Ganesh Chaturthi 2023: ಗಣೇಶ ಚತುರ್ಥಿಯಂದು ಯಾವ ಮಂತ್ರ ಪಠಣ ಮಾಡಬೇಕು? ಅದರಿಂದ ಸಿಗುವ ಫಲಾಫಲಗಳೇನು?

ಭಗವಂತ ಗಣೇಶನು ಬುದ್ಧಿವಂತಿಕೆ ಮತ್ತು ಜ್ಞಾನದ ಅರಿವನ್ನು ಹೆಚ್ಚಿಸುತ್ತಾನೆ, ಮತ್ತು ಅವನ ಪೂಜಿಸುವುದರಿಂದ ಜೀವನದಲ್ಲಿ ಯಾವುದೇ ಅಡೆತಡೆಗಳು ಬಂದರೂ ಸುಲಭವಾಗಿ ಅದನ್ನು ತೊಡೆದು ಹಾಕಲು ಸಹಾಯ ಮಾಡುತ್ತಾನೆ ಎಂದು ನಂಬಲಾಗಿದೆ. ಎಲ್ಲ ವರ್ಷದಂತೆ ಈ ವರ್ಷವೂ ಹಬ್ಬ ಆಚರಣೆ ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದದ್ದು ಸಾಮಾನ್ಯ. ಜೊತೆಗೆ ಯಾವ ಮಂತ್ರ ಪಠಣ ಮಾಡಬೇಕು? ಅದರ ಫಲಾಫಲಗಳೇನು? ಎಂಬುದನ್ನು ಕೂಡ ತಿಳಿದುಕೊಳ್ಳಬೇಕಾಗಿದೆ.

Ganesh Chaturthi 2023: ಗಣೇಶ ಚತುರ್ಥಿಯಂದು ಯಾವ ಮಂತ್ರ ಪಠಣ ಮಾಡಬೇಕು? ಅದರಿಂದ ಸಿಗುವ ಫಲಾಫಲಗಳೇನು?
Ganesh Chaturthi 2023Image Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Sep 19, 2023 | 9:59 AM

ಹಿಂದೂ ಧರ್ಮದಲ್ಲಿ ಯಾವುದೇ ದೇವರನ್ನು ಪೂಜಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ, ಭಗವಂತ ಗಣೇಶನು ಬುದ್ಧಿವಂತಿಕೆ ಮತ್ತು ಜ್ಞಾನದ ಅರಿವನ್ನು ಹೆಚ್ಚಿಸುತ್ತಾನೆ, ಮತ್ತು ಅವನ ಪೂಜಿಸುವುದರಿಂದ ಜೀವನದಲ್ಲಿ ಯಾವುದೇ ಅಡೆತಡೆಗಳು ಬಂದರೂ ಸುಲಭವಾಗಿ ಅದನ್ನು ತೊಡೆದು ಹಾಕಲು ಸಹಾಯ ಮಾಡುತ್ತಾನೆ ಎಂದು ನಂಬಲಾಗಿದೆ. ಎಲ್ಲ ವರ್ಷದಂತೆ ಈ ವರ್ಷವೂ ಹಬ್ಬ ಆಚರಣೆ ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದದ್ದು ಸಾಮಾನ್ಯ. ಜೊತೆಗೆ ಯಾವ ಮಂತ್ರ ಪಠಣ ಮಾಡಬೇಕು? ಅದರ ಫಲಾಫಲಗಳೇನು? ಎಂಬುದನ್ನು ಕೂಡ ತಿಳಿದುಕೊಳ್ಳಬೇಕಾಗಿದೆ.

  • “ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರೂ ಮೇ ದೇವ ಸರ್ವಕಾರ್ಯೇಷು ಸರ್ವದಾ”

ಈ ಮಂತ್ರವನ್ನು ಪಠಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ಜೀವನದಲ್ಲಿ ಬರುವ ಅಡೆತಡೆಗಳನ್ನು ತೊಡೆದು ಹಾಕುವಲ್ಲಿ ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ಮಂತ್ರವಾಗಿದೆ. ಈ ಮಂತ್ರದ ನಿಯಮಿತವಾದ ಪಠಣವು ಎಲ್ಲಾ ರೀತಿಯ ಒಳ್ಳೆಯ ಅವಕಾಶಗಳನ್ನು ನಿಮಗೆ ನೀಡುತ್ತದೆ. ಗಣೇಶನನ್ನು ಬುದ್ಧಿವಂತಿಕೆ ಮತ್ತು ಜ್ಞಾನದ ಅಧಿಪತಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಭಕ್ತಿಯಿಂದ ಪಠಿಸುವುದರಿಂದ ಸಾಧಕನಿಗೆ ಸಾಕಷ್ಟು ಜ್ಞಾನವನ್ನು ಒದಗಿಸುತ್ತದೆ.

