Chanakya: ಹೊಸ ವರ್ಷದ ಹೊಸ್ತಿಲಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಆಚಾರ್ಯ ಚಾಣಕ್ಯನ ಈ ಮಾತು ಆಲಿಸಿ, ಅನುಸರಿಸಿ

| Updated By: ಸಾಧು ಶ್ರೀನಾಥ್​

Updated on: Dec 22, 2021 | 6:06 AM

ಚಾಣಕ್ಯ ನೀತಿ ಪ್ರಕಾರ ಯೋಚಿಸಿ, ತರ್ಕಿಸಿದ ಬಳಿಕವಷ್ಟೇ ಹಣ ಖರ್ಚು ಮಾಡಬೇಕು. ನಿಮ್ಮನ್ನು ಕಷ್ಟ ಕಾಲದಲ್ಲಿ ಕೈಹಿಡಿಯಲು ಹಣದ ಅವಶ್ಯಕತೆ ಬಹಳಷ್ಟು ಇರುತ್ತದೆ. ಕಷ್ಟ ಕಾಲದಲ್ಲಿ ಯಾರೇ ಕೈಬಿಟ್ಟರೂ ಹಣ ನಿಮ್ಮ ಕೈಹಿಡಿಯಬಲ್ಲದು. ಅದುವೇ ನಿಮಗೆ ಊರುಗೋಲು ಆದೀತು. ಹೊಸ ವರ್ಷದ ಹೊಸ್ತಿಲಲ್ಲಿ ಹಣ ಉಳಿಸುವ ಬಗ್ಗೆ ಯೋಜನೆ ರೂಪಿಸಿಕೊಳ್ಳಿ. ಅದರಿಂದ 2022ನೇ ವರ್ಷ ನಿಮಗೆ ಒಳಿತಾಗುತ್ತದೆ.

Chanakya: ಹೊಸ ವರ್ಷದ ಹೊಸ್ತಿಲಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಆಚಾರ್ಯ ಚಾಣಕ್ಯನ  ಈ ಮಾತು ಆಲಿಸಿ, ಅನುಸರಿಸಿ
ಹೊಸ ವರ್ಷದ ಹೊಸ್ತಿಲಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಆಚಾರ್ಯ ಚಾಣಕ್ಯನ ಈ ಮಾತುಗಳನ್ನು ಆಲಿಸಿ, ಅನುಸರಿಸಿ
Follow us on

ಆಚಾರ್ಯ ಚಾಣಕ್ಯ ತನ್ನ ಗ್ರಂಥ ನೀತಿಯಲ್ಲಿ ನಾಲ್ಕು ಸಂಗತಿಗಳನ್ನು ವರ್ಣಿಸಿದ್ದಾರೆ (Chanakya Niti in Kannada). ಅದನ್ನು ಚಾಚೂತಪ್ಪದೆ ಪಾಲಿಸಿದರೆ ವ್ಯಕ್ತಿತ್ವದ ವಿಕಸನವಾಗಿ ಆ ವ್ಯಕ್ತಿಯ ಜೀವನದಲ್ಲಿ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ. ದೌರ್ಭಾಗ್ಯ ಆ ವ್ಯಕ್ತಿಯನ್ನು ಕಾಡುತ್ತಿದ್ದರೆ ಅದರಿಂದ ಮುಕ್ತಿ ದೊರೆತು, ಜೀವನ ಸುಗಮಗೊಂಡು- ಸುಸೂತ್ರವಾಗಿ ಸಾಗುತ್ತದೆ! ವ್ಯಕ್ತಿ ಯಾರೇ ಆಗಿರಲಿ ಕಠಿಣ ಪರಿಶ್ರಮದಿಂದಷ್ಟೆ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯ. ಶ್ರಮ ಹಾಕಿಲ್ಲವೆಂದರೆ ಏನೂ ಸಾಧಿಸಲು ಆಗದು. ಅದೇ ವೇಳೆ ಜೀವನದಲ್ಲಿ ಕಠಿಣ ಪರಿಶ್ರಮ ಹಾಕಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಕಠಿಣ ಪರಿಶ್ರಮದ ಜೊತೆಜೊತೆಗೆ ಅದೃಷ್ಟದ ಭಾಗ್ಯ ಸಾಥ್​ ನೀಡಿದರೆ ಯಶಸ್ಸು ಎಂಬುದು ಬೇಗನೆಯೇ ಕೈಹಿಡಿಯುತ್ತದೆ. ಅಂದರೆ ಅಂತಹ ಪರಿಶ್ರಮ ಜೀವಿಗಳಿಗೆ ಯಾವುದೇ ಅಡ್ಡಿ ಆತಂಕ, ಬಾಧೆಗಳು ಕಾಡದೆ ಜೀವನದಲ್ಲಿ ಯಶಸ್ಸು ಕೈಗೂಡುತ್ತದೆ. ಈ ನಿಟ್ಟಿನಲ್ಲಿ ಆಚಾರ್ಯ ಚಾಣಕ್ಯ ಕೆಲವೊಂದು ನೀತಿ ನಿಯಮಗಳ ಪಾಲನೆ ಅವಶ್ಯ ಎಂಬುದನ್ನು ಮನದಟ್ಟುಪಡಿಸುತ್ತಾರೆ (Chanakya Niti For Motivation).

