AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara 2021: ದಸರಾ ಪ್ರಯುಕ್ತ 5 ಕೋಟಿ ರೂ. ನೋಟುಗಳಿಂದಲೇ ನೆಲ್ಲೂರಿನ ದೇವಸ್ಥಾನದ ಅಲಂಕಾರ

ಕನ್ನಿಕಾ ಪರಮೇಶ್ವರಿ ದೇವಸ್ಥಾನವನ್ನು 5 ಕೋಟಿ ರೂ. ಮೌಲ್ಯದ ನೋಟುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಈ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಹಲವು ಊರುಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

Dasara 2021: ದಸರಾ ಪ್ರಯುಕ್ತ 5 ಕೋಟಿ ರೂ. ನೋಟುಗಳಿಂದಲೇ ನೆಲ್ಲೂರಿನ ದೇವಸ್ಥಾನದ ಅಲಂಕಾರ
ನೆಲ್ಲೂರಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನೋಟಿನ ಅಲಂಕಾರ
TV9 Web
| Edited By: |

Updated on: Oct 12, 2021 | 6:35 PM

Share

ಹೈದರಾಬಾದ್: ದಸರಾ ಹಬ್ಬದ ಪ್ರಯುಕ್ತ ಎಲ್ಲ ದೇವಿಯರ ದೇವಸ್ಥಾನಗಳಲ್ಲೂ ವಿಶೇಷ ಅಲಂಕಾರ, ಪೂಜೆಯನ್ನು ನಡೆಸಲಾಗುತ್ತದೆ. ಆದರೆ, ಆಂಧ್ರಪ್ರದೇಶದ ನೆಲ್ಲೂರಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನ ತನ್ನ ವಿಶೇಷವಾದ ಅಲಂಕಾರದಿಂದ ಗಮನ ಸೆಳೆದಿದೆ. ಕನ್ನಿಕಾ ಪರಮೇಶ್ವರಿ ದೇವಸ್ಥಾನವನ್ನು 5 ಕೋಟಿ ರೂ. ಮೌಲ್ಯದ ನೋಟುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಈ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಹಲವು ಊರುಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

ನಿನ್ನೆ ಕನ್ನಿಕಾ ಪರಮೇಶ್ವರಿ ದೇವಿಯನ್ನು 5.16 ಕೋಟಿ ಮೌಲ್ಯದ ನೋಟುಗಳಿಂದ ಅಲಂಕರಿಸಲಾಗಿತ್ತು. ಈ ದೇವಸ್ಥಾನಕ್ಕೆ 130 ವರ್ಷಗಳ ಇತಿಹಾಸವಿದೆ. ಸಮಿತಿಯ ಸದಸ್ಯರು ಮತ್ತು ಭಕ್ತರು ನೋಟುಗಳನ್ನು ಸಂಗ್ರಹಿಸಿದ್ದು, ಭಕ್ತರ ಬೆಂಬಲದೊಂದಿಗೆ ಸಮಿತಿಯು ದೇವರನ್ನು 7 ಕೆಜಿ ಚಿನ್ನ ಮತ್ತು 60 ಕೆಜಿ ಬೆಳ್ಳಿಯಿಂದ ದಸರಾ ಆಚರಣೆಯ ಅಂಗವಾಗಿ ಅಲಂಕರಿಸಲಾಗಿದೆ. ದಸರಾ ಆಚರಣೆಗಾಗಿ ಸುಮಾರು 100 ಸ್ವಯಂಸೇವಕರು ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದೇವಾಲಯದಲ್ಲಿ ವರ್ಷದ ವಿವಿಧ ಸಮಯಗಳಲ್ಲಿ ದೇವಿಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. 9 ದಿನಗಳ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಧನಲಕ್ಷ್ಮಿ, ಧನದೇವತೆಯಾಗಿ ದೇವಿಯನ್ನು ಪೂಜಿಸಲಾಗುತ್ತದೆ.

Nellore Kanyaka Parameswari Temple

ನೆಲ್ಲೂರಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನೋಟಿನ ಅಲಂಕಾರ

100 ಕ್ಕೂ ಹೆಚ್ಚು ಸ್ವಯಂಸೇವಕರು ದೇವಸ್ಥಾನವನ್ನು 5.16 ಕೋಟಿ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳಿಂದ ಅಲಂಕರಿಸಿದ್ದಾರೆ. ಇದಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. 2,000, 500, 200 ರೂ, 100 ರೂ, 50 ರೂ. ಮತ್ತು 10 ರೂ. ಮುಖಬೆಲೆಯ ನೋಟುಗಳನ್ನು ದೇವಿಯ ಅಲಂಕಾರಕ್ಕಾಗಿ ಬಳಸಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಕನ್ನಿಕಾ ಪರಮೇಶ್ವರಿ ದೇವಸ್ಥಾನವನ್ನು 11 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಅಂದಿನಿಂದ ನವರಾತ್ರಿ ದಸರಾ ಆಚರಣೆಯನ್ನು ಪ್ರತಿವರ್ಷ ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ.

ಇದನ್ನೂ ಓದಿ: Durga Puja: ನವರಾತ್ರಿಯ ಆರನೇ ದಿನ ಕೆಂಪು ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

ಆಫ್ರಿಕಾದ ಜೀವನಶೈಲಿಗೆ ವೇದಿಕೆಯಾದ ದಸರಾ ಬೊಂಬೆಗಳು; ದಂಪತಿ ವಿಶೇಷ ಆಸಕ್ತಿಗೆ ಸಾಕ್ಷಿಯಾದ ದಸರಾ