ನಿಮ್ಮ ಕಿವಿಯ ಆಕಾರದ ಆಧಾರದ ಮೇಲೆ ಸ್ವಭಾವ ಮತ್ತು ಅದೃಷ್ಟ ತಿಳಿಯಿರಿ

ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಕಿವಿಯ ಆಕಾರವು ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಸೂಚಿಸುತ್ತದೆ. ಉದ್ದ ಕಿವಿ ಮೃದು ಸ್ವಭಾವವನ್ನು, ಚಿಕ್ಕ ಕಿವಿಗಳು ಬುದ್ಧಿವಂತಿಕೆಯನ್ನು, ಮತ್ತು ಶಂಖಾಕಾರದ ಕಿವಿ ನಾಯಕತ್ವದ ಗುಣಗಳನ್ನು ಸೂಚಿಸುತ್ತವೆ. ದೊಡ್ಡ ಕಿವಿಗಳು ಮತ್ತು ಕಿವಿಯ ಮೇಲಿನ ರೋಮ ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ಕಿವಿಯ ಆಕಾರದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಮತ್ತು ಅದೃಷ್ಟವನ್ನು ತಿಳಿಯಬಹುದು ಎಂದು ಬಸವರಾಜ ಗುರೂಜಿ ಹೇಳುತ್ತಾರೆ.

ನಿಮ್ಮ ಕಿವಿಯ ಆಕಾರದ ಆಧಾರದ ಮೇಲೆ ಸ್ವಭಾವ ಮತ್ತು ಅದೃಷ್ಟ ತಿಳಿಯಿರಿ
Shape Of Earlobes

Updated on: Apr 24, 2025 | 10:24 AM

ಸಾಮುದ್ರಿಕಾ ಶಾಸ್ತ್ರವು ಭಾರತೀಯ ಜ್ಯೋತಿಷ್ಯದ ಒಂದು ಭಾಗವಾಗಿದ್ದು, ಮುಖ, ಅಂಗೈ ಮತ್ತು ದೇಹದ ಮೇಲಿನ ಎಲ್ಲಾ ಬಾಹ್ಯರೇಖೆಗಳ ವೈದಿಕ ಜ್ಞಾನವಾಗಿದೆ. ಈ ಶಾಸ್ತ್ರದ ಪ್ರಕಾರ, ದೇಹದ ಮೇಲಿನ ಪ್ರತಿಯೊಂದು ಗುರುತು, ಅಂಗೈ, ಹಣೆ ಮತ್ತು ಪಾದಗಳ ಮೇಲಿನ ರೇಖೆಗಳು ವ್ಯಕ್ತಿಯ ಭೂತ, ವರ್ತಮಾನ ಮತ್ತು ಭವಿಷ್ಯದ ಜೀವನದ ಬಗ್ಗೆ ತಿಳಿದುಕೊಳ್ಳಬಹುದು. ಇದರ ಜೊತೆಗೆ ನಿಮ್ಮ ಕಿವಿಯ ಆಕಾರದ ಆಧಾರದ ಮೇಲೆ ನಿಮ್ಮ ಸ್ವಭಾವ ಮತ್ತು ಅದೃಷ್ಟವನ್ನು ಕಂಡು ಹಿಡಿಯಬಹುದು. ಈ ಕುರಿತು ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

