ಜೀವನದಲ್ಲಿ ಸಕಲ ಸಮೃದ್ಧಿ ದೊರೆಯಬೇಕಾ? ಈ ಶಕ್ತಿಯುತ ವಿಷ್ಣು ಮಂತ್ರಗಳ ಪಠಣೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 27, 2024 | 1:52 PM

ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಿಷ್ಣು ಮಂತ್ರಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅದು ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲು ನೆರವಾಗುತ್ತದೆ. ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಅದ್ಭುತ ಬದಲಾವಣೆಗಳಾಗುವುದನ್ನು ಗಮನಿಸಬಹುದಾಗಿದೆ. ಹಾಗಾದರೆ ಸಂಪತ್ತು, ಸಮೃದ್ಧಿ, ನೆಮ್ಮದಿ ಹೆಚ್ಚಾಗಲು ವಿಷ್ಣುವಿನ ಯಾವ ಮಂತ್ರದ ಪಠಣೆ ಮಾಡಬೇಕು? ಇಲ್ಲಿದೆ ಮಾಹಿತಿ.

ಜೀವನದಲ್ಲಿ ಸಕಲ ಸಮೃದ್ಧಿ ದೊರೆಯಬೇಕಾ? ಈ ಶಕ್ತಿಯುತ ವಿಷ್ಣು ಮಂತ್ರಗಳ ಪಠಣೆ ಮಾಡಿ
Follow us on

ಭಗವಾನ್ ವಿಷ್ಣುವು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಅವನನ್ನು ಪ್ರಪಂಚದಾದ್ಯಂತ ಎಲ್ಲರೂ ಪೂಜಿಸುತ್ತಾರೆ. ಇನ್ನು ವಿಷ್ಣುವಿನ 10 ಅವತಾರಗಳಲ್ಲಿಯೂ ಅವನ ಶಕ್ತಿಯುತ ಪಾತ್ರಗಳ ಬಗೆಗಿನ ಕಥೆಯನ್ನು ನೀವು ಕೇಳಿರಬಹುದು. ಇದೆಲ್ಲಾ ಕಾರಣಗಳಿಂದಲೇ ವಿಷ್ಣುವನ್ನು ಪೂರ್ಣ ಭಕ್ತಿ ಮತ್ತು ಸಮರ್ಪಣೆಯಿಂದ ಪೂಜಿಸುತ್ತಾರೆ. ವಿಷ್ಣುವನ್ನು ಮೆಚ್ಚಿಸಲು ಅನೇಕ ಮಾರ್ಗಗಳಿವೆ. ಕೆಲವರು ವಿಷ್ಣುವಿನ ನೆಚ್ಚಿನ ವಸ್ತುಗಳಾದ ತುಳಸಿ ಅರ್ಪಿಸುವ ಮೂಲಕ, ಕೆಲವರು ಉಪವಾಸ ಆಚರಿಸುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಇದರ ಜೊತೆಗೆ ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಿಷ್ಣು ಮಂತ್ರಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅದು ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲು ನೆರವಾಗುತ್ತದೆ. ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಅದ್ಭುತ ಬದಲಾವಣೆಗಳಾಗುವುದನ್ನು ಗಮನಿಸಬಹುದಾಗಿದೆ. ಹಾಗಾದರೆ ಸಂಪತ್ತು, ಸಮೃದ್ಧಿ, ನೆಮ್ಮದಿ ಹೆಚ್ಚಾಗಲು ವಿಷ್ಣುವಿನ ಯಾವ ಮಂತ್ರದ ಪಠಣೆ ಮಾಡಬೇಕು? ಇಲ್ಲಿದೆ ಮಾಹಿತಿ.

ಭಗವಾನ್ ಶ್ರೀ ವಿಷ್ಣು ಮಂತ್ರಗಳು;

-ಓಂ ನಮೋ ಭಗವತೇ ವಾಸುದೇವಾಯ

ಈ ಮಂತ್ರದ ಅರ್ಥ ಎಲ್ಲರ ಹೃದಯದಲ್ಲಿ ನೆಲೆಸಿರುವ ಭಗವಂತನ ಮುಂದೆ ನಾನು ಶರಣಾಗುತ್ತೇನೆ ಎಂಬುದಾಗಿದೆ. ಇದನ್ನು ಪ್ರತಿನಿತ್ಯ ಪಠಿಸುವುದರಿಂದ ಮಾನಸಿಕವಾಗಿ ಗಟ್ಟಿಯಾಗುತ್ತೇವೆ, ಸಕಾರಾತ್ಮಕ ಆಲೋಚನೆ ಹೆಚ್ಚಾಗುತ್ತದೆ. ಇದಲ್ಲದೆ ಈಗಾಗಲೇ ಇರುವಂತಹ ಅನಾರೋಗ್ಯದ ಸಮಸ್ಯೆಗಳು ದಿನದಿಂದ ದಿನಕ್ಕೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ.
.
-ಓಂ ನಮೋ ನಾರಾಯಣಾಯ

ಇದರ ಅರ್ಥ “ನಾನು ಸರ್ವಶಕ್ತನಾದ ದೇವರಿಗೆ ನಮಸ್ಕರಿಸುತ್ತೇನೆ”. ಈ ಮಂತ್ರವನ್ನು ಪಠಿಸುವವರು, ಎಲ್ಲಾ ರೀತಿಯ ಪಾಪಗಳಿಂದ ಮುಕ್ತರಾಗುತ್ತಾರೆ ಮತ್ತು ನೇರವಾಗಿ ವೈಕುಂಠ ಧಾಮಕ್ಕೆ (ವಿಷ್ಣುವಿನ ವಾಸಸ್ಥಾನ) ಹೋಗುತ್ತಾರೆ. ಜೊತೆಗೆ ಒಬ್ಬ ವ್ಯಕ್ತಿ ಎಲ್ಲಾ ಲೌಕಿಕ ಸುಖ, ಆಸೆಗಳಿಂದ ಮುಕ್ತನಾಗಿ ಮೋಕ್ಷವನ್ನು ಪಡೆಯಬಹುದು ಎಂದು ಪುರಾಣಗಳು ಹೇಳುತ್ತವೆ.

-ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ।

ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ ।

ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃಧ್ಯಾನಗಮ್ಯಂ ।

ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ ।।

ಈ ಬ್ರಹ್ಮಾಂಡದ ರಕ್ಷಕನಾದ ವಿಷ್ಣುವಿಗೆ ನಾನು ನಮಿಸುತ್ತೇನೆ. ಶಾಂತ ಸ್ವರೂಪನೂ, ಆದಿಶೇಷನ ಮೇಲೆ ಮಲಗಿರುವವನು, ನಾಭಿಯಲ್ಲಿ ಕಮಲ ಉಳ್ಳವನೂ, ದೇವತೆಗಳಿಗೆ ಒಡೆಯನು, ವಿಶ್ವಕ್ಕೆ ಆಧಾರವಾಗಿರುವವನೂ, ಆಕಾಶದಂತೆ ವ್ಯಾಪಕನೂ, ಮೋಡದಂತೆ ಶಾಮಲವರ್ಣನೂ, ಶುಭಕರ ಅಥವಾ ಮಂಗಳಕರ ದೇಹ ಉಳ್ಳವನೂ, ಲಕ್ಷ್ಮೀ ದೇವಿಯ ಪತಿಯೂ, ಕಮಲದ ಕಣ್ಣುಳ್ಳವನೂ ಮತ್ತು ಧ್ಯಾನದಿಂದ ಯೋಗಿಗಳಿಗೆ ತಲುಪಬಲ್ಲವನು, ಲೌಕಿಕ ಅಸ್ತಿತ್ವದ ಭಯವನ್ನು ಹೋಗಲಾಡಿಸುವವನು, ಸರ್ವ ಲೋಕಗಳ ಅಧಿಪತಿ, ಏಕೈಕ ಪ್ರಭುವೂ ಆದ ಆ ವಿಷ್ಣುವಿಗೆ ನಾನು ನಮಸ್ಕರಿಸುತ್ತೇನೆ ಎನ್ನುವುದಾಗಿದೆ. ಈ ಮಂತ್ರ ಪಠಣೆಯಿಂದ ಬಯಸಿದ ಕಾರ್ಯಗಳೆಲ್ಲವೂ ನೆರವೇರುತ್ತದೆ.

ಇದನ್ನೂ ಓದಿ: ಮಥುರಾದಲ್ಲಿರುವ ಪ್ರಸಿದ್ಧ ದೇವಾಲಯಗಳು ಯಾವುದು ಗೊತ್ತಾ?

ತ್ವಮೇವ ಮಾತಾ ಚ ಪಿತಾ ತ್ವಮೇವ ।

ತ್ವಮೇವ ಬಂಧುಶ್ಚ ಸಖಾ ತ್ವಮೇವ ।

ತ್ವಮೇವ ವಿದ್ಯಾ ದ್ರವಿಣಮ್ ತ್ವಮೇವ ।

ತ್ವಮೇವ ಸರ್ವಂ ಮಮ ದೇವ ದೇವ ॥

ಈ ಶ್ಲೋಕದ ಅರ್ಥ “ದೇವ ದೇವನೇ, ನೀನೇ ನನ್ನ ತಾಯಿ ತಂದೆ, ಬಂಧು, ಸ್ನೇಹಿತ, ನೀನೇ ವಿದ್ಯೆ, ನೀನೇ ಸಕಲ ಸಂಪತ್ತು, ನೀನೇ ನನ್ನ ಸರ್ವಸ್ವವೂ ಆಗಿದ್ದೀಯಾ” ಎಂಬುದಾಗಿದೆ. ಈ ಮಂತ್ರದ ಪಠಣವು ವ್ಯಕ್ತಿಯು ಏಕಾಗ್ರತೆ ಪಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಭಗವಾನ್ ವಿಷ್ಣು ಭಕ್ತರಿಗೆ ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡುತ್ತಾನೆ ಎಂದು ನಂಬಲಾಗಿದೆ. ಹಾಗಾಗಿ ಮಾರ್ಗದರ್ಶನದ ಅಗತ್ಯವಿರುವವರು ಈ ಮಂತ್ರವನ್ನು ಪಠಿಸಬೇಕು.

-ಓಂ ನಾರಾಯಣಾಯ ವಿದ್ಮಹೇ,

ವಾಸುದೇವಾಯ ಧೀಮಹೀ

ತನ್ನೋ ವಿಷ್ಣು ಪ್ರಚೋದಯಾತ್

ಈ ವಿಷ್ಣು ಗಾಯತ್ರಿ ಮಂತ್ರವು ತುಂಬಾ ಶಕ್ತಿಯುತ ಮಂತ್ರವಾಗಿದೆ ಮತ್ತು ಹಿಂದೂ ಧರ್ಮದಲ್ಲಿ ಹೆಚ್ಚು ಪೂಜನಿಯವಾಗಿದೆ. ಈ ಮಂತ್ರ ಪಠಣೆಯಿಂದ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ ತೊಲಗಿಸಬಹುದಾಗಿದೆ. ಈ ವಿಷ್ಣು ಗಾಯತ್ರಿ ಮಂತ್ರವನ್ನು ಪಠಣೆ ಮಾಡಿದರೆ ಅಂದುಕೊಂಡ ಕೆಲಸಗಳು ಸರಾಗವಾಗಿ ಆಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