ನೆಮ್ಮದಿಯ ಬದುಕು ನಿಮ್ಮದಾಗಬೇಕಾ? ದಿನನಿತ್ಯ ನಿಮ್ಮ ನಡೆನುಡಿ, ಆಚಾರ ವಿಚಾರ ಹೀಗಿರಲಿ! ಏನದು, ತಿಳಿಯೋಣ

ಮಂಗಳವಾರ, ಶುಕ್ರವಾರದಂದು ಯಾರನ್ನು ಸಹ ಅವಾಚ್ಯ ಶಬ್ದಗಳಿಂದ ಬಯ್ಯಬೇಡಿ, ಬೇರೆಯ ದಿನಗಳಲ್ಲಿ ಬಯ್ಯಬಹುದು ಎಂದಲ್ಲ! ವಿಶೇಷವಾಗಿ ಆ ದಿನಗಳಷ್ಟೇ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳಲ್ಲಿ ಅವಾಚ್ಯ ಶಬ್ದಗಳಿಂದ ಬಯ್ಯಲೇಬಾರದು ಮತ್ತು ಅವರ ಮನಸ್ಸನ್ನು ಸಹ ನೋಯಿಸಬಾರದು.

ನೆಮ್ಮದಿಯ ಬದುಕು ನಿಮ್ಮದಾಗಬೇಕಾ? ದಿನನಿತ್ಯ ನಿಮ್ಮ ನಡೆನುಡಿ, ಆಚಾರ ವಿಚಾರ ಹೀಗಿರಲಿ! ಏನದು, ತಿಳಿಯೋಣ
ನೆಮ್ಮದಿಯ ಬದುಕು ನಿಮ್ಮದಾಗಬೇಕೇ? ದಿನನಿತ್ಯ ನಿಮ್ಮ ನಡೆನುಡಿ, ಆಚಾರ ವಿಚಾರ ಹೀಗಿರಲಿ: ಏನದು, ತಿಳಿಯೋಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 20, 2022 | 5:23 AM

ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಕೆಲವು ಸಂಪ್ರದಾಯ, ವಾಡಿಕೆಗಳನ್ನ ರೂಢಿಸಿಕೊಂಡು ಬಂದಿದ್ದಾರೆ. ಅವು ದಿನನಿತ್ಯ ನಮ್ಮ ಜೀವನದಲ್ಲಿ ಹಾಸುಹೊಕ್ಕಿರುವಂತಹುವಾಗಿದೆ (spiritual). ಅಂದರೆ ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಮುಸ್ಸಂಜೆ ವೇಳೆ ಅಥವಾ ಸೂರ್ಯೋದಯದ ಸಮಯದಲ್ಲಿ ಮಲಗಬಾರದು (bad omen). ಹೊರಗೆ ಹೋಗಿ ಬಂದಾಗ ಕೈ ಕಾಲು ತೊಳೆದು, ಒರೆಸಿಕೊಂಡು ಮನೆಯೊಳಕ್ಕೆ ಪ್ರವೇಶಿಸಬೇಕು. ಗುರುಹಿರಿಯರಿಗೆ ಗೌರವಾದರಗಳನ್ನು ನೀಡಬೇಕು. ಕರ್ಮ ಅಂದರೆ ಬೇರೇನೂ ಅಲ್ಲ. ನಾವು ಮಾಡಿದ ತಪ್ಪು- ಸರಿಗಳನ್ನು ಅನುಭವಿಸುವುದು. ಸರಿ ಹಾಗಾದರೆ ದಿನನಿತ್ಯ ನಮ್ಮ ನಡೆನುಡಿ, ಆಚಾರ ವಿಚಾರ ಹೇಗಿದ್ದರೆ ಚೆಂದ? ತಿಳಿಯೋಣ ಬನ್ನೀ

1) ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.

2) ಮನೆಯ ಮುಖ್ಯ ದ್ವಾರದ ಬಾಗಿಲಿನ ಹೊಸ್ತಿಲ ಮೇಲೆ ನಿಲ್ಲಬೇಡಿ. ಬೇರೆಯವರೂ ಸಹ ಹಾಗೆ ಹೊಸ್ತಿಲ ಮೇಲೆ ನಿಲ್ಲದಂತೆ ನೋಡಿಕೊಳ್ಳಿ. ಬೇರೆ ಹೊಸ್ತಿಲ ಮೇಲೆಯೂ ಸಹ ನಿಲ್ಲಕೂಡದು.

3) ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ. ರಾತ್ರಿ ಮಲಗುವ ಮೊದಲು ಕಸ ಗುಡಿಸಿದರೆ ಹೊರಗೆ ಹಾಕಬೇಡಿ. ಒಂದು ಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.

4) ಪರಕೆಯ ತುದಿಯ ಭಾಗವನ್ನು (ಕಸ ಗುಡಿಸುವ ಭಾಗ) ಮೇಲೆ ಮಾಡಿ ನಿಲ್ಲಿಸಬೇಡಿ. ಅದು ಸ್ಮಶಾನದ ಮನೆಯ ಸೂಚಕವಾಗಿದೆ. ಆದ್ದರಿಂದ ಹಾಗೆ ಇಡುವುದು ಸತ್ತವರ ಮನೆಯಲ್ಲಿ ಮಾತ್ರ.

