮಿಯ ದಿನ ನಾಗದೇವರನ್ನು ಆರಾಧಿಸುವ ಮೂಲಕ ಶಕ್ತಿಯನ್ನು ಸಂಪನ್ನಗೊಳಿಸಿ, ಮೋಹಗಳ ನಿಯಂತ್ರಣ ಮಾಡಿಕೊಳ್ಳಲು ಪ್ರಾಜ್ಞರು ಸಲಹೆ ನೀಡಿದರು. ವರ್ಷಕ್ಕೆ ಬರುವ 24 ಪಂಚಮಿ ವ್ರತಗಳ ಸಮಾರೋಪವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ. ಈ ದಿನ ನಾವು ಪ್ರತಿಷ್ಠಾಪನೆ ಮಾಡಿದ ನಾಗ ಸಾನ್ನಿಧ್ಯ ವನಗಳಲ್ಲಿ ಇರುವ ನಾಗ ಶಿಲೆಗೆ ಪಂಚಾಮೃತ, ಗೋ ಕ್ಷೀರ, ಜಲಾಭಿಷೇಕದ ಮೂಲಕ ಶುದ್ಧ ಸ್ನಾನ ಮಾಡಿಸಿ, ಗಂಧ ಚಂದನ, ಅರಿಷಿಣ ಲೇಪಿಸಿ, ಪುಷ್ಪಾಲಂಕಾರ ಮಾಡಿ ಕಲ್ಪೋಕ್ತ ಪೂಜೆ ಮಾಡುವ ಸಂಪ್ರದಾಯ ಮಾಡಿಕೊಂಡರು.

ಗೋ ಎಂದರೆ ಭೂಮಿ ಎಂಬ ಅರ್ಥವಿದೆ. ಅದನ್ನು ಗೋವಿನ ಕ್ಷೀರದ ಮೂಲಕ ಭೂಮಿಗೆ, ನಾಗ ಶಿಲೆಯ ಅಭಿಷೇಕದ ಮೂಲಕ ಭೂಮಿಗೆ ಸಮರ್ಪಿಸಿದರೆ ಮಾನಸಿಕವಾಗಿ ಮೋಹ ನಿಯಂತ್ರಣವೂ ಲೌಕಿಕವಾಗಿ ಭೂಮಿಯ ಫಲವತ್ತತೆಯ ವೃದ್ಧಿಯೂ ಆಗುತ್ತದೆ. ಇದು ಪೂರ್ಣವಾಗಿ ವೈಜ್ಞಾನಿಕ ಚಿಕಿತ್ಸೆ (treatment) ಎಂದು ವ್ಯಾಖ್ಯಾನಿಸಬಹುದು. ವಾಸ್ತವವಾಗಿಯೂ ಲಕ್ಷಾಂತರ ಭಕ್ತರು ಈ ಸಂಪ್ರದಾಯ ಸುಕರ್ಮದಿಂದ ಕ್ಷೇಮವಾದದ್ದರಿಂದಲೇ ತಲೆತಲಾಂತರದಿಂದ ಇದು ನಡೆದು ಬಂದಿದೆ.

ಯಾರೋ ನಂಬಿಕೆ ಇಲ್ಲದ ಕೆಲ ಮಂದಿ ಇದನ್ನು ಮೂಢ ನಂಬಿಕೆ ಎಂದರೆ, ಅದು ಅವರಿಚ್ಛೆ. ಒಂದು ವೇಳೆ ಅಂಥವರ ಮಾತನ್ನು ನಂಬಿದರೆ ನಮ್ಮ ಪರಂಪರೆಯನ್ನೇ ನಾವು ನಂಬದಂತಾದೀತು.ಯಾಕೆಂದರೆ ಮೂಢ ನಂಬಿಕೆ ಎಂದು ಹೇಳಿದವರ ಪೂರ್ವಜರ ಮನೆ, ಹೊಲ, ತೋಟಗಳಲ್ಲಿ ನಾಗ ಸಾನ್ನಿಧ್ಯ ಇರುವುದನ್ನು ತೋರಿಸಿಕೊಡಬಹುದು. ಏನೋ ಅವರಿಗೆ ಇಷ್ಟವಿಲ್ಲ ಎಂದು ಇಷ್ಟವಿದ್ದವರ ಮನಸ್ಸನ್ನು ಹಾಳು ಮಾಡಬಾರದಲ್ಲವೇ? ಅದೇನೇ ಇರಲಿ, ಈ ನಾಗರ ಪಂಚಮಿಯಂದು ಭಕ್ತಿ- ಶ್ರದ್ಧೆಯಿಂದ ನಾಗ ಸೇವೆ ಮಾಡುವ ಉದ್ದೇಶವನ್ನು ಅರಿತು, ಶುಭ್ರತೆಯಿಂದ, ಶುದ್ಧ ಮನಸ್ಸಿನಿಂದ ಆರಾಧಿಸೋಣ.

