ಆಚಾರ್ಯ ಚಾಣಕ್ಯ ತನ್ನ ಗ್ರಂಥ ನೀತಿಯಲ್ಲಿ ನಾಲ್ಕು ಸಂಗತಿಗಳನ್ನು ವರ್ಣಿಸಿದ್ದಾರೆ. ಅದನ್ನು ಚಾಚೂತಪ್ಪದೆ ಪಾಲಿಸಿದರೆ ವ್ಯಕ್ತಿತ್ವದ ವಿಕಸನವಾಗಿ ಆ ವ್ಯಕ್ತಿಯ ಜೀವನದಲ್ಲಿ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ. ದೌರ್ಭಾಗ್ಯ ಆ ವ್ಯಕ್ತಿಯನ್ನು ಕಾಡುತ್ತಿದ್ದರೆ ಅದರಿಂದ ಮುಕ್ತಿ ದೊರೆತು, ಜೀವನ ಸುಗಮಗೊಂಡು- ಸುಸೂತ್ರವಾಗಿ ಸಾಗುತ್ತದೆ! ವ್ಯಕ್ತಿ ಯಾರೇ ಆಗಿರಲಿ ಕಠಿಣ ಪರಿಶ್ರಮದಿಂದಷ್ಟೆ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯ. ಶ್ರಮ ಹಾಕಲಿಲ್ಲವೆಂದರೆ ಏನೂ ಸಾಧಿಸಲು ಆಗದು. ಅದೇ ವೇಳೆ ಜೀವನದಲ್ಲಿ ಕಠಿಣ ಪರಿಶ್ರಮ ಹಾಕಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ವೇಳೆ ಕಠಿಣ ಪರಿಶ್ರಮದ ಜೊತೆಜೊತೆಗೆ ಅದೃಷ್ಟದ ಭಾಗ್ಯ ಸಾಥ್ ನೀಡಿದರೆ ಯಶಸ್ಸು ಎಂಬುದು ಬೇಗನೆಯೇ ಕೈಹಿಡಿಯುತ್ತದೆ. ಅಂದರೆ ಅಂತಹ ಪರಿಶ್ರಮ ಜೀವಿಗಳಿಗೆ ಯಾವುದೇ ಅಡ್ಡಿ ಆತಂಕ, ಬಾಧೆಗಳು ಕಾಡದೆ ಜೀವನದಲ್ಲಿ ಯಶಸ್ಸು ಕೈಗೂಡುತ್ತದೆ. ಈ ನಿಟ್ಟಿನಲ್ಲಿ ಆಚಾರ್ಯ ಚಾಣಕ್ಯ ಕೆಲವೊಂದು ನೀತಿ ನಿಯಮಗಳ ಪಾಲನೆ ಅವಶ್ಯ ಎಂಬುದನ್ನು ಮನದಟ್ಟುಪಡಿಸುತ್ತಾರೆ.
ತಾಯಿಯ ಸೇವೆ:
ಹೆತ್ತಮ್ಮನಿಗೆ ಗೌರವ ಕೊಡುವುದು ಮತ್ತು ಆ ಮಾತೆಯ ಸೇವೆ ಮಾಡುವುದು ಅತ್ಯಂತ ಮುಖ್ಯ. ಇದೊಂದು ಉತ್ಕೃಷ್ಟ ಸೇವೆ. ಈ ಜವಾಬ್ದಾರಿಯನ್ನು ನಿಭಾಯಿಸಿದರೆ, ಆಕೆಯ ಪಾಲನೆ, ಪೋಷಣೆ ಮಾಡಿದರೆ ಆಕೆಯ ಆಶೀರ್ವಾದ ಲಭಿಸಿ, ಅಂತಹವರ ಜೀವನದಲ್ಲಿ ಯಾವುದೇ ದುರ್ಗಮ ಕೆಲಸವೂ ಸಲೀಸಾಗಿ ನೆರವೇರುತ್ತದೆ. ದುರ್ಗಮ ಸಮಯದಿಂದ ದೂರವಾಗಿ, ದುರ್ಘಟನೆಗಳಿಂದ ದೂರವಾಗಿ ಜವನ ಸುಸೂತ್ರವಾಗಿ ಮುನ್ನಡೆಯುತ್ತದೆ.
