ಜಿಡಿಪಿ ಸಂಬಂಧಿತ ಅನುಮಾನಗಳಿಗೆ ಉತ್ತರ ನೀಡಿದ ಹಣಕಾಸು ಸಚಿವಾಲಯ; ಇಲ್ಲಿದೆ ವಿವರ

ವಿವಿಧ ಕಾರಣಗಳಿಗಾಗಿ ಜಿಡಿಪಿ ಬೆಳವಣಿಗೆಯನ್ನು ಲೆಕ್ಕಾಚಾರ ಮಾಡಲು ಭಾರತವು ಆದಾಯದ ವಿಧಾನವನ್ನು ಸತತವಾಗಿ ಬಳಸುತ್ತದೆ. ಯಾವುದು ಅನುಕೂಲಕರವಾಗಿದೆ ಎಂಬುದರ ಆಧಾರದ ಮೇಲೆ ಇದನ್ನು ಬದಲಾಯಿಸುವುದಿಲ್ಲ. ನಾಮಿನಲ್ ಜಿಡಿಪಿ ಬೆಳವಣಿಗೆಯು ರಿಯಲ್ ಜಿಡಿಪಿ ಬೆಳವಣಿಗೆಗಿಂತ ಕಡಿಮೆಯಾಗಿದೆ. ಇದು ಜಿಡಿಪಿ ಸಂಖ್ಯೆಗಳನ್ನು ತಿರುಚಲು ಮತ್ತು ಆರ್ಥಿಕ ಚಟುವಟಿಕೆಯು ಸಾಕಷ್ಟು ದುರ್ಬಲವಾಗಿದೆ ಎಂದು ಸೂಚಿಸಲು ಮಾಡಿರುವ ಹೊಸ ತಂತ್ರವಾಗಿದೆ ಎಂದು ಸಚಿವಾಲಯ ಹೇಳಿದೆ.

ಜಿಡಿಪಿ ಸಂಬಂಧಿತ ಅನುಮಾನಗಳಿಗೆ ಉತ್ತರ ನೀಡಿದ ಹಣಕಾಸು ಸಚಿವಾಲಯ; ಇಲ್ಲಿದೆ ವಿವರ
ಜಿಡಿಪಿ
Follow us
| Edited By: ಗಣಪತಿ ಶರ್ಮ

Updated on: Sep 15, 2023 | 10:57 PM

ನವದೆಹಲಿ, ಸೆಪ್ಟೆಂಬರ್ 15: ದೇಶದ ಜಿಡಿಪಿ ದತ್ತಾಂಶಗಳಿಗೆ (GDP Data) ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ನಿವಾರಿಸಲು ಮುಂದಾಗಿರುವ ಹಣಕಾಸು ಸಚಿವಾಲಯ (Finance Ministry) ಸಾಮಾಜಿಕ ಮಾಧ್ಯಮ ಎಕ್ಸ್​​ ಮೂಲಕ ವಿವರಣೆ ನೀಡಿದೆ. ಜಿಡಿಪಿ ಡೇಟಾಗೆ ಸಂಬಂಧಿಸಿದಂತೆ ಕೆಲವು ವಿಭಾಗಗಳಿಂದ ಪ್ರಶ್ನೆಗಳು ಕೇಳಿಬಂದಿವೆ. ಆ ಕುರಿತು ಸ್ಪಷ್ಟತೆ ಮೂಡಿಸುವ ದೃಷ್ಟಿಯಿಂದ ಅವುಗಳನ್ನು ಇಲ್ಲಿ ವಿವರಿಸಲಾಗಿದೆ ಎಂದು ಸಚಿವಾಲಯ ಟ್ವೀಟ್​​ನಲ್ಲಿ ಉಲ್ಲೇಖಿಸಿದೆ.

ಹಣಕಾಸು ಸಚಿವಾಲಯದ ಟ್ವೀಟ್​ನಲ್ಲೇನಿದೆ?

