Navaratri Durga Ashtami 2022: ದುರ್ಗಾಷ್ಟಮಿಯ ದಿನ ಕನ್ಯಾ ಪೂಜೆ ಮಾಡುವುದು ಹೇಗೆ? ಶುಭ ಮುಹೂರ್ತ

| Updated By: ಆಯೇಷಾ ಬಾನು

Updated on: Oct 03, 2022 | 9:57 AM

Kanya Puja: 02 ರಿಂದ 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಆರತಿ ಮಾಡಿ ಅವರ ಪಾದ ತೊಳೆದು ನೈವೇದ್ಯ ಅರ್ಪಿಸಿ ಪೂಜಿಸಲಾಗುತ್ತೆ. ಹಾಗೂ ಈ ದಿನ ಅನೇಕರು ಉಪವಾಸವನ್ನು ಮುರಿದು ವಿಶೇಷ ಪೂಜೆ, ಹವನವನ್ನು ಮಾಡುತ್ತಾರೆ.

Navaratri Durga Ashtami 2022: ದುರ್ಗಾಷ್ಟಮಿಯ ದಿನ ಕನ್ಯಾ ಪೂಜೆ ಮಾಡುವುದು ಹೇಗೆ? ಶುಭ ಮುಹೂರ್ತ
ಸಾಂದರ್ಭಿಕ ಚಿತ್ರ
Follow us on

ಇಂದು ದುರ್ಗಾ ದೇವಿಯ ಎಂಟನೇ ರೂಪವಾದ ಮಹಾಗೌರಿ ದೇವಿಯನ್ನು(Devi Mahagauri) ಪೂಜಿಸಲಾಗುತ್ತದೆ. ಅಲ್ಲದೆ ಇದೇ ದಿನ ಕನ್ಯಾ ಪೂಜೆಯನ್ನೂ(Kanya Puja) ಸಹ ಮಾಡಲಾಗುತ್ತೆ. 02 ರಿಂದ 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಆರತಿ ಮಾಡಿ ಅವರ ಪಾದ ತೊಳೆದು ನೈವೇದ್ಯ ಅರ್ಪಿಸಿ ಪೂಜಿಸಲಾಗುತ್ತೆ. ಹಾಗೂ ಈ ದಿನ ಅನೇಕರು ಉಪವಾಸವನ್ನು ಮುರಿದು ವಿಶೇಷ ಪೂಜೆ, ಹವನವನ್ನು ಮಾಡುತ್ತಾರೆ. ದುರ್ಗಾಷ್ಟಮಿಯ ದಿನ ಕನ್ಯಾ ಪೂಜೆ ಮಾಡುವುದಕ್ಕೂ ವಿಶೇಷ ಮಹತ್ವವಿದೆ. ಕನ್ಯಾ ಪೂಜೆಯಿಲ್ಲದೆ ದುರ್ಗಾಷ್ಟಮಿ ಪೂಜೆಯು ಅಪೂರ್ಣವೆನ್ನಲಾಗುತ್ತೆ.

ಶಾರದಿಯಾ ಮತ್ತು ಚೈತ್ರ ನವರಾತ್ರಿಯಲ್ಲಿ, 9 ಹುಡುಗಿಯರನ್ನು ಮಾ ದುರ್ಗೆಯ ವಿವಿಧ ರೂಪಗಳಾಗಿ ಪೂಜಿಸಲಾಗುತ್ತದೆ. ಕನ್ಯಾ ಪೂಜೆಯನ್ನು ಅಷ್ಟಮಿ ಮತ್ತು ನವಮಿ ತಿಥಿಯಂದು ಮಾಡಲಾಗುತ್ತದೆ. ನವರಾತ್ರಿಯ ಅಷ್ಟಮಿಯನ್ನು ಮಹಾ ಅಷ್ಟಮಿ ಮತ್ತು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ. ಇದನ್ನೂ ಓದಿ: Devi Mahagauri Avtar: ನವರಾತ್ರಿಯ 8ನೇ ದಿನದ ಮಹಾಗೌರಿ ಪೂಜೆ ಮಾಡುವುದು ಹೇಗೆ? ಇಲ್ಲಿವೆ ಮಂತ್ರಗಳು

ದುರ್ಗಾಷ್ಟಮಿ 2022 ಶುಭ ಮುಹೂರ್ತ

ಅಶ್ವಿನ ಶುಕ್ಲ ಅಷ್ಟಮಿ ದಿನಾಂಕ ಪ್ರಾರಂಭ – 2022 ರ ಅಕ್ಟೋಬರ್‌ 2 ರಂದು ಸಂಜೆ 06.47 ರಿಂದ
ಅಶ್ವಿನ ಶುಕ್ಲ ಅಷ್ಟಮಿ ದಿನಾಂಕ ಮುಕ್ತಾಯ – 2022 ರ ಅಕ್ಟೋಬರ್‌ 3 ರಂದು ಸೋಮವಾರ ಸಂಜೆ 04.37 ರವರೆಗೆ.

ಮಹಾನವಮಿ 2022 ಶುಭ ಮುಹೂರ್ತ

ಅಶ್ವಿನ ಶುಕ್ಲ ನವಮಿ ದಿನಾಂಕ ಪ್ರಾರಂಭ – 2022 ರ ಅಕ್ಟೋಬರ್‌ 3 ರಂದು ಸೋಮವಾರ ಸಂಜೆ 04.37 ರಿಂದ
ಅಶ್ವಿನ ಶುಕ್ಲ ನವಮಿ ದಿನಾಂಕ ಮುಕ್ತಾಯ – 2022 ರ ಅಕ್ಟೋಬರ್‌ 4 ರಂದು ಮಂಗಳವಾರ ಮಧ್ಯಾಹ್ನ 2:20 ರವರೆಗೆ.

