AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಮಲ ತಿರುಪತಿ ಹುಂಡಿ ಆದಾಯ: ಶ್ರೀವಾರಿ ಹುಂಡಿಗೆ ಹಣದ ಪ್ರವಾಹ, ಜುಲೈ ತಿಂಗಳಲ್ಲಿ ಈ ಬಾರಿ ಅತ್ಯಧಿಕ

Tirumala Hundi Collection: ಕಲಿಯುಗದ ದೇವ ಎಂದೇ ನಂಬಿರುವ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರು ಅಪಾರ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಅದರೊಂದಿಗೆ ಬಡ್ಡಿದಾರ ಶ್ರೀಮಂತ ದೇವರ ಬೊಕ್ಕಸಕ್ಕೆ ಹಣ ಹರಿದುಬರುವುದು ಮುಂದುವರಿದಿದೆ.

ತಿರುಮಲ ತಿರುಪತಿ ಹುಂಡಿ ಆದಾಯ: ಶ್ರೀವಾರಿ ಹುಂಡಿಗೆ ಹಣದ ಪ್ರವಾಹ, ಜುಲೈ ತಿಂಗಳಲ್ಲಿ ಈ ಬಾರಿ ಅತ್ಯಧಿಕ
ಶ್ರೀವಾರಿ ಹುಂಡಿಗೆ ಹಣದ ಪ್ರವಾಹ.. ಜುಲೈ ತಿಂಗಳಲ್ಲಿ ಈ ಬಾರಿ ಅತ್ಯಧಿಕ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 01, 2022 | 8:23 PM

ತಿರುಮಲ ಹುಂಡಿ ಸಂಗ್ರಹ ಗರಿಷ್ಠ: ಶ್ರೀವಾರಿ ಹುಂಡಿಗೆ ಹಣದ ಪ್ರವಾಹ.. ಜುಲೈ ತಿಂಗಳ ಲೆಕ್ಕದಲ್ಲಿ ಆದಾಯ ರೂಪದಲ್ಲಿ ಅತಿ ಹೆಚ್ಚು ಕಾಸಿನ ಮಳೆ ಸುರಿದಿದೆ. ಕೊರೊನಾ ಬಳಿಕವಂತೂ ಸ್ವಾಮಿಯ ಹುಂಡಿ ಆದಾಯ (TTD Tirumala Tirupati Devasthanam) ಪ್ರತಿ ತಿಂಗಳೂ ದಾಖಲೆ ಸೃಷ್ಟಿಸುತ್ತಾ ಬಂದಿದೆ. ಕಲಿಯುಗದ ದೇವರಾದ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರು ಅಪಾರ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಇತ್ತೀಚಿನ ಶ್ರೀವಾರಿ ಹುಂಡಿ ಆದಾಯ ಜುಲೈ ತಿಂಗಳಲ್ಲಿ ಗರಿಷ್ಠ ದಾಖಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ TTD) ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸ್ವಾಮಿಗೆ 139.45 ಕೋಟಿ ರೂ ಹುಂಡಿ ಆದಾಯ ಬಂದಿದೆ. ಇದರೊಂದಿಗೆ ಶ್ರೀವಾರಿ ಹುಂಡಿಯ ಆದಾಯ ಸತತ ಐದನೇ ತಿಂಗಳಲ್ಲಿ 100 ಕೋಟಿ ದಾಟಿದೆ.

ಮಾರ್ಚ್‌ನಲ್ಲಿ 128 ಕೋಟಿ, ಏಪ್ರಿಲ್‌ನಲ್ಲಿ 127.5 ಕೋಟಿ, ಮೇ ತಿಂಗಳಲ್ಲಿ 130.5 ಕೋಟಿ, ಜೂನ್‌ನಲ್ಲಿ 123.76 ಕೋಟಿ ಮತ್ತು ಜುಲೈ ತಿಂಗಳಲ್ಲಿ 139.45 ಕೋಟಿ ರೂ ಬಂದಿದೆ. ಇದರೊಂದಿಗೆ ಕಳೆದ ನಾಲ್ಕು ತಿಂಗಳಲ್ಲಿ ಸ್ವಾಮಿಗೆ 649.21 ಕೋಟಿ ರೂ. ಶ್ರೀವಾರಿ ಹುಂಡಿಯ ಆದಾಯದ ಮೂಲಕ ಬಂದಿದೆ. ಜುಲೈ ತಿಂಗಳಲ್ಲೇ ಐದು ದಿನಗಳಲ್ಲಿ ಹುಂಡಿ ಆದಾಯ ಪ್ರತಿ ದಿನ 5 ಕೋಟಿ ರೂ. ಗಡಿ ತಲುಪಿದ್ದು, ಜುಲೈ 4ರಂದು ಸ್ವಾಮಿಗೆ 6.18 ಕೋಟಿ ಹುಂಡಿ ಆದಾಯ ಬಂದಿದೆ. ಜುಲೈ 4 ಒಂದೇ ದಿನದಲ್ಲಿ ಅತ್ಯಧಿಕ ಆದಾಯ ದಾಖಲಿಸಿರುವುದು ಗಮನಾರ್ಹ!

To read more in Telugu click here

Published On - 8:20 pm, Mon, 1 August 22