
ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಮಹತ್ವವಿದೆ. ಈ ವರ್ಷ ಪಿತೃ ಪಕ್ಷ ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ, ಪೂರ್ವಜರ ಶ್ರಾದ್ಧವನ್ನು ಮಾಡಲಾಗುತ್ತದೆ. ಶ್ರಾದ್ಧವನ್ನು ಮಾಡುವುದರಿಂದ, ಅವರ ಆಶೀರ್ವಾದ ಕುಟುಂಬದ ಮೇಲೆ ಸದಾ ಇರುತ್ತದೆ ಎಂದು ನಂಬಲಾಗಿದೆ. ಪಿತೃ ಪಕ್ಷಕ್ಕೆ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ. ಈ ನಿಯಮಗಳನ್ನು ಪಾಲಿಸುವುದರಿಂದ ಪೂರ್ವಜರನ್ನು ಗೌರವಿಸಿದಂತಾಗುತ್ತದೆ ಎಂದು ನಂಬಲಾಗಿದೆ.
ಪಿತೃಪಕ್ಷದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ಸಮಯದಲ್ಲಿ, ಪ್ರತಿಯೊಬ್ಬರೂ ತಮ್ಮಿಂದಾಗುವಷ್ಟು ಏನನ್ನಾದರೂ ದಾನ ಮಾಡಬೇಕು. ಪಿತೃಪಕ್ಷದ ಸಮಯದಲ್ಲಿ, ಮಾಂಸಾಹಾರ, ಮದ್ಯ ಸೇವಿಸಬಾರದು. ಈ ಅವಧಿಯಲ್ಲಿ, ಪೂರ್ವಜರು 15 ದಿನಗಳವರೆಗೆ ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ.
ಪಿತೃ ಪಕ್ಷದ ಸಮಯದಲ್ಲಿ, ಬ್ರಾಹ್ಮಣರಿಗೆ ಊಟ ನೀಡುವುದು ಅವಶ್ಯಕ. ಈ ಸಮಯದಲ್ಲಿ, ಬ್ರಾಹ್ಮಣರನ್ನು ನಿಮ್ಮ ಮನೆಗೆ ಪೂರ್ಣ ಗೌರವದಿಂದ ಆಹ್ವಾನಿಸಿ, ಅವರಿಗೆ ಊಟ ಏರ್ಪಡಿಸಿ ದಕ್ಷಿಣೆ ನೀಡಿ.
ಇದನ್ನೂ ಓದಿ: ಸೆ. 07 ಎರಡನೇ ಚಂದ್ರಗ್ರಹಣ; ಈ ಎರಡು ರಾಶಿಯವರು ಅತ್ಯಂತ ಜಾಗರೂಕರಾಗಿರಿ
ಪಿತೃ ಪಕ್ಷದ ಸಮಯದಲ್ಲಿ, ಶ್ರಾದ್ಧ, ತರ್ಪಣ ಮತ್ತು ಪಿಂಡಾದಾನವನ್ನು ಮಾಡಲಾಗುತ್ತದೆ. ಈ ಕಾರ್ಯಗಳನ್ನು ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಅವರ ಆರ್ಶೀವಾದ ಸದಾ ಕುಟುಂಬದ ಮೇಲಿರುತ್ತದೆ ಎಂದು ನಂಬಲಾಗಿದೆ.
ಪಿತೃ ಪಕ್ಷದ ಸಮಯದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಬೇಕು. ಈ ಕೆಲಸಗಳನ್ನು ಮಾಡುವುದು ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ವಿಶೇಷವಾಗಿ ಹಸುಗಳು ಮತ್ತು ಕಾಗೆಗಳಿಗೆ ಆಹಾರವನ್ನು ನೀಡಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Wed, 20 August 25