ಚಾಣಕ್ಯ ನೀತಿಯ ಪ್ರಕಾರ ಜೀವನದಲ್ಲಿ ವೈಫಲ್ಯ ಅನುಭವಿಸಿದಾಗ ಅದರಿಂದ ಆತಂಕಗೊಳ್ಳುವ ಅವಶ್ಯಕತೆಯಿಲ್ಲ. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಮೆಟ್ಟಿ ನಿಂತಾಗಲೇ ಸಾಫಲ್ಯತೆ ಎಂಬುದು ಅನುಭವಕ್ಕೆ ಬರುವುದು. ಹೊಸ ವರ್ಷದ ಹೊಸ್ತಿಲಲ್ಲಿ ಇರುವಾಗ ಜೀವನದಲ್ಲಿ ಯಾವುದೇ ಸಂಕಷ್ಟ ಎದರಾದರೂ ಅದರಿಂದ ನೊಂದುಕೊಳ್ಳದೆ ಆಚಾರ್ಯ ಚಾಣಕ್ಯನ ಈ ಮಾತುಗಳನ್ನು ಆಲಿಸಿ, ಅನುಸರಿಸಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಯಾವುದೇ ದುರ್ಬಲ ಗಳಿಗೆಯಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಆತ್ಮವಿಶ್ವಾಸದಿಂದ ಇರುವುದೇ ನಿಮಗೆ ಊರುಗೋಲಾದೀತು. ಆತ್ಮವಿಶ್ವಾಸ ಇಲ್ಲದಿದ್ದರೆ ಅರ್ಧ ಯುದ್ಧ ಸೋತಂತೆ.

ಸಮಯದ ಮಹಾತ್ಮೆ:
ಚಾಣಕ್ಯ ನೀತಿಯ ಪ್ರಕಾರ ಸಮಯ ಬಹಳ ಅಮೂಲ್ಯ ನಿಧಿ. ಜೀವನದಲ್ಲಿ ಪ್ರತಿ ಕ್ಷಣವೂ ಮಹತ್ವಪೂರ್ಣ. ಹಾಗಾಗಿ ಸಮಯವನ್ನು ಎಂದಿಗೂ ಹಾಳು ಮಾಡಬೇಡಿ. ಪ್ರತಿಕ್ಷಣವೂ ಜೀವನದಲ್ಲಿ ಏನಾದರೊಂದು ಮಾಡಲೇ ಬೇಕು ಅಂದುಕೊಂಡು ಅದನ್ನು ಅನುಸರಿಸಿದರೆ ಜೀವನದಲ್ಲಿ ಸದಾ ಸಾಫಲ್ಯತೆಯನ್ನು ಕಾಣಬಹುದು.

ನಿಂದಿಸುವುದು:
ಆಚಾರ್ಯ ಚಾಣಕ್ಯನ ಹಿತೋಪದೇಶವನ್ನು ಆಲಿಸಿ, ಪಾಲಿಸುವುದೇ ಆದರೆ ಬೇರೆಯವರ ನಿಂದನೆ ಮಾಡುವುದನ್ನು ಮೊದಲು ಬಿಡಬೇಕು. ನಿಂದನೆಗೆ ಒಳಗಾಗಲೂ ಬಾರದು ಮತ್ತು ನಿಂದನೆ ಮಾಡಲೂ ಬಾರದು. ನಿಂದನೆ ಮಾಡುವುದು ಯಶಸ್ಸು ಗಳಿಸುವುದಕ್ಕೆ ಬಾಧಕವಾಗಿರುತ್ತದೆ. ನಿಂದನೆಯಿಂದ ತುಂಬಿರುವ ಮನಸ್ಸು ನಕಾರಾತ್ಮಕತೆಯನ್ನು ಪಸರಿಸುತ್ತದೆ. ಇದರಿಂದ ಮಾನಸಿಕ ಕ್ಷೋಭೆ ಉತ್ಪತ್ತಿಯಾಗುತ್ತದೆ. ಮನಸ್ಸು ಅಶಾಂತಿಯ ಸರೋವರ ಆಗಿಬಿಡುತ್ತದೆ. ಅವಗುಣಗಳಿಂದ ಮುಕ್ತವಾದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಅಂತಹ ಮನಸ್ಸಿನೊಂದಿಗೆ ಯಾವುದೇ ಕೆಲಸಕ್ಕೆ ಕೈಹಾಕಿದರೂ ಯಶಸ್ಸು ಕಟ್ಟಿಟ್ಟಬುತ್ತಿ. ಆದ್ದರಿಂದ ಹೊಸ ವರ್ಷದ ಸಂದರ್ಭದಲ್ಲಿ ನಿಂದನೆಯನ್ನು ಬಿಡುವ ಮನಸ್ಸು ಮಾಡಿ.

ಹಣ ಉಳಿಸುವುದು:
ಚಾಣಕ್ಯ ನೀತಿ ಪ್ರಕಾರ ಯೋಚಿಸಿ, ತರ್ಕಿಸಿದ ಬಳಿಕವಷ್ಟೇ ಹಣವನ್ನು ಖರ್ಚು ಮಾಡಬೇಕು. ಕಷ್ಟ ಕಾಲದಲ್ಲಿ ನಿಮ್ಮನ್ನು ಕೈಹಿಡಿಯಲು ಹಣದ ಅವಶ್ಯಕತೆ ಬಹಳಷ್ಟು ಇರುತ್ತದೆ. ಕಷ್ಟ ಕಾಲದಲ್ಲಿ ಎಲ್ಲರೂ ನಿಮ್ಮ ಕೈ ಬಿಟ್ಟು ಹೋಗಬಹುದು, ಆಗ ಹಣ ನಿಮ್ಮ ಕೈಹಿಡಿಯುತ್ತದೆ. ಅದುವೇ ನಿಮಗೆ ಊರುಗೋಲು ಆಗುತ್ತದೆ. ಹಾಗಾಗಿ ಹಣ ಖರ್ಚು ಮಾಡುವ ಮೊದಲು ಯೋಚಿಸಿ, ಖರ್ಚು ಮಾಡಿ. ಜೊತೆಗೆ ಹೊಸ ವರ್ಷದ ಹೊಸ್ತಿಲಲ್ಲಿ ಹಣ ಉಳಿಸುವ ಬಗ್ಗೆ ಯೋಜನೆ ರೂಪಿಸಿಕೊಳ್ಳಿ. ಅದರಿಂದ 2022 ನೇ ವರ್ಷ ನಿಮಗೆ ಒಳಿತಾಗುತ್ತದೆ.

ಇದನ್ನೂ ಓದಿ:
ಬಾಳೆಹಣ್ಣಿನ ಸಿಪ್ಪೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಇದನ್ನು ಬಳಸುವ ಕ್ರಮ ಹೀಗಿದೆ ನೋಡಿ

Women Health: ಮಹಿಳೆಯರಲ್ಲಿನ ಈ ನಾಲ್ಕು ಆರೋಗ್ಯ ಸಮಸ್ಯೆಗಳಿಗೆ ಹಸಿ ಈರುಳ್ಳಿ ಸೇವನೆಯಿಂದ ಸಿಗಲಿದೆ ಪರಿಹಾರ!