Financial Changes: ಇಪಿಎಫ್ಒ 3.0 ಸೇರಿದಂತೆ ಜೂನ್ ತಿಂಗಳಲ್ಲಿ ಹಣಕಾಸು ಪ್ರಭಾವಿಸುವ ಪ್ರಮುಖ ಬದಲಾವಣೆಗಳು
Important financial changes in June: ಜೂನ್ ತಿಂಗಳಲ್ಲಿ ಕೆಲ ಪ್ರಮುಖ ಹಣಕಾಸು ಬದಲಾವಣೆಗಳಿವೆ. ಇಪಿಎಫ್ಒದಿಂದ ಸುಧಾರಿತ ವ್ಯವಸ್ಥೆ ಜಾರಿಗೆ ಬರಲಿದೆ. ಆಧಾರ್ ಅನ್ನು ಆನ್ಲೈನ್ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡುವ ಗಡುವು ಜೂನ್ನಲ್ಲಿ ಇದೆ. ಹಾಗೆಯೇ, ಟಿಡಿಎಸ್ ಸರ್ಟಿಫಿಕೇಟ್ಗಳು ನಿಮಗೆ ಇದೇ ಜೂನ್ 15ರೊಳಗೆ ಸಿಗಲಿದೆ.

ನವದೆಹಲಿ, ಮೇ 29: ಮುಂಬರುವ ಜೂನ್ ತಿಂಗಳಲ್ಲಿ ಸಾಮಾನ್ಯ ಜನರ ಹಣಕಾಸು ಸ್ಥಿತಿಯನ್ನು (financial changes) ಪ್ರಭಾವಿಸುವ ಕೆಲ ಬದಲಾವಣೆಗಳಾಗಲಿವೆ. ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಪಾಲಿಸಿಗಳಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಹಾಗೆಯೇ, ಹೊಸ ಅವತಾರದ ಇಪಿಎಫ್ಒ, ಆಧಾರ್, ಟಿಡಿಎಸ್ ಸರ್ಟಿಫಿಕೇಟ್ ಇತ್ಯಾದಿ ಸಂಗತಿಗಳು ಜೂನ್ನಲ್ಲಿ ಇವೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…
ಜೂನ್ನಲ್ಲಿ ಇಪಿಎಫ್ಒ 3.0
ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್ಒ ತನ್ನ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದೆ. ಇಪಿಎಫ್ಒ 3.0 ಎನ್ನಲಾಗುವ ಈ ಸುಧಾರಿತ ವ್ಯವಸ್ಥೆಯು ಜೂನ್ನಲ್ಲಿ ಜಾರಿಗೆ ಬರಲಿದೆ. ಪಿಎಫ್ ಹಿಂಪಡೆಯುವ ಕ್ರಮ ಸರಳಗೊಳ್ಳಲಿದೆ. ಕೆವೈಸಿ ಅಪ್ಡೇಟ್ ಮಾಡುವ ಕ್ರಮವನ್ನೂ ಸರಳಗೊಳಿಸಲಾಗಿದೆ. ಕ್ಲೇಮ್ ಪ್ರೋಸಸಿಂಗ್ ಅವಧಿ ಕಡಿಮೆ ಆಗಲಿದೆ. ಎಟಿಎಂ ಕಾರ್ಡ್ ರೀತಿಯಲ್ಲಿ ಇಪಿಎಫ್ಒ ಹಣವನ್ನು ಎಟಿಎಂಗಳಲ್ಲಿ ವಿತ್ಡ್ರಾ ಮಾಡಲು ಕಾರ್ಡ್ ಪಡೆಯುವ ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: ಇಪಿಎಸ್ ಪೆನ್ಷನ್ ಸ್ಕೀಮ್; ಕನಿಷ್ಠ ಪಿಂಚಣಿ 3,000 ರೂಗೆ ಏರುತ್ತಾ, 9,000 ರೂಗೆ ಏರುತ್ತಾ? ಇಲ್ಲಿದೆ ಡೀಟೇಲ್ಸ್
ಟಿಡಿಎಸ್ ಸರ್ಟಿಫಿಕೇಟ್ ಪಡೆಯಲು ಗಡುವು
ತೆರಿಗೆ ಪಾವತಿದಾರರಿಗೆ ಫಾರ್ಮ್ 16 ಮತ್ತು ಫಾರ್ಮ್ 16ಎ, ಟಿಡಿಎಸ್ ಸರ್ಟಿಫಿಕೇಟ್ಗಳನ್ನು ನೀಡಲಾಗುತ್ತದೆ. ಇದಕ್ಕೆ ಡೆಡ್ಲೈನ್ ಜೂನ್ 15ಕ್ಕೆ ಇದೆ. ಸಂಬಳದಲ್ಲಿ ಟಿಡಿಎಸ್ ಮುರಿದುಕೊಳ್ಳಲಾಗಿದ್ದರೆ ಕಂಪನಿಯು ಉದ್ಯೋಗಿಗೆ ನೀಡುವ ಫಾರ್ಮ್ 16ನಲ್ಲಿ ಇವೆಲ್ಲವೂ ದಾಖಲಾಗಿರುತ್ತದೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಜೂನ್ 15ರೊಳಗೆ ಫಾರ್ಮ್ 16 ಅನ್ನು ವಿತರಿಸಬಹುದು.
ಬ್ಯಾಂಕ್ ಎಫ್ಡಿಯನ್ನು ಹಿಂಪಡೆಯುವಾಗ ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಆಗ ಬ್ಯಾಂಕ್ನಿಂದ ನೀವು ಟಿಡಿಎಸ್ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ. ಇವೆಲ್ಲವೂ ಕೂಡ ಐಟಿ ರಿಟರ್ನ್ ಫೈಲ್ ಮಾಡುವಾಗ ಅಗತ್ಯ ಬೀಳುತ್ತದೆ.
ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ, ಐಟಿಆರ್ ಫೈಲಿಂಗ್ಗೆ ಡೆಡ್ಲೈನ್ ಜುಲೈ 31 ಅಲ್ಲ, ಸೆಪ್ಟೆಂಬರ್ 15ರವರೆಗೆ ವಿಸ್ತರಣೆ
ಆಧಾರ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡುವ ಡೆಡ್ಲೈನ್
ಆಧಾರ್ ಅನ್ನು ಆನ್ಲೈನ್ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡಲು 2024ರ ಡಿಸೆಂಬರ್ 14ರವರೆಗೆ ಕಾಲಾವಕಾಶ ನೀಡಲಾಗಿತ್ತು. ಅದನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಅಂದರೆ, ನಿಮ್ಮ ಉಚಿತ ಆಧಾರ್ ಅಪ್ಡೇಟ್ ಅವಕಾಶ ಜೂನ್ 14ಕ್ಕೆ ಮುಗಿಯುತ್ತದೆ. ಆ ಬಳಿಕ ನೀವು ಅಪ್ಡೇಟ್ ಮಾಡಬೇಕೆಂದರೆ ಶುಲ್ಕ ಕಟ್ಟಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








