ಏನಿದು ಶನಿ ದೆಸೆ? ಶನಿ ಮಹಾತ್ಮನಿಗೆ 8 ಪತ್ನಿಯರು, ಆದರೆ ಆ ಒಬ್ಬ ಹೆಂಡತಿ ಕೊಟ್ಟ ಶಾಪ ಏನು?

Shani Dese or Shani Dasha: ಯುವಕನಾದ ಮೇಲೆ ಶನಿಯು ಚಿತ್ರರತನ ಮಗಳಾದ 'ದಾಮಿನಿ' ಎಂಬ ಕನ್ಯೆಯ ಜೊತೆ ಮದುವೆ ಯಾಯಿತು. ದಾಮಿನಿ ದೈವ ಭಕ್ತೆ, ಸೌಂದರ್ಯವತಿ ಹಾಗೂ ಜಾಣೆ. ದಾಮಿನಿ ಸೇರಿದಂತೆ ಶನಿದೇವನಿಗೆ ಎಂಟು ಜನ ಪತ್ನಿಯರು ಇದ್ದರು. ಒಮ್ಮೆ ದಾಮಿನಿಗೆ ಪತಿ ಶನಿಯಿಂದ ಮಗುವನ್ನು ಪಡೆಯ ಬೇಕೆಂದು ಆಸೆಯಾಯಿತು, ಆಗ ಶನಿಯ ಬಳಿ ಬರುತ್ತಾಳೆ. ಆ ಸಮಯದಲ್ಲಿ ಶನಿ...

ಏನಿದು ಶನಿ ದೆಸೆ? ಶನಿ ಮಹಾತ್ಮನಿಗೆ 8 ಪತ್ನಿಯರು, ಆದರೆ ಆ ಒಬ್ಬ ಹೆಂಡತಿ ಕೊಟ್ಟ ಶಾಪ ಏನು?
ಉದಾತ್ತ ಮನಸಿನ ಶನಿ ಮಹಾತ್ಮ ತನ್ನ ಭಕ್ತರನ್ನು ನೇರವಾಗಿ ನೋಡುವುದಿಲ್ಲ!
Follow us
|

Updated on:Jul 24, 2024 | 4:06 AM

ಕಲಿಯುಗದಲ್ಲಿ ಮನುಷ್ಯ ತನ್ನ ಜೀವನ್ಮುಕ್ತಿಗಾಗಿ ಶುದ್ಧವಾದ ಮನಸ್ಸಿನಿಂದ ಭಗವಂತನ ಕಥೆಗಳನ್ನು ಶ್ರವಣ ಮಾಡುವುದು, ಕೀರ್ತನೆ ಭಜನೆ ಮಾಡುವುದರಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಸಕಲ ದೋಷ ನಿವಾರಣೆಗಾಗಿ, ಶನಿಮಹಾತ್ಮೆ ಕಥೆಯನ್ನು ಕೇಳುವುದು, ಹೇಳುವುದು ಸರಳ ಪರಿಹಾರವಾಗಿದೆ.

ಸೃಷ್ಟಿಯ ಆದಿಯಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾದ ಕಶ್ಯಪ ಮಹರ್ಷಿಗಳಿಗೆ ದಿತಿ ಮತ್ತು ಅದಿತಿ ಎಂಬ ಇಬ್ಬರು ಪತ್ನಿಯರು. ದಿತಿ ಯ ಗರ್ಭದಲ್ಲಿ ಹಲವಾರು ರಾಕ್ಷಸರು, ದೈತ್ಯರು ಜನಿಸಿದರು. ಅದಿತಿಯ ಗರ್ಭದಲ್ಲಿ ಇಂದ್ರ, ಚಂದ್ರ, ಸೇರಿದಂತೆ 33 ಕೋಟಿ ದೇವತೆಗಳು ಜನಿಸಿ ತಾಯಿಯಾದಳು. ಲೋಕಪಾಲಕನಾದ ಸೂರ್ಯನು, ಕಶ್ಯಪ- ಅದಿತಿಯರಿಗೆ ಜನಿಸಿದ ಮಗ. ಮುಂದೆ ಸೂರ್ಯನು ವಿಶ್ವಕರ್ಮನ ಮಗಳಾದ ಸಂಧ್ಯಾ ದೇವಿಯನ್ನು ವಿವಾಹವಾಗುತ್ತಾನೆ. ಇವರಿಬ್ಬರಿಗೆ ಮೂರು ಮಕ್ಕಳು. ಮೊದಲನೆಯ ಮಗು ವೈವಸತ್ವ ಮನುವಾದರೆ, ಎರಡನೆಯ ಮಗು ಯಮ ದೇವ ಮತ್ತು ಮೂರನೆಯ ಮಗುವೇ ಯಮುನಾ ದೇವಿ.

