Sankashti Chaturthi 2022: ಇಷ್ಟಾರ್ಥ ಸಿದ್ಧಿ ಸಂಕಷ್ಟ ಚತುರ್ಥಿ; ಆಚರಣೆ, ಚಂದ್ರೋದಯದ ಸಮಯದ ಬಗ್ಗೆ ತಿಳಿಯಿರಿ

ಕೃಷ್ಣ ಪಕ್ಷದ ಚತುರ್ಥಿ ಗಣಪತಿಗೆ ವಿಶೇಷ ದಿನ. ಈ ದಿನವನ್ನು ಸಂಕಷ್ಟಿ ಎಂದು ಕರೆಯುತ್ತಾರೆ. ಸಕಲ ಸಂಕಷ್ಟವನ್ನೂ ನಿವಾರಿಸುವ ವಿಘ್ನನಿವಾರಕನನ್ನು ಪೂಜಿಸುವ ಗಣಪತಿಯನ್ನು ಆರಾಧಿಸುವ ಶುಭ ದಿನ.

Sankashti Chaturthi 2022: ಇಷ್ಟಾರ್ಥ ಸಿದ್ಧಿ ಸಂಕಷ್ಟ ಚತುರ್ಥಿ; ಆಚರಣೆ, ಚಂದ್ರೋದಯದ ಸಮಯದ ಬಗ್ಗೆ ತಿಳಿಯಿರಿ
ಸಂಕಷ್ಟ ಚತುರ್ಥಿ
Follow us
| Updated By: Pavitra Bhat Jigalemane

Updated on:Jan 21, 2022 | 12:05 PM

ಕೃಷ್ಣ ಪಕ್ಷದ ಚತುರ್ಥಿ ಗಣಪತಿಗೆ ವಿಶೇಷ ದಿನ. ಈ ದಿನವನ್ನು ಸಂಕಷ್ಟಿ ಎಂದು ಕರೆಯುತ್ತಾರೆ. ಸಕಲ ಸಂಕಷ್ಟವನ್ನೂ ನಿವಾರಿಸುವ ವಿಘ್ನನಿವಾರಕನನ್ನು ಪೂಜಿಸುವ, ಆರಾಧಿಸುವ ಶುಭ ದಿನ. ಈ ದಿನದಂದು ಉಪವಾಸ ಮಾಡುವ ಮೂಲಕ ಸಂಜೆ ಸೂರ್ಯಾಸ್ತದ ಬಳಿಕ ಗಣಪತಿಗೆ ವಿಶೇಷವಾದ ಪೂಜೆಯನ್ನು ಮಾಡಲಾಗುತ್ತದೆ. ಪ್ರತೀ ತಿಂಗಳು  ಕೃಷ್ಣ ಪಕ್ಷದ ನಾಲ್ಕನೇ ದಿನ ಅಂದರೆ ಚತುರ್ಥಿಯಂದು ಸಂಕಷ್ಟಿಯ ಆಚರಣೆ ಮಾಡಲಾಗುತ್ತದೆ. ಇಷ್ಟಾರ್ಥಗಳನ್ನು ಸಿದ್ಧಿಸುವಂತೆ ಬೇಡಿಕೊಂಡು ವೃತವನ್ನು ಆಚರಿಸಲಾಗುತ್ತದೆ. ಈ ದಿನ ಗಣೇಶನಿಗೆ ಪ್ರಿಯವಾದ ಮೋದಕ, ಗರಿಕೆಯನ್ನು ಸಮರ್ಪಿಸಿ ಪೂಜೆಯನ್ನು ಆಚರಿಸಲಾಗುತ್ತದೆ. ಪ್ರತೀ ತಿಂಗಳು ಆಚರಿಸುವ ಸಂಕಷ್ಟಿ ವೃತವನ್ನು ಸಂಕಷ್ಟಗಳನ್ನು ತೊರೆದು ಬದುಕಿನಲ್ಲಿ ಸುಖ ಶಾಂತಿಯನ್ನು ನೀಡು ಎಂದು ವಿಘ್ನ ವಿನಾಯಕನಲ್ಲಿ ಕೋರಿಕೊಳ್ಳುತ್ತಾರೆ. ಈ ತಿಂಗಳು ಇಂದು( ಜ.21) ಸಂಕಷ್ಟಿಯನ್ನು ಆಚರಿಸಲಾಗುತ್ತಿದೆ.

