ವಿಷ್ಣು ಮಂತ್ರ ಪಠಣೆ ಮಾಡುವಾಗ ತಪ್ಪದೇ ತುಳಸಿಯನ್ನು ಬಳಸಿ, ಪ್ರಯೋಜನಗಳು ಏನಿದೆ ಗೊತ್ತಾ?

ವಿಷ್ಣು ಪೂಜೆಯಲ್ಲಿ ತುಳಸಿಯನ್ನು ತಪ್ಪದೇ ಬಳಸಿ. ಅದರ ಜೊತೆಯಲ್ಲಿ ದೇವರ ಯಾವುದಾದರೂ ಮಂತ್ರಗಳ ಪಠಣ ಮಾಡುತ್ತಲೇ ಪೂಜೆ ಮಾಡಿ. ಎಲ್ಲಾ ಮಂತ್ರಗಳನ್ನು ಹೇಳಲು ಸಾಧ್ಯವಾಗದಿದ್ದರೂ ತೊಂದರೆ ಇಲ್ಲ. ಆದರೆ ಸುಲಭ ಮತ್ತು ಸರಳ ಎನಿಸಿದ ಯಾವುದಾದರೂ ಒಂದು ಮಂತ್ರವನ್ನು ಪಠಿಸಿ. ಈ ಮೊದಲೇ ನೀವು ಈ ರೀತಿಯ ಅಭ್ಯಾಸ ರೂಢಿಸಿ ಕೊಂಡಿದ್ದರೆ ಒಳ್ಳೆಯದು. ಏಕೆಂದರೆ ಪ್ರತಿದಿನ ವಿಷ್ಣು ಮಂತ್ರ ಪಠಣ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಷ್ಣು ಮಂತ್ರ ಪಠಣೆ ಮಾಡುವಾಗ ತಪ್ಪದೇ ತುಳಸಿಯನ್ನು ಬಳಸಿ, ಪ್ರಯೋಜನಗಳು ಏನಿದೆ ಗೊತ್ತಾ?
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 27, 2024 | 4:57 PM

ಬ್ರಹ್ಮಾಂಡದ ಸೃಷ್ಟಿಕರ್ತನಾದ ವಿಷ್ಣುವನ್ನು ಪೂಜಿಸದವರಿಲ್ಲ. ಯಾವುದೇ ವ್ಯಕ್ತಿಯು ವಿಷ್ಣು ಮಂತ್ರವನ್ನು ಜಪಿಸುವುದರಿಂದ ಆತನಿಗೆ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಪ್ರಾಪ್ತವಾಗುತ್ತದೆ. ಅದರಲ್ಲಿಯೂ ವಿಷ್ಣು ದೇವನಿಗೆ ಪ್ರೀಯವಾದ ಅಂದರೆ ಇಷ್ಟವಾದ ದಿನಗಳಂದು ಆತನನ್ನು ಪೂಜಿಸಿ ಉಪವಾಸ ಮಾಡುವುದರಿಂದ ಸರ್ವ ಫಲ ಪ್ರಾಪ್ತಿಯಾಗುತ್ತದೆ ಮತ್ತು ಭಕ್ತರ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಜೊತೆಗೆ ಭಗವಾನ್ ವಿಷ್ಣುವನ್ನು ಮನಃಪೂರ್ವಕವಾಗಿ ಪೂಜಿಸುವುದರಿಂದ, ಸ್ತೋತ್ರ ಇತ್ಯಾದಿಗಳನ್ನು ಪಠಿಸುವುದರಿಂದ ದೇವರು ಪ್ರಸನ್ನನಾಗುತ್ತಾನೆ ಮತ್ತು ಬಯಸಿದ ವರವನ್ನು ನೀಡುತ್ತಾನೆ ಎಂದು ನಂಬಲಾಗಿದೆ.