ಸೂರ್ಯನ ತಾಪವನ್ನು ತಡೆದುಕೊಳ್ಳಲು ಸಂಧ್ಯಾ ದೇವಿಗೆ ಸಾಧ್ಯವಾಗದೇ, ಇದರಿಂದ ತಪ್ಪಿಸಿಕೊಳ್ಳಲು ತಪಸ್ಸನ್ನು ಆಚರಿಸಲು ಮುಂದಾಗುತ್ತಾಳೆ. ತಪ್ಪಸ್ಸಿಗೆ ಹೋಗುವ ಮುನ್ನ ತನ್ನ ಮಕ್ಕಳ ಪಾಲನೆ ಮಾಡಲು ತನ್ನ ನೆರಳು ಛಾಯಾ ದೇವಿಯನ್ನು ಸೃಷ್ಟಿ ಮಾಡುತ್ತಾಳೆ. ಸೂರ್ಯ ದೇವನಿಗೆ ಸಂಧ್ಯಾ ದೇವಿಯ ರೂಪದಲ್ಲಿ ಇರುವುದು ಛಾಯಾ ಎಂದು ತಿಳಿಯುವುದಿಲ್ಲ. ಹಾಗಾಗಿ ಆವರಿಬ್ಬರಿಗೂ ಕೂಡ ಮಗುವೊಂದು ಜನಿಸುತ್ತದೆ. ಅವರೇ ಭಗವಂತ ಶನಿದೇವ.

ಯುವಕನಾದ ಮೇಲೆ ಶನಿಯು ಚಿತ್ರರತನ ಮಗಳಾದ ‘ದಾಮಿನಿ’ ಎಂಬ ಕನ್ಯೆಯ ಜೊತೆ ಮದುವೆ ಯಾಯಿತು. ದಾಮಿನಿ ದೈವ ಭಕ್ತೆ, ಸೌಂದರ್ಯವತಿ ಹಾಗೂ ಜಾಣೆ. ದಾಮಿನಿ ಸೇರಿದಂತೆ ಶನಿದೇವನಿಗೆ ಎಂಟು ಜನ ಪತ್ನಿಯರು ಇದ್ದರು. ಒಮ್ಮೆ ದಾಮಿನಿಗೆ ಪತಿ ಶನಿಯಿಂದ ಮಗುವನ್ನು ಪಡೆಯ ಬೇಕೆಂದು ಆಸೆಯಾಯಿತು, ಆಗ ಶನಿಯ ಬಳಿ ಬರುತ್ತಾಳೆ. ಆ ಸಮಯದಲ್ಲಿ ಶನಿ ಈಶ್ವರನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಿದ್ದನು.

ಏನೇ ಆದರೂ ಅವನು ತಪಸ್ಸಿನಿಂದ ಈಚೆ ಬರಲಿಲ್ಲ. ದಾಮಿನಿ ಪ್ರಯತ್ನಗಳೆಲ್ಲವೂ ವಿಫಲವಾದವು. ಸಿಟ್ಟಿನಿಂದ ಅವಳು, ನಾನು ಬಂದರೂ ಮಾತಾಡದೆ, ಸುಮ್ಮನಿದ್ದ ನೀವು ಯಾರ ಮುಂದೆ ನಿಂತಾಗ ನಿಮ್ಮ ಮುಖವನ್ನು ಅವರು ನೋಡುತ್ತಾರೋ… ಅವರು ಇಲ್ಲಸಲ್ಲದ ಅಪವಾದಕ್ಕೆ ಸಿಲುಕಿಕೊಳ್ಳಲಿ. ನನ್ನ ಆಸೆಯನ್ನು ಪೂರೈಸದ ನಿಮ್ಮ ದೃಷ್ಟಿ ಯಾರ ಮೇಲೆ ಬಿದ್ದರೂ ಅವರು ಸಂಕಷ್ಟಗಳಿಗೆ ಒಳಗಾಗಲಿ ಎಂದು ಪತಿ ಶನಿಯನ್ನು ಶಪಿಸಿದಳು.

ಶನಿದೇವ ಒಳ್ಳೆಯವನೇ ಆಗಿದ್ದನು. ಆದರೆ ಪತ್ನಿಯ ಶಾಪದಿಂದಾಗಿ ಶಿಕ್ಷೆಯನ್ನು ಅನುಭವಿಸಬೇಕಾಯಿತು. ತಪಸ್ಸು ಮುಗಿಸಿ ಪತ್ನಿಯ ಮುಂದೆ ನಿಂತು ಕ್ಷಮೆ ಯಾಚಿಸಿದನು. ಆದರೆ ಕೊಟ್ಟ ಶಾಪವನ್ನು ವಾಪಸ್ಸು ತೆಗೆದುಕೊಳ್ಳಲು ಆಗಲಿಲ್ಲ. ಅಂದಿನಿಂದ ಶನಿದೇವನು ತನ್ನ ಭಕ್ತರಿಗೆ ತನ್ನಿಂದ ಯಾವುದೇ ತೊಂದರೆ ಆಗಬಾರದೆಂದು ಅವನು ತಲೆ ಎತ್ತದೆ ತಲೆ ಬಗ್ಗಿಸಿ ನಡೆಯುತ್ತಾನೆ.

ಒಂದು ಊರಲ್ಲಿ ಒಬ್ಬ ಬ್ರಾಹ್ಮಣ ಅವನ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದ. ಊರ ದೇವಾಲಯದ ಪೂಜೆ ಹಾಗೂ ವಿಶೇಷ ದಿನಗಳಲ್ಲಿ, ಪೂಜೆ ವ್ರತ ಕಥೆಗಳು ಇದ್ದಲ್ಲಿ ಮಾಡಿ ಬರುವ ಆದಾಯದಿಂದ ಅವನ ಜೀವನ ಸಾಗುತ್ತಿತ್ತು. ಇತ್ತೀಚಿಗೆ ಕೆಲ ದಿನ ಗಳಿಂದ ರಾತ್ರಿ ಮಲಗಿದಾಗ ಕನಸಿನಲ್ಲಿ ನೀಲಿ ಬಟ್ಟೆ ಧರಿಸಿದ ವ್ಯಕ್ತಿ ಎದುರಿಗೆ ನಿಂತು “ನಾನು ನಿನ್ನನ್ನು ನೋಡುತ್ತೇನೆ, ನಾನು ನಿನ್ನನ್ನು ನೋಡುತ್ತೇನೆ” ಎಂದ ಹಾಗೆ ಆಗುತ್ತಿತ್ತು. ಇದನ್ನು ಪತ್ನಿಗೆ ಹೇಳಿದನು. ಅವಳು ಹೇಳಿದಳು – ನೀಲಿ ವಸ್ತ್ರ ಹಾಕಿ ಬಂದವನು ಶನಿಯಾಗಿದ್ದಾನೆ. ಶನಿ ನಿಮ್ಮ ಮೇಲೆ ದೃಷ್ಟಿ ಬೀರಿ ನಿಮಗೆ ತೊಂದರೆ ಕೊಡುತ್ತಾನೆ. ಇದಕ್ಕೆ ಉಪಾಯ ಎಂದರೆ, ಶನಿ ಕನಸಿನಲ್ಲಿ ಕೇಳಿದಾಗ ನೀವು ಹೇಳಬೇಕು ನಿನ್ನ ದೃಷ್ಟಿ ಬೀರು, ಆದರೆ ಒಂದುವರೆ ಗಂಟೆಗಳಕ್ಕಿಂತ ಒಂದು ನಿಮಿಷವು ಹೆಚ್ಚಿಗೆ ದೃಷ್ಟಿ ಬೀರಬಾರದು ಎಂದು ಹೇಳಬೇಕು.

