ಶನಿವಾರವನ್ನು ನ್ಯಾಯದ ಶನಿ ದೇವನಿಗೆ ಸಮರ್ಪಿಸಲಾಗಿದೆ. ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಮಾಡುವ ಮೂಲಕ, ಶನಿದೇವನು ಪ್ರಸನ್ನನಾಗುತ್ತಾನೆ ಮತ್ತು ತನ್ನ ಕೃಪಾಕಟಾಕ್ಷ ವನ್ನು ಸುರಿಸುತ್ತಾನೆ. ಒಬ್ಬ ವ್ಯಕ್ತಿಗೆ ಅವನ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ತಕ್ಕ ಫಲವನ್ನು ಶನಿದೇವ ಮಾತ್ರ ನೀಡುತ್ತಾನೆ ಎಂದು ನಂಬಲಾಗಿದೆ. ಶನಿದೇವ ಕೋಪಗೊಂಡರೆ ಯಾರದೇ ಜೀವನದಲ್ಲಾಗಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಜನರು ಶನಿದೇವನ ಬಗ್ಗೆ ತುಂಬಾ ಭಯಪಡುತ್ತಾರೆ ಮತ್ತು ಅವನನ್ನು ಸಂತೋಷವಾಗಿರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಶನಿದೇವನ ಪ್ರಸನ್ನಗೊಳಿಸಲು ಪರಿಹಾರ ಮಾರ್ಗಗಳಿವೆ. ಅದನ್ನು ಅನುಸರಿಸುವ ಮೂಲಕ ವ್ಯಕ್ತಿಯು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ ಮತ್ತು ಜೀವನದಲ್ಲಿ ಸಂತೋಷವಾಗಿರುತ್ತಾನೆ.
ಶನಿವಾರದ ಪರಿಹಾರಗಳು:
ಈ ವಸ್ತುಗಳನ್ನು ದಾನ ಮಾಡಿ: ಶನಿವಾರದಂದು ದಾನ ಮಾಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶನಿದೇವನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಈ ದಿನ, ಕರಿ ಎಳ್ಳು, ಕರಿ ಉದ್ದಿನ ಬೇಳೆ, ಕರಿ ಎಳ್ಳು ಎಣ್ಣೆ, ಕರಿ ಬೆಲ್ಲ, ಕಪ್ಪು ಬಟ್ಟೆ ಅಥವಾ ಕಬ್ಬಿಣದಂತಹ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದು ತುಂಬಾ ಮಂಗಳಕರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
Also Read: ಏನಿದು ಶನಿ ದೆಸೆ? ಶನಿ ಮಹಾತ್ಮನಿಗೆ 8 ಪತ್ನಿಯರು, ಆದರೆ ಆ ಒಬ್ಬ ಹೆಂಡತಿ ಕೊಟ್ಟ ಶಾಪ ಏನು?
ಅರಳಿ ಮರದ ಪೂಜೆ: ಶನಿವಾರದಂದು ಉಪವಾಸ ಮಾಡುವುದು ಮತ್ತು ಅರಳಿ ಮರವನ್ನು ಪೂಜಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶನಿವಾರ ಬೆಳಗ್ಗೆ ಗಂಗಾಜಲದಲ್ಲಿ ಕರಿ ಎಳ್ಳು ಮಿಶ್ರಿತ ನೀರನ್ನು ಅರ್ಪಿಸಿ, ಎಳ್ಳೆಣ್ಣೆ ದೀಪ ಹಚ್ಚಬೇಕು. ಇದರ ನಂತರ, ಓಂ ಶಂ ಶನೈಶ್ಚರಾಯ ನಮಃ ಎಂಬ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ಶನಿದೇವನು ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ಇದೆ.
ಕಪ್ಪು ನಾಯಿಗೆ ಆಹಾರ ನೀಡುವುದು: ಕಪ್ಪು ನಾಯಿಯನ್ನು ಶನಿದೇವನ ವಾಹನವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಕಪ್ಪು ನಾಯಿಗೆ ಶನಿವಾರ ಆಹಾರವನ್ನು ನೀಡಬೇಕು. ಇದು ಶನಿದೇವನನ್ನು ಮೆಚ್ಚಿಸುತ್ತದೆ ಮತ್ತು ವ್ಯಕ್ತಿಯನ್ನು ಸಾಲದಿಂದ ಮುಕ್ತಗೊಳಿಸುತ್ತದೆ.
ಮಣ್ಣಿನ ಮಡಕೆ ಮತ್ತು ಜೇನುತುಪ್ಪ: ವ್ಯಾಪಾರದಲ್ಲಿ ಹಿನ್ನಡೆಯಿದ್ದು, ನಿಮ್ಮ ಕೆಲಸವನ್ನು ಮುಂದುವರಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ತಿಳುದಬಂದರೆ ಇಂದು ಮಣ್ಣಿನ ಮಡಕೆಯನ್ನು ತೆಗೆದುಕೊಂಡು, ಅದರಲ್ಲಿ ಜೇನುತುಪ್ಪವನ್ನು ತುಂಬಿಸಿ, ಅದರ ಮೇಲೆ ಮುಚ್ಚಳವನ್ನು ಹಾಕಿ ಮತ್ತು ಅದನ್ನು ಮನೆಯ ವಾಯವ್ಯ ಮೂಲೆಯಲ್ಲಿ ಇಡೀ ದಿನ ಇಡಿ. ಮರುದಿನ, ನಿಮ್ಮ ವ್ಯಾಪಾರದ ಬೆಳವಣಿಗೆಗಾಗಿ ಮಾನಸಿಕವಾಗಿ ಪ್ರಾರ್ಥಿಸುತ್ತಾ, ಜೇನು ತುಂಬಿದ ಮಣ್ಣಿನ ಮಡಕೆಯನ್ನು ಏಕಾಂತ ಸ್ಥಳದಲ್ಲಿ ಇಟ್ಟುಬಿಡಿ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