ಹಾಗಾಗಿ, ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಾಲಯದ 'ತಿರುಪತಿ ಲಡ್ಡು' ಪ್ರಸಾದ ನೆನೆದರೆ ಭಕ್ತಿಯ ಜೊತೆಗೆ ಬಾಯಲ್ಲಿ ನೀರು ಬರುತ್ತದೆ. ತುಪ್ಪ ಮತ್ತು ಏಲಕ್ಕಿ ಆಸ್ವಾದ ಹೊಂದಿರುವ ಈ ಲಡ್ಡು ವಿಶ್ವ ಪ್ರಸಿದ್ಧ. ಈಗ ಈ ಪವಿತ್ರ ಪ್ರಸಾದಕ್ಕೆ 309 ವರ್ಷ. ಇದನ್ನು ಮೊದಲ ಬಾರಿಗೆ 1715ರ ಆಗಸ್ಟ್ 2 ರಂದು ಪ್ರಾರಂಭಿಸಲಾಯಿತು.