ಮಹಾಕುಂಭಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಈ ಕೆಲಸ ಮಾಡಿ, ನೀವು ಅಮೃತ ಸ್ನಾನ ಮಾಡಿದ ಪುಣ್ಯ ಪಡೆಯುತ್ತೀರಿ

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮೌನಿ ಅಮವಾಸ್ಯೆಯಂದು ಎರಡನೇ ಅಮೃತ ಸ್ನಾನ ನಡೆಯಲಿದೆ. ಹಿಂದೂ ಧರ್ಮದಲ್ಲಿ ಮೌನಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಈ ದಿನ ಸ್ನಾನ, ದಾನ ಮಾಡುವುದು ಪುಣ್ಯಕರ ಎಂದು ನಂಬಲಾಗಿದೆ. ಜನವರಿ 29 ರಂದು ಮೌನಿ ಅಮವಾಸ್ಯೆ ಆಚರಿಸಲಾಗುತ್ತದೆ. ಕುಂಭಮೇಳಕ್ಕೆ ಹೋಗಲು ಸಾಧ್ಯವಾಗದವರು ಮನೆಯಲ್ಲಿ ಗಂಗಾಜಲದಿಂದ ಸ್ನಾನ ಮಾಡಿ ಪುಣ್ಯ ಪಡೆಯಬಹುದು.

ಮಹಾಕುಂಭಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಈ ಕೆಲಸ ಮಾಡಿ, ನೀವು ಅಮೃತ ಸ್ನಾನ ಮಾಡಿದ ಪುಣ್ಯ ಪಡೆಯುತ್ತೀರಿ
Prayagraj Kumbh Mela

Updated on: Jan 28, 2025 | 8:12 AM

ಪ್ರಯಾಗರಾಜ್‌ನಲ್ಲಿ ಮಹಾಕುಂಭ ನಡೆಯುತ್ತಿದೆ. ಈ ಮಹಾಕುಂಭದಲ್ಲಿ ಅಮೃತ ಸ್ನಾನ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಮೊದಲ ಅಮೃತ ಸ್ನಾನವನ್ನು ಮಕರ ಸಂಕ್ರಾಂತಿಯಂದು ಅಂದರೆ ಜನವರಿ 14 ರಂದು ನಡೆದಿದೆ. ಇದೀಗ ಎರಡನೇ ಅಮೃತ ಸ್ನಾನ ಮೌನಿ ಅಮವಾಸ್ಯೆಯ ದಿನದಂದು ನಡೆಯಲಿದೆ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಮೌನಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ.

ಧಾರ್ಮಿಕ ನಂಬಿಕೆ:

ಮೌನಿ ಅಮಾವಾಸ್ಯೆಯಂದು ಸ್ನಾನ ಮತ್ತು ದಾನ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ ಎಂಬ ಹಿಂದೂ ಧಾರ್ಮಿಕ ನಂಬಿಕೆಯಿದೆ. ಈ ದಿನ, ಪೂರ್ವಜರಿಗೆ ಪಿಂಡ ಪ್ರದಾನವನ್ನು ಸಹ ಮಾಡಲಾಗುತ್ತದೆ. ಈ ದಿನದಂದು ಮಾಡುವ ತರ್ಪಣ ಮತ್ತು ಪಿಂಡದಾನದ ಮೂಲಕ ಪೂರ್ವಜರು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಮೌನಿ ಅಮವಾಸ್ಯೆ ಯಾವಾಗ?

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಘ ಮಾಸದ ಅಮಾವಾಸ್ಯೆಯ ದಿನವನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಮಾಘ ಮಾಸದ ಅಮಾವಾಸ್ಯೆಯು ಜನವರಿ 28 ರಂದು ಸಂಜೆ 7.35 ಕ್ಕೆ ಪ್ರಾರಂಭವಾಗಲಿದೆ. ಈ ದಿನಾಂಕವು ಜನವರಿ 29 ರಂದು ಸಂಜೆ 6:05 ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದಯ ತಿಥಿಯ ಪ್ರಕಾರ ಜನವರಿ 29 ರಂದು ಮೌನಿ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸ ಇರುತ್ತದೆ. ಅದೇ ದಿನ ಮಹಾಕುಂಭದಲ್ಲಿ ಎರಡನೇ ಅಮೃತ ಸ್ನಾನ ಕೂಡ ನಡೆಯಲಿದೆ.

ಇದನ್ನೂ ಓದಿ: ಫೆ.02 ರಂದು ವಸಂತ ಪಂಚಮಿ; ವಿದ್ಯಾರ್ಥಿಗಳಿಗೆ ಈ ದಿನ ಏಕೆ ವಿಶೇಷ..?

ಈ ಕ್ರಮಗಳನ್ನು ಮಾಡಿ:

ಮೌನಿ ಅಮಾವಾಸ್ಯೆಯಂದು, ಕೆಲವು ಕಾರಣಗಳಿಂದ ನೀವು ಮಹಾಕುಂಭ ಅಥವಾ ಯಾವುದೇ ಸ್ಥಳಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ. ನಂತರ ಆ ಗಂಗಾಜಲದಿಂದ ಸ್ನಾನ ಮಾಡಿ. ಸ್ನಾನದ ಸಮಯದಲ್ಲಿ ಗಂಗಾ, ಯಮುನೆ, ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ದಹನ ಅಸ್ಮಿನ್ ಸನ್ನಿಧಿಂ ಕುರು । ಈ ಗಂಗಾ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ನೀವು ಮಹಾಕುಂಭದ ಅಮೃತ ಸ್ನಾನಕ್ಕೆ ಸಮಾನವಾದ ಪುಣ್ಯವನ್ನು ಪಡೆಯಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us