ಜೀವನದಲ್ಲಿ ಸಂತೋಷವನ್ನು ಕಾಣಲು ನಾವು ಲಕ್ಷ್ಮಿ ದೇವಿಯ ಆಶೀರ್ವಾದ ಬೇಕೆಬೇಕು. ಮನೆಯಲ್ಲಿ ಶಾಂತಿ, ನೆಮ್ಮದಿಯ ಜೀವನ ನಡೆಸಲು ಲಕ್ಷ್ಮಿ ಆಶೀರ್ವದಿಸಬೇಕು. ಶಾಂತಿಯಿರುವ ಮನೆಗೆ ಮಾತ್ರ ಲಕ್ಷಿ ಪ್ರವೇಶಿಸುತ್ತಾಳೆ. ಕೆಲವು ಅಜಾರೂಕತೆಯಿಂದ ಮನೆಗೆ ದೋಷಗಳು ತಗುಲಿರಬಹುದು. ಹೀಗಿರುವಾಗ ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಬೇಕು ಅಂದಾದರೆ ಮನೆಯಲ್ಲಿನ ಕೆಲವು ದೋಷಗಳು ಹಾಗೂ ಮನೆಯ ಸದಸ್ಯರ ಮನಸ್ಥಿತಿ ಬದಲಾಗಬೇಕು. ಈ ಕೆಲವು ವಿಷಯಗಳ ಕುರಿತಾಗಿ ಗಮನವಹಿಸುವುದರ ಮೂಲಕ ನೀವು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬಹುದು.
*ಲಕ್ಷ್ಮಿ ದೇವಿ ನಿಮ್ಮ ಮನೆಯ ಮುಖ್ಯ ದ್ವಾರದಿಂದ ಆಗಮಿಸುತ್ತಾಳೆ. ಹಾಗಿರುವಾಗ ನಿಮ್ಮ ಮನೆಯ ಎದುರಿನ ಬಾಗಿಲಿನ ವಾಸ್ತು ದೋಷವನ್ನು ನಿವಾರಣೆ ಮಾಡಬೇಕು. ಪ್ರತಿನಿತ್ಯವೂ ಸಹ ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸುವ ಮೂಲಕ ಅರಿಶಿಣ ಕುಂಕುಮ ಹಚ್ಚಿ ಪೂಜಿಸುವ ಮೂಲಕ ಲಕ್ಷ್ಮಿ ದೇವಿಯು ಮನೆಗೆ ಪ್ರವೇಶಿಸುತ್ತಾಳೆ.
*ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮಿ ವಾಸಿಸುತ್ತಾಳೆ. ಹಾಗಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಮನೆಯನ್ನು ಸ್ವಚ್ಛಗೊಳಿಸುವುದರಿಂದ ನಿಮ್ಮ ಮನೆಯ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾಕಾಲವಿರುತ್ತದೆ.
*ನೀವು ಸಂಪತ್ತಿನ ಗಳಿಕೆಯಲ್ಲಿ ಭಾಗಿಯಾಗಿದ್ದರೆ ಲಕ್ಷ್ಮಿ ದೇವಿಯ ಕುರಿತಾದ ಪೂಜಾ ಕಾರ್ಯಕ್ರಮಗಳನ್ನು ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿ. ಇದಕ್ಕಾಗಿ ಪೂಜಾ ಸ್ಥಳದ ಶುದ್ಧತೆ ಮತ್ತು ಶ್ರದ್ಧೆಯ ಬಗೆಗೆ ಗಮನಹರಿಸಬೇಕು. ನಿಮ್ಮ ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಪ್ರತಿಮೆ ಅಥವಾ ಫೊಟೋ ಸದಾಕಾಲವಿರಲಿ. ಜತೆಗೆ ಪ್ರತಿನಿತ್ಯವೂ ಪೂಜಿಸುವ ಅಭ್ಯಸವಿರಲಿ.
*ನಿಮ್ಮ ಕಾಲುಗಳಿಂದ ಪೊರಕೆ ಕಡ್ಡಿಯನ್ನು ಎಂದಿಗೂ ತುಳಿಯಬೇಡಿ. ಜತೆಗೆ ಹೊರಗಿನಿಂದ ಬರುವ ಅತಿಥಿಗಳಿಗೆ ಎದುರಾಗಿ ಪೊರಕೆ ಇಡುವ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ.
ಇದನ್ನೂ ಓದಿ: