Peepal Tree: ಮನೆಗೆ ಅಂಟಿಕೊಂಡು ಅರಳಿ ಮರ ಬೆಳೆದಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಹಾಗಾದರೆ ಯಾವ ದಿನದಂದು, ಹೇಗೆ ಆ ಸಸ್ಯವನ್ನು ಕಿತ್ತುಹಾಕಬೇಕು?

|

Updated on: Sep 17, 2023 | 6:06 AM

ಅರಳಿ ಮರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಮರದಲ್ಲಿ ಬ್ರಹ್ಮ, ವಿಷ್ಣು, ಶಿವ ನೆಲೆಸಿದ್ದಾರೆ ಎಂಬುದು ನಂಬಿಕೆ. ಅಷ್ಟೇ ಏಕೆ ಭಾರತದ ಸರ್ವೋತ್ಕೃಷ್ಟ ಭಾರತ ರತ್ನ ಪುರಸ್ಕಾರವನ್ನು ಇದೇ ಅರಳಿ ಮರದ ಎಲೆಯ ಮೇಲೆ ಕೆತ್ತನೆ ಮಾಡಲಾಗಿದೆ. ಇಂತಹ ಅರಳಿ ಮರ ಗೋಡೆಗಳು, ಚಾವಣಿಯಲ್ಲೂ ಬೆಳೆಯುತ್ತದೆ. ಹೀಗೆ ಬೆಳೆದ ಮರವನ್ನು ಏನು ಮಾಡುವುದು?

Peepal Tree: ಮನೆಗೆ ಅಂಟಿಕೊಂಡು ಅರಳಿ ಮರ ಬೆಳೆದಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಹಾಗಾದರೆ ಯಾವ ದಿನದಂದು, ಹೇಗೆ ಆ ಸಸ್ಯವನ್ನು ಕಿತ್ತುಹಾಕಬೇಕು?
Peepal Tree: ಮನೆಗೆ ಅಂಟಿಕೊಂಡು ಅರಳಿ ಮರ ಬೆಳೆದಿದ್ದರೆ ನಿರ್ಲಕ್ಷ್ಯ ಮಾಡಬೇಡಿ
Follow us on

ಹಿಂದೂ ಧರ್ಮದಲ್ಲಿ ಅರಳಿ ಮರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಅರಳಿ ಮರದಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವ ನೆಲೆಸಿದ್ದಾರೆ ಎಂಬುದು ನಂಬಿಕೆ. ಈ ಮರದ ಬಗ್ಗೆ ಪುರಾಣ ಗ್ರಂಥಗಳಲ್ಲಿ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅಷ್ಟೇ ಏಕೆ ಭಾರತದ ಸರ್ವೋತ್ಕೃಷ್ಟ ಭಾರತ ರತ್ನ (Bharat Ratna) ಪುರಸ್ಕಾರವನ್ನು ಇದೇ ಅರಳಿ ಮರದ ಎಲೆಯ ಮೇಲೆ ಕೆತ್ತನೆ ಮಾಡಲಾಗಿದೆ. ಇಂತಹ ಅರಳಿ ಮರ ಎಲ್ಲೆಲ್ಲೂ ಬೆಳೆಯುತ್ತದೆ. ಇದು ನೆಲದ ಮೇಲೆ ಮಾತ್ರವಲ್ಲದೆ ಮನೆಯ ಗೋಡೆಗಳು ಮತ್ತು ಚಾವಣಿಯಲ್ಲೂ ಬೆಳೆಯುತ್ತದೆ. ಹೀಗೆ ಬೆಳೆದ ಮರವನ್ನು ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ?

ಅರಳಿ ಮರವನ್ನು ಮನೆಯಲ್ಲಿ ಬೆಳೆಸುವುದು ವಾಸ್ತು ಪ್ರಕಾರ ಅಶುಭ. ಅರಳಿ ಮರದಲ್ಲಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯಿಂದ ಬಹಳ ಭಕ್ತಿಯಿಂದ ಪೂಜಿಸಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅರಳಿ ಮರ ಇರುವುದು ಸರಿಯಲ್ಲ. ಈ ಮರವನ್ನು ಮನೆಯಲ್ಲಿ ಬೆಳೆಸುವುದು ಅಶುಭ. ಹಾಗಾಗಿ ಮನೆಯಲ್ಲಿ ಈ ಮರ ಬೆಳೆಯುತ್ತಿದ್ದರೆ ತಕ್ಷಣ ಕಿತ್ತುಹಾಕಿ.

