ಇದು ದಸರಾ ಹಬ್ಬದ ಸಂಭ್ರಮ. ಶರನ್ನವರಾತ್ರಿ ಸಂದರ್ಭ. ನಿಮ್ಮ ಜೀವನದ ಮೇಲೆ ನವರಾತ್ರಿ ಹೇಗೆ ಪ್ರಭಾವ ಬೀರಲಿದೆ. ನಿಮ್ಮ ರಾಶಿಗೆ ಅನುಗುಣವಾಗಿ ನೀವು ದುರ್ಗಾ ಮಾತೆಯನ್ನು ಸುಪ್ರಸನ್ನಗೊಳಿಸಲು ಯಾವ ಹೂವನ್ನು ಸಮರ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಶ್ರೀ ಶಾರದಾ ದೇವಿಯ ಶರನ್ನವರಾತ್ರಿ ಅಕ್ಟೋಬರ್ 7 ರಿಂದ ಆರಂಭಗೊಂಡಿದ್ದು ಅಕ್ಟೋಬರ್ 14 ರ ವರೆಗೂ ನೆರವೇರಲಿದೆ.
ಇಂದು ನವರಾತ್ರಿಯ 6ನೆಯ ದಿನ. ಈ ಸಂದರ್ಭದಲ್ಲಿ ವಿಭಿನ್ನ ರೂಪಗಳಲ್ಲಿರುವ ದುರ್ಗಾ ಮಾತೆಯನ್ನು ವಿಭಿನ್ನ ಹೂವುಗಳಿಂದ ಪೂಜಿಸಬೇಕು. ದುರ್ಗಾ ಮಾತೆಯನ್ನು ಸಂಪ್ರೀತಗೊಳಿಸಿ, ಶುಭಾಶೀರ್ವಾದ ಪಡೆಯಲು ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಹೂವಿನಲ್ಲಿ ದೇವಿಗೆ ಪೂಜೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಮೇಷ ರಾಶಿ: ಮೇಷ ರಾಶಿಯ ಜಾತಕದವರು ಕೆಂಪು ಬಣ್ಣದ ಹೂವುಗಳಿಂದ ದುರ್ಗಾ ಮಾತೆಗೆ ಪೂಜೆ ಸಲ್ಲಿಸಬೇಕು. ಭಕ್ತರು ಗುಲಾಬಿ, ಕೆಂಪು ಕನಕಾಂಬರ ಮತ್ತು ಕಮಲದ ಹೂವನ್ನು ಅರ್ಪಿಸಬಹುದು.
ವೃಷಭ ರಾಶಿ: ವೃಷಭ ರಾಶಿಯವರು ಬಿಳಿ ಹೂವನ್ನು ದೇವಿಗೆ ಅರ್ಪಿಸಬೇಕು. ಮಲ್ಲಿಗೆ, ಪಾರಿಜಾತ, ಬಿಳಿ ದಾಸವಾಳ ಹೂವುಗಳಿಂದ ದೇವಿಯ ಆರಾಧನೆ ಮಾಡಬೇಕು.
ಮಿಥುನ ರಾಶಿ: ಮಿಥುನ ರಾಶಿಯವರು ದುರ್ಗಾ ದೇವಿಗೆ ಹಳದಿ ಹೂಗಳನ್ನು ಸಮರ್ಪಿಸಬೇಕು. ಹಳದಿ ಚೆಂಡು ಹೂ, ಹಳದಿ ಶಾವಂತಿಗೆ ಹೂಗಳಿಂದ ದೇವಿಯನ್ನು ಪೂಜಿಸುವುದರಿಂದ ನಿಮ್ಮ ಮನೋಕಾಮನೆಗಳು ನೆರವೇರುತ್ತವೆ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿ ಜಾತಕದವರು ನವರಾತ್ರಿಯಲ್ಲಿ ಬಿಳಿ, ಗುಲಾಬಿ ಬಣ್ಣದ ಹೂವನ್ನು ದೇವಿಗೆ ಅರ್ಪಿಸಬೇಕು. ಹೀಗೆ ಪೂಜೆ ಮಾಡುವುದರಿಂದ ಮಾತೆಗೆ ಪ್ರಸನ್ನಗೊಂಡು ನಿಮ್ಮ ಶ್ರೇಯೋಭಿವೃದ್ಧಿಯನ್ನು ಹರಸುತ್ತಾಳೆ ಎಂಬುದು ನಂಬಿಕೆ.
ಸಿಂಹ ರಾಶಿ: ಸಿಂಹ ರಾಶಿಯವರು ನವರಾತ್ರಿ ಸಂದರ್ಭದಲ್ಲಿ ಗುಲಾಬಿ, ಕನಕಾಬರ ಹೂಗಳಿಂದ ದೇವಿ ಪೂಜೆ ಮಾಡಬೇಕು.
ಕನ್ಯಾ ರಾಶಿ: ಕನ್ಯಾ ರಾಶಿ ಜನರು ದುರ್ಗಾ ಮಾತೆಗೆ ಚೆಂಡು ಹೂ, ಗುಲಾಬಿ, ದಾಸವಾಳ ಮುಂತಾದ ಹೂಗಳನ್ನು ಅರ್ಪಿಸಬೇಕು.
ತುಲಾ ರಾಶಿ: ತುಲಾ ರಾಶಿಯವರು ದುರ್ಗಾ ಮಾತೆಯನ್ನು ಪ್ರಸನ್ನಗೊಳಿಸಲು ಬಿಳಿ ಬಣ್ಣದ ಹೂಗಳಿಂದ ಪೂಜೆ ಮಾಡಬೇಕು. ಬಿಳಿ ಕಮಲ, ಕೇದಗೆ ಸೇರಿದಂತೆ ಎಲ್ಲ ಬಿಳಿ ಬಣ್ಣದ ಹೂಗಳಿಂದ ದೇವಿಗೆ ಊಜೆ ಮಾಡಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಕೆಂಪು ಬಣ್ಣದ ಹೂಗಳನ್ನು ಅರ್ಪಿಸಬೇಕು. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ.
ಧನು ರಾಶಿ: ಧನು ರಾಶಿಯವರು ಹಳದಿ ಬಣ್ಣದ ಹೂಗಳಿಂದ ಪೂಜಿಸುತ್ತಾ ದೇವಿಯನ್ನು ಆರಾಧಿಸಬೇಕು.
ಮಕರ ರಾಶಿ: ಮಕರ ರಾಶಿಯವರು ನೀಲಿ ಬಣ್ಣದ ಹೂಗಳಿಂದ ದೇವಿಯನ್ನು ಪೂಜಿಸಬೇಕು.
ಕುಂಭ ರಾಶಿ: ಕುಂಭ ರಾಶಿ ಜಾತಕದವರು ನವರಾತ್ರಿಯಲ್ಲಿ ದುರ್ಗಾ ಮಾತೆಯನ್ನು ಪ್ರಸನ್ನಗೊಳಿಸಲು ನೀಲಿ ಬಣ್ಣದ ಹೂಗಳಿಂದ ಪ್ರಾರ್ಥನೆ ಮಾಡಬೇಕು.
ಮೀನ ರಾಶಿ: ಮೀನ ರಾಶಿಯವರು ಹಳದಿ ಬಣ್ಣದ ಹೂಗಳಿಂದ ದೇವಿಯನ್ನು ಪೂಜಿಸಬೇಕು.