ಗಾಯತ್ರಿ ಮಂತ್ರ:
ಧಾರ್ಮಿಕ ಜಗತ್ತಿನಲ್ಲಿ ತಾಯಿ ಗಾಯತ್ರಿಗೆ ವಿಶೇಷ ಸ್ಥಾನಮಾನವಿದೆ. ಇನ್ನು ಗಾಯತ್ರಿ ಮಂತ್ರವೂ ಅಷ್ಟೇ ಶಕ್ತಿಶಾಲಿ ಮತ್ತು ಪರಿಣಾಮಕಾರಿ. ಇಂತಹ ಪ್ರಭಾವೀ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಜೀವನ ಸಾಕ್ಷಾತ್ಕಾರಗೊಂಡು, ಜೀವನ ಸಕಾರಾತ್ಮಕತೆಯತ್ತ ಸಾಗಲಿದೆ. ಗಾಯತ್ರಿ ಮಂತ್ರ ಪಠಿಸುವುದರಿಂದ ಜೀವನದಲ್ಲಿ ಯಾವುದೇ ನಕಾರಾತ್ಮಕತೆ ಮೂಡುವುದಿಲ್ಲ. ಶ್ರದ್ಧೆಯಿಂದ ಗಾಯತ್ರಿ ಮಂತ್ರ ಪಠಿಸಿದರೆ ವವರ ಸುತ್ತ ಧನಾತ್ಮಕತೆಯ ಪ್ರಭಾವಳಿ ಮೂಡುತ್ತದೆ. ಆಂತರ್ಯದಲ್ಲಿಯೂ ಅವರಲ್ಲಿ ಸಕಾರಾತ್ಮಕತೆ ಮೂಡುತ್ತದೆ. ಇದರಿಂದ ಬಾಹ್ಯವಾಗಿ ಅವರ ವ್ಯಕ್ತಿತ್ವ ತೇಜೋಮಯವಾಗಿರುತ್ತದೆ. ಇಂತಹ ವ್ಯಕ್ತಿ ತನ್ನ ಜೀವನದಲ್ಲಿ ಸಲೀಸಾಗಿ ಜೀವನದಲ್ಲಿ ದಕ್ಕಿಸಿಕೊಳ್ಳಬಹುದು.
ಏಕಾದಶಿ ಆಚರಣೆ:
ಆಚಾರ್ಯ ಚಾಣಕ್ಯ ಹೇಳುವ ಒಂದು ಕುತೂಹಲಕಾರಿ ಸಂಗತಿಯೆಂದರೆ ಏಕಾದಶಿಯಂದು ಉಪವಾಸ ವ್ರತ ಆಚರಣೆ ಮಾಡುವುದು ವೈಯಕ್ತಿಕವಾಗಿ ಪವಿತ್ರ ಮತ್ತು ಕಲ್ಯಾಣಕಾರಿ ಸಂಗತಿಯಾಗಿದೆ. ಹೀಗೆ ಉಪವಾಸ ವ್ರತ ಆಚರಣೆ ಮಾಡುವುದರಿಂದ ಅಂತಹ ವ್ಯಕ್ತಿಯ ಪಾಪಗಳು ದೂರವಾಗುತ್ತದೆ. ಅದುವೇ ಜೀವನವನ್ನು ಉನ್ನತಿಯತ್ತ ಕೊಂಡೊಯ್ಯಬಲ್ಲದು. ಅವರಿಗೆ ದೌರ್ಭಾಗ್ಯ ಕಳಚಿ, ಸೌಭಾಗ್ಯ ಉಂಟಾಗುತ್ತದೆ.
ಅನ್ನದಾನ:
ಉಪವಾಸ ವ್ರತ ಆಚರಣೆ ಮಾಡುವುದು ಶ್ರೇಷ್ಠವೆಂದು ಹೇಳುವ ಆಚಾರ್ಯ ಚಾಣಕ್ಯ ಅದೇ ಧಾಟಿಯಲ್ಲಿ ಅನ್ನದಾನ ಮಹಾದಾನ ಎನ್ನುತ್ತಾರೆ. ಹಸಿದುಕೊಂಡಿರುವ ಯಾವುದೇ ವ್ಯಕ್ತಿಗೆ ಭೋಜನ ಉಣಬಡಿಸಿದರೆ, ಬಾಯಾರಿದವನಿಗೆ ಕುಡಿಯಲು ನೀರು ನೀಡಿದರೆ ಅದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ. ಅದರಿಂದ ಮಾನವ ಜನ್ಮ ಸಾರ್ಥಕತೆ ಕಾಣಬಹುದು. ಹೀಗೆ ಪರೋಪಕಾರಿಯಾಗಿ ಬೇರೊಬ್ಬರ ಹೊಟ್ಟೆಯ ಹಸಿವನ್ನು ತಣಿಸುವುದರಿಂದ ಅವರ ಜೀವನದಲ್ಲಿ ಕಷ್ಟಗಳು ಬಂದರೂ ಅವು ತನ್ನಿಂದತಾನೇ ಮಾಯವಾಗಿಬಿಡುತ್ತದೆ.