ಈ ರೀತಿ ಹೇಳಿಕೊಟ್ಟ ಮೇಲೆ ಅಂದು ರಾತ್ರಿ ಮಲಗಿದಾಗ ಮತ್ತೆ ಬ್ರಾಹ್ಮಣನ ಕನಸಿನಲ್ಲಿ ಶನಿ ಬಂದನು. ಯಾಕೆ ಬಂದೆ ಹೇಳು ಎಂದು ಕೇಳಿದ ಬ್ರಾಹ್ಮಣನಿಗೆ ಶನಿಯು ನಾನು ಏಳೂವರೇ ವರ್ಷ ಕಾಲ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದನು. ಬ್ರಾಹ್ಮಣ ಅದು ಸಾಧ್ಯವಿಲ್ಲ ಏಳೂವರೆ ವರ್ಷ ಜಾಸ್ತಿ ಆಗುತ್ತದೆ ಎಂದನು. ಆಗ ಶನಿ ಹಾಗಾದರೆ ಐದು ವರ್ಷಗಳು ಎಂದನು, ಅದೂ ಸಾಧ್ಯವಿಲ್ಲ, ಎರಡೂವರೆ ವರ್ಷ? ಇದೂ ಜಾಸ್ತಿಯಾಯ್ತು. ಆಗ ಶನಿಯು ಒಂದುವರೆ ಗಂಟೆಗಳ ಸ್ಥಿತಿಯನ್ನು ಎದುರಿಸಲೇಬೇಕು ಎಂದನು ಕೂಡಲೇ ಬ್ರಾಹ್ಮಣ ಒಪ್ಪಿದನು.

ಮರುದಿನ ಬೆಳಿಗ್ಗೆ ಎದ್ದು ಬ್ರಾಹ್ಮಣ ಪತ್ನಿಗೆ ಹೇಳಿದ, ಶನಿ ತನ್ನ ದೃಷ್ಟಿದೋಷವನ್ನು ಒಂದೂವರೆ ಗಂಟೆ ಕಾಲ ನನ್ನ ಮೇಲೆ ಬೀರಿದ್ದಾನೆ. ನಾನು ಕಾಡಿಗೆ ಹೋಗಿ ಪೂಜೆ, ಧ್ಯಾನ ಮಾಡುತ್ತೇನೆ. ಎರಡು ಬಂಗಾರದ ನಾಣ್ಯಗಳನ್ನು ಕೊಡು. ಕಾಡಿನಲ್ಲಿ ತ್ರೈಮಾಸಿಕ ಪೂಜೆ ಮುಗಿದ ಮೇಲೆ ಹಿಂದಿರುಗುತ್ತೇನೆ. ಅಲ್ಲಿಯವರೆಗೂ ಮನೆ ಹಾಗೂ ಮಕ್ಕಳ ಕಡೆ ನಿಗಾ ವಹಿಸು ಎಂದು ಹೇಳಿ ಕಾಡಿಗೆ ಹೊರಟನು.

