ಮಥುರಾದಲ್ಲಿರುವ ಪ್ರಸಿದ್ಧ ದೇವಾಲಯಗಳು ಯಾವುದು ಗೊತ್ತಾ?

ನೀವು ಮಥುರಾದಲ್ಲಿ ಧಾರ್ಮಿಕ ಪ್ರವಾಸ ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ಸಾಕಷ್ಟು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುವಂತಹ ಸ್ಥಳಗಳಿವೆ. ಈ ಪವಿತ್ರ ಪಟ್ಟಣದ ಕೆಲವು ಪ್ರಸಿದ್ಧ ದೇವಾಲಯಗಳೆಂದರೆ ಕೃಷ್ಣ ಜನ್ಮ ಭೂಮಿ ಮಥುರಾ. ಇದು ಪ್ರಸಿದ್ಧ ದೇವಾಲಯವಾಗಿದ್ದು ಅತ್ಯಂತ ಬೇಡಿಕೆಯ ದೇವಾಲಯಗಳಲ್ಲಿ ಇದು ಒಂದಾಗಿದ್ದು ಭಾರತದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

ಮಥುರಾದಲ್ಲಿರುವ ಪ್ರಸಿದ್ಧ ದೇವಾಲಯಗಳು ಯಾವುದು ಗೊತ್ತಾ?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 26, 2024 | 11:04 AM

ಭಗವಾನ್ ಕೃಷ್ಣನ ಜನ್ಮಸ್ಥಳವಾದ ಮಥುರಾ, ಹಿಂದೂಗಳ ಪಾಲಿಗೆ ಮಹತ್ವದ ಸ್ಥಾನವಾಗಿದೆ. ಈ ನಗರವು ಹೆಚ್ಚಿನ ಐತಿಹಾಸಿಕ ಮಹತ್ವವನ್ನು ಹೊಂದಿದೆ ಮತ್ತು ರಾಮಾಯಣ ಮಹಾಕಾವ್ಯದಲ್ಲಿ ಇದರ ಉಲ್ಲೇಖವನ್ನು ನಾವು ಕಾಣಬಹುದಾಗಿದೆ. ಯಮುನಾ ನದಿಯ ದಡದಲ್ಲಿರುವ ಈ ಇಡೀ ಭೂಮಿ ಭವ್ಯವಾದ ದೇವಾಲಯಗಳಿಂದ ಕೂಡಿದೆ. ಇದು ಶ್ರೀ ಕೃಷ್ಣನ ಜೀವನದ ವಿವಿಧ ಹಂತಗಳನ್ನು ಪ್ರಸ್ತುತ ಪಡಿಸುತ್ತವೆ ಮತ್ತು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ತಾಣಗಳನ್ನು ನೋಡಬಹುದಾಗಿದೆ. ನೀವು ಮಥುರಾದಲ್ಲಿ ಧಾರ್ಮಿಕ ಪ್ರವಾಸ ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ಸಾಕಷ್ಟು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುವಂತಹ ಸ್ಥಳಗಳಿವೆ. ಈ ಪವಿತ್ರ ಪಟ್ಟಣದ ಕೆಲವು ಪ್ರಸಿದ್ಧ ದೇವಾಲಯಗಳೆಂದರೆ ಕೃಷ್ಣ ಜನ್ಮ ಭೂಮಿ ಮಥುರಾ. ಇದು ಪ್ರಸಿದ್ಧ ದೇವಾಲಯವಾಗಿದ್ದು ಅತ್ಯಂತ ಬೇಡಿಕೆಯ ದೇವಾಲಯಗಳಲ್ಲಿ ಇದು ಒಂದಾಗಿದ್ದು ಭಾರತದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