ನಾಗದೇವರಿಗೆ ಹಾಲುಬಾಯಿ( ಅಕ್ಕಿ ಹಲ್ವಾ), ಪಂಚಾಮೃತ, ಹಣ್ಣು- ಕಾಯಿ, ಅನ್ನ ನೈವೇದ್ಯ, ಕ್ಷೀರ ಪಾಯಸ ಇತ್ಯಾದಿ ಸಮರ್ಪಣೆ ಮಾಡಬಹುದು. ನಾಗದೇವರಿಗೆ ಕೆಂಪು ಹೂವು ಬಿಟ್ಟು ಬೇರೆ ಹಳದಿ, ಶ್ವೇತ ವರ್ಣಗಳ ಪರಿಮಳಯುಕ್ತ ಪುಷ್ಪಾರ್ಚನೆ ಮಾಡಬೇಕು. ನಾಗನಿಗೆ ಆಶ್ಲೇಷಾ ನಕ್ಷತ್ರ ವಿಶೇಷ. ಕೆಲವೆಡೆ ನಾಗ ತಂಬಿಲ, ಆಶ್ಲೇಷಾ ಬಲಿ, ತನು ತರ್ಪಣಾದಿಗಳು ನಡೆಯುತ್ತವೆ.

ಪುರಾಣೋಕ್ತ ಸಂಕ್ಷಿಪ್ತ ಕಥೆ:

ಪರೀಕ್ಷತ್ ರಾಜನಿಗೆ ಋಷಿ ಶಾಪದಲ್ಲಿ ಸಂರ್ಪ ದಂಷ್ಟ್ರನವಾಗಿ ಸಾವು ಬರುತ್ತದೆ. ಆಗ ಅವನ ಮಗ ಜನಮೇಜಯನು ಕೋಪಿಷ್ಟನಾಗಿ ಸರ್ಪಸತ್ರ ಮಾಡಿಸುತ್ತಾನೆ. ಅದರಲ್ಲಿ 86 ಪ್ರಭೇದಗಳ ಸರ್ಪ ಸಂಕುಲ ನಾಶ ಆಗುತ್ತದೆ. ಅದಲ್ಲದೆ ಅರ್ಜುನನ ಕಾಂಡವ ದಹನದಲ್ಲೂ ಸರ್ಪಗಳು ನಾಶವಾಗುತ್ತವೆ. ಇದು ಕೇವಲ ಕೃತ್ಯ ಮಾಡಿದ ವಂಶಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ದೋಷವಾಗುತ್ತದೆ. ಇದಕ್ಕಾಗಿಯೇ ಋಷಿಗಳು ಪರಿಹಾರಾರ್ಥವಾಗಿ ನಾಗಾರಾಧನೆ ಮಾಡಲು ಹೇಳಿದರು. ಇಂದಿಗೂ ಇದು ನಡೆಯುತ್ತಲೇ ಇದೆ.ಜ್ಯೋತಿಷ್ಯದಲ್ಲಿ ರಾಹುವಿನಿಂದ ನಾಗನ ಚಿಂತನೆ ಮತ್ತು ಕೇತುವಿನಿಂದ ನಾಗನ ವಾಸಸ್ಥಾನದ ಚಿಂತನೆ ಮಾಡಲಾಗಿದೆ.

ಇಲ್ಲಿ ಸರ್ಪ ಮಂತ್ರ ನೀಡಲಾಗಿದೆ. ಇದನ್ನು ಭಕ್ತಿ- ಶ್ರದ್ಧಾಪೂರ್ವಕ ಸ್ವರ, ವರ್ಣ, ಅಕ್ಷರ ಲೋಪವಾಗದಂತೆ ಹೇಳಬೇಕು.

||ಓಂ ನಮೋ ಭಗವತೇ ಕಾಮರೂಪಿಣೇ ಮಹಾಬಲಾಯ ನಾಗಾಧಿಪತೇ ಅನಂತಾಯ ಸ್ವಾಹ||

– ಹೀಗೆ ನಿತ್ಯ ಪಠಿಸಿದರೆ ಬಹಳ ಪರಿಣಾಮಕಾರಿಯಾಗುತ್ತದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

Published On - 5:08 pm, Thu, 17 August 23

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