  • “ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್‌”

ಗಣೇಶ ಗಾಯತ್ರಿ ಮಂತ್ರವನ್ನು ಶುದ್ಧ ಮನಸ್ಸಿನಿಂದ ಪಠಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನಿಯಮಿತವಾಗಿ ಈ ಮಂತ್ರವನ್ನು ಪಠಿಸಲು ಶಿಫಾರಸು ಮಾಡಲಾಗಿದೆ. ಏಕೆಂದರೆ ಇದು ಅವರ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಅವರ ದೇಹವನ್ನು ಆರೋಗ್ಯವಾಗಿಡುತ್ತದೆ. ಜೊತೆಗೆ ಎಲ್ಲಾ ರೀತಿಯಲ್ಲಿಯೂ ನೆಮ್ಮದಿ ಮತ್ತು ಶಾಂತತೆಯನ್ನು ನೀಡುತ್ತದೆ. ಗಣೇಶ ಗಾಯತ್ರಿ ಮಂತ್ರವನ್ನು ಸಂಪತ್ತನ್ನು ಪಡೆಯಲು ವ್ಯಾಪಕವಾಗಿ ಬಳಸಲಾಗುತ್ತದೆ.

  • ”ಓಂ ಗಂ ಗಣಪತಯೇ ನಮಃ”

ಹೊಸ ಉದ್ಯಮವನ್ನು ಪ್ರಾರಂಭಿಸುವ ಮೊದಲು, ಈ ಮಂತ್ರವನ್ನು ಭಕ್ತಿಯಿಂದ ಪಠಿಸಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಏಕೆಂದರೆ ಇದು ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯನ್ನಾದರೂ ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಬರಮಾಡಿಕೊಳ್ಳಲು ನಿಮ್ಮ ಮನಸ್ಸನ್ನು ಸಿದ್ಧಗೊಳಿಸುತ್ತದೆ. ಯಾವುದೇ ವೃತ್ತಿಪರ ಕೆಲಸವನ್ನು ಮಾಡುವಾಗ ಈ ಮಂತ್ರದ ನಿರಂತರ ಪಠಣವು ತುಂಬಾ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ವೈಫಲ್ಯಕ್ಕೆ ಕಾರಣವಾಗುವ ಎಲ್ಲಾ ದುಷ್ಟ ಶಕ್ತಿಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಈ ಶುಭ ಸಂದೇಶಗಳನ್ನು ಕಳುಹಿಸುವ ಮೂಲಕ ಗಣೇಶ ಚತುರ್ಥಿಯಂದು ನಿಮ್ಮ ಪ್ರೀತಿಪಾತ್ರರಿಗೆ ಶುಭ ಹಾರೈಸಿ

  • “ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ”

ಅತ್ಯಂತ ಪರಿಣಾಮಕಾರಿ ಮಂತ್ರಗಳಲ್ಲಿ ಒಂದಾದ ಗಣೇಶ ಮೂಲ ಮಂತ್ರವು ತುಂಬಾ ಶಕ್ತಿಯುತವಾಗಿದೆ ಮತ್ತು ಅದನ್ನು ಪಠಿಸುವುದರಿಂದ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಪದಗಳನ್ನು ಉಚ್ಚರಿಸುವ ರೀತಿ ಮತ್ತು ಪಠಿಸಿದಾಗ ಅದು ಧ್ವನಿಸುವ ರೀತಿ, ನಿಮ್ಮಲ್ಲಿ ಸಂಚಲವನ್ನು ಉಂಟುಮಾಡುತ್ತದೆ. ಗಣೇಶನ ಮೂಲ ಮಂತ್ರವನ್ನು ಪೂಜೆ ಮತ್ತು ಯಜ್ಞಗಳ ಸಮಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಮಂತ್ರವನ್ನು ಸಂಪೂರ್ಣ ನಂಬಿಕೆ ಮತ್ತು ಭಕ್ತಿಯಿಂದ ಪಠಿಸಿದಾಗ, ಪ್ರದರ್ಶಕನಿಗೆ (ಭಕ್ತನಿಗೆ) ಯಶಸ್ಸು ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ.

  • “ಓಂ ವಿಘ್ನವಿನಾಶಕಾಯ ನಮಃ”

ಒಬ್ಬ ವ್ಯಕ್ತಿಯು ತನ್ನ ಸಾಮಾಜಿಕ ಜೀವನದಲ್ಲಿ, ಕೆಲಸದಲ್ಲಿ ಅಥವಾ ಪರಸ್ಪರ ಸಂಬಂಧಗಳೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಮಂತ್ರವನ್ನು ಪಠಿಸುವ ಮೂಲಕ ಅದನ್ನು ಪರಿಹರಿಸಿಕೊಳ್ಳಬಹುದು. ಈ ಮಂತ್ರವನ್ನು ಪಠಿಸುವುದರಿಂದ ಪ್ರಬುದ್ಧತೆ ಹೆಚ್ಚಾಗುವುದಲ್ಲದೇ, ತಿಳುವಳಿಕೆಯನ್ನು ಪಡೆಯುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:15 am, Sun, 17 September 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್