ಅರಮನೆಯ ಆಯುಧ ಮತ್ತು ವಾಹನಗಳಿಗೆ ಯದುವೀರ್ ಪೂಜೆ ಸಲ್ಲಿಸುವುದನ್ನು ಆಸ್ಥೆ ಮತ್ತು ಕುತೂಹಲದಿಂದ ವೀಕ್ಷಿಸಿದ ಪುಟಾಣಿ ಆದ್ಯವೀರ್

|

Updated on: Oct 23, 2023 | 4:31 PM

Mysore Dasara: ಪುಟಾಣಿ ಆದ್ಯವೀರ್ ಗೆ ಪೂಜೆಯ ಪ್ರತಿಯೊಂದು ಆಯಾಮದ ಬಗ್ಗೆ ತೀವ್ರ ಕುತೂಹಲ. ತನಗೆ ಗೊತ್ತಾಗದ ಸಂಗತಿಗಳನ್ನು ಅವನು ಅಜ್ಜಿಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದಾನೆ. ಪ್ರಮೋದಾ ದೇವಿಯವರು ಮೊಮ್ಮಗನ ಪ್ರಶ್ನೆಗಳಿಗೆ ಉತ್ತರ ಹೇಳುತ್ತಾ ತ್ರಿಷಿಕಾ ಜೊತೆ ಗಹನವಾದ ಚರ್ಚೆ ನಡೆಸುತ್ತಿದ್ದಾರೆ. ರಾಜಮಾತೆ ಹೇಳುವುದನ್ನು ತ್ರಿಷಿಕಾ ಆಸ್ಥೆಯಿಂದ ಕೇಳಿಸಿಕೊಳ್ಳುತ್ತಾರೆ.

ಮೈಸೂರು: ಒಡೆಯರ್ ಅರಸೊತ್ತಿಗೆಯಿಂದ ಅರಮನೆಯಲ್ಲಿ ಆಯುಧ ಪೂಜೆ (Ayudha Puje) ವಿಧಿವಿಧಾನಗಳು ಅದ್ದೂರಿಯಾಗಿ ನೆರವೇರಿಸಲ್ಪಡುತ್ತಿವೆ. ಪಟ್ಟದ ಖಡ್ಗ, ಪಟ್ಟದ ಆನೆ, ಕುದುರೆ ಮತ್ತು ಹಸುಗಳಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishna Dutta Chamaraja Wodeyar) ಅರ್ಚಕರ ಜೊತೆ ಪೂಜೆ ಮಾಡುವುದನ್ನು ಅರಮನೆ ಮಹಡಿಯ ಬಾಲ್ಕನಿಯೊಂದರಿಂದ ಮೂರು ತಲೆಮಾರಿನ ಪ್ರತಿನಿಧಿಗಳು ನಿಂತು ವೀಕ್ಷಿಸುತ್ತಿದ್ದಾರೆ! ರಾಜಮಾತೆ ಪ್ರಮೋದಾ ದೇವಿ (Rajmatha Pramoda Devi), ಯದುವೀರ್ ಧರ್ಮಪತ್ನಿ ತ್ರಿಷಿಕಾ ಒಡೆಯರ್ (Trishika Wodeyar) ಮತ್ತು ಯದುವೀರ್-ತ್ರಿಷಿಕಾ ದಂಪತಿ ಮಗ ಆದ್ಯವೀರ್ (Aadyaveer) ಅವರನ್ನು ಬಾಲ್ಮಿಯಲ್ಲಿ ನೋಡಬಹುದು. ಪುಟಾಣಿ ಆದ್ಯವೀರ್ ಗೆ ಪೂಜೆಯ ಪ್ರತಿಯೊಂದು ಆಯಾಮದ ಬಗ್ಗೆ ತೀವ್ರ ಕುತೂಹಲ. ತನಗೆ ಗೊತ್ತಾಗದ ಸಂಗತಿಗಳನ್ನು ಅವನು ಅಜ್ಜಿಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದಾನೆ. ಪ್ರಮೋದಾ ದೇವಿಯವರು ಮೊಮ್ಮಗನ ಪ್ರಶ್ನೆಗಳಿಗೆ ಉತ್ತರ ಹೇಳುತ್ತಾ ತ್ರಿಷಿಕಾ ಜೊತೆ ಗಹನವಾದ ಚರ್ಚೆ ನಡೆಸುತ್ತಿದ್ದಾರೆ. ರಾಜಮಾತೆ ಹೇಳುವುದನ್ನು ತ್ರಿಷಿಕಾ ಆಸ್ಥೆಯಿಂದ ಕೇಳಿಸಿಕೊಳ್ಳುತ್ತಾರೆ. ಪಟ್ಟದ ಖಡ್ಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಅರಮನೆಯಲ್ಲಿರುವ ಎಲ್ಲ ಶಸ್ತ್ರಗಳಿಗೆ ಮತ್ತು ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