ಅವನು ಅಂದುಕೊಂಡಂತೆ ಧ್ಯಾನಕ್ಕೆ ಕುಳಿತನು. ಒಂದು ಪ್ರಹರ ಮುಗಿಯಿತು. ಹೇಗೂ ಇನ್ನು ಕಾಲು ಪ್ರಹರ ಮಾತ್ರ ಉಳಿದಿದೆ ಮನೆಗೆ ಹೋಗುವಾಗ ಅದು ದಾರಿಯಲ್ಲಿಯೇ ಮುಗಿಯುತ್ತದೆ ಎಂದು ಧ್ಯಾನದಿಂದ ಎದ್ದು ಮನೆ ಕಡೆ ಹೊರಟನು. ಅದಕ್ಕಾಗಿ ಕಾಯುತ್ತಿದ್ದ ಶನಿ ಮಹಾತ್ಮ, ಬ್ರಾಹ್ಮಣ ಬರುವ ಮಾರ್ಗದಲ್ಲಿ ಕಲ್ಲಂಗಡಿ ಹಣ್ಣುಗಳ ತೋಟ ಮಾಡಿದನು. ಹಣ್ಣುಗಳನ್ನು ಕಂಡ ಬ್ರಾಹ್ಮಣ ಸುತ್ತಮುತ್ತ ನೋಡುತ್ತಾ ಕೂಗಿದನು. ಯಾರೂ ಇರಲಿಲ್ಲ. ಒಂದು ಚಿನ್ನದ ನಾಣ್ಯವನ್ನು ಇಟ್ಟು ಎರಡು ಕಲ್ಲಂಗಡಿ ಹಣ್ಣುಗಳನ್ನು ಚೀಲದಲ್ಲಿ ತುಂಬಿಕೊಂಡು ಮನೆ ಕಡೆ ಹೊರಟನು.

Also Read: Mookambika-Adi Shankaracharya: ಕೇರಳದವರಿಗೆ ಕೊಲ್ಲೂರು ಮೂಕಾಂಬಿಕೆ ಯಾಕೆ ಕುಲದೇವರು!? ಅಲ್ಲಿನ ಮಹಿಳೆಯರು ಬಿಳಿ ಸೀರೆ ಉಡುವುದೇಕೆ?

ಶನಿಯು ರಾಜನ ಇಬ್ಬರು ಸೈನಿಕರಾಗಿ ಬ್ರಾಹ್ಮಣನ ಹೋಗುವ ಮಾರ್ಗದಲ್ಲಿ ನಿಂತು ಚೀಲದಲ್ಲಿ ಇರುವುದು ಏನು ಎಂದು ಕೇಳಿದರು. ಬ್ರಾಹ್ಮಣ ಹೇಳಿದಾಗ ಅದನ್ನು ಪರೀಕ್ಷಿಸಿದರು. ಆದರೆ ಆ ಚೀಲದಲ್ಲಿ

ಹಣ್ಣುಗಳ ಬದಲು ರಾಜನ ಇಬ್ಬರು ಗಂಡು ಮಕ್ಕಳ ತಲೆಗಳನ್ನು ನೋಡಿ ಬ್ರಾಹ್ಮಣನನ್ನು ರಾಜ್ಯಸಭೆಗೆ ಎಳೆದು ತಂದರು. ಸೈನಿಕರು ಎಲ್ಲವನ್ನು ರಾಜನಿಗೆ ಹೇಳಿದರು. ತನ್ನ ಮಕ್ಕಳ ತಲೆಗಳನ್ನು ನೋಡಿದ ರಾಜನು ದುಃಖದಿಂದ, ಕೋಪದಿಂದ ಬ್ರಾಹ್ಮಣನನ್ನು ಗಲ್ಲಿಗೇರಿಸಲು ಹೇಳಿದನು. ಬ್ರಾಹ್ಮಣನಿಗೆ ತಿಳಿಯಿತು ಇದು ಶನಿಯ ಪ್ರಭಾವ ಎಂದು.

ಅವನು ಕೊನೆಯದಾಗಿ ರಾಜನಲ್ಲಿ ಬೇಡಿಕೊಂಡನು. ನಾನು ಸಾಯುವ ಮೊದಲು ಶಿವನ ಪೂಜೆಯನ್ನು ಮಾಡಬೇಕು ಎಂದನು. ರಾಜ ಅನುಮತಿ ಕೊಟ್ಟನು, ಬ್ರಾಹ್ಮಣನು ಅಷ್ಟು ಸಮಯ ಪೂಜೆ ಧ್ಯಾನ ಕಳೆದುದರಿಂದ ಅವನ ಶನಿ ದೋಷವೆಲ್ಲವೂ ನಿವಾರಣೆಯಾಯಿತು. ಆ ಹೊತ್ತಿಗೆ ರಾಜನ ಮಕ್ಕಳಿಬ್ಬರೂ ಭೇಟಿ ಮುಗಿಸಿ ಅರಮನೆಗೆ ಬಂದರು. ರಾಜನಂತೂ ಅತ್ಯಾಶ್ಚರ್ಯಗೊಂಡನು. ಬ್ರಾಹ್ಮಣ ನಿಗೆ ನೀನು ಏನು ಚಮತ್ಕಾರ ಮಾಡಿದೆ? ಎಂದು ರಾಜನು ಕೇಳಿದನು. ಅದಕ್ಕೆ ಬ್ರಾಹ್ಮಣ ಹೇಳಿದ… ಏನೂ ಮಾಡಿಲ್ಲ. ಶನಿಯ ಪ್ರಭಾವದಿಂದ ಆರೋಪಕ್ಕೆ ಗುರಿಯಾಗಿದ್ದೆ. ಶನಿಯ ದೆಸೆ ಮುಗಿಯಿತು. ಈಗ ನಾನು ಮುಕ್ತನಾದೆ ಎಂದನು.