24ನೇ ಹಣಕಾಸು ವರ್ಷದಲ್ಲಿ (FY 2023-24 ರ ಮೊದಲ ತ್ರೈಮಾಸಿಕ) ಭಾರತದ ರಿಯಲ್ ಟೈಂ ಜಿಡಿಪಿ ಬೆಳವಣಿಗೆಯು ಶೇ 7.8 (ವಾರ್ಷಿಕ ಲೆಕ್ಕಾಚಾರ ಪ್ರಕಾರ) ಆಗಿತ್ತು. ಇದು ಆದಾಯ ಅಥವಾ ಉತ್ಪಾದನಾ ವಿಧಾನದ ಪ್ರಕಾರ ಹಾಕಿರುವ ಲೆಕ್ಕಾಚಾರವಾಗಿದೆ. ವೆಚ್ಚದ ವಿಧಾನದ ಲೆಕ್ಕಾಚಾರ ಪ್ರಕಾರ, ಇದು ಕಡಿಮೆ ಇರುತ್ತಿತ್ತು. ಆದ್ದರಿಂದ, ವೆಚ್ಚದ ವಿಧಾನದ ಅಂದಾಜಿಗೆ ಸಮತೋಲನದ ಅಂಕಿ – ಸಂಖ್ಯಾಶಾಸ್ತ್ರೀಯ ವ್ಯತ್ಯಾಸವನ್ನು ಸೇರಿಸಲಾಗುತ್ತದೆ. ಈ ವ್ಯತ್ಯಾಸಗಳು ಧನಾತ್ಮಕ ಮತ್ತು ಋಣಾತ್ಮಕವಾಗಿವೆ. ಕಾಲಾನಂತರದಲ್ಲಿ, ಅವುಗಳನ್ನು ತೆರವುಗೊಳಿಸಲಾಗುತ್ತದೆ. ವಾಸ್ತವವಾಗಿ, 23 ಮತ್ತು 22ನೇ ಹಣಕಾಸು ವರ್ಷದಲ್ಲಿ ‘ಸಂಖ್ಯಾಶಾಸ್ತ್ರೀಯ ವ್ಯತ್ಯಾಸ’ ಋಣಾತ್ಮಕವಾಗಿತ್ತು. ಅಂದರೆ, ಆದಾಯದ ವಿಧಾನದ ಪ್ರಕಾರ ಬೆಳವಣಿಗೆ ಕಡಿಮೆಯಾಗಿತ್ತು. ವೆಚ್ಚದ ವಿಧಾನವನ್ನು ಬಳಸಿಕೊಂಡು, ಇದು 23 ನೇ ಹಣಕಾಸು ವರ್ಷಕ್ಕೆ ವರದಿಯಾದ ಶೇ 7.2 ಕ್ಕಿಂತ ಹೆಚ್ಚಾಗಿರುತ್ತದೆ ಮತ್ತು 22ನೇ ಹಣಕಾಸು ವರ್ಷಕ್ಕೆ 9.1ಕ್ಕಿಂತ ಹೆಚ್ಚಾಗಿರುತ್ತದೆ. ಈ ಬಗ್ಗೆ ಕಳೆದ ವಾರ ಹಣಕಾಸು ಸಚಿವಾಲಯದ ಅಧಿಕಾರಿಗಳು ಇದನ್ನು ಚೆನ್ನಾಗಿ ವಿವರಿಸಿದ್ದಾರೆ ಎಂದು ಸಚಿವಾಲಯದ ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ವಿವಿಧ ಕಾರಣಗಳಿಗಾಗಿ ಜಿಡಿಪಿ ಬೆಳವಣಿಗೆಯನ್ನು ಲೆಕ್ಕಾಚಾರ ಮಾಡಲು ಭಾರತವು ಆದಾಯದ ವಿಧಾನವನ್ನು ಸತತವಾಗಿ ಬಳಸುತ್ತದೆ. ಯಾವುದು ಅನುಕೂಲಕರವಾಗಿದೆ ಎಂಬುದರ ಆಧಾರದ ಮೇಲೆ ಇದನ್ನು ಬದಲಾಯಿಸುವುದಿಲ್ಲ. ನಾಮಿನಲ್ ಜಿಡಿಪಿ ಬೆಳವಣಿಗೆಯು ರಿಯಲ್ ಜಿಡಿಪಿ ಬೆಳವಣಿಗೆಗಿಂತ ಕಡಿಮೆಯಾಗಿದೆ. ಇದು ಜಿಡಿಪಿ ಸಂಖ್ಯೆಗಳನ್ನು ತಿರುಚಲು ಮತ್ತು ಆರ್ಥಿಕ ಚಟುವಟಿಕೆಯು ಸಾಕಷ್ಟು ದುರ್ಬಲವಾಗಿದೆ ಎಂದು ಸೂಚಿಸಲು ಮಾಡಿರುವ ಹೊಸ ತಂತ್ರವಾಗಿದೆ. ಇವು ಎರಡೂ ಪರಿಶೀಲನೆಗೆ ಬರುವುದಿಲ್ಲ ಎಂದು ಸಚಿವಾಲಯ ಹೇಳಿದೆ.