5) ಮೊರ, ಪರಕೆಗಳನ್ನು ಕಾಲುಗಳಿಂದ ಒದೆಯಬೇಡಿ ಅಥವಾ ತುಳಿಯಬೇಡಿ. ಹಾಗೇನಾದರೂ ನಿಮ್ಮ ಕಾಲು ಅಕಸ್ಮಾತ್ತಾಗಿ ತಗುಲಿದರೆ ಪರಕೆಗೆ ನಮಸ್ನಾರ ಮಾಡಿ. ಯಾವ ಪದಾರ್ಥವನ್ನೂ ತುಳಿಯಬಾರದು.

6) ಚಪ್ಪಲಿಗಳನ್ನು ಮನೆಯ ಹೊಸ್ತಿಲು ಮತ್ತು ಮುಖ್ಯ ದ್ವಾರದ ಎದುರಿಗೆ ಅಥವಾ ಅದರ ಬಳಿ ಬಿಡಬೇಡಿ. ಪಕ್ಕದಲ್ಲಿ ಸ್ವಲ್ಪ ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು. ರಂಗೋಲಿ ಹಾಕದೆ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಒಳ್ಳೆಯದಲ್ಲ. ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರೂ ಹಾಕಿಬಿಡಿ.

7) ಮನೆಯ ಗೋಡೆಯ ಮೇಲೆ, ದೇವರ ಮನೆ ಮುಂತಾದ ಸ್ಥಳಗಳಲ್ಲಿ  ಶಾಯಿ ಅಥವಾ ಕರಿ ಬಣ್ಣ ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.

8) ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು, ಎಳೆದುಕೊಂಡು ಓಡಾಡಬೇಡಿ. ಕಾಲಿನ ಪಾದವನ್ನು ಎತ್ತಿ ಇಟ್ಟು ನಡೆಯಬೇಕು. ಸಾಧ್ಯವಾದಷ್ಟು ಶಬ್ದ ಕಡಿಮೆ ಇರಲಿ. ಹೆಣ್ಣುಮಕ್ಕಳು ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸುವುದು ಒಳ್ಳೆಯದು. ಗೆಜ್ಜೆಯ ಶಬ್ದ ಲಕ್ಷ್ಮಿಯ ಸಂಕೇತ.

9) ಮಂಗಳವಾರ, ಶುಕ್ರವಾರದಂದು ಯಾರನ್ನು ಸಹ ಅವಾಚ್ಯ ಶಬ್ದಗಳಿಂದ ಬಯ್ಯಬೇಡಿ, ಬೇರೆಯ ದಿನಗಳಲ್ಲಿ ಬಯ್ಯಬಹುದು ಎಂದಲ್ಲ! ವಿಶೇಷವಾಗಿ ಆ ದಿನಗಳಷ್ಟೇ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳಲ್ಲಿ ಅವಾಚ್ಯ ಶಬ್ದಗಳಿಂದ ಬಯ್ಯಲೇಬಾರದು ಮತ್ತು ಅವರ ಮನಸ್ಸನ್ನು ಸಹ ನೋಯಿಸಬಾರದು.

10) ಹರಿದು ಹೋದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ. ಒಂದು ವೇಳೆ ನೀವೇನಾದರೂ ಧರಿಸಿದರೆ ಮಾಟ ಮಂತ್ರ ದೃಷ್ಟಿಗಳ, ಪ್ರಯೋಗ ಮಾಡಿಸಿದ್ದರೆ ಅವುಗಳ ಪರಿಣಾಮ ಬೇಗ ನಿಮ್ಮ ಮೇಲಾಗುತ್ತದೆ.

11) ಕೈ ಮತ್ತು ಕಾಲುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ. ಅದು ದಾರಿದ್ರ್ಯದ ಸಂಕೇತವಾಗಿದೆ.

12) ಉಗುರುಗಳನ್ನು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ. ಹಾಗೆಯೇ ಶುಕ್ರವಾರ, ಮಂಗಳವಾರ ಹಾಗೂ ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು. ಕತ್ತರಿಸಿದ ಉಗುರುಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಎಸೆಯಬಾರದು. ಹಾಲು ಚೆಲ್ಲಿದ್ದರೆ ತುಳಿದುಕೊಂಡು ಓಡಾಡಬೇಡಿ. ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು. ಕಾಲಿನಿಂದ ಒರೆಸಬಾರದು.

13) ಮನೆಯಲ್ಲಿ ಹೆಣ್ಣುಮಕ್ಕಳು ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು, ಕುಂಕುಮವಿಲ್ಲದ ಹಣೆ, ಕೆದರಿದ ಕೂದಲು, ಅರಿಶಿನ ಹಚ್ಚದ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿವೆ.

14) ಮುಸ್ಸಂಜೆ ಮತ್ತು ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.

15) ಹಾಸಿಗೆ, ಸೋಫಾ, ಮಂಚದ ಮೇಲೆ ಕುಳಿತು ಧ್ಯಾನ ಪೂಜೆಗಳನ್ನು ಮಾಡಬೇಡಿ ಅಂತಹವು ಯಾವ ಫಲವನ್ನೂ ನೀಡುವುದಿಲ್ಲ. (ನಿತ್ಯಸತ್ಯ ಸತ್ಸಂಗ್ -ಸಂಗ್ರಹ)

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)