Pradosh Vrat: ಪ್ರದೋಷ ವ್ರತ ಆಚರಿಸಿ ಶಿವನ ಕೃಪೆಗೆ ಪಾತ್ರರಾಗಿ, ಇಲ್ಲಿದೆ ಶುಭ ಮುಹೂರ್ತ

ಪ್ರದೋಷ ವ್ರತ ಎಂದರೆ ಪಾಪಗಳಿಂದ ಮುಕ್ತಿ ಎಂದರ್ಥ. ಪ್ರದೋಷ ವ್ರತವು ಶಿವನಿಗೆ ಅರ್ಪಿತವಾಗಿದ್ದು ಶಿವನನ್ನು ಮೆಚ್ಚಿಸಲು ಈ ವ್ರತವನ್ನು ಆಚರಿಸಲಾಗುತ್ತೆ. ಈ ವ್ರತದಿಂದ ಸುಖ, ಸಂಪತ್ತು ದೊರೆತು ಜೀವನ ನೆಮ್ಮದಿಯಿಂದಿರುತ್ತದೆ.

Pradosh Vrat: ಪ್ರದೋಷ ವ್ರತ ಆಚರಿಸಿ ಶಿವನ ಕೃಪೆಗೆ ಪಾತ್ರರಾಗಿ, ಇಲ್ಲಿದೆ ಶುಭ ಮುಹೂರ್ತ
ಭಗವಾನ್ ಶಿವ
Follow us
TV9 Web
| Updated By: ಆಯೇಷಾ ಬಾನು

Updated on: Feb 14, 2022 | 6:30 AM

ಪ್ರದೋಷ ವ್ರತವನ್ನು ತ್ರಯೋದಶಿ ತಿಥಿಗಳಲ್ಲಿ ಆಚರಿಸಲಾಗುತ್ತದೆ. ಅಂದರೆ ಶುಕ್ಲ ಪಕ್ಷ ತ್ರಯೋದಶಿ ಮತ್ತು ಕೃಷ್ಣ ಪಕ್ಷ ತ್ರಯೋದಶಿ. ಪ್ರತಿ ತಿಂಗಳು ಎರಡು ಪ್ರದೋಷ ವ್ರತಗಳನ್ನು ಆಚರಿಸಲಾಗುತ್ತೆ. ಪ್ರದೋಷದ ದಿನ ಸೋಮವಾರದಂದು ಬಂದಾಗ ಅದನ್ನು ಸೋಮ ಪ್ರದೋಷ ಎಂದು ಕರೆಯಲಾಗುತ್ತದೆ. ಪ್ರದೋಷ ವ್ರತ ಎಂದರೆ ಪಾಪಗಳಿಂದ ಮುಕ್ತಿ ಎಂದರ್ಥ. ಪ್ರದೋಷ ವ್ರತವು ಶಿವನಿಗೆ ಅರ್ಪಿತವಾಗಿದ್ದು ಶಿವನನ್ನು ಮೆಚ್ಚಿಸಲು ಈ ವ್ರತವನ್ನು ಆಚರಿಸಲಾಗುತ್ತೆ. ಈ ವ್ರತದಿಂದ ಸುಖ, ಸಂಪತ್ತು ದೊರೆತು ಜೀವನ ನೆಮ್ಮದಿಯಿಂದಿರುತ್ತದೆ. ಸೋಮವಾರದಂದು ಉಪವಾಸವಿಟ್ಟು ಪ್ರದೋಷ ವ್ರತವನ್ನು ಆಚರಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ.

ಪ್ರದೋಷ ವ್ರತ ಶುಭ ಮುಹೂರ್ತ ತ್ರಯೋದಶಿ ತಿಥಿ ಆರಂಭ – ಫೆಬ್ರವರಿ 13, 2022 ರಂದು ಸಂಜೆ 06:42 ತ್ರಯೋದಶಿ ತಿಥಿ ಮುಕ್ತಾಯ – ಫೆಬ್ರವರಿ 14, 2022 ರಂದು ರಾತ್ರಿ 08:28