ಎಲ್ಲರ ಕಿವಿಯೂ ಒಂದೇ ರೀತಿಯಾಗಿರುವುದಿಲ್ಲ. ಕೆಲವರ ಕಿವಿ ಉದ್ದವಿದ್ದರೆ, ಇನ್ನೂ ಕೆಲವರ ಕಿವಿ ಶಂಖಾಕಾರದ ಅಥವಾ ಸಣ್ಣದಾಗಿರುತ್ತದೆ. ಇದಲ್ಲದೇ ಕೆಲವರ ಕಿವಿಗಳು ದಟ್ಟ ರೋಮಗಳಿಂದ ಕೂಡಿರುತ್ತದೆ. ಆದ್ದರಿಂದ ನಿಮ್ಮ ಕಿವಿ ಯಾವ ರೀತಿಯಲ್ಲಿದೆ ಎಂಬುದರ ಆಧಾರದ ಮೇಲೆ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
ಭಾನುವಾರ ಈ ವಸ್ತು ಖರೀದಿಸುವ ವ್ಯಕ್ತಿ ಶ್ರೀಮಂತನಾಗುತ್ತಾನೆ
ಪತ್ನಿಯನ್ನು ಹಿಂಸಿಸುವ ಪತಿಗೆ ಏನು ಶಿಕ್ಷೆ? ಗರುಡ ಪುರಾಣದ ಹೇಳುವುದೇನು?
ಮದುವೆಗೂ ಮುನ್ನ ಗ್ರಹ ಶಾಂತಿ ಪೂಜೆ ಮಾಡಿಸುವುದೇಕೆ? ಏನಿದರ ಮಹತ್ವ?
ಊಟ ಮಾಡಿದ ನಂತರ ಬಾಳೆ ಎಲೆಯನ್ನು ಒಳಮುಖವಾಗಿ ಮಡಚುವುದೇಕೆ?

ಇದನ್ನೂ ಓದಿ: ನಿಮ್ಮ ಹಲ್ಲುಗಳ ನಡುವೆ ಅಂತರವಿದೆಯೇ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ

ಬಸವರಾಜ ಗುರೂಜಿ ಹೇಳುವಂತೆ ,ಕಿವಿಯ ಆಕಾರವು ವ್ಯಕ್ತಿಯ ಸ್ವಭಾವ ಮತ್ತು ಅದೃಷ್ಟವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಉದ್ದವಾದ ಕಿವಿಗಳುಳ್ಳವರು ಸಾಮಾನ್ಯವಾಗಿ ಮೃದುಸ್ವಭಾವದವರಾಗಿರುತ್ತಾರೆ ಮತ್ತು ಯೋಚಿಸಿ ಮಾತನಾಡುತ್ತಾರೆ. ಚಿಕ್ಕ ಕಿವಿಗಳು ಬುದ್ಧಿವಂತಿಕೆ ಮತ್ತು ಯೋಜನಾ ಶಕ್ತಿಯನ್ನು ಸೂಚಿಸುತ್ತವೆ. ಶಂಖಾಕಾರದ ಕಿವಿಗಳುಳ್ಳವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ ಮತ್ತು ಆಡಳಿತಾತ್ಮಕ ಕೌಶಲ್ಯಗಳನ್ನು ಹೊಂದಿರುತ್ತಾರೆ. ದೊಡ್ಡ ಕಿವಿಗಳು ಮತ್ತು ಕಿವಿಯ ಮೇಲೆ ರೋಮಗಳಿದ್ದರೆ ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ಸಮಾನ್ಯ ಗಾತ್ರದ ಕಿವಿಗಳುಳ್ಳವರು ಬೋಧನಾ ಗುಣಗಳನ್ನು ಹೊಂದಿರುತ್ತಾರೆ. ಅತಿ ಚಿಕ್ಕ ಕಿವಿಗಳುಳ್ಳವರು ಹೆಚ್ಚು ಶ್ರಮಪಡಬೇಕಾಗುತ್ತದೆ. ತೆಳುವಾದ ಕಿವಿಗಳುಳ್ಳವರು ಅತಿಯಾದ ಚಿಂತೆಗೆ ಒಳಗಾಗುತ್ತಾರೆ. ಆದರೆ ಅತಿಯಾದ ಆಭರಣಗಳನ್ನು ಧರಿಸುವುದು ಶುಭವಲ್ಲ. ಬಲಭಾಗದ ಕಿವಿಯನ್ನು ಸೂರ್ಯಭಾಗ ಮತ್ತು ಎಡಭಾಗದ ಕಿವಿಯನ್ನು ಚಂದ್ರಭಾಗ ಎಂದು ಕರೆಯಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:34 am, Thu, 24 April 25