Mysore Dasara: ಮಂಡ್ಯದ ಮಂಗಲ ಗ್ರಾಮದಲ್ಲಿ ಸಮಾನ ಮನಸ್ಕರ ಒಕ್ಕೂಟದಿಂದ ಮಹಿಷಾಸುರನಿಗೆ ಪೂಜೆ, ಮೈಸೂರಲ್ಲೂ ಪೂಜೆ ಸಲ್ಲಿಸುವ ಸಂಕಲ್ಪ!
Mysore Dasara: ನಾವು ಮೈಸೂರುನವರಾಗಿದ್ದರೂ, ಶೂದ್ರ, ಬುಡಕಟ್ಟು ಜನಾಂಗದವರು ಮಹಿಷನಿಗೆ ಪೂಜೆ ಸಲ್ಲಿಸಬಾರದೆಂದು ಪಟ್ಟಭದ್ರ ಹಿತಾಸಕ್ತಿಗಳು ಪಟ್ಟು ಹಿಡಿದಿವೆ, ಚಾಮುಂಡೇಶ್ವರಿಗೆ ಪೂಜೆ ಸಲ್ಲುವಂತೆಯೇ ಮಹಿಷನಿಗೂ ಪೂಜೆ ಸಲ್ಲಬೇಕೆನ್ನುವುದು ನಮ್ಮ ವಾದ ಎಂದು ಹೇಳುತ್ತಾರೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪೂಜೆ ಸಲ್ಲಿಸಲು ಮೈಸೂರು ಜಿಲ್ಲಾಡಳಿತ ಅವಕಾಶ ನೀಡಿಲ್ಲ ಆದರೆ ಬೇರೆ ಸ್ಥಳದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಮಂಡ್ಯ: ಕಳೆದೆರಡು ವಾರಗಳಿಂದ ಮಹಿಷ ಉತ್ಸವ (Mahisha Utsav) ಚರ್ಚೆಯಲ್ಲಿದೆ. ಮೈಸೂರು ದಸರಾ ಉತ್ಸವ ಸಂದರ್ಭದಲ್ಲಿ ನಾಡದೇವತೆ ಚಾಮುಂಡೇಶ್ವರಿ (Chamundeshwari) ಪೂಜೆ ಸಲ್ಲುವ ಹಾಗೆ ಮಹಿಷಾಸುರನಿಗೆ ಪೂಜೆ ಸಲ್ಲಬೇಕೆಂದು ಒಂದು ವರ್ಗ ಪಟ್ಟಹಿಡಿದಿದೆ. ಆದರೆ ಮೈಸೂರಲ್ಲಿ Mysuru) ಮಹಿಷನಿಗೆ ಪೂಜೆ ಸಲ್ಲಿಸುವುದನ್ನು ತಡೆಯಲು ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ. ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದ ಸಮಾನ ಮನಸ್ಕ ಒಕ್ಕೂಟದ ಸದಸ್ಯರು ಇಂದು ಬೆಳಗ್ಗೆ ಮಹಿಷನಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರಲ್ಲದೆ ಮೈಸೂರಿಗೆ ತೆರಳಿ ಅಲ್ಲೂ ಮಹಿಷಾಸುರನಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಸಂಕಲ್ಪ ತೊಟ್ಟಿದ್ದಾರೆ. ಟಿವಿ ಕನ್ನಡ ವಾಹಿನಿಯ ಮಂಡ್ಯ ಒಕ್ಕೂಟದ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರೊಂದಿಗೆ ಮಾತಾಡಿದ ಸದಸ್ಯರೊಬ್ಬರು, ಮೈಸೂರು-ಮಂಡ್ಯ ಪ್ರಾಂತ್ಯದ ಇತಿಹಾಸವನ್ನು ವಿವರಿಸುತ್ತಾರೆ. ನಾವು ಮೈಸೂರುನವರಾಗಿದ್ದರೂ, ಶೂದ್ರ, ಬುಡಕಟ್ಟು ಜನಾಂಗದವರು ಮಹಿಷನಿಗೆ ಪೂಜೆ ಸಲ್ಲಿಸಬಾರದೆಂದು ಪಟ್ಟಭದ್ರ ಹಿತಾಸಕ್ತಿಗಳು ಪಟ್ಟು ಹಿಡಿದಿವೆ, ಚಾಮುಂಡೇಶ್ವರಿಗೆ ಪೂಜೆ ಸಲ್ಲುವಂತೆಯೇ ಮಹಿಷನಿಗೂ ಪೂಜೆ ಸಲ್ಲಬೇಕೆನ್ನುವುದು ನಮ್ಮ ವಾದ ಎಂದು ಹೇಳುತ್ತಾರೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪೂಜೆ ಸಲ್ಲಿಸಲು ಮೈಸೂರು ಜಿಲ್ಲಾಡಳಿತ ಅವಕಾಶ ನೀಡಿಲ್ಲ ಆದರೆ ಬೇರೆ ಸ್ಥಳದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