ಶ್ರೀಕೃಷ್ಣ ಜನ್ಮಸ್ಥಾನ

ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಇದು ಒಂದಾಗಿದ್ದು, ಭಗವಾನ್ ಕೃಷ್ಣನು ರಾಜ ವಾಸುದೇವ ಮತ್ತು ದೇವಕಿಗೆ ಜನಿಸಿದ ಸ್ಥಳದಲ್ಲಿಯೇ ಈ ದೇವಾಲಯವಿದೆ. ಶ್ರೀಕೃಷ್ಣ ಜನಿಸಿದ ಜೈಲಿದ್ದ ಜಾಗದಲ್ಲಿಯೇ ಈಗ ದೇಗುಲದ ಗರ್ಭಗೃಹವಿದೆ. ಶತ ಶತಮಾನಗಳಿಂದಲೂ ಈ ಸ್ಥಳ ಧಾರ್ಮಿಕ ಮಹತ್ವವನ್ನು ಪಡೆದುಕೊಂಡು ಬಂದಿದ್ದು, ಕೃಷ್ಣನನ್ನು ನೋಡಲು ಈ ದೇವಾಲಯಕ್ಕೆ ಅತೀ ಹೆಚ್ಚು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. . ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಹೋಳಿಯನ್ನು ಈ ದೇಗುಲದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

ಕೇಶವ ದೇವ ದೇವಾಲಯ

ಮಥುರಾದಲ್ಲಿ ಕಣ್ಮನ ಸೆಳೆಯುವ ಮತ್ತೊಂದು ದೇಗುಲವೆಂದರೆ ಅದು ಕೇಶವ ದೇವ ದೇವಾಲಯ. ಔರಂಗಜೇಬನ ಆಳ್ವಿಕೆಯಲ್ಲಿ, ಈ ದೇವಾಲಯವನ್ನು ನಾಶಪಡಿಸಿ ಈ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು. ಬಳಿಕ ಬ್ರಿಟಿಷ್ ಯುಗದಲ್ಲಿ ಬನಾರಸ್ ರಾಜನು ಮತ್ತೆ ಈ ದೇವಾಲಯವನ್ನು ನಿರ್ಮಿಸಿದನು ಎಂದು ಹೇಳಲಾಗುತ್ತದೆ.

ಗೋವಿಂದ ದೇವ ದೇವಾಲಯ

1590ರಲ್ಲಿ ರಾಜಾ ಮನ್ ಸಿಂಗ್ ನಿರ್ಮಿಸಿದ ಗೋವಿಂದ್ ದೇವ ದೇವಾಲಯವು ಮಥುರಾದ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಕೆಂಪು ಕಲ್ಲಿನಿಂದ ಮಾಡಲ್ಪಟ್ಟಿರುವ ಈ ದೇವಾಲಯದ ವಾಸ್ತುಶಿಲ್ಪವು ಪ್ರತಿಯೊಬ್ಬರನ್ನು ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿನ ಉತ್ತಮ ಕರಕುಶಲತೆಯೇ ನಗರದ ವಿಶಿಷ್ಟ ಹೆಗ್ಗುರುತಾಗಿದೆ. ಆದರೆ ಈ ದೇವಾಲಯ ಈಗ ಖಾಲಿ ಇದ್ದು ಅಲ್ಲಿ ಇದ್ದಂತಹ ವಿಗ್ರಹಗಳನ್ನು ಮೂಲ ದೇವಾಲಯಕ್ಕೆ ಹತ್ತಿರದಲ್ಲಿಯೇ ಕಟ್ಟಲಾಗಿರುವ ಹೊಸ ದೇವಾಲಯದಲ್ಲಿ ಇಟ್ಟು ಪೂಜಿಸಲಾಗುತ್ತಿದೆ.

