ಬಾವಿಗೆ ಬಿದ್ದಂತೆ ಕನಸು ಕಂಡರೆ ಏನರ್ಥ? ಭವಿಷ್ಯದ ಕೆಡುಕಿನ ಮುನ್ಸೂಚನೆಯೇ? ಇಲ್ಲಿದೆ ಮಾಹಿತಿ
ಭಯಗೊಳ್ಳುವ ಕನಸುಗಳಲ್ಲಿ ಬಾವಿಗೆ ಬಿದ್ದಂತೆ ಕಾಣಿಸುವುದು ಕೂಡ ಒಂದಾಗಿದೆ. ನಿಮಗೆ ಆಳವಾದ ಬಾವಿಗೆ ಬಿದ್ದಂತೆ ಕನಸು ಕಾಣಿಸಿಕೊಂಡರೆ ಅದು ಭವಿಷ್ಯದ ತೊಡಕಿನ ಮುನ್ಸೂಚನೆಯಾಗಿದೆ.
ಸಾಮಾನ್ಯವಾಗಿ ಕನಸು ಎಲ್ಲರಿಗೂ ಬೀಳುತ್ತದೆ. ಆದರೆ ಎಂತಹ ಕನಸು ಬೀಳುತ್ತದೆ ಎನ್ನುವುದು ಮುಖ್ಯವಾಗಿರುತ್ತದೆ. ಏಕೆಂದರೆ ನಿಮಗೆ ಬೀಳುವ ಪ್ರತೀ ಕನಸಿಗೂ ಒಂದೊಂದು ಅರ್ಥವಿರುತ್ತದೆ. ಭವಿಷ್ಯದ ಒಳಿತು ಕೆಡುಕನ್ನು ಕನಸು ನಿರ್ಧರಿಸುತ್ತದೆ ಎಂದು ನಂಬಲಾಗುತ್ತದೆ. ಅಲ್ಲದೆ ಕೆಲವೊಮ್ಮೆ ಯಾವುದೋ ಘಟನೆಯು ನಿಮ್ಮ ಮೇಲೆ ಅಗಾಧವಾದ ಪರಿಣಾಮ ಬೀರಿದ್ದರೆ ಅಂತಹ ಸನ್ನಿವೇಶಗಳೂ ಕೂಡ ಕನಸಾಗಿ ನಿಮ್ಮ ನಿದ್ರೆಯ ಸಮಯದಲ್ಲಿ ಕಾಣಸಿಕೊಳ್ಳಬಹುದು. ಆದರೆ ಕೆಲವೊಂದು ಕನಸುಗಳು ನಿದ್ದೆಯಿಂದ ನಿಮ್ಮನ್ನು ಎಚ್ಚರಿಸುವಷ್ಟು ಭಯಾನಕವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಕಂಡ ಕನಸನ್ನು ವಿಮರ್ಶೆಗೆ ಒಳಪಡಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಏಕೆಂದರೆ ನಿಮಗೆ ಭವಿಷ್ಯದಲ್ಲಿ ಸಂಭವಿಸುವ ಯಾವುದೋ ಘಟನೆಯ ಮುನ್ಸೂಚನೆಯ ಕನಸು ಅದಾಗಿರಬಹುದು. ಅಂತಹ ಭಯಗೊಳ್ಳುವ ಕನಸುಗಳಲ್ಲಿ ಬಾವಿಗೆ ಬಿದ್ದಂತೆ ಕಾಣಿಸುವುದು ಕೂಡ ಒಂದಾಗಿದೆ. ಹೌದು ನಿಮಗೆ ಆಳವಾದ ಬಾವಿಗೆ ಬಿದ್ದಂತೆ ಕನಸು ಕಾಣಿಸಿಕೊಂಡರೆ ಅದು ಭವಿಷ್ಯದ ತೊಡಕಿನ ಮುನ್ಸೂಚನೆಯಾಗಿದೆ.
