Isha Maha shivratri 2023: ಶನಿವಾರ ಈಶ ಮಹಾಶಿವರಾತ್ರಿ ಆಚರಣೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ- ಕಾರ್ಯಕ್ರಮದ ವಿವರ ಇಲ್ಲಿದೆ

| Updated By: ಸಾಧು ಶ್ರೀನಾಥ್​

Updated on: Feb 17, 2023 | 3:54 PM

President Droupadi Murmu: ಕೊಯಮತ್ತೂರಿನಲ್ಲಿ ಈಶ ಮಹಾಶಿವರಾತ್ರಿಯು ಧ್ಯಾನಲಿಂಗದಲ್ಲಿ ನಡೆಯುವ ಪಂಚ ಭೂತ ಆರಾಧನೆಯೊಂದಿಗೆ ಆರಂಭಗೊಳ್ಳುತ್ತದೆ, ನಂತರ ಲಿಂಗ ಭೈರವಿ ಮಹಾ ಯಾತ್ರೆಯನ್ನು ಕೈಗೊಳ್ಳಲಾಗುವುದು.

Isha Maha shivratri 2023: ಶನಿವಾರ ಈಶ ಮಹಾಶಿವರಾತ್ರಿ ಆಚರಣೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ- ಕಾರ್ಯಕ್ರಮದ ವಿವರ ಇಲ್ಲಿದೆ
ಶನಿವಾರ ಈಶ ಮಹಾಶಿವರಾತ್ರಿ ಆಚರಣೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ
Follow us on

ಕೊಯಮತ್ತೂರಿನ (Coimbatore) ಈಶ ಯೋಗ ಕೇಂದ್ರದಲ್ಲಿ (Isha Foundation) ಫೆಬ್ರವರಿ 18 ರಂದು ಅಂದರೆ ನಾಳೆ ನಡೆಯಲಿರುವ ಮಹಾಶಿವರಾತ್ರಿ ಆಚರಣೆಗೆ ಭಾರತದ ಸನ್ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು (Droupadi Murmu) ರವರು ಆಗಮಿಸಲಿದ್ದಾರೆ. ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ನಂತರ ತಮಿಳುನಾಡಿಗೆ ಇದು ಅವರ ಮೊದಲ ಭೇಟಿಯಾಗಿದೆ. ಈಶದ ಶಿವರಾತ್ರಿ ಆಚರಣೆಯಲ್ಲಿ ರಾಷ್ಟ್ರಪತಿ ಸುಗಮವಾಗಿ ಭಾಗವಹಿಸಲು ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ರಾತ್ರಿಯಿಡೀ ನಡೆಯಲಿರುವ ಈ ಉತ್ಸವವು ಫೆಬ್ರವರಿ 18 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಿಗ್ಗೆ 6 ವರೆಗೂ ಸದ್ಗುರು (Sadhguru) ಸಮ್ಮುಖದಲ್ಲಿ ನೆರವೇರುತ್ತದೆ. ಈಶ ಮಹಾಶಿವರಾತ್ರಿಯನ್ನು 16 ಭಾಷೆಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಮತ್ತು ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ, ತೆಲುಗು, ಮರಾಠಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಭಾರತದ ಎಲ್ಲಾ ಪ್ರಮುಖ ಟಿವಿ ನೆಟ್‌ವರ್ಕ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ಇತ್ತೀಚೆಗೆ ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ 112 ಅಡಿಗಳ ಆದಿಯೋಗಿ, ಯೋಗೇಶ್ವರ ಲಿಂಗ ಮತ್ತು ನಾಗ ಕ್ಷೇತ್ರವನ್ನು ಹೊಂದಿರುವ ಸದ್ಗುರು ಸನ್ನಿಧಿಯಲ್ಲಿ ರಾತ್ರಿಯಿಡೀ ನಡೆಯುವ ಮಹಾಆಚರಣೆಯಲ್ಲಿ ಸಾವಿರಾರು ಭಕ್ತರು ವೈಯಕ್ತಿಕವಾಗಿ ಭಾಗವಹಿಸುವ ನಿರೀಕ್ಷೆಯಿದೆ.

