Ganesh Chaturthi Wishes: ಈ ಶುಭ ಸಂದೇಶಗಳನ್ನು ಕಳುಹಿಸುವ ಮೂಲಕ ಗಣೇಶ ಚತುರ್ಥಿಯಂದು ನಿಮ್ಮ ಪ್ರೀತಿಪಾತ್ರರಿಗೆ ಶುಭ ಹಾರೈಸಿ

ಗಣೇಶ ಚತುರ್ಥಿಗಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಗಣೇಶ ಚತುರ್ಥಿಯ ದಿನದಂದು ಜನರು ಬಪ್ಪನನ್ನು ಬಹಳ ವಿಜೃಂಭನೆಯಿಂದ ಪೂಜಿಸುತ್ತಾರೆ. ಅಷ್ಟೇ ಅಲ್ಲ ಜನರು ಈ ಹಬ್ಬದಂದು ತಮ್ಮ ಪ್ರೀತಿಪಾತ್ರರಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವ ಮೂಲಕ ಪರಸ್ಪರ ಶುಭಹಾರೈಸುತ್ತಾರೆ. ನೀವೂ ಕೂಡಾ ನಿಮ್ಮ ಪ್ರೀತಿಪಾತ್ರರಿಗೆ ಈ ಕೆಲವು ಶುಭ ಸಂದೇಶಗಳನ್ನು ಕಳುಹಿಸುವ ಮೂಲಕ ಹಬ್ಬಕ್ಕೆ ಶುಭ ಹಾರೈಕೆಯನ್ನು ಕೋರಬಹುದು.

Ganesh Chaturthi Wishes: ಈ ಶುಭ ಸಂದೇಶಗಳನ್ನು ಕಳುಹಿಸುವ ಮೂಲಕ ಗಣೇಶ ಚತುರ್ಥಿಯಂದು ನಿಮ್ಮ ಪ್ರೀತಿಪಾತ್ರರಿಗೆ ಶುಭ ಹಾರೈಸಿ
Ganesh Chaturthi WishesImage Credit source: Pinterest
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Sep 19, 2023 | 10:00 AM

ಪ್ರತಿವರ್ಷ ಗಣೇಶ ಚತುರ್ಥಿ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜನರು ತಮ್ಮ ಮನೆಯಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಗಣೇಶನನ್ನು ಪೂಜಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ಲಭಿಸುತ್ತದೆ ಹಾಗೂ ಎಲ್ಲಾ ವಿಘ್ನಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಈ ಹಬ್ಬದಂದು ಮೋದಕ ಸೇರಿದಂತೆ ಗಣೇಶನಿಗೆ ಪ್ರಿಯವಾದ ತಿನಿಸುಗಳನ್ನು ಮನೆಯಲ್ಲಿ ತಯಾರಿಸಿ ನೈವೇದ್ಯ ರೂಪದಲ್ಲಿ ಅರ್ಪಿಸಿ, ಸಕಲ ಕಷ್ಟಗಳನ್ನು ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಷ್ಟೇ ಅಲ್ಲ ಜನರು ಈ ಹಬ್ಬದ ದಿನದಂದು ತಮ್ಮ ಪ್ರೀತಿಪಾತ್ರರಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವ ಮೂಲಕ ಪರಸ್ಪರ ಶುಭಹಾರೈಸುತ್ತಾರೆ. ನೀವೂ ಕೂಡಾ ನಿಮ್ಮ ಪ್ರೀತಿಪಾತ್ರರಿಗೆ ಈ ಕೆಲವು ಶುಭ ಸಂದೇಶಗಳನ್ನು ಕಳುಹಿಸುವ ಮೂಲಕ ಹಬ್ಬಕ್ಕೆ ಶುಭ ಹಾರೈಕೆಯನ್ನು ಕೋರಬಹುದು.

