ಪರ್ಸ್‌ನಲ್ಲಿ ಈ ವಸ್ತುಗಳು ಇದ್ದರೆ ಮನೆಯಲ್ಲಿ ಬಡತನ ನುಸುಳಿದಂತೆಯೆ! ಎಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ಹದಗೆಡಬಹುದು
ನಿಮ್ಮ ವಾಲೆಟ್‌ನಲ್ಲಿ ಜೀವಂತ ಅಥವಾ ಸತ್ತವರ ಫೋಟೋಗಳನ್ನು ಎಂದಿಗೂ ಒಯ್ಯಬೇಡಿ. ವಾಸ್ತು ಪ್ರಕಾರ ಯಾವುದೇ ದೇವರ ವಿಗ್ರಹವನ್ನು ಪರ್ಸ್‌ನಲ್ಲಿ ಇಡಬಾರದು. ಈ ರೀತಿಯ ಫೋಟೋಗಳು ಮತ್ತು ಚಿತ್ರಗಳು ಪರ್ಸ್ ನಲ್ಲಿದ್ದರೆ ಅಶುಭ ಎನ್ನುತ್ತಾರೆ ತಜ್ಞರು. ಹಣವನ್ನು ಎಂದಿಗೂ ಪರ್ಸ್‌ನಲ್ಲಿ ಸಡಿಲವಾಗಿ ಇಡಬಾರದು.
ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಹಣಕಾಸು ಕೆಲಸಗಳು ಡಿಜಿಟಲ್ ವಹಿವಾಟಿನಲ್ಲಿ ನಡೆದುಹೋಗುತ್ತದೆ. ಆದಾಗ್ಯೂ, ಅನೇಕ ಜನರು ಪರ್ಸ್ ಬಳಸುತ್ತಾರೆ. ಈ ಪರ್ಸ್‌ನಲ್ಲಿ ಹಣ, ನಾಣ್ಯಗಳು, ವಿವಿಧ ಬಿಲ್‌ಗಳು ಮತ್ತು ಫೋಟೋಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ವಾಸ್ತು ಪ್ರಕಾರ ಪರ್ಸ್‌ನಲ್ಲಿ ಕೆಲವು ರೀತಿಯ ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ. ಏಕೆಂದರೆ ಪರ್ಸ್ ಹಣವನ್ನಷ್ಟೇ ಇಡುವ ಸ್ಥಳವಾಗಿದೆ. ಅಂದರೆ ಅದು ಲಕ್ಷ್ಮಿ ದೇವಿಯ ವಾಸಸ್ಥಾನವಾಗಿದೆ. ಈ ಕಾರಣಕ್ಕಾಗಿಯೇ ಪರ್ಸ್‌ನಲ್ಲಿ ಬೀಳುವ ಯಾವುದೇ ವಸ್ತುಗಳನ್ನು ಇಡಬಾರದು. ಹಾಗೆ ಇಡುವುದರಿಂದ ಅದೃಷ್ಟದ ಬದಲು ದುರಾದೃಷ್ಟ ಹೆಚ್ಚುತ್ತದೆ, ಸಾಲದ ಹೊರೆ, ಕೌಟುಂಬಿಕ ಕಲಹಗಳು ತಲೆದೋರುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು. ಹಾಗಾಗಿ ಪರ್ಸ್ ನಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದನ್ನು ಈಗ ತಿಳಿದುಕೊಳ್ಳೋಣ…
ವಾಸ್ತು ಶಾಸ್ತ್ರದ ಪ್ರಕಾರ, ನೀವು ತಪ್ಪಾಗಿಯೂ ನಿಮ್ಮ ಪರ್ಸ್‌ನಲ್ಲಿ ಹಳೆಯ ಬಿಲ್ ಗಳನ್ನು ಇಡಬಾರದು. ಇವು ನಿಮ್ಮ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅನವಶ್ಯಕ ವಸ್ತುಗಳನ್ನು ಹಣ ಶೇಖರಿಸುವ ಸ್ಥಳದಲ್ಲಿ ಅಥವಾ ಪರ್ಸ್ ನಲ್ಲಿ ಹಾಕಿದರೆ ಮಹಾಲಕ್ಷ್ಮಿಗೆ ಅಹಿತವಾಗುತ್ತದೆ ಎನ್ನುತ್ತಾರೆ ತಜ್ಞರು. ಈ ಲಕ್ಕಾಚಾರದಲ್ಲಿ ಹಳೆಯ ಬಿಲ್‌ಗಳು ಸಹ ತ್ಯಾಜ್ಯವಾಗಿರುವುದರಿಂದ, ತಕ್ಷಣ ಅವನ್ನು ಅಲ್ಲಿಂದ ತೆಗೆದುಬಿಡಿ.