ನೀವು ಕೂಡ ವಿಷ್ಣು ಭಕ್ತರಾಗಿದ್ದರೆ ಅಥವಾ ದಿನವೂ ಮನೆಯಲ್ಲಿ ಭಗವಾನ್ ವಿಷ್ಣುವಿನ ಪೂಜೆ ಮಾಡುವವರಾಗಿದ್ದರೆ ಕೆಲವು ಆಚರಣೆಗಳನ್ನು ರೂಢಿಸಿಕೊಳ್ಳುವುದು ಉತ್ತಮ. ಪೂಜೆಯಲ್ಲಿ ತುಳಸಿಯನ್ನು ತಪ್ಪದೇ ಬಳಸಿ. ಅದರ ಜೊತೆಯಲ್ಲಿ ದೇವರ ಯಾವುದಾದರೂ ಮಂತ್ರಗಳ ಪಠಣ ಮಾಡುತ್ತಲೇ ಪೂಜೆ ಮಾಡಿ. ಎಲ್ಲಾ ಮಂತ್ರಗಳನ್ನು ಹೇಳಲು ಸಾಧ್ಯವಾಗದಿದ್ದರೂ ತೊಂದರೆ ಇಲ್ಲ. ಆದರೆ ಸುಲಭ ಮತ್ತು ಸರಳ ಎನಿಸಿದ ಯಾವುದಾದರೂ ಒಂದು ಮಂತ್ರವನ್ನು ಪಠಿಸಿ. ಈ ಮೊದಲೇ ನೀವು ಈ ರೀತಿಯ ಅಭ್ಯಾಸ ರೂಢಿಸಿ ಕೊಂಡಿದ್ದರೆ ಒಳ್ಳೆಯದು. ಏಕೆಂದರೆ ಪ್ರತಿದಿನ ವಿಷ್ಣು ಮಂತ್ರ ಪಠಣ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜೀವನದಲ್ಲಿ ಸಕಲ ಸಮೃದ್ಧಿ ದೊರೆಯಬೇಕಾ? ಈ ಶಕ್ತಿಯುತ ವಿಷ್ಣು ಮಂತ್ರಗಳ ಪಠಣೆ ಮಾಡಿ

ವಿಷ್ಣು ಮಂತ್ರದ ಪಠಣೆಯಿಂದ ಸಿಗುವ ಪ್ರಯೋಜನಗಳೇನು?

1. ವಿಷ್ಣು ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸುವ ಭಕ್ತರು ಸಾವಿನ ಭಯದಿಂದ ಮುಕ್ತಿ ಪಡೆಯಬಹುದು. ಹಾಗಾಗಿ ಬೆಳಿಗ್ಗೆ ಅಥವಾ ಸಂಜೆ ನಿಮ್ಮ ಬಿಡುವಿನ ವೇಳೆಯಲ್ಲಿ ಪಠಣ ಮಾಡಿ.

2. ವಿಷ್ಣು ಸಹಸ್ರನಾಮವನ್ನು ಪ್ರತಿದಿನ ಬಿಡದೆ ಪಠಿಸುವುದರಿಂದ ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಮತ್ತು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ.

3. ಜನರು ತಿಳಿದೋ ತಿಳಿಯದೆಯೋ ಮಾಡಿದ ಎಲ್ಲಾ ಕೆಟ್ಟ ಕರ್ಮಗಳಿಂದ ಮುಕ್ತಿ ಪಡೆಯಲು ವಿಷ್ಣು ಮಂತ್ರ ಸಹಾಯ ಮಾಡುತ್ತದೆ.

4. ವಿಷ್ಣು ಸ್ತೋತ್ರ ಪಠಣ ಮಾಡುವುದರಿಂದ ಮನಸ್ಸು, ದೇಹ ಎರಡನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.

5. ಈ ಮಂತ್ರಗಳು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ಷಣೆ ನೀಡುತ್ತದೆ. ಹಾಗಾಗಿ ಪ್ರತಿದಿನ 21 ಬಾರಿಯಾದರೂ “ಓಂ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನು ಪಠಿಸಿ.

6. ಇನ್ನು, ವಿಷ್ಣುವಿಗೆ ಸಂಬಂಧ ಪಟ್ಟ ಯಾವುದಾದರೂ ಮಂತ್ರ ಪಠಿಸುವುದರಿಂದ ಒತ್ತಡ ಮತ್ತು ಆತಂಕ ಕಡಿಮೆ ಮಾಡಿಕೊಳ್ಳಬಹುದು.

7. ಪರಮಾತ್ಮ ವಿಷ್ಣುವಿನ ಮಂತ್ರಗಳು ಅಕಾಲಿಕ ಮರಣದಿಂದ ರಕ್ಷಣೆ ನೀಡುತ್ತದೆ.

8. ಈ ಮಂತ್ರಗಳನ್ನು ಪಠಿಸುವ ಮೂಲಕ, ಒಬ್ಬ ವ್ಯಕ್ತಿ ಎಲ್ಲಾ ಲೌಕಿಕ ಸಂತೋಷ ಪಡೆಯಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