ಶ್ರಾವಣ ಮಾಸದಲ್ಲಿ ಮಳೆ ನೀರಿನಿಂದ ಈ ಪರಿಹಾರಗಳನ್ನು ಮಾಡಿ; ಎಲ್ಲಾ ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

ಶ್ರಾವಣ ಮಾಸದ ಪವಿತ್ರ ಮಳೆನೀರಿನಿಂದ ಅನೇಕ ಪರಿಹಾರಗಳನ್ನು ಪಡೆಯಬಹುದು. ಸಾಲಮುಕ್ತಿ, ಆರ್ಥಿಕ ಪ್ರಗತಿ, ವೈವಾಹಿಕ ಸಮಸ್ಯೆಗಳ ನಿವಾರಣೆ, ಮತ್ತು ಆರೋಗ್ಯ ಸುಧಾರಣೆಗೆ ಮಳೆನೀರು ಸಹಾಯಕವಾಗಿದೆ ಎಂದು ನಂಬಲಾಗಿದೆ. ಶಿವ, ಗಣೇಶ, ವಿಷ್ಣು ಮತ್ತು ಲಕ್ಷ್ಮಿ ದೇವರಿಗೆ ಈ ನೀರನ್ನು ಅರ್ಪಿಸುವುದು ಶುಭಫಲ ನೀಡುತ್ತದೆ. ಮಳೆನೀರಿನ ವಿವಿಧ ಉಪಯೋಗಗಳು ಮತ್ತು ಪರಿಹಾರಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಶ್ರಾವಣ ಮಾಸದಲ್ಲಿ ಮಳೆ ನೀರಿನಿಂದ ಈ ಪರಿಹಾರಗಳನ್ನು ಮಾಡಿ; ಎಲ್ಲಾ ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ
ಮಳೆ ನೀರು

Updated on: Jul 23, 2025 | 9:38 AM

ಶ್ರಾವಣ ಮಾಸದಲ್ಲಿ ಮಳೆ ಬರುವ ಕಾರಣ ಈ ತಿಂಗಳು ಶಿವನಿಗೆ ಅತ್ಯಂತ ಪ್ರಿಯವಾಗಿದೆ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ, ಶಿವನ ದೇವಸ್ಥಾನದಲ್ಲಿರುವ ಶಿವಲಿಂಗವು ನೀರಿನಲ್ಲಿ ಮುಳುಗುತ್ತವೆ. ನೀರು ಶಿವನಿಗೆ ಅತ್ಯಂತ ಪ್ರಿಯವಾದುದು, ಆದ್ದರಿಂದ ಪ್ರತಿ ದೇವಾಲಯದಲ್ಲಿಯೂ ಶಿವಲಿಂಗದ ಮೇಲೆ ಇರುವ ಕಲಶದಿಂದ ನೀರು ನಿರಂತರವಾಗಿ ಬೀಳುತ್ತಿರುತ್ತದೆ.

ಶತಮಾನಗಳಿಂದ, ಹಿರಿಯರು ಶ್ರಾವಣ ಮಾಸದಲ್ಲಿ ಮಳೆನೀರಿನಲ್ಲಿ ನೆನೆಯಲು ಸಲಹೆ ನೀಡುತ್ತಿದ್ದಾರೆ. ಇದರ ಹಿಂದೆ ಹಲವು ಆಧ್ಯಾತ್ಮಿಕ ಕಾರಣಗಳಿವೆ. ಈ ನೀರಿಗೆ ಸಂಬಂಧಿಸಿದ ಹಲವು ಪರಿಹಾರಗಳು ಜೀವನದಲ್ಲಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸುತ್ತದೆ ಎಂದು ನಂಬಲಾಗಿದೆ.

ಜ್ಯೋತಿಷ್ಯದಲ್ಲಿ, ಮಳೆನೀರಿನ ಬಳಸಿ ಮಾಡುವಂತಹ ಹಲವು ಪರಿಹಾರಗಳನ್ನು ಹೇಳಲಾಗಿದೆ. ಮಳೆನೀರು ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ನಂಬಲಾಗಿದೆ. ಮನೆ ಸಂಪತ್ತಿನಿಂದ ತುಂಬಬಹುದು, ಸಾಲಗಳಿಂದ ಮುಕ್ತಿ ಪಡೆಯಬಹುದು, ಮದುವೆಯ ಸಮಸ್ಯೆಗಳನ್ನು ಪರಿಹರಿಸಬಹುದು ಮತ್ತು ಅನೇಕ ರೋಗಗಳಿಂದ ಪರಿಹಾರ ಪಡೆಯಬಹುದು. ಹಾಗಾದರೆ ಮಳೆನೀರಿನಿಂದ ಮಾಡಬಹುದಾದ ಪರಿಹಾರಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಾಲದಿಂದ ಮುಕ್ತಿ:

ಶ್ರಾವಣ ಮಾಸದಲ್ಲಿ ಬರುವ ಮಳೆನೀರನ್ನು ಸ್ವಲ್ಪ ಸಂಗ್ರಹಿಸಿ, ಅದಕ್ಕೆ ಹಸಿ ಹಾಲನ್ನು ಬೆರೆಸಿ, ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಶೀಘ್ರದಲ್ಲೇ ಸಾಲದಿಂದ ಮುಕ್ತರಾಗುತ್ತೀರಿ ಎಂದು ನಂಬಲಾಗಿದೆ.

ಶಿವನ ಆಶೀರ್ವಾದ ಪಡೆಯಲು:

ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸಿ ಪ್ರತಿದಿನ ಮಳೆನೀರನ್ನು ಶುದ್ಧ ಪಾತ್ರೆಯಲ್ಲ ಸಂಗ್ರಹಿಸಿ ಶಿವನಿಗೆ ಅರ್ಪಿಸಿ. ಈ ನೀರಿನಿಂದ ಜಲಭಿಷೇಕ ಮಾಡುವುದರಿಂದ ವಿವಿಧ ರೋಗಗಳಿಂದ ಮುಕ್ತಿ ಸಿಗುತ್ತದೆ ಮತ್ತು ಶಿವನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

ವ್ಯಾಪಾರದಲ್ಲಿ ಲಾಭ:

ಯಾರಾದರೂ ತಮ್ಮ ವ್ಯವಹಾರದಲ್ಲಿ ಪ್ರಗತಿ ಮತ್ತು ಅಭಿವೃದ್ಧಿಯನ್ನು ಬಯಸಿದರೆ.. ಮಳೆನೀರನ್ನು ಸಂಗ್ರಹಿಸಿ ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸಿ. ಇದು ನಿಮ್ಮ ವ್ಯವಹಾರವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಮನೆಯಲ್ಲಿ ನಟರಾಜನ ಪ್ರತಿಮೆ ಇಡಬಾರದು ಎಂದು ಹೇಳುವುದೇಕೆ?

ವೈವಾಹಿಕ ಸಮಸ್ಯೆ:

ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮಳೆ ನೀರನ್ನು ಗಣೇಶನಿಗೆ ಅರ್ಪಿಸಬೇಕು. ಈ ಪರಿಹಾರವು ಮದುವೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.

ಆರ್ಥಿಕ ಬಿಕ್ಕಟ್ಟು:

ಸಣ್ಣ ಗಾಜಿನ ಬಾಟಲಿಯಲ್ಲಿ ಎರಡು ಲವಂಗಗಳೊಂದಿಗೆ ಮಳೆನೀರನ್ನು ಬೆರೆಸಿ ಹಣ ಇಡುವ ಜಾಗದಲ್ಲಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