ರಾಜನು ಶನಿಯ ದೋಷಕ್ಕೆ ಏನು ಮಾಡಬೇಕು ಎಂದು ಕೇಳಿದನು. ಬ್ರಾಹ್ಮಣ ಹೇಳಿದ, ಕರಿ ಆನೆಯನ್ನು ದಾನ ಕೊಡಬೇಕು, ಕಪ್ಪು ಕುದುರೆಯನ್ನು ಶೆಟ್ಟಿಗೆ ಕೊಡಬೇಕು. ಕಪ್ಪು ನಾಯಿಗೆ ಎಳ್ಳು ಹಾಕಿ ಮಾಡಿದ ರೊಟ್ಟಿಯನ್ನು ಕೊಡಬೇಕು. ಅರಳಿ ಮರಕ್ಕೆ ನೀರು ಹಾಕಿ, ಪೂಜಿಸಿ ಪ್ರದಕ್ಷಿಣೆ ನಮಸ್ಕಾರ ಮಾಡಬೇಕು. ಪ್ರದೋಷ ಕಾಲದಲ್ಲಿ, ಕೈ ಕಾಲು ತೊಳೆದುಕೊಂಡು ದೇವರಿಗೆ ದೀಪ ಹಚ್ಚಿ, ಎಳ್ಳೆಣ್ಣೆ ಅಥವಾ ದೀಪ ಹಚ್ಚುವ ಎಣ್ಣೆ ಒಂದು ಅಗಲವಾದ ಚಿಕ್ಕ ಬಟ್ಟಲಲ್ಲಿ ತೆಗೆದು ಕೊಂಡು ಅದಕ್ಕೆ ನಾಲ್ಕಾರು ಕಾಳು ಎಳ್ಳು ಹಾಕಿ ಅಥವಾ (ಸಣ್ಣ ಸಣ್ಣ ಕರಿ ಬಟ್ಟೆ ತುಂಡುಗಳಲ್ಲಿ ಅರ್ಧ ಚಮಚ ಎಳ್ಳು ಹಾಕಿ ಏಳು ಅಥವಾ ಒಂಬತ್ತು ಚಿಕ್ಕ ಚಿಕ್ಕ ಗಂಟು ಕಟ್ಟಿ ಎಳ್ಳೆಣ್ಣೆಯಲ್ಲಿ ಮುಳುಗಿಸಿ‌ ದೇವಸ್ಥಾನದಲ್ಲಿ ದೀಪ ಹಚ್ಚಬೇಕು).

ಆದಾದ ಮೇಲೆ, ಎಣ್ಣೆ ಒಳಗೆ ಮುಖ ನೋಡಿ ಸ್ತೋತ್ರ ಹೇಳಿ (ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ I ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂII ದೇವರಿಗೆ ನಮಸ್ಕರಿಸಿ ಶನಿ ಅಥವಾ ಆಂಜನೇಯ ದೇವಸ್ಥಾನಗಳಲ್ಲಿ ದೀಪ ಹಚ್ಚಬೇಕು. ನವಗ್ರಹ ದೇವಸ್ಥಾನಗಳಿಗೆ ಹೋದಾಗ, ನೇರ ದೃಷ್ಟಿಯಿಂದ ನವಗ್ರಹಗಳನ್ನು ನೋಡದೆ ಸ್ವಲ್ಪ ಬದಿಯಲ್ಲಿ ನಿಂತು, ಬೇಡಿಕೊಂಡು ಪ್ರದಕ್ಷಿಣೆ ಬಂದು, ನವಗ್ರಹಗಳಿಗೆ ಬೆನ್ನು ತೋರಿಸದಂತೆ ಈಚೆಗೆ ಬರಬೇಕು. ನವಗ್ರಹ ಪೂಜೆ ಮಾಡಿಸಿ ದಾನ ದಕ್ಷಿಣೆ ಕೊಡಬೇಕು.