ದುರ್ಗಾಷ್ಟಮಿ 2022 ಕನ್ಯಾ ಪೂಜೆ ಮುಹೂರ್ತ

ಅಮೃತ ಮುಹೂರ್ತ- ಬೆಳಿಗ್ಗೆ 6:15 ರಿಂದ 7.44 ರವರೆಗೆ
ಶುಭ ಮುಹೂರ್ತ – 9.12 ರಿಂದ 10.41 ರವರೆಗೆ
ಚರ – ಮಧ್ಯಾಹ್ನ 1.39 ರಿಂದ 3:7 ರವರೆಗೆ
ಲಾಭ- ಮಧ್ಯಾಹ್ನ 3:7 ರಿಂದ 4:36 ರವರೆಗೆ
ಅಮೃತ – ಸಂಜೆ 4:36 ರಿಂದ 6:5 ರವರೆಗೆ

ಮಹಾನವಮಿ 2022 ಕನ್ಯಾ ಪೂಜೆ ಮುಹೂರ್ತ

ನವಮಿ ತಿಥಿ ಅಕ್ಟೋಬರ್ 03 ರಂದು ಸಂಜೆ 04:37 ರಿಂದ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 4 ರಂದು ಮಧ್ಯಾಹ್ನ 02:20 ಕ್ಕೆ ಕೊನೆಗೊಳ್ಳುತ್ತದೆ.
ಲಾಭ – ಬೆಳಿಗ್ಗೆ 10.41 ರಿಂದ 12.10 ರವರೆಗೆ
ಅಮೃತ – ಮಧ್ಯಾಹ್ನ 12.10 ರಿಂದ 1:38 ರವರೆಗೆ
ಶುಭ- ಮಧ್ಯಾಹ್ನ 3:7 ರಿಂದ 4:35 ರವರೆಗೆ.

ದಕ್ಷಿಣ ಭಾರತದಲ್ಲಿ ಸರಸ್ವತಿ ಪೂಜೆ ಮುಹೂರ್ತ

ದಕ್ಷಿಣ ಭಾರತದಲ್ಲಿ, ನವರಾತ್ರಿಯ ಕೊನೆಯ ದಿನದಂದು ಸರಸ್ವತಿ ಪೂಜೆಯನ್ನು ಮಾಡಲಾಗುತ್ತದೆ ಮತ್ತು ಆಯುಧ ಪೂಜೆಯನ್ನು ಕೂಡ ಈ ದಿನದಂದು ಮಾಡಲಾಗುತ್ತದೆ. ಸರಸ್ವತಿ ಪೂಜೆಯ ಮರುದಿನ 4 ರಿಂದ 5 ವರ್ಷದೊಳಗಿನ ಮಕ್ಕಳಿಗೆ ವಿಧ್ಯಾರಂಭವನ್ನು ಹಮ್ಮಿಕೊಳ್ಳುತ್ತಾರೆ.

ದಕ್ಷಿಣ ಭಾರತದ ಸರಸ್ವತಿ ಪೂಜೆ ಮುಹೂರ್ತ ಹೀಗಿದೆ

ದಕ್ಷಿಣ ಭಾರತದಲ್ಲಿ ಸರಸ್ವತಿ ಪೂಜೆ: 2022 ರ ಅಕ್ಟೋಬರ್‌ 4 ರಂದು ಮಂಗಳವಾರ ಸರಸ್ವತಿ ಪೂಜೆ ಮಾಡಲಾಗುವುದು ನವಮಿ ತಿಥಿ ಪ್ರಾರಂಭ: 2022 ಅಕ್ಟೋಬರ್‌ 3 ರಂದು ಸೋಮವಾರ ಸಂಜೆ 4:37 ರಿಂದ ನವಮಿ ತಿಥಿ ಮುಕ್ತಾಯ: 2022 ಅಕ್ಟೋಬರ್‌ 4 ರಂದು ಮಂಗಳವಾರ ಮಧ್ಯಾಹ್ನ 2:20 ರವರೆಗೆ

ಸರಸ್ವತಿ ಮಂತ್ರ

  • ‘ಓಂ ನಮಃ’
  •  ‘ಓಂ ಹ್ರೀಂ ಸರಸ್ವತ್ಯೈ ನಮಃ’
  •  ‘ವದ ವದ ವಾಗ್ವಾದಿನ್ಯೈ ಸ್ವಾಹಾ’
  • ‘ಹ್ರೀಂ ಓಂ ಹಸೌಃ ಓಂ ಸರಸ್ವತ್ಯೈ ನಮಃ’
  • ಶ್ರೀ ಸರಸ್ವತಿ-ಗಾಯತ್ರಿ ಮಂತ್ರ
  • ‘ಓಂ ಏಂ ವಾಗ್ದೇವ್ಯೈ ವಿದ್ಮಹೇ ಕಾಮರಾಜಾಯ ಧೀಮಹಿ ತನ್ನೋ ದೇವಿ ಪ್ರಚೋದಯಾತ್’
  •  ಸರಸ್ವತಿ ಬೀಜ ಮಂತ್ರ’
  • ‘ಏಂ’ ಈ ಏಕಾಕ್ಷರಿ ಮಂತ್ರವನ್ನು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸಿ.

Published On - 9:55 am, Mon, 3 October 22