ಇದನ್ನೂ ಓದಿ: ಅಕಾಲ ಮೃತ್ಯು ದೋಷ ನಿವಾರಣೆಗೆ ಈ ಮಹಾಮೃತ್ಯುಂಜಯ ಮಂತ್ರ ಪಠಿಸಿ

ಕುಸುಮ ಸರೋವರ

ಇದು ದೇವಾಲಯವಲ್ಲ ಆದರೆ ಮಥುರಾದಲ್ಲಿ ಕಂಡು ಬರುವ ಒಂದು ಸುಂದರವಾದ ಸರೋವರ. ಇದು 450 ಅಡಿ ಉದ್ದ ಮತ್ತು 60 ಅಡಿಯಷ್ಟು ಆಳವಿದೆ ಎಂದು ಹೇಳಲಾಗುತ್ತದೆ. ಮಥುರಾ ಜಿಲ್ಲೆಯ ಮಾನಸಿ ಗಂಗಾ ಮತ್ತು ರಾಧಾ ಕುಂಡ್ ನಡುವೆ ಇರುವ ಪವಿತ್ರ ಗೋವರ್ಧನ ಗಿರಿಯಲ್ಲಿ ಈ ಸರೋವರವನ್ನು ನೋಡಬಹುದು. ಈ ರಮಣೀಯ ಜಲಾಶಯ ಒಂದು ಕಾಲದಲ್ಲಿ ಕೃಷ್ಣ ರಾಧೆಯ ನೆಚ್ಚಿನ ಸ್ಥಳವಾಗಿದ್ದು ಇಲ್ಲಿಯೇ ಅವರಿಬ್ಬರು ಭೇಟಿಯಾಗುತ್ತಿದ್ದರು ಎಂದು ನಂಬಲಾಗಿದೆ. ಜಲಾಶಯವು ನೋಡಲು ಅದ್ಭುತವಾಗಿದ್ದು ಇಲ್ಲಿಗೆ ಹೋದವರು ಪ್ರತಿದಿನ ಸಂಜೆ ಇಲ್ಲಿ ನಡೆಯುವ ಆರತಿಯನ್ನು ಮಾತ್ರ ತಪ್ಪಿಸಬಾರದು.

ಗೀತಾ ಮಂದಿರ

ಈ ದೇವಾಲಯವು ಮಥುರಾದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಭವ್ಯವಾದ ದೇವಾಲಯವನ್ನು ಪ್ರಸಿದ್ಧ ಬಿರ್ಲಾ ಸಮೂಹ ಸಂಸ್ಥೆಯವರು ನಿರ್ಮಿಸಿದ್ದು, ಈ ದೇವಾಲಯದ ಅದ್ಭುತ ವಾಸ್ತುಶಿಲ್ಪ ಭಾರತದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ದೇವಾಲಯದ ಗೋಡೆಗಳ ಮೇಲೆ ಕೆತ್ತಲಾಗಿದೆ. ಅಲ್ಲದೆ, ದೇವಾಲಯದ ಮುಖ್ಯ ಆವರಣದಲ್ಲಿ ಭಗವಾನ್ ಕೃಷ್ಣ ನಿಮ್ಮನ್ನು ಸ್ವಾಗತಿಸುವಂತೆ ಕಾಣುತ್ತಾನೆ.

ದ್ವಾರಕಾಧೀಶ ಮಂದಿರ

1814 ರಲ್ಲಿ ನಿರ್ಮಿಸಲಾದ ಈ ದೇವಾಲಯವು ನಗರದಲ್ಲಿ ಭಕ್ತರು ಹೆಚ್ಚು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ. ಭಗವಾನ್ ಕೃಷ್ಣನಿಗೆ ಸಮರ್ಪಿತವಾಗಿರುವ ಈ ದೇವಸ್ಥಾನವು ತನ್ನ ಅದ್ಭುತ ವಾಸ್ತುಶಿಲ್ಪ ಮತ್ತು ಕೆತ್ತನೆಗಳು ಹಾಗೂ ಇಲ್ಲಿಯ ವರ್ಣಚಿತ್ರಗಳಲ್ಲಿನ ವಿವರಗಳಿಂದ ಮಂತ್ರಮುಗ್ಧಗೊಳಿಸುತ್ತದೆ. ದ್ವಾರಕಾಧೀಶ ದೇವಾಲಯದಲ್ಲಿ, ಶ್ರೀ ಕೃಷ್ಣನ ವಿಗ್ರಹವನ್ನು “ದ್ವಾರಕದ ರಾಜ” ನ ರೂಪದಲ್ಲಿ ಚಿತ್ರಿಸಲಾಗಿದೆ, ಈ ವಿಗ್ರಹದಲ್ಲಿ ನವಿಲು ಗರಿ ಮತ್ತು ಕೊಳಲಿಲ್ಲ. ಈ ದೇವಾಲಯದಲ್ಲಿ ನಡೆಯುವ ಹೋಳಿ, ಜನ್ಮಾಷ್ಟಮಿ ಮತ್ತು ಇನ್ನೂ ಅನೇಕ ಹಬ್ಬಗಳ ಭವ್ಯ ಆಚರಣೆಗಳಿಗೆ ಹೆಸರುವಾಸಿಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?