AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naga Panchami 2022: ನಾಗರ ಪಂಚಮಿಯ ವಿಶೇಷ ತಿನಿಸು ಅರಶಿನ ಎಲೆಯ ಸಿಹಿ ಕಡುಬು

ಅರಶಿನ ಎಲೆಯ ಕಡುಬನ್ನು ಹೆಚ್ಚಾಗಿ ದಕ್ಷಿಣ ಕನ್ನಡ ಉಡುಪಿ ಭಾಗದ ಜನರು ಮಾಡುತ್ತಾರೆ. ನಾಗರ ಪಂಚಮಿಯ ಶುಭ ದಿನದಂದು ಪ್ರತೀ ಮನೆಯಲ್ಲೂ ಅರಶಿನ ಎಲೆಯ ಕಡುಬನ್ನು ತಯಾರು ಮಾಡಿ ಸವಿಯುತ್ತಾರೆ.

Naga Panchami 2022: ನಾಗರ ಪಂಚಮಿಯ ವಿಶೇಷ ತಿನಿಸು ಅರಶಿನ ಎಲೆಯ ಸಿಹಿ ಕಡುಬು
Naga Panchami
TV9 Web
| Edited By: |

Updated on:Aug 02, 2022 | 9:52 AM

Share

ಹಿಂದುಗಳ ಪವಿತ್ರ ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು. ಈ ದಿನ ನಾಗ ದೇವರಿಗೆ ಹಾಲೆರಿಯುವ ಪದ್ದತಿಯು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂದಿಗೂ ಅದೇ ಪದ್ದತಿ ಆಚರಣೆಯನ್ನು ಮಾಡಲಾಗುತ್ತಿದೆ. ಒಂದೊಂದು ಕಡೆಯಲ್ಲಿ ಅವರದೇ ಆದ ಸಂಪ್ರದಾಯವಿದೆ.. ನಾಗರ ಪಂಚಮಿಯ ಹಬ್ಬವನ್ನು ಪ್ರತೀ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ವಿಶೇಷವಾದ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾಡಲಾಗುತ್ತದೆ. ಪಂಚಕಜ್ಜಾಯ, ಕಡುಬು, ಲಡ್ಡು ಹೀಗೆ ಅನೇಕ ಬಗೆಯ ತಿನಿಸಿಗಳನ್ನು ಮಾಡಲಾಗುತ್ತದೆ. ನಾಗರ ಪಂಚಮಿಯ ವಿಶೇಷವಾದ ತಿಂಡಿಗಳಲ್ಲಿ ಅರಶಿನ ಎಲೆಯ ಕಡುಬು ಕೂಡಾ ಒಂದು.

ಈ ಅರಶಿನ ಎಲೆಯ ಕಡುಬನ್ನು ಹೆಚ್ಚಾಗಿ ದಕ್ಷಿಣ ಕನ್ನಡ ಉಡುಪಿ ಭಾಗದ ಜನರು ಮಾಡುತ್ತಾರೆ. ನಾಗರ ಪಂಚಮಿಯ ಶುಭ ದಿನದಂದು ಪ್ರತೀ ಮನೆಯಲ್ಲೂ ಅರಶಿನ ಎಲೆಯ ಕಡುಬನ್ನು ತಯಾರು ಮಾಡಿ ಸವಿಯುತ್ತಾರೆ. ಈ ಕಡುಬನ್ನು ಹೇಗೆ ಮಾಡಲಾಗುತ್ತದೆ ಅಂದ್ರೆ, ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಅರಶಿನ ಎಲೆ, ಅಕ್ಕಿ, ಅವಲಕ್ಕಿ, ತೆಂಗಿನ ಕಾಯಿ ತುರಿ, ಬಿಳಿ ಅಥವಾ ಕಪ್ಪು ಎಳ್ಳು, ಬೆಲ್ಲ ಹಾಗೂ ಸ್ವಲ್ಪ ಏಲಕ್ಕಿ. ಮೊದಲಿಗೆ ಅಕ್ಕಿಯನ್ನು ನುಣ್ಣಗೆ ರುಬ್ಬಿ ದಪ್ಪಗಿನ ಪೇಸ್ಟ್ ತಯಾರಿಸಬೇಕು. ಅದಾದ ಬಳಿಕ ಅವಲಕ್ಕಿ, ತೆಂಗಿನ ಕಾಯಿ ತುರಿ, ತುರಿದ ಬೆಲ್ಲವನ್ನು ಸೇರಿಸಿ ಪಾಕವನ್ನು ಮಾಡಬೇಕು ಅದಕ್ಕೆ ಡ್ರೆಹಿ ರೋಸ್ಟ್ ಮಾಡಿದ ಎಳ್ಳನ್ನು ಸೇರಿಸಬೇಕು.

ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಇವೆಲ್ಲದರ ಸಿಹಿ ಹೂರಣವನ್ನು ತಯಾರು ಮಾಡಬೇಕು. ನಂತರ ಶುದ್ಧವಾಗಿ ತೊಳೆದಿಟ್ಟ ಅರಶಿನ ಎಲೆಯ ಮೇಲೆ ಮೊದಲಿಗೆ ಅಕ್ಕಿಯ ದಪ್ಪಗಿನ ಹಿಟ್ಟನ್ನು ಸವರಿ ಅದರ ಮೇಲೆ ಮೊದಲೇ ತಯಾರು ಮಾಡಿ ಇಟ್ಟಂತಹ ಸಿಹಿ ಹೂರಣವನ್ನು ಹಾಕಿ ಎಲೆಯನ್ನು ಮಡಚಬೇಕು. ಕೊನೆಯ ಹಂತದಲ್ಲಿ ಒಂದು ಇಡ್ಲಿ ಪಾತ್ರೆಯಲ್ಲಿ ತಯಾರಿಸಿದಂತಹ ತಿಂಡಿಯನ್ನು ಇಟ್ಟು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬೇಯಿಸಬೇಕು. ಇವಿಷ್ಟು ಅರಶಿನ ಕಡುಬು ತಯಾರಿಸುವ ವಿಧಾನವಾಗಿದೆ. ಬಹಳ ಸುಲಭವಾಗಿ ತಯಾರಿಸಬಹುದಾದಂತಹ ಒಂದು ರುಚಿಕರವಾದ ಸಿಹಿ ತಿನಿಸು ಇದಾಗಿದೆ. ಇದನ್ನು ತುಪ್ಪದ ಜೊತೆ ಸವಿದರೆ ಇದರ ರುಚಿ ಇನ್ನು ಹೆಚ್ಚಾಗಿರುತ್ತದೆ. ನಾಗರ ಪಂಚಮಿಯ ವಿಷೇಶ ತಿನಿಸುಗಳಲ್ಲಿ ಇದು ಕೂಡಾ ಒಂದಾಗಿದೆ. ನಾಗರ ಪಂಚಮಿಯ ದಿನದಂದೆ ಈ ತಿನಿಸನ್ನು ತಯಾರಿಸುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.

ಇದನ್ನೂ ಓದಿ
Image
ಈ ನಾಲ್ಕು ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!
Image
Naga Panchami 2022: ನಾಗರ ಪಂಚಮಿ ಹಬ್ಬದ ವಿಶೇಷತೆ, ಆಚರಣೆ ಮತ್ತು ಮಹತ್ವದ ಮಾಹಿತಿ ಇಲ್ಲಿದೆ
Image
ತಿರುಮಲ ತಿರುಪತಿ ಹುಂಡಿ ಆದಾಯ: ಶ್ರೀವಾರಿ ಹುಂಡಿಗೆ ಹಣದ ಪ್ರವಾಹ, ಜುಲೈ ತಿಂಗಳಲ್ಲಿ ಈ ಬಾರಿ ಅತ್ಯಧಿಕ
Image
Spiritual: ಶ್ರಾವಣ ಸೋಮವಾರ ಉಪವಾಸದ ಕ್ರಮ ಮತ್ತು ಫಲ ಏನು ಗೊತ್ತಾ? ಇಲ್ಲಿದೆ ನೋಡಿ

ಮಾಲಾಶ್ರೀ ಅಂಚನ್ 

Published On - 9:49 am, Tue, 2 August 22

Follow Us
TV9 Web
TV9 Web

TV9 Kannada

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