ಇದನ್ನೂ ಓದಿ: ಪರ್ಸ್‌ನಲ್ಲಿ ಈ ವಸ್ತುಗಳು ಇದ್ದರೆ ಮನೆಯಲ್ಲಿ ಬಡತನ ನುಸುಳಿದಂತೆಯೆ! ಎಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ಹದಗೆಡಬಹುದು

ಸಾಮಾನ್ಯವಾಗಿ ಅರಳಿ ಮರವು ಮನೆಯ ಛಾವಣಿಯ ಮೇಲೆ ಅಥವಾ ಗೋಡೆಯ ಬಿರುಕುಗಳಲ್ಲಿ ಬೆಳೆಯುತ್ತದೆ. ನೀವು ಎಷ್ಟು ಬಾರಿ ತೆಗೆದರೂ ಈ ಮರವು ಬೆಳೆಯುತ್ತಲೇ ಇದ್ದರೆ ಈ ಸರಳ ಸಲಹೆಗಳನ್ನು ಅನುಸರಿಸಿ. ಸ್ವಲ್ಪ ಬೆಳೆದ ನಂತರ ಮರವನ್ನು ಮಣ್ಣಿನ ಮಟ್ಟದಿಂದ ತೆಗೆದು ಬೇರೆ ಜಾಗದಲ್ಲಿ, ದೇವಸ್ಥಾನದಲ್ಲಿ ಅಥವಾ ರಸ್ತೆಬದಿಯಲ್ಲಿ ನೆಡಬೇಕು.

ಮನೆಯಲ್ಲಿ ಅರಳಿ ಮರದ ಉಪಸ್ಥಿತಿಯು ಮನೆಯ ಸದಸ್ಯರಿಗೆ ಪ್ರಗತಿಯನ್ನು ತರುವುದಿಲ್ಲ. ಪ್ರತಿದಿನ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದರೆ ಅರಳಿ ಮರವನ್ನು ಕಡಿಯಬಾರದು.. ಹಾಗೆ ಮಾಡುವುದು ಅಶುಭ. ಅದನ್ನು ಅಗೆದು ಬೇರೆ ಪ್ರದೇಶದಲ್ಲಿ ನೆಡಬೇಕು. ಅರಳಿ ಮರವನ್ನು ತಪ್ಪದೇ ಕಡಿಯಬೇಕಾದರೆ ಭಾನುವಾರ ಪೂಜೆಯ ನಂತರವೇ ಕಡಿಯಬೇಕು.

Also read: ಮಕ್ಕಳ ಅಧ್ಯಯನಕ್ಕಾಗಿ ವಾಸ್ತು ಸಲಹೆಗಳು: ಮಕ್ಕಳು ಏಕಾಗ್ರತೆಯಿಂದ ವ್ಯಾಸಂಗ ಮಾಡಲು ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು?

ನಿಮ್ಮ ಮನೆಯಲ್ಲಿ ಆಗಾಗ ಅರಳಿ ಮರ ಬೆಳೆಯುತ್ತಿದ್ದರೆ.. ಆ ಮರವನ್ನು 45 ದಿನ ಪೂಜಿಸಿ.. ಹಸಿ ಹಾಲನ್ನು ನೈವೇದ್ಯವಾಗಿ ಅರ್ಪಿಸಿ, 45 ದಿನಗಳ ನಂತರ ಅರಳಿ ಗಿಡವನ್ನು ಬೇರು ಸಮೇತ ತೆಗೆದು ಬೇರೆ ಜಾಗದಲ್ಲಿ ನೆಡಬೇಕು. ಹೀಗೆ ಮಾಡುವುದರಿಂದ ವಾಸ್ತು ದೋಷಗಳು ಇರುವುದಿಲ್ಲ.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.