Zodiac sign: ಈ 3 ರಾಶಿಯ ಜಾತಕದವರಿಗೆ ತಮ್ಮ ಭಾವನೆಗಳನ್ನು ಹೇಳುವುದಕ್ಕೆ ಬರುವುದಿಲ್ಲ! ಅವರು ಯಾವ ರಾಶಿಯವರು?

TV9 Digital Desk

| Edited By: Ayesha Banu

Updated on: Oct 12, 2021 | 6:55 AM

ಜಾತಕದಲ್ಲಿನ 12 ರಾಶಿಯ ಜನರು ವಿಭಿನ್ನ ಗುಣ ಸ್ವಭಾವದವರರಾಗಿರುತ್ತಾರೆ. ನಾನಾ ರಾಶಿಯ ಜನರಲ್ಲಿ ನಾನಾ ಗುಣ- ಅವಗುಣಗಳು ಮನೆ ಮಾಡಿರುತ್ತವೆ. ಕೆಲವರು ಇರುತ್ತಾರೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ತುಂಬಾ ಕಷ್ಟಪಡುತ್ತಾರೆ. ಅಂತರ್ಮುಖಿಗಳಾಗಿರುತ್ತಾರೆ. ಆದರೆ ಬೇರೆ ವಿಷಯಗಳ ಬಗ್ಗೆ ಬಹಿರಂಗವಾಗಿ ಧಾರಾಳವಾಗಿ ಮಾತನಾಡುತ್ತಾರೆ.

Zodiac sign: ಈ 3 ರಾಶಿಯ ಜಾತಕದವರಿಗೆ ತಮ್ಮ ಭಾವನೆಗಳನ್ನು ಹೇಳುವುದಕ್ಕೆ ಬರುವುದಿಲ್ಲ! ಅವರು ಯಾವ ರಾಶಿಯವರು?
ಭವಿಷ್ಯ
Follow us

ಈ ಮೂರು ರಾಶಿಯ ಜಾತಕದವರಿಗೆ ತಮ್ಮ ಭಾವನೆಗಳನ್ನು ಹೇಳುವುದಕ್ಕೆ ಬರುವುದಿಲ್ಲ! ಯಾವ ರಾಶಿಯವರು ಅವರು? ಜಾತಕದಲ್ಲಿ ಬರುವ 12 ರಾಶಿಗಳ ಪೈಕಿ ಕೆಲವು ರಾಶಿಯ ಜನರು ಹೇಗೆಂದರೆ ತಮ್ಮ ಭಾವನೆಗಳನ್ನು ಬೇರೊಬ್ಬರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ತಮ್ಮ ಮನದಲ್ಲಿ, ಹೃದಯದಲ್ಲಿ ಬೆಚ್ಚಗೆ ಕುಳಿತಿರುವ ಮಾತುಗಳನ್ನು ಎದುರಿಗಿನ ವ್ಯಕ್ತಿಗೆ ಹೇಳುವುದಿಲ್ಲ.

ಜಾತಕದಲ್ಲಿನ 12 ರಾಶಿಯ ಜನರು ವಿಭಿನ್ನ ಗುಣ ಸ್ವಭಾವದವರರಾಗಿರುತ್ತಾರೆ. ನಾನಾ ರಾಶಿಯ ಜನರಲ್ಲಿ ನಾನಾ ಗುಣ- ಅವಗುಣಗಳು ಮನೆ ಮಾಡಿರುತ್ತವೆ. ಕೆಲವರು ಇರುತ್ತಾರೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ತುಂಬಾ ಕಷ್ಟಪಡುತ್ತಾರೆ. ಅಂತರ್ಮುಖಿಗಳಾಗಿರುತ್ತಾರೆ. ಆದರೆ ಬೇರೆ ವಿಷಯಗಳ ಬಗ್ಗೆ ಬಹಿರಂಗವಾಗಿ ಧಾರಾಳವಾಗಿ ಮಾತನಾಡುತ್ತಾರೆ.

ಈ ಅಂತರ್ಮುಖಿ ಜನ ತಮ್ಮ ಮನದಲ್ಲಿನ ಮಾತುಗಳನ್ನು ಹೇಳಲು ಎರಡೆರಡು ಬಾರಿ ಆಲೋಚಿಸುತ್ತಾರೆ. ಇಂತಹವರಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ತುಂಬಾ ತ್ರಾಸದಾಯಿಕವಾಗಿರುತ್ತದೆ. ಇವರು ನೇರ ಮಾತುಗಾರರು ಆಗಿರುತ್ತಾರೆ. ಬೇರೊಬ್ಬರು ಪ್ರಶಂಸಿಸುತ್ತಾರೆ ಎಂದೇನೂ ಹೊಗಳುತ್ತಾ ಮಾತನಾಡುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಮೂರು ರಾಶಿಯ ಜನರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ.