ವರ್ಷದಲ್ಲಿ ಇಪ್ಪತ್ತನಾಲ್ಕು ಚಂದ್ರ ಪಾಕ್ಷಿಕಗಳು ಮತ್ತು ಹನ್ನೆರಡು ಕೃಷ್ಣ ಪಕ್ಷಗಳಿವೆ. ಆದ್ದರಿಂದ, ಭಕ್ತರು ವರ್ಷಕ್ಕೆ ಹನ್ನೆರಡು ಸಂಕಷ್ಟಹರ ಗಣೇಶ ಚತುರ್ಥಿ ವ್ರತಗಳನ್ನು ಆಚರಿಸುತ್ತಾರೆ. ಸೂರ್ಯೋದಯ ಮತ್ತು ಚಂದ್ರೋದಯ ಈ ವೃತಕ್ಕೆ ಬಹುಮುಖ್ಯವಾಗಿದೆ. ಸೂರ್ಯನ ಉದಯದಿಂದ ಆರಂಭವಾಗುವ ವೃತ ಸೂರ್ಯಾಸ್ತದ ಬಳಿಕ ಅಂದರೆ ಚಂದ್ರೋದಯ ಆದ ನಂತರ ಕೊನೆಗೊಳ್ಳುತ್ತದೆ. ಚಂದ್ರನ ಉದಯದ ಬಳಿಕ ಸ್ನಾನ ಮಾಡಿ ಗಣಪತಿಯ ಪೂಜೆಯನ್ನು ಮಾಡಿ ನಂತರ ಚಂದ್ರನ ದರ್ಶನವನ್ನು ಪಡೆದು ಅರ್ಘ್ಯ ಸಲ್ಲಿಸಿ, ಉಪವಾಸವನ್ನು ಕೈಬಿಡುತ್ತಾರೆ. ನಂತರ ಪ್ರಸಾದವನ್ನು ಹಂಚಿ ಫಲಾಹಾರ ಸೇವನೆಯ ಮೂಲಕ ಅಂದಿನ ಸಂಕಷ್ಟಿಯ ವೃತವನ್ನು ಪೂರ್ಣಗೊಳಿಸಲಾಗುತ್ತದೆ.

ಈ ಬಾರಿ ಸಂಕಷ್ಟಿಯಂದು ಸೂರ್ಯೋದಯವು ಜ. 21 ರಂದು 04:20 AM to 05:03 AMರ ಹೊತ್ತಿಗೆ ಸಂಭವಿಸಲಿದೆ. ಚಂದ್ರೋದಯವು ಜ.21 ರಂದು ಸಂಜೆ 3.21 ಕ್ಕೆ ಆಗಿಲಿದೆ. ಫೂಜೆಗೆ ಶುಭ ಮುಹೂರ್ತಮಧ್ಯರಾತ್ರಿ 2.30 ರಿಂದ 4.09ರವರೆಗೆ ಇದೆ. ಶಂಕಷ್ಟ ಚತುರ್ಥಿಯಂದು ಓಂ ಗಂ ಗಣಪತಯೇ ನಮಃ ಹಾಗೂ ಓಂ ವಕ್ರತುಂಡಾಯಂ ಮಂತ್ರ ಶ್ರೇಷ್ಠವಾಗಿದೆ.

ಸಂಕಷ್ಟಿಯ ಮಹತ್ವ

ಸಂಕಷ್ಟ ಚತುರ್ಥಿಯಂದು ಚಂದ್ರನ ದರ್ಶನ  ಪಡೆಯುವ ಪವಿತ್ರ ಆಚರಣೆ ಎಂದು ಭಾವಿಸಲಾಗುತ್ತದೆ. ಈ ದಿನ ಉಪವಾಸ ಮಾಡುವುದರ  ಮೂಲಕ ವೃತವನ್ನು ಆಚರಿಸಿ ಭಕ್ತಿಯಿಂದ ಫೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ಎಲ್ಲರ ನಂಬಿಕೆಯಾಗಿದೆ. ಮಾಘ ಮಾಸದ ಕೃಷ್ಣ ಪಕ್ಷ ಚತುರ್ಥಿಯಂದು ಉತ್ತರ ಭಾರತದಲ್ಲಿ ರಾಜ್ಯಗಳಲ್ಲಿ ಸಂಕತ್​ ಚೌತ್​ ಎಂದು ಆಚರಿಸಲಾಗಿತ್ತದೆ. ಸಂಕತ್​ ಚೌತ್​, ತಿಲ್​ ಕುತ್​ ಔತ್, ವಕ್ರ ತುಂಡಿ ಚತುರ್ಥಿ ಎಂದು ಕರೆಯಲ್ಪಡುವ ಸಂಕಷ್ಟ ಚತುರ್ಥಿಯನ್ನು  ದೇವಿಗೆ ಅರ್ಪಿಸಲಾಗುತ್ತದೆ. ಈ ದಿನ ಮಹಿಳೆಯರು ಪುತ್ರರ ಯೋಗಕ್ಷೇಮಕ್ಕಾಗಿ ಉಪವಾಸವನ್ನು ಅಚರಿಸುತ್ತಾರೆ.

ಇದನ್ನೂ ಓದಿ:

ನೆಮ್ಮದಿಯ ಬದುಕು ನಿಮ್ಮದಾಗಬೇಕಾ? ದಿನನಿತ್ಯ ನಿಮ್ಮ ನಡೆನುಡಿ, ಆಚಾರ ವಿಚಾರ ಹೀಗಿರಲಿ! ಏನದು, ತಿಳಿಯೋಣ

Published On - 10:54 am, Thu, 20 January 22

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