ಬಾವಿಗೆ ಬಿದ್ದಂತೆ ಕಾಣುವ ಕನಸಿನ ಅರ್ಥವೇನು? ಕೆಲವೊಮ್ಮ ಕನಸಿನಲ್ಲಿ ಆಳವಾದ ಬಾವಿಗೆ ಬಿದ್ದಂತೆ ಭಾಸವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ತಟ್ಟನೆ ಎಚ್ಚರವಾಗಿ ಎದ್ದು ಕುಳಿತುಕೊಳ್ಳುತ್ತೇವೆ. ಈ ಕನಸಿನ ಬಗ್ಗೆ ಅವಶ್ಯವಾಗಿ ನೀವು ಎಚ್ಚರಿಕೆ ವಹಿಸಲೇಬೇಕು. ಏಕೆಂದರೆ ಬಾವಿಗೆ ಬಿದ್ದಂತೆ ಕಾಣಿಸಿದರೆ ನೀವು ಯಾವುದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದೀರಿ ಅಥವಾ ಸಿಲುಕಲಿದ್ದೀರಿ ಎಂದರ್ಥ. ಯಶಸ್ಸನ್ನು ಗಳಿಸುವ ಹಾದಿಯಲ್ಲಿ ಸೋಲನ್ನು ಅನುಭವಸುತ್ತಿದ್ದೀರಿ, ನಿಮ್ಮ ಮನಸ್ಸು ಹದಗೆಟ್ಟಿದೆ, ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ ಎನ್ನುವುದನ್ನು ಸೂಚಿಸುತ್ತದೆ. ಬಾವಿಯೊಳಗೆ ಕಾಣುವ ಕತ್ತಲು ನಿಮ್ಮ ಅವಕಾಶಗಳ ಹಾದಿ ಕಾಣದಂತೆ ಕತ್ತಲಾವರಿಸಿದೆ ಎನ್ನುವ ಸೂಚನೆ ನೀಡುತ್ತದೆ.
ಅಂತಹ ಸಂದರ್ಭಗಳಲ್ಲಿ ಏನು ಮಾಡಬೇಕು? ನೀವು ಬಾವಿಯಲ್ಲಿ ಬಿದ್ದಂತೆ ಕನಸು ಕಂಡರೆ ಅಂತಹ ಸಂದರ್ಭಗಳಲ್ಲಿ ಆದಷ್ಟು ಎಚ್ಚರಿಕೆಯಿಂದಿರಿ. ನಿಮ್ಮ ಸುತ್ತಮುತ್ತಲು ನಿಮ್ಮ ವಿಷಯವಾಗಿ ಆಗುತ್ತಿರುವ ಚರ್ಚೆಗಳನ್ನು ಗಮನಿಸಿ. ನಿಮಗಾಗುತ್ತಿರುವ ಸಮಸ್ಯೆಗಳನ್ನು ವಿಶ್ಲೇಷಿಸಿ. ವಾಸ್ತವತೆಯನ್ನು ಅರ್ಥಮಾಡಿಕೊಂಡು ಪ್ರಾಯೋಗಿಕ ಪರಿಹಾರವನ್ನು ಕಂಡುಕೊಳ್ಳಿ, ಒತ್ತಡಕ್ಕೆ ಒಳಗಾಗಬೇಡಿ. ಇದು ನಿಮ್ಮನ್ನು ಇನ್ನಷ್ಟು ಸಮಸ್ಯೆಗಳಿಗೆ ಒಳಗಾಗುವಂತೆ ಮಾಡುತ್ತದೆ. ಅದೇ ರೀತಿ ದುಡುಕಿನ ನಿರ್ಧಾರ ಬೇಡ. ಯಾವುದೇ ಕೆಲಸ ಮಾಡುವ ಮನ್ನ ಅದರ ಆಗುಹೋಗುಗಗಳ ಬಗ್ಗೆ ತಿಳಿದುಕೊಳ್ಳಿ. ಆದಷ್ಟು ಎಚ್ಚರಿಕೆಯಿಂದಿರಿ.
ಇದನ್ನೂ ಓದಿ:
Sankashti Chaturthi 2022: ಇಷ್ಟಾರ್ಥ ಸಿದ್ಧಿ ಸಂಕಷ್ಟ ಚತುರ್ಥಿ; ಆಚರಣೆ, ಚಂದ್ರೋದಯದ ಸಮಯದ ಬಗ್ಗೆ ತಿಳಿಯಿರಿ
ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬುದು ಕಟ್ಟುಪಾಡು! ಇದು ಎಷ್ಟು ಸರಿ, ಇದಕ್ಕೆ ಕಾರಣವೇನು?
Published On - 11:24 am, Thu, 20 January 22