Also Read: 

Mahashivratri 2023: ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ – ಮೊದಲ ಬಾರಿ ಅದ್ದೂರಿ ಶಿವರಾತ್ರಿ ಆಚರಣೆ! ಪೂಜೆ, ಪ್ರವಚನ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ

ಮಹಾಶಿವರಾತ್ರಿಯ ಮಹತ್ವವನ್ನು ವಿವರಿಸುತ್ತಾ ಸದ್ಗುರುಗಳು, “ಮಹಾಶಿವರಾತ್ರಿಯು ಯಾವುದೇ ಮತ ಅಥವಾ ನಂಬಿಕೆಗೆ ಒಳಪಟ್ಟಿದ್ದಲ್ಲ, ಜನಾಂಗ ಅಥವಾ ರಾಷ್ಟ್ರಕ್ಕೆ ಸೇರಿದ್ದಲ್ಲ. ಇದು ಗ್ರಹಗಳ ಸ್ಥಾನಗಳು ಮಾನವ ಜೀವವ್ಯವಸ್ಥೆಯಲ್ಲಿ ನೈಸರ್ಗಿಕವಾಗಿ ಶಕ್ತಿಯ ಉತ್ಕರ್ಷವನ್ನು ಉಂಟುಮಾಡುವ ರಾತ್ರಿ. ಇದು ಸಮಸ್ತ ಮಾನವಕುಲದ ಮೇಲೆ ಪ್ರಭಾವವನ್ನು ಹೊಂದಿರುವ ಬ್ರಹ್ಮಾಂಡೀಯ ವಿದ್ಯಮಾನ. ಇದನ್ನು ಪ್ರಜ್ಞಾಪೂರ್ವಕವಾಗಿ ಅನುಭವಿಸಿ.” ಎಂದರು

ಯೂಟ್ಯೂಬ್  ನಲ್ಲಿ ಈಶ ಮಹಾಶಿವರಾತ್ರಿ  ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಕೊಯಮತ್ತೂರಿನಲ್ಲಿ ಈಶ ಮಹಾಶಿವರಾತ್ರಿಯು ಧ್ಯಾನಲಿಂಗದಲ್ಲಿ ನಡೆಯುವ ಪಂಚ ಭೂತ ಆರಾಧನೆಯೊಂದಿಗೆ ಆರಂಭಗೊಳ್ಳುತ್ತದೆ, ನಂತರ ಲಿಂಗ ಭೈರವಿ ಮಹಾ ಯಾತ್ರೆಯನ್ನು ಕೈಗೊಳ್ಳಲಾಗುವುದು. ನಂತರ ಸದ್ಗುರು ಸತ್ಸಂಗ, ಮಧ್ಯರಾತ್ರಿಯ ಧ್ಯಾನಗಳು ಮತ್ತು ಅದ್ಭುತವಾದ ಆದಿಯೋಗಿ ದಿವ್ಯ ದರ್ಶನ (ಧ್ವನಿ ಮತ್ತು ಬೆಳಕಿನ ಪ್ರದರ್ಶನ) ಇರಲಿವೆ.

ರಾಜಸ್ಥಾನಿ ಜಾನಪದ ಗಾಯಕಿ ಮಾಮೆ ಖಾನ್, ಪ್ರಶಸ್ತಿ ವಿಜೇತ ಸಿತಾರ್ ಮಾಂತ್ರಿಕ ನೀಲಾದ್ರಿ ಕುಮಾರ್, ಟಾಲಿವುಡ್ ಗಾಯಕ ರಾಮ್ ಮಿರಿಯಾಲ, ತಮಿಳು ಹಿನ್ನೆಲೆ ಗಾಯಕ ವೇಲ್ಮುರುಗನ್, ಮಾಂಗ್ಲಿ, ಕುಟ್ಲೆ ಖಾನ್ ಮತ್ತು ಬಂಗಾಳಿ ಜಾನಪದ ಗಾಯಕಿಅನನ್ಯ ಚಕ್ರವರ್ತಿ ಮುಂತಾದ ದೇಶದ ವಿವಿಧ ಭಾಗಗಳ ಹೆಸರಾಂತ ಕಲಾವಿದರು ಈ ವರ್ಷ ಕಾರ್ಯಕ್ರಮ ನೀಡಲಿದ್ದಾರೆ. ಕರ್ನಾಟಕ ಜಾನಪದ ಮತ್ತು ತೆಯ್ಯಂ ತಂಡಗಳು ತಮ್ಮ ನೃತ್ಯ ಮತ್ತು ಸಂಗೀತದ ಮೂಲಕ ತಮ್ಮ ಜಾನಪದಸಂಸ್ಕೃತಿಯನ್ನು ಪ್ರದರ್ಶಿಸಲಿವೆ. ಈಶ ಫೌಂಡೇಶನ್‌ನ ಸ್ವದೇಶಿ ತಂಡ – ಸೌಂಡ್ಸ್ ಆಫ್ ಈಶದಿಂದ ಹೆಚ್ಚು ಬೇಡಿಕೆಯಿರುವ ಪ್ರದರ್ಶನಗಳು ಮತ್ತು ಈಶ ಸಂಸ್ಕೃತಿಯ ನೃತ್ಯ ಪ್ರಸ್ತುತಿಗಳು ಈ ರಾತ್ರಿಯ ಅತೀಂದ್ರಿಯ ಮೆರುಗನ್ನು ಹೆಚ್ಚಿಸಲಿವೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

Published On - 3:50 pm, Fri, 17 February 23