Mysore Dasara: ಮಾವುತರಿಗೆ ಬಡಿಸುವ ಭರದಲ್ಲಿ ಒಬ್ಬಟ್ಟು ಟ್ರೇಯನ್ನು ನೆಲಕ್ಕೆ ಬೀಳಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!

|

Updated on: Oct 23, 2023 | 6:16 PM

Mysore Dasara: ಕೆಮೆರಾಗಳ ಅವರೇನೋ ತಿರುಗಿದರು ಆದರೆ ಟ್ರೇಯನ್ನು ಊಟದ ಮೇಜಿನ ಮೇಲಿಟ್ಟು ಬಡಿಸುವ ಪ್ರಯತ್ನದಲ್ಲಿ ಟ್ರೇಯನ್ನು ದೊಪ್ಪನೆ ನೆಲಕ್ಕೆ ಬೀಳಿಸಿದರು! ಸುಮಾರು ಒಬ್ಬಟ್ಟು ಮಣ್ಣು ಪಾಲಾದವು! ಅಸಹನೆಯೊಂದಿಗೆ ಕೋಪ ಉಮ್ಮಳಿಸಿದರೂ ಸಚಿವೆ ಅದನ್ನು ತೋರ್ಪಡಿಸಿಕೊಳ್ಳದೆ ಬಡಿಸುವುದು ಮುಂದುವರಿಸಿದರು-ಅದರೆ ಈ ಬಾರಿ ತಮ್ಮ ಹಿಂದಿದ್ದ ವ್ಯಕ್ತಿಯ ನೆರವಿನೊಂದಿಗೆ!

ಮೈಸೂರು: ದೊಡ್ಡವರಿಂದಲೂ ಕೆಲವು ಸಲ ಎಡವಟ್ಟುಗಳಾಗಿತ್ತಿರುತ್ತವೆ. ಇಂದು ಬೆಳಗ್ಗೆ ಅರಮನೆ ಆವರಣದಲ್ಲಿ ಮಾವುತ ಮತ್ತು ಕಾವಾಡಿಗರಿಗೆ ತಿಂಡಿ ಬಡಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಮಧ್ಯಾಹ್ನ ಊಟ ಸಹ ಬಡಿಸಲು ಮುಂದಾದರು. ಬಿಸಿ ಬಿಸಿ ಒಬ್ಬಟ್ಟುಗಳಿದ್ದ (holige) ಒಂದು ಟ್ರೇಯನ್ನು ಅವರಿಗೆ ನೀಡಲಾಗಿತ್ತು. ಮೊದಲಿಗೆ ಟ್ರೇ ಹಿಡಿಯಲು ಅವರ ಹಿಂದೆ ಇದ್ದ ವ್ಯಕ್ತಿಯೊಬ್ಬರು ನೆರವಾಗಿದ್ದರು. ಆದರೆ ಪಿಂಕ್ ಫ್ರಾಕ್ ಧರಿಸಿದ ಹೆಣ್ಣುಮಗುವೊಂದು (little girl clad in pink frock) ರಸ್ತೆಯಲ್ಲಿ ಅಡ್ಡ ನಿಂತಿದ್ದರಿಂದ ಶೋಭಾ ತಾವೊಬ್ಬರೇ ಹೋಳಿಗೆ ಬಡಿಸಲು ಮುಂದಾದರು. ಆದರೆ ಒಬ್ಬಟ್ಟುಗಳಿದ್ದ ಟ್ರೇ ಅವರಂದುಕೊಂಡಷ್ಟು ಹಗರವಾಗಿರಲಿಲ್ಲ. ಎಡಗೈಯಲ್ಲಿ ಟ್ರೇ ಹಿಡಿದು ಬಲಗೈಯಿಂದ ಒಬ್ಬಟ್ಟು ಊಟದೆಲೆಗಳಿಗೆ ಹಾಕುವುದು ಅವರಿಗೆ ಸಾಧ್ಯವಾಗಲಿಲ್ಲ. ಅದಲ್ಲದೆ, ಕೆಮೆರಾಗಳಿಗೆ ಬೆನ್ನು ಮಾಡಿದ್ದ ಶೋಭಾ ಅವರಿಗೆ, ಮೇಡಂ ಈ ಕಡೆ ತಿರುಗಿ ಮಾಧ್ಯಮದವರು ಪದೇಪದೆ ಹೇಳಿದರು. ಕೈಯಲ್ಲಿ ಭಾರದ ಟ್ರೇ ಹಿಡಿದಿದ್ದ ಅವರಿಗೆ ಏನು ಮಾಡೋದು ಏನು ಬಿಡೋದು ತೋಚದಾಯಿತು. ಕೆಮೆರಾಗಳ ಅವರೇನೋ ತಿರುಗಿದರು ಆದರೆ ಟ್ರೇಯನ್ನು ಊಟದ ಮೇಜಿನ ಮೇಲಿಟ್ಟು ಬಡಿಸುವ ಪ್ರಯತ್ನದಲ್ಲಿ ಟ್ರೇಯನ್ನು ದೊಪ್ಪನೆ ನೆಲಕ್ಕೆ ಬೀಳಿಸಿದರು! ಸುಮಾರು ಒಬ್ಬಟ್ಟು ಮಣ್ಣು ಪಾಲಾದವು! ಅಸಹನೆಯೊಂದಿಗೆ ಕೋಪ ಉಮ್ಮಳಿಸಿದರೂ ಸಚಿವೆ ಅದನ್ನು ತೋರ್ಪಡಿಸಿಕೊಳ್ಳದೆ ಬಡಿಸುವುದು ಮುಂದುವರಿಸಿದರು-ಅದರೆ ಈ ಬಾರಿ ತಮ್ಮ ಹಿಂದಿದ್ದ ವ್ಯಕ್ತಿಯ ನೆರವಿನೊಂದಿಗೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