ಗಣೇಶ ಚತುರ್ಥಿಯ ಶುಭಹಾರೈಕೆಗಳು:

  • ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವಾ ಸರ್ವ ಕರ್ಯೇಷು ಸರ್ವದಾ ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿಯ ಶುಭ ಹಾರೈಕೆಗಳು
  • ಏಕದಂತನ ಆಶೀರ್ವಾದವು ಸದಾ ನಿಮ್ಮ ಮೇಲೆ ಇರಲಿ, ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ನಿಮಗೆ ಯಶಸ್ವಿ ಸಿಗಲಿ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
  • ಓಂ ಗಂ ಗಣಪತಯೇ ನಮಃ … ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿ ನಿಮ್ಮ ಎಲ್ಲಾ ಆಸೆಗಳು ಈಡೇರಲಿ, ನಿಮ್ಮ ಮನೆ ಮನದಲ್ಲಿ ಗಣೇಶ ನೆಲೆಸಲಿ ಗಣೇಶ ಚತುರ್ಥಿಯ ಶುಭಾಶಯಗಳು
  • ಈ ಗೌರಿ ಗಣೇಶ ಹಬ್ಬ ಸರ್ವರಿಗೂ ಸಮೃದ್ಧಿ, ಸಂಪತ್ತು, ಆಯುರಾರೋಗ್ಯ, ಸಂತೋಷವನ್ನು ತರಲಿ ಎಂದು ಹಾರೈಸುತ್ತೇನೆ.

ಇದನ್ನೂ ಓದಿ: ಗಣೇಶನ ನೈವೇದ್ಯಕ್ಕಾಗಿ ತಯಾರಿಸಿ ಸಾಂಪ್ರದಾಯಿಕ ಶೈಲಿಯ ಮೋದಕ

  • ಗಜಾನನಂ ಭೂತ ಗಾಣಾಧಿ ಸೇವಿತಂ ಕಪಿಥ ಜಂಬೋ ಫಲ ಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ ಪಾದ ಪಂಕಜಂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
  • ಗಣೇಶ ನಿಮಗೂ ನಿಮ್ಮ ಕುಟುಂಬದವರಿಗೂ ಆರೋಗ್ಯ ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ ಗಣೇಶ ಚತುರ್ಥಿಯ ಶುಭಾಶಯಗಳು
  • ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನ ವದನಂ ಧ್ಯಾಯೇ ಸರ್ವ ವಿಘ್ನೋಪ ಶಾಂತಯೇ ಈ ಶುಭ ದಿನ ಏಕದಂತ ನಿಮ್ಮ ಎಲ್ಲಾ ನೋವು ಮತ್ತು ದುಃಖವನ್ನು ದೂರ ಮಾಡಿ ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸಲಿ ಗಣೇಶ ಚತುರ್ಥಿಯ ಶುಭಾಶಯಗಳು
  • ವಿಘ್ನ ನಿವಾರಕನು ಎಲ್ಲರ ಬಾಳಲ್ಲೂ ಸುಖ, ಶಾಂತಿ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ ಗೌರಿ ಗಣೇಶ ಹಬ್ಬದ ಶುಭಾಶಯಗಳು
  • ಓಂ ಏಕದಂತಾಯ ವಿಧ್ಮಹೆ ವಕ್ರತುಂಡಾಯ ಧೀಮಹಿ ತನ್ನೋದಂತಿ ಪ್ರಚೋದಯತ್ ಗಣೇಶನ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದವರ ಮೇಲಿರಲಿ ಗಣೇಶ ಚತುರ್ಥಿಯ ಶುಭಾಶಯಗಳು
  • ವಿಘ್ನ ನಿವಾರಕ ಗಣೇಶ ನಿಮ್ಮ ಎಲ್ಲಾ ಕಷ್ಟಗಳನ್ನು ದೂರಮಾಡಲಿ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು
  • ಗೌರಿ ಪುತ್ರನ ಜೀವನ ಪಾಠವನ್ನು ನೀವು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಿ ಗಣಪತಿಯ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 6:10 pm, Sat, 16 September 23

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?