ಭಾರತದ ಜಿಡಿಪಿ ಡಿಫ್ಲೇಟರ್ (ಉತ್ಪನ್ನಗಳಿಗೆ ಒಂದು ನಿರ್ದಿಷ್ಟ ಅವಧಿಯಲ್ಲಿ ಬೆಲೆಗಳಲ್ಲಿನ ಬದಲಾವಣೆಯನ್ನು ವ್ಯಕ್ತಪಡಿಸುವ ಅಂಕಿ ಅಂಶ) ಸಗಟು ಬೆಲೆ ಸೂಚ್ಯಂಕದಿಂದ ಪ್ರಾಬಲ್ಯ ಹೊಂದಿದೆ. 2022-23ರ ಮೊದಲ ತ್ರೈಮಾಸಿಕದಲ್ಲಿ ಸಗಟು ಬೆಲೆ ಸೂಚ್ಯಂಕವು ಉಕ್ರೇನ್‌ನಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಉತ್ತುಂಗಕ್ಕೇರಿತು. ಇದಕ್ಕೆ ತೈಲ ಮತ್ತು ಆಹಾರದ ಬೆಲೆ ಹೆಚ್ಚಳ ಮತ್ತು ಪೂರೈಕೆ-ಭಾಗದ ಅಡೆತಡೆಗಳು ಕಾರಣವಾಗಿದ್ದವು. ಆಗಸ್ಟ್ 2022 ರಿಂದ ಬೆಲೆಗಳು ಕಡಿಮೆಯಾಗಲು ಪ್ರಾರಂಭಿಸಿದವು. ಆದ್ದರಿಂದ, ಈಗ ಸಗಟು ಬೆಲೆ ಸೂಚ್ಯಂಕವು vಆರ್ಷಿಕ ಆಧಾರದಲ್ಲಿ ಕಡಿಮೆಯಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಹಣದುಬ್ಬರವು ಅಧಿಕವಾಗಿದ್ದರೆ, ಅದರಿಂದಾಗಿ ನಾಮಿನಲ್ ಜಿಡಿಪಿ ಬೆಳವಣಿಗೆಯು ಹೆಚ್ಚಾಗಿರುತ್ತದೆ. ಹಣಕಾಸು ಚಟುವಟಿಕೆಗಳು ಕಡಿಮೆಯಾಗುತ್ತವೆ ಎಂದು ವಿಮರ್ಶಕರು ವಾದಿಸುತ್ತಾರೆ. ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು (MoSPI) ತ್ರೈಮಾಸಿಕ ನಿವ್ವಳ ಮೌಲ್ಯವನ್ನು (GVA) ಮೊದಲು ರಿಯಲ್​ ಟೈಮ್​​ನಲ್ಲಿ ಲೆಕ್ಕಾಚಾರ ಮಾಡುತ್ತದೆ ಮತ್ತು ನಂತರ, ಡಿಫ್ಲೇಟರ್ ಬಳಸಿ, ನಾಮಿನಲ್ ಮೌಲ್ಯಗಳನ್ನು ಪಡೆಯಲಾಗುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಸಗಟು ಸೂಚ್ಯಂಕ ಕಡಿಮೆಯಾಗುವುದರೊಂದಿಗೆ ನಾಮಿನಲ್ ಗ್ರೋತ್ ದರಗಳು ನಿಧಾನವಾಗುವುದರಲ್ಲಿ ಆಶ್ಚರ್ಯವಿಲ್ಲ. ಮುಂಬರುವ ತಿಂಗಳುಗಳಲ್ಲಿ ಇದು ಸಾಮಾನ್ಯವಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಆದ್ದರಿಂದ, ನಾಮಿನಲ್ ಜಿಡಿಪಿ ಬೆಳವಣಿಗೆಯು ಹೆಚ್ಚು ವಿಶ್ವಾಸಾರ್ಹವಾಗಿದೆ. ಭಾರತವು ಜಿಡಿಪಿ ಡಿಫ್ಲೇಟರ್​​ನ ಲೆಕ್ಕಾಚಾರದಲ್ಲಿ ಸಮಸ್ಯೆಗಳನ್ನು ಹೊಂದಿದೆ ಎಂದು ವಾದಿಸುವುದಕ್ಕೆ ಆಧಾರವಿಲ್ಲ. 23 ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಬೆಳವಣಿಗೆಯ ನಂತರ ಇತ್ತೀಚಿನ ತ್ರೈಮಾಸಿಕಗಳಲ್ಲಿ ಬೆಳವಣಿಗೆ ಮಂದಗತಿಯಲ್ಲಿದೆ ಎಂಬುದು ಕೇವಲ ನಾಮಿನಲ್ ಜಿಡಿಪಿ ಬೆಳವಣಿಗೆಯನ್ನು ಸಮರ್ಥಿಸಲು ಆಗಿದೆ.

