Naga Panchami 2021: ಕೃಷಿಕ ಮಹಿಳೆಯರ ಹಬ್ಬ ನಾಗರಪಂಚಮಿ, ಶ್ರಾವಣ ಮಾಸದಲ್ಲಿ ಆಚರಿಸುವ ನಾಗಪೂಜೆಯ ವಿಶೇಷವೇನು?

ಶ್ರಾವಣ ಮಾಸದಲ್ಲಿ ರೈತಾಪಿ ಜನರೆಲ್ಲರೂ ಸಂಜೆಯವರೆಗೂ ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಶ್ರಾವಣದ ಮಳೆಯಿಂದಾಗಿ ಸಂಧ್ಯಾ ಕಾಲದಲ್ಲಿ ನಾಗರಹಾವುಗಳು ತಮ್ಮ ಭದ್ರತೆಗಾಗಿ ಹುತ್ತಗಳನ್ನು ಹುಡುಕುತ್ತಾ ಓಡಾಡುತ್ತಿರುತ್ತವೆ. ಹೀಗಾಗಿ ಹೊಲ-ಗದ್ದೆಯಲ್ಲಿ ಕೆಲಸ ಮಾಡುವವರಿಗೆ ತೊಂದರೆಯನ್ನು ನೀಡಬಾರದೆಂದು ಬೇಡುತ್ತ ಕೃಷಿ ಮಹಿಳೆಯರು ನಾಗರಪಂಚಮಿಯನ್ನು ಆಚರಿಸುತ್ತಾರೆ.

Naga Panchami 2021: ಕೃಷಿಕ ಮಹಿಳೆಯರ ಹಬ್ಬ ನಾಗರಪಂಚಮಿ, ಶ್ರಾವಣ ಮಾಸದಲ್ಲಿ ಆಚರಿಸುವ ನಾಗಪೂಜೆಯ ವಿಶೇಷವೇನು?
ನಾಗರಪಂಚಮಿ
Follow us
TV9 Web
| Updated By: ಆಯೇಷಾ ಬಾನು

Updated on: Aug 13, 2021 | 6:41 AM

ಶ್ರಾವಣ ಮಾಸ ಶಿವ, ವಿಷ್ಣುವನ್ನು ಆರಾಧಿಸುವ ಮಾಸ. ಶ್ರಾವಣವನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಶ್ರಾವಣ ಬಂತೆಂದರೆ ಸಾಕು ಹಬ್ಬಗಳು ಹರಿದು ಬರುತ್ತವೆ. ಹಬ್ಬಗಳ ಮಾಸವೇ ಶ್ರಾವಣ. ಶ್ರಾವಣ ಶುಕ್ಲ ಪಂಚಮಿಯನ್ನು ನಾಗರಪಂಚಮಿ ಎಂದು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ನಾಗರಪಂಚಮಿಯಂದು ಏಳುಹೆಡೆಯ ಸರ್ಪಾಕೃತಿಯ ಚಿತ್ರಬರೆದು ತಾಳೆಹೂವಿನಿಂದ ಅದಕ್ಕೆ ಹಾಲೆರೆಯುವ ಪದ್ಧತಿ ಇದೆ. ಇದಕ್ಕೆ ತನಿಎರೆಯುವುದು ಎನ್ನುತ್ತಾರೆ. ಅಂತೆಯೇ ಬೆನ್ನುಮೂಳೆಯ ಆರಂಭದ ಎಡೆ, ಹೊಕ್ಕಳು, ಹೃದಯ, ಗಂಟಲಗುಳಿ, ಅದರ ಹಿಂಭಾಗದ ಬೆನ್ನಿನ ನೇರ, ನೆತ್ತಿ ಇವುಗಳಿಗೆ ಹಾಲು ತುಪ್ಪವನ್ನು ಸವರುವುದೂ ರೂಢಿಯಲ್ಲಿದೆ. ನಾಗದ ವಾಸದ ಎಡೆಯಾದ ಹುತ್ತಗಳಿರುವಲ್ಲಿಗೆ ಹೋಗಿ ಹಾಲು ತುಪ್ಪಗಳನ್ನೆರೆಯುತ್ತಾರೆ.