ಕರ್ಕಾಟಕ ರಾಶಿ  (Cancer):  ಕರ್ಕಾಟಕ ರಾಶಿಯ ಜಾತಕದವರು ತುಂಬಾ ಭಾವುಕರು ಮತ್ತು ಸಂವೇಧನಾಶೀಲ ಜನರಾಗಿರುತ್ತಾರೆ. ಆದರೆ ಅವರಿಗೆ ಅನೇಕ ವಿಷಯಗಳ ಬಗ್ಗೆ ಜ್ಞಾನವಿರುತ್ತದೆ. ಹೆಚ್ಚು ತಿಳಿದುಕೊಂಡಿರುತ್ತಾರೆ. ತಮ್ಮ ಮನದಲ್ಲಿನ ಮಾತುಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ. ಆದರೆ ಅದು ಅವರಿಗೆ ಸಾಧ್ಯವೇ ಆಗದು. ತಮ್ಮ ಮಾತುಗಳನ್ನು ಒಂದು ಬಾಟಲಿನಲ್ಲಿ ಹಾಕಿ, ಬಿರುಡೆ ಹಾಕು ಮುಚ್ಚಿಡುವಂತೆ ಮಡಿಬಿಡುತ್ತಾರೆ. ಪ್ರತಿ ವಿಷಯವನ್ನೂ ಆಳವಾಗಿ ಬೇರು ಸಮೇತ ಕೂಲಂಕಶವಾಗಿ ಪರಿಶೀಲಿಸುವ ಮನಸ್ಸಿನವರು ಇವರು. ತಮ್ಮ ಅಸಲೀ ಮುಖ ತೋರಿಸಲು ಸುತರಾಂ ಇಚ್ಛಿಸುವುದಿಲ್ಲ.

ವೃಶ್ಚಿಕ ರಾಶಿ (Scorpio): ವೃಶ್ಚಿಕ ರಾಶಿಯವರು ಮೌಖಿಕವಾಗಿ ತಮ್ಮ ಭಾವನೆಗಳನ್ನು ಹೊರಹಾಕುವ ಪ್ರವೃತ್ತಿ ಹೊಂದಿರುವುದಿಲ್ಲ. ಅವರಿಗೆ ನಿರೀಕ್ಷೆ ಮಾಡುವುದು ಮತ್ತು ತಮ್ಮ ವಿಚಾರಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದಕ್ಕೆ ಇಷ್ಟಡುತ್ತಾರೆ. ದಿನದುದ್ದಕ್ಕೂ ಬಡಬಡಾಯಿಸಲು ಬಯಸುವುದಿಲ್ಲ. ಅಂತರ್ಮುಖಿಗಳಾಗಿದ್ದು ಸ್ವಾಭಾವಿಕವಾಗಿ ರಹಸ್ಯಮಯವಾಗಿ ಮತ್ತು ಶಾಂತವಾಗಿರುತ್ತಾರೆ.

ಧನು ರಾಶಿ (Sagittarius): ಧನು ರಾಶಿಯವರು ಭೌತಿಕವಾಗಿಯೂ ಜನರ ಮಧ್ಯೆ ಇರುವುದಕ್ಕೆ ಇಷ್ಟಪಡುವುದಿಲ್ಲ. ಅದು ಅವರಿಗೆ ಅಸಹಜ ಎನಿಸುತ್ತದೆ. ಸದಾ ಏಕಾಂತದಲ್ಲಿರುತ್ತಾರೆ. ತಮ್ಮ ಭಾವನೆಗಳನ್ನು ತಮ್ಮಲ್ಲೇ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಧನು ರಾಶಿಯವರು ತಮ್ಮ ಮನಸ್ಸಿನಲ್ಲಿರುವುದನ್ನು ಮುಕ್ತವಾಗಿ ಹೇಳಿಕೊಳ್ಳಲು ಆತ್ಮವಿಶ್ವಾಸ ಹೊಂದಿರುವುದಿಲ್ಲ. ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ತೊಳಲಾಡುತ್ತಿರುತ್ತಾರೆ.

ತಾಜಾ ಸುದ್ದಿ

Related Stories

Click on your DTH Provider to Add TV9 Kannada