ನಿಮ್ಮ ವಾಲೆಟ್‌ನಲ್ಲಿ ಜೀವಂತ ಅಥವಾ ಸತ್ತವರ ಫೋಟೋಗಳನ್ನು ಎಂದಿಗೂ ಒಯ್ಯಬೇಡಿ. ವಾಸ್ತು ಪ್ರಕಾರ ಯಾವುದೇ ದೇವರ ವಿಗ್ರಹವನ್ನು ಪರ್ಸ್‌ನಲ್ಲಿ ಇಡಬಾರದು. ಈ ರೀತಿಯ ಫೋಟೋಗಳು ಮತ್ತು ಚಿತ್ರಗಳು ಪರ್ಸ್ ನಲ್ಲಿದ್ದರೆ ಅಶುಭ ಎನ್ನುತ್ತಾರೆ ತಜ್ಞರು. ಹಣವನ್ನು ಎಂದಿಗೂ ಪರ್ಸ್‌ನಲ್ಲಿ ಸಡಿಲವಾಗಿ ಇಡಬಾರದು. ವಾಲೆಟ್‌ನಲ್ಲಿ ಹಣವನ್ನು ಸರಿಯಾಗಿ ಅಂದರೆ ನೋಟುಗಳು ಮತ್ತು ನಾಣ್ಯಗಳನ್ನು ಪ್ರತ್ಯೇಕವಾಗಿ ಇಡುವುದು ಯಾವಾಗಲೂ ಉತ್ತಮ.
ವಾಸ್ತುಶಾಸ್ತ್ರದ ಪ್ರಕಾರ ಪರ್ಸ್‌ನಲ್ಲಿ ಮನೆ ವಾಹನದ ಕೀಲಿಗಳನ್ನು ಇಡಬಾರದು. ಪರ್ಸ್‌ನಲ್ಲಿ ಕೀಲಿಗಳನ್ನು ಇಟ್ಟುಕೊಳ್ಳುವುದು ಬಡತನಕ್ಕೆ ಕಾರಣವಾಗುತ್ತದೆ. ಆದ್ದರಿಂದ ತಪ್ಪಾಗಿಯೂ ನಿಮ್ಮ ಪರ್ಸ್‌ನಲ್ಲಿ ಕೀಲಿಗಳನ್ನು ಇಟ್ಟುಕೊಳ್ಳಬೇಡಿ. ಕಿ ಇಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ವಾಸ್ತುಶಾಸ್ತ್ರದ ಪ್ರಕಾರ, ಹರಿದ ನೋಟುಗಳನ್ನು ಎಂದಿಗೂ ಪರ್ಸ್‌ನಲ್ಲಿ ಇಡಬಾರದು. ನಿಮ್ಮ ವ್ಯಾಲೆಟ್‌ನಲ್ಲಿ ಈಗಾಗಲೇ ಹರಿದ ನೋಟು ಇದ್ದರೆ, ತಕ್ಷಣ ಅದನ್ನು ತೆಗೆದುಬಿಡಿ. ಹರಿದ ಪರ್ಸ್ ಸಹ ಬಳಸಬಾರದು. ಹರಿದ ಪರ್ಸ್ ಇಟ್ಟುಕೊಂಡರೆ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ.
ವಾಸ್ತು ಪ್ರಕಾರ, ಎರವಲು (ಸಾಲ) ಪಡೆದ ಹಣವನ್ನು ಸಹ ಪರ್ಸ್‌ನಲ್ಲಿ ಇಡಬಾರದು. ಎರವಲು ಪಡೆದ ಹಣವನ್ನು ವಾಲೆಟ್ ನಲ್ಲಿಟ್ಟರೆ ಸಾಲದ ಹೊರೆ ಹೆಚ್ಚಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುತ್ತಾರೆ ತಜ್ಞರು.
ಇನ್ನು ಕೊನೆಯದಾಗಿ, ನೀವು ಖರೀದಿಸಿದ ಅಥವಾ ನಿಮಗೆ ಯಾರಾದರೂ ಗಿಫ್ಟ್ ನೀಡಿದ್ದರೆ ಅಂತಹ ಪರ್ಸ್‌ನಲ್ಲಿ ಮಾತ್ರವೇ ಹಣವನ್ನು ಇಟ್ಟುಕೊಳ್ಳಿ.
ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:48 pm, Sat, 16 September 23