ನಾಗಜಾತಿಯ ಸಮ್ಮಿಲನದ ಮಾಸ ನಾಗರಪಂಚಮಿ ಹಬ್ಬದ ಹಿಂದೆ ಅನೇಕ ವಿಶೇಷತೆಗಳಿವೆ. ಸಂತಾನೋತ್ಪತ್ತಿಯನ್ನು ಬಯಸಿ ನಾಗರಹಾವಿಗಳು(ಹೆಣ್ಣು) ತಕ್ಕ ಜೋಡಿಗಾಗಿ ಹುಡುಕಾಟ ಪ್ರಾರಂಭಿಸಿ ಯಧೇಚ್ಛಾವಿಹಾರ ಮಾಡುವ ಮಾಸ ಶ್ರಾವಣ ಮಾಸ. ಈ ಸಮಯದಲ್ಲಿ ನಾಗಜಾತಿ ಮಹಾ ಆವೇಶದಿಂದ ಇರುತ್ತವೆ. ಇನ್ನು ಭಾರತದಲ್ಲಿ ಕೆಲವರು ಶ್ರಾವಣ ಶುದ್ಧ ಪಂಚಮಿಗೆ ನಾಗಪೂಜೆಯನ್ನು ಮಾಡಿದರೆ ಕೆಲವರು ಕಾರ್ತೀಕ ಶುದ್ಧ ಚವಿತಿಗೆ ನಾಗಪೂಜೆಯನ್ನು ಮಾಡುತ್ತಾರೆ. ಆದರೆ ನಾಗಜಾತಿಗೆ ಶ್ರಾವಣ ಮಾಸವೆಂದರೆ ಇಷ್ಟದ ಮಾಸ ಎಂದು ಹೇಳಲಾಗುತ್ತೆ.

ಶ್ರಾವಣ ಶುದ್ಧ ಪಂಚಮಿಗೆ ಮಾಡುವ ನಾಗಪಂಚಮಿಗೆ ಹಲವಾರು ವಿಶೇಷಗಳಿವೆ. ಶ್ರಾವಣ ಮಾಸದಲ್ಲಿ ರೈತಾಪಿ ಜನರೆಲ್ಲರೂ ಸಂಜೆಯವರೆಗೂ ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಶ್ರಾವಣದ ಮಳೆಯಿಂದಾಗಿ ಸಂಧ್ಯಾ ಕಾಲದಲ್ಲಿ ನಾಗರಹಾವುಗಳು ತಮ್ಮ ಭದ್ರತೆಗಾಗಿ ಹುತ್ತಗಳನ್ನು ಹುಡುಕುತ್ತಾ ಓಡಾಡುತ್ತಿರುತ್ತವೆ. ಹೀಗಾಗಿ ಹೊಲ-ಗದ್ದೆಯಲ್ಲಿ ಕೆಲಸ ಮಾಡುವವರಿಗೆ ತೊಂದರೆಯನ್ನು ನೀಡಬಾರದೆಂದು ಬೇಡುತ್ತ ಕೃಷಿ ಮಹಿಳೆಯರು ನಾಗರಪಂಚಮಿಯನ್ನು ಆಚರಿಸುತ್ತಾರೆ.

ನಾಗರಾಜಾ.. ನಮ್ಮ ಮನೆಯವರು ಮುಗ್ಧರು. ತಿಳಿದೂ ತಿಳಿಯದೇ ಅವರಿಂದ ನಿನಗೇನಾದರೂ ತೊಂದರೆಯಾದರೆ ಹೆಡೆ ಎತ್ತಿ ಸೇಡು ತೀರಿಸಿಕೊಳ್ಳಬೇಡ. ನಾವು ನಿನ್ನ ಭಕ್ತರು. ನಿನ್ನ ಆರಾಧಕರು. ನಮ್ಮನ್ನು ನೀನು ದಯಾಗುಣದಿಂದ ಕಾಪಾಡು. ನನ್ನ ಮಾಂಗಲ್ಯಕ್ಕೆ ರಕ್ಷೆ ನೀಡು ಎಂದು ನಮಿಸಿ ಶ್ರಾವಣ ಪಂಚಮಿಯಂದು ಹುತ್ತಗಳಿರುವಲ್ಲಿಗೆ ಹೋಗಿ ಹಾಲು ತುಪ್ಪಗಳನ್ನೆರೆಯುತ್ತಾರೆ.

ಪುರಾಣಗಳ ಪ್ರಕಾರ, ಪಾತಾಳ ಲೋಕವು ಹಾವಿಗಳ ವಾಸಸ್ಥಾನವಾಗಿದೆ. ಹೀಗಾಗಿ ನಾಗರಪಂಚಮಿಯಂದು ಕಲ್ಲಿನ ನಾಗನಿಗೆ ಅಥವಾ ಮರದ ನಾಗನಿಗೆ ಹಾಲಿನ ಅಭಿಷೇಕ ಮಾಡಿದರೆ ಅದು ಪಾತಾಳ ಲೋಕದಲ್ಲಿನ ಹಾವುಗಳಿಗೆ ಅಭಿಷೇಕ ಮಾಡಿದಂತೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: Naga Panchami 2021: ಶ್ರಾವಣ ಮಾಸದ ಮದರಂಗಿ ಹಬ್ಬ ನಾಗರ ಪಂಚಮಿ- ಏನಿದರ ವಿಶೇಷ, ಆಚರಣೆ, ಭಕ್ತಿ-ಭಾವ ಹೇಗೆ?

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?