ಇದನ್ನೂ ಓದಿ: ಬ್ಯಾಂಕ್ ದಿವಾಳಿಯಾದರೆ ನಿಮ್ಮ ಠೇವಣಿ ಹಣಕ್ಕೆ ಯಾರು ಖಾತರಿ ನೀಡುತ್ತಾರೆ? ನಿಯಮಗಳು ತಿಳಿದರೆ ಶಾಕ್ ಆಗುತ್ತೀರಿ!

ತಾತ್ತ್ವಿಕವಾಗಿ, ಇತರ ಡೇಟಾವು ವಿಮರ್ಶಕರ ತೀರ್ಮಾನಗಳಿಗೆ ಹೊಂದಿಕೆಯಾಗುತ್ತದೆಯೇ ಎಂದು ನೋಡಲು ಅವರು ಹಲವಾರು ಇತರ ಬೆಳವಣಿಗೆಯ ಸೂಚಕಗಳನ್ನು ನೋಡುವುದು ಉತ್ತಮವಾಗಿದೆ. ಖರೀದಿ ವ್ಯವಸ್ಥಾಪಕರ ಸೂಚ್ಯಂಕಗಳು ಉತ್ಪಾದನೆ ಮತ್ತು ಸೇವಾ ವಲಯಗಳು ಬೆಳೆಯುತ್ತಿರುವುದನ್ನು ಸೂಚಿಸುತ್ತವೆ. ಬ್ಯಾಂಕ್ ಸಾಲದ ಬೆಳವಣಿಗೆ ಎರಡಂಕಿಯಲ್ಲಿದೆ. ಬಳಕೆ ಸುಧಾರಿಸುತ್ತಿದೆ ಮತ್ತು ಸರ್ಕಾರವು ಬಂಡವಾಳ ವೆಚ್ಚವನ್ನು ತೀವ್ರವಾಗಿ ಹೆಚ್ಚಿಸಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಸಚಿವಾಲಯ ಹೇಳಿದೆ.

ದೇಶದ ಡೇಟಾವನ್ನು ಸಂಬಂಧಿತ ಹಣಕಾಸು ವರ್ಷದ ಮುಕ್ತಾಯದ ಮೂರು ವರ್ಷಗಳ ನಂತರ ಅಂತಿಮಗೊಳಿಸುವ ಮೊದಲು ಅವುಗಳನ್ನು ಹಲವಾರು ಬಾರಿ ಪರಿಷ್ಕರಿಸಲಾಗುತ್ತದೆ. ಕೇವಲ ಜಿಡಿಪಿ ಸೂಚಕಗಳ ಆಧಾರದ ಮೇಲೆ ಆರ್ಥಿಕ ಚಟುವಟಿಕೆಯನ್ನು ನೋಡುವುದು ತಪ್ಪು. ಆರ್ಥಿಕ ಚಟುವಟಿಕೆಯ ಬಲದ ದೃಷ್ಟಿಕೋನವನ್ನು ರೂಪಿಸಲು ಹೆಚ್ಚಿನ ಆವರ್ತನ ಡೇಟಾವನ್ನು ಅವಲಂಬಿಸಬೇಕು ಎಂದು ಸಚಿವಾಲಯ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ವಿರೋಧ ಪಕ್ಷಗಳ ನಾಯಕರು ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಶಿವಕುಮಾರ್
ವಿರೋಧ ಪಕ್ಷಗಳ ನಾಯಕರು ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಶಿವಕುಮಾರ್
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಆದೇಶ ಧಿಕ್ಕರಿಸಿದರೆ ಏನಾಗುತ್ತೆ ಅಂತ ಕುಮಾರಸ್ವಾಮಿಗೆ ಗೊತ್ತು: ಪರಮೇಶ್ವರ್
ಆದೇಶ ಧಿಕ್ಕರಿಸಿದರೆ ಏನಾಗುತ್ತೆ ಅಂತ ಕುಮಾರಸ್ವಾಮಿಗೆ ಗೊತ್ತು: ಪರಮೇಶ್ವರ್
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