Also Read: Monsoon Love Predictions – ಮುಂಗಾರು ಮಳೆಯಲ್ಲಿ ಪ್ರೀತಿಯ ಅಲೆಗಳು.. ಯಾವ ರಾಶಿಯವರೆಲ್ಲಾ ಪ್ರೀತಿ-ಪ್ರೇಮದಲ್ಲಿ ನೆನೆಯುತ್ತಾರೆ ನೋಡಿ!

ಎಲ್ಲವನ್ನು ಕೇಳಿದ ರಾಜನು ಬ್ರಾಹ್ಮಣನಲ್ಲಿ ಕ್ಷಮೆ ಬೇಡಿ, ಫಲ ತಾಂಬೂಲದೊಂದಿಗೆ ಚಿನ್ನದ ನಾಣ್ಯ ತುಂಬಿದ ತೈಲಿಯನ್ನು ಕೊಟ್ಟು ನಮಸ್ಕರಿಸಿದನು.

ಮನೆಗೆ ಬಂದ ಮೇಲೆ ಹೆಂಡತಿಗೆ ನಡೆದ ಸಮಾಚಾರವನ್ನೆಲ್ಲ ಹೇಳಿದನು ಹಾಗೂ ಬ್ರಾಹ್ಮಣನ ಪತ್ನಿ ಚೀಲದಲ್ಲಿ ಏನು ಇದೆ ಎಂದು ಕೇಳಿದಾಗ ಕಲ್ಲಂಗಡಿ ಹಣ್ಣು ಎಂದನು. ಅವಳು ಅದನ್ನು ತೆಗೆದು ನೋಡಿದಾಗ ಕಲ್ಲಂಗಡಿ ಹಣ್ಣಿನ ಬದಲಾಗಿ ಚಿನ್ನದ ನಾಣ್ಯಗಳು ಆಗಿತ್ತು. ಇದು ಹೇಗೆ ಆಯಿತು ಎಂದು ಕೇಳಿದಳು. ಶನಿ ದೆಸೆಯಿಂದ ಕಲ್ಲಂಗಡಿ ಹಣ್ಣುಗಳು ರಾಜನ ಮಕ್ಕಳ ತಲೆಯಾಗಿದ್ದು, ಶನಿದೆಸೆ ಹೋದಮೇಲೆ ಅದು ಚಿನ್ನದ ನಾಣ್ಯವಾಯಿತು ಎಂದನು.

ಬ್ರಾಹ್ಮಣನು ಕೈಕಾಲು ತೊಳೆದು ಬಂದು ದೇವರಿಗೆ ತುಪ್ಪದ ದೀಪ ಹಚ್ಚಿ ಗ್ರಹಚಾರ ಕಳೆದ ಸಂತೋಷದಿಂದ ದೇವರಿಗೆ ಭಕ್ತಿ ಪೂರ್ವಕ ನಮಸ್ಕರಿಸಿ, ಶನಿದೇವ ಯಾರಿಗೂ ಇಂತಹ ಸ್ಥಿತಿಯನ್ನು ಎಂದಿಗೂ ಕೊಡಬೇಡ ಎಲ್ಲರ ಮೇಲು ನಿನ್ನ ಕರುಣೆ ಇರಲಿ ಎಂದು ಪ್ರಾರ್ಥಿಸಿಕೊಂಡನು. (ಬರಹ ಆಶಾ ನಾಗಭೂಷಣ)

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:06 am, Wed, 24 July 24

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್