ಪ್ರದೋಷದಂದು ಮಾಡಬಹುದಾದ ಪೂಜೆಗಳು -ಅರ್ಚನೆ, ಹಾಲಿನ ಅಭಿಷೇಕ -ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ -ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ -ಪ್ರದೋಷ ಅಭಿಷೇಕದ ವಸ್ತುಗಳು ಮತ್ತು ಅದರ ಫಲಗಳು -ಪಂಚಗವ್ಯ (ಎಲ್ಲಾ ಪಾಪಗಳಿಂದ ಮುಕ್ತಿ) -ಪಂಚಾಮೃತ (ಸಂಪತ್ತನ್ನು ನೀಡುತ್ತದೆ) -ತುಪ್ಪ (ಮೋಕ್ಷವನ್ನು ನೀಡುತ್ತದೆ) -ಹಾಲು (ದೀರ್ಘಾಯುಷ್ಯ) -ಮೊಸರು (ಮಕ್ಕಳ ಭಾಗ್ಯ) -ಜೇನು ತುಪ್ಪ (ಉತ್ತಮ ಧ್ವನಿ) -ಅಕ್ಕಿ ಪುಡಿ (ಸಾಲಗಳಿಂದ ಮುಕ್ತಿ) -ಕಬ್ಬಿನ ರಸ (ಆರೋಗ್ಯ ಭಾಗ್ಯ, ಶತ್ರು ನಾಶ) -ನಿಂಬೆ ರಸ (ಸಾವಿನ ಭಯದಿಂದ ದೂರ ಮಾಡುತ್ತದೆ) -ಎಳನೀರು (ಸಂತೋಷ ಮತ್ತು ಜೀವನ ಆನಂದ) -ಬೇಯಿಸಿದ ಅನ್ನ (ಜೀವನವನ್ನು ಅದ್ಭುತ ಗೊಳಿಸುತ್ತದೆ) -ಗಂಧ (ಲಕ್ಷ್ಮಿ ಕಟಾಕ್ಷ) -ಸಕ್ಕರೆ (ಶತ್ರು ನಾಶ)

ಪ್ರದೋಷ ಉಪವಾಸವನ್ನು ಶಿವನಿಗೆ ಸಮರ್ಪಿಸಲಾಗಿದೆ ಪೌರಾಣಿಕ ನಂಬಿಕೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ ವಿಷವು ಹೊರಬಂದಾಗ, ಮಹಾದೇವನು ಬ್ರಹ್ಮಾಂಡವನ್ನು ಉಳಿಸಲು ಆ ವಿಷವನ್ನು ಸೇವಿಸಿದನು. ಆ ವಿಷ ಕುಡಿದ ತಕ್ಷಣ ಮಹಾದೇವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿತು. ವಿಷದ ಪ್ರಭಾವದಿಂದ ಮಹಾದೇವನ ದೇಹದಲ್ಲಿ ಸಹಿಸಿಕೊಳ್ಳಲಾಗದ ಉರಿ ಕಾಣಿಸಿಕೊಂಡಿತು. ಆ ಸಮಯದಲ್ಲಿ ದೇವತೆಗಳು ನೀರು, ಬೇಲ್ಪತ್ರ ಇತ್ಯಾದಿಗಳಿಂದ ಮಹಾದೇವನ ನೋವನ್ನು ಕಡಿಮೆ ಮಾಡಿದರು. ಮಹಾದೇವನು ವಿಷವನ್ನು ಕುಡಿದು ಜಗತ್ತನ್ನು ರಕ್ಷಿಸಿದನು, ಆದ್ದರಿಂದ ದೇವತೆಗಳು ಮತ್ತು ಲೋಕದ ಜನರು ಶಂಕರನಿಗೆ ಋಣಿಯಾದರು. ಆ ಸಮಯದಲ್ಲಿ ದೇವತೆಗಳು ಮಹಾದೇವನನ್ನು ಸ್ತುತಿಸಿದರು, ಇದರಿಂದ ಮಹಾದೇವನು ಬಹಳ ಸಂತೋಷಪಟ್ಟನು ಮತ್ತು ಅವನು ತಾಂಡವವನ್ನು ಮಾಡಿದನು. ಈ ಘಟನೆ ನಡೆದಾಗ ಅದು ತ್ರಯೋದಶಿ ತಿಥಿ ಮತ್ತು ಪ್ರದೋಷ ಕಾಲ. ಅಂದಿನಿಂದ ಈ ದಿನಾಂಕ ಮತ್ತು ಪ್ರದೋಷ ಕಾಲ ಮಹಾದೇವನಿಗೆ ಪ್ರಿಯವಾಯಿತು. ಇದರೊಂದಿಗೆ, ಮಹಾದೇವನನ್ನು ಮೆಚ್ಚಿಸಲು, ಭಕ್ತರು ಪ್ರದೋಷ ಕಾಲದಲ್ಲಿ ತ್ರಯೋದಶಿ ತಿಥಿಯಂದು ಪೂಜೆ ಮಾಡುವ ಸಂಪ್ರದಾಯವನ್ನು ಪ್ರಾರಂಭಿಸಿದರು. ಮತ್ತು ಈ ಉಪವಾಸಕ್ಕೆ ಪ್ರದೋಷ ವ್ರತ ಎಂದು ಹೆಸರಾಯಿತು.

ಇದನ್ನೂ ಓದಿ: Shani Trayodashi 2022: ಪ್ರದೋಷ ವ್ರತ ಪಾಲಿಸಿದ ಬಡ ಬ್ರಾಹ್ಮಣ ಮಹಿಳೆಯ ಬಾಳು ಬೆಳಗಿಸಿದ ಭಗವಾನ್ ಶಿವ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?