
ಇಶಾ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರು ಹೊಸದಾಗಿ ಪ್ರಾರಂಭಿಸಿದ ಉಚಿತ ಧ್ಯಾನ ಅಪ್ಲಿಕೇಶನ್ ‘ಮಿರಾಕಲ್ ಆಫ್ ಮೈಂಡ್'(Miracle of Mind) ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಶಿವರಾತ್ರಿಯಂದು ಬಿಡುಗಡೆಗೊಂಡಿದ್ದ ಈ ಮೊಬೈಲ್ ಅಪ್ಲಿಕೇಶನನ್ನು ಕೇವಲ 15 ಗಂಟೆಗಳಲ್ಲಿ 1 ಮಿಲಿಯನ್ ಜನರು ಡೌನ್‌ಲೋಡ್ ಮಾಡಿದ್ದಾರೆ. ಈ ಮೂಲಕ ‘ಮಿರಾಕಲ್ ಆಫ್ ಮೈಂಡ್’ ಆ್ಯಪ್ ChatGPT’ಯನ್ನೇ ಹಿಂದಿಕ್ಕಿದೆ.
ಮಹಾಶಿವರಾತ್ರಿಯಂದು (ಫೆಬ್ರವರಿ 26) ಬಿಡುಗಡೆಯಾದ ಈ ಅಪ್ಲಿಕೇಶನ್ ಈಗ ಭಾರತ, ಅಮೆರಿಕ, ಕೆನಡಾ, ಯುಕೆ, ಆಸ್ಟ್ರೇಲಿಯಾ ಮತ್ತು ಜರ್ಮನಿ ಸೇರಿದಂತೆ 20 ದೇಶಗಳಲ್ಲಿ ಟ್ರೆಂಡಿಂಗ್ ಆಗಿದೆ. ಇಂಗ್ಲಿಷ್, ಹಿಂದಿ, ತಮಿಳು, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಲಭ್ಯವಿರುವ ಮಿರಾಕಲ್ ಆಫ್ ಮೈಂಡ್ ಅಪ್ಲಿಕೇಶನನ್ನು AI- ಚಾಲಿತ ವೈಶಿಷ್ಟ್ಯದಲ್ಲಿ ಪರಿಚಯಿಸಲಾಗಿದ್ದು, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಬಹುದು, ಆದ್ರೆ ಶಾಹಿ ಸ್ನಾನಕ್ಕೆ ಇನ್ನೂ ಇದೆ ಸಮಯ ಆತುರ ಬೇಡ
ಒತ್ತಡದ ಜೀವನದಿಂದ ಹೊರಬರಲು ಧ್ಯಾನಕ್ಕಾಗಿ ನೀವು ಗಂಟೆ ಗಟ್ಟಲೆ ಕುಳಿತುಕೊಳ್ಳುವ ಅವಶ್ಯಕತೆಯಿಲ್ಲ. ಈ ಆ್ಯಪ್ ಕೇವಲ ಏಳು ನಿಮಿಷಗಳಲ್ಲಿ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಸದ್ಗುರು ಅವರ ವಿಚಾರಗಳನೊಳಗೊಂಡ ಬೋಧನೆಯ ಜೊತೆಗೆ ಪರಿಪೂರ್ಣ ಧ್ಯಾನದ ಮಾಹಿತಿಯನ್ನು ನೀಡುವ ಈ ಆ್ಯಪ್ AI-ಚಾಲಿತ ಬುದ್ಧಿವಂತಿಕೆಯ ಸಾಧನವನ್ನು ಸಹ ಒಳಗೊಂಡಿದೆ ಎನ್ನಲಾಗಿದೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Sat